ನವರಾತ್ರಿ ಎನ್ನುವ ಆಯುರ್ವೇದ ಹಬ್ಬ..!
ನವರಾತ್ರಿಯು ನವದುರ್ಗೆಯರೊಂದಿಗೆ ಆಯುರ್ವೇದದ ಔಷಧಿಯ ಸೇವನೆಯ ಪರ್ವವೂ ಹೌದು.
ನಮ್ಮ ಋಷಿ ಮುನಿಗಳು ಈ ಋತು(ಕಾಲ)ವಿನಲ್ಲಿ ಸೇವಿಸಬೇಕಾದ ಕೆಲವು ಔಷಧಿಗಳನ್ನು ಉಲ್ಲೇಖಿಸಿದ್ದಾರೆ.
ಇವುಗಳನ್ನು ಪ್ರತ್ಯೇಕ ದಿನಗಳಲ್ಲಿ ಸೇವಿಸುವುದರಿಂದ ನಮ್ಮ ಶಾರೀರಕ, ಮಾನಸಿಕ ಕ್ಷಮತೆಯು ಹೆಚ್ಚಾಗಿ ನಾವು ನಮ್ಮ ಶಕ್ತಿ-ತೇಜಸ್ಸು-ಬಲ-ಬುದ್ಧಿಗಳನ್ನು ಸದೃಢಗೊಳಿಸಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ,ನಿರೋಗಿಗಳನ್ನಾಗಿಸಿ ದೀರ್ಘಕಾಲ ಸ್ವಸ್ಥ ಜೀವನ ನಡೆಸಲು ನೆರವಾಗುವ
ಒಂಬತ್ತು ತರದ ಈ ದಿವ್ಯ ಮಹೌಷಧಿಗಳು ನಿಸ್ಸಂದೇಹವಾಗಿ ಪ್ರಭಾವಶಾಲಿಗಳಾಗಿವೆ.
ಔಷಧ ರೂಪದಲ್ಲಿರುವ ಇವನ್ನು ಬರುವ ಚಳಿಗಾಲಕ್ಕೆ ಮುನ್ನುಡಿಯೆಂಬಂತೆ ಸ್ವೀಕರಿಸಬಹುದು.
ಈ ಔಷಧಗಳು-
1,ಹರಿದ್ರಾ.
2,ಬ್ರಾಹ್ಮೀ.
3,ಚಂದಸೂರ.
4,ಕೂಷ್ಮಾಂಡ.
5,ಅಲಸೀ.
6,ಮಾಚಿಕಾ.
7,ನಾಗದಾನ.
8,ತುಲಸೀ.
9,ಶತಾವರೀ.
1- ಪ್ರಥಮ-ಶೈಲಪುತ್ರೀ ಯಾ ಹರಿದ್ರಾ:ಅನೇಕ ಪ್ರಕಾರಗಳ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿರುವ ಮದ್ದಿನ ಗಣಿ.ಆಯುರ್ವೇದದ ಪ್ರಧಾನ ಔಷಧ. ಇದರಲ್ಲಿ ಏಳು ವಿಧಗಳಿವೆ.
2-ದ್ವಿತೀಯ- ಬ್ರಹ್ಮಚಾರಿಣೀ ಯಾ ಬ್ರಾಹ್ಮೀ(ಸರಸ್ವತೀ):ಇದು ಆಯುಸ್ಸು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವುದು.
ರಕ್ತವಿಕಾರಗಳನ್ನು ನಾಶ ಮಾಡುತ್ತದೆ.
ಸ್ವರಶುದ್ಧಿಗೆ ದಿವ್ಯೌಷಧ.
ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ.
ವಾಯು,ಮೂತ್ರಸಂಬಂಧದ ರೋಗಗಳಿಗೆ ಮುಖ್ಯೌಷಧ.
3- ಚಂದ್ರಘಂಟಾ ಯಾ ಚಂದ್ರಸೂರ: ಇದನ್ನು ಚಮಸೂರ ಎಂದೂ ಕರೆಯುತ್ತಾರೆ.ಇದು ಕೊತ್ತಂಬರಿಯ ರೀತಿಯಲ್ಲಿರುವ ಗಿಡ.ಇದರ ಎಲೆಗಳನ್ನು ಬಳಸಿ ಪಲ್ಯಗಳನ್ನು ಮಾಡುತ್ತಾರೆ.
ಸ್ಥೂಲಕಾಯವನ್ನು ಕರಗಿಸಲು ಸಹಕಾರಿ.ಇದರಿಂದ ಇದಕ್ಕೆ ಚರ್ಮಹಂತೀ ಎಂಬ ಹೆಸರೂ ಇದೆ.ಶಕ್ತಿವರ್ಧಕ,ಹೃದ್ರೋಗ ನಿವಾರಕವಾದ ಚಂದ್ರಿಕಾ ಉಪಯುಕ್ತ ಗಿಡ.
4-ಕೂಷ್ಮಾಂಡ: ಕುಂಬಳ.ಇದು ಪುಷ್ಟಿಕಾರಕ,ವೀರ್ಯವರ್ಧಕ,ರಕ್ತಸಂಬಂಧೀ ಸಮಸ್ಯೆಗಳ ಪರಿಹಾರಕ ಮತ್ತು ಉದರ ಶುದ್ಧಿಗೆ ಸಹಾಯಕ. ಮಾನಸಿಕವಾಗಿ ಅಬಲರಾದವರಿಗೆ ಇದು ದಿವ್ಯೌಷಧ.ಶರೀರದ ವೀಶೇಷವಾಗಿ ಹೃದಯ ಸಂಬಂಧೀ ಕಾಯಿಲೆಗಳಿಗೆ ರಾಮಬಾಣದಂತಿದೆ.
5-ಸ್ಕಂದಮಾತಾ ಯಾ ಅಲಸೀ: ಅಗಸೆ ಬೀಜ.
ವಾತ,ಪಿತ್ತ,ಕಫಗಳ ನಿಯಂತ್ರಣದಲ್ಲಿ ಸಹಾಯಕ. “ಅಲಸೀ ನೀಲಪುಷ್ಪೀ ಪಾವರ್ತತೀ ಸ್ಯಾದುಮಾ ಕ್ಷುಮಾ|
ಅಲಸೀ ಮಧುರಾ ತಿಕ್ತಾ ಸ್ತ್ರಿಗ್ಧಪಾಕೇ ಕದರ್ಗರುಃ||
ಉಷ್ಣಾ ದೃಷ ಶುಕವಾತಂಧೀ ಕಫ ಪಿತ್ತ ವಿನಾಶಿನೀ||
6- ಷಷ್ಠಮ ಕಾತ್ಯಾಯನೀ ಯಾ ಮೋಯಿಯಾ:ಅಂಬಾ,ಅಂಬಾಲಿಕಾ,ಅಂಬಿಕಾ,ಮಾಚಿಕಾ ಇತರ ಹೆಸರುಗಳು.ಇದು ಕಫ,ಪಿತ್ತ ಮತ್ತು ಕಂಠ ಸಂಬಂಧೀ ಕಾಯಿಲೆಗಳ ನಿವಾರಣೆಗೆ ಸಹಾಯಕ.
7- ಸಪ್ತಮ ಕಾಲರಾತ್ರೀ ಯಾ ನಾಗದೌನ್: ಸರ್ವರೋಗ ನಿವಾರಕ.ಮಸ್ತಿಷ್ಕದ ಎಲ್ಲಾ ವಿಕಾರಗಳನ್ನು ನಿವಾರಿಸಿ ವಿಜಯಶಾಲಿಗಳನ್ನಾಗಿಸುವುದು.ವಿಷ ನಿವಾರಕವೂ ಹೌದು.
8-ತುಲಸೀ: ಏಳುವಿಧಗಳಿವೆ.ರಕ್ತಶುದ್ಧಿ,ಹೃದ್ರೋಗ ನಿವಾರಣೆಗೆ ಸಹಾಯಕ.
ತುಲಸೀ ಸುರಸಾ ಗ್ರಾಮ್ಯಾ ಸುಲಭಾ ಬಹುಮಂಜರೀ|
ಅಪೇತರಾಕ್ಷಸೀ ಮಹಾಗೌರೀ ಶೂಲಘ್ನೀ ದೇವದುಂದುಭಿಃ||
ತುಲಸೀ ಕಟುಕಾ ತಿಕ್ತಾಹುಧ ಉಷ್ಣಾಹಾಹಪಿಪಿತ್ತಕೃತ್|
ಮರುದನಿಪ್ರದೋ ಹಧ ತೀಕ್ಷ್ಣಾಷ್ಣಃ ಪಿತ್ತಲೋ ಲಘುಃ||
9- ನವಮ ಶತಾವರೀ: ನಾರಾಯಣೀ ಎಂದೂ ಕರೆಯುತ್ತಾರೆ.ಬುದ್ಧಿ-ವೀರ್ಯಬಲಗಳನ್ನು ಹೆಚ್ಚಿಸುವುದು.ಹೃದ್ಬಲ ವರ್ಧಕ.ರಕ್ತವಿಕಾರ ನಾಶಕ.ಸಿದ್ಧಿದಾತ್ರಿಯಾದ ಇದನ್ನು ನಿಯಮಾನುಸಾರ ಸೇವಿಸಿದರೆ ಸರ್ವಕಷ್ಟಗಳು ನಿವಾರಣೆಯಾಗುತ್ತವೆ.
▬▬▬ஜ۩۞۩ஜ▬▬▬▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬