ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಾಲ್ಕು ಯುಗಗಳು – ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ ..!

ನಾಲ್ಕು ಯುಗಗಳು ಸತ್ಯಯುಗ, ತ್ರೇತಾಯುಗ,ದ್ವಾಪರಯುಗ ಹಾಗೂ ಕಲಿಯುಗ..!

1) ಸತ್ಯಯುಗ — 1728000 ವರ್ಷ

2) ತ್ರೇತಾಯುಗ — 1296000 ವರ್ಷ

3) ದ್ವಾಪರಯುಗ — 864000 ವರ್ಷ

4) ಕಲಿಯುಗ — 432000 ವರ್ಷ

ಕಲಿಯುಗದ ಕಾಲಮಾನ 4,32,000 ವರ್ಷಗಳು. ನಂತರದ ಯುಗ ಅಂದರೆ ಕಲಿಯುಗದ ಎರಡು ಪಟ್ಟಿನದು ದ್ವಾಪರಯುಗ 8,64,000 ವರ್ಷಗಳು, ಕಲಿಯುಗದ ಮೂರು ಪಟ್ಟಿನದು ತ್ರೇತಾಯುಗ, 12,96,000 ವರ್ಷಗಳು. ಕಾಲಮಾನದಲ್ಲಿ ಅತ್ಯಂತ ದೊಡ್ಡದು, ಅಂದರೆ ಕಲಿಯುಗದ ನಾಲ್ಕು ಪಟ್ಟಿನದು ಸತ್ಯಯುಗ ಅಥವಾ ಕೃತಯುಗ, 17,28,000 ವರ್ಷಗಳು.

ಹೀಗೆ ಈ ನಾಲ್ಕು ಯುಗಗಳು ಕಲಿಯುಗದ 1:2:3:4 ಅನುಪಾತದಲ್ಲಿವೆ.

3) ಒಂದು ಯುಗಚಕ್ರ ಉರುಳಿದಾಗ ಆಗುವ ಒಟ್ಟು ಕಾಲ ಅಂದರೆ, ಒಂದು ಚತುರ್ಯುಗದ ಕಾಲಮಾನ ಕಲಿಯುಗದ ಹತ್ತು ಪಟ್ಟು

  ಉತ್ತಮ ಪ್ರಜಾಕೀಯ ಪಕ್ಷ - ಪ್ರಜೆಗಳ ಪಕ್ಷ.

(1+2+3+4=10 × 432000) ಅಂದರೆ,

43,20,000 ವರ್ಷಗಳು. ಈ ರೀತಿಯಾಗಿ 71 ಬಾರಿ ಚತುರ್ಯುಗಗಳು ಸುತ್ತಿದಾಗ ಆಗುವ ಕಾಲವೇ, ಒಂದು ಮನ್ವಂತರಕಾಲ.

ಬ್ರಹ್ಮನ ಒಂದು ದಿನ ಪ್ರಮಾಣಕ್ಕೆ ಕಲ್ಪವೆಂದು ಹೆಸರು. ಮನುಷ್ಯಮಾನದಿಂದ ಒಂದು ತಿಂಗಳಾಗುವ ಕಾಲ ಪಿತೃದೇವತೆಗಳ ಮಾನದಲ್ಲಿ ಒಂದು ದಿನ. ಮನುಷ್ಯಮಾನದ 1000 ಚತುರ್ಯುಗಗಳು ಅಥವಾ ದೇವಮಾನದ 1000 ಯುಗಗಳು ಚತುರ್ಮುಖ ಬ್ರಹ್ಮನಿಗೆ ಒಂದು ಹಗಲು. ಚೈತ್ರ ಶುಕ್ಲ ಪಾಡ್ಯ ಭಾನುವಾರ ಪ್ರಥಮ ಕಲ್ಪ ಪ್ರಾರಂಭವಾದ ದಿನ.

8,64,00,00,000 ಸೌರವರ್ಷಗಳು ಕಳೆದರೆ ಬ್ರಹ್ಮನ ಒಂದು ದಿನವಾಗುತ್ತದೆ. ಬ್ರಹ್ಮನ ಒಂದೊಂದು ದಿನಕ್ಕೆ ಒಂದೊಂದು ಹೆಸರಿದೆ. ಅವುಗಳೆಂದರೆ (1) ಶ್ವೇತವರಾಹ (2) ನೀಲಲೋಹಿತ (3) ವಾಸುದೇವ (4) ರಥಂತರ (5) ರೌರವ (6) ಪ್ರಾಣ (7) ಬೃಹತ್ (8) ಕಂದರ್ಪ (9) ಸದ್ಯ (10) ಈಶಾನ (11) ವ್ಯಾನ (12) ಸಾರಸ್ವತ (13) ಉದಾನ (14) ಗಾರುಡ (15) ಕೌರ್ಮ (16) ನಾರಸಿಂಹ (17) ಸಮಾನ (18) ಆಗ್ನೇಯ (19) ಸೋಮ (20) ಮಾನವ (21) ತತ್ಪುರುಷ (22) ವೈಕುಂಠ (23) ಲಕ್ಷ್ಮಿ (24) ಸಾವಿತ್ರಿ (25) ಘೋರ (26) ವಾರಾಹ (27) ವೈರಾಜ (28) ಗೌರಿ (29) ಮಾಹೇಶ್ವರ (30) ಪಿತೃ.

  ನಾರಾಯಣ ಸುಪ್ರಭಾತ

ಇವುಗಳಲ್ಲಿ ಮೊದಲ ಹದಿನೈದು ಕಲ್ಪಗಳಿಗೆ ಶುಕ್ಲ ಪಕ್ಷವೆಂದು, ಉಳಿದ ಹದಿನೈದು ಕಲ್ಪಗಳಿಗೆ ಕೃಷ್ಣಪಕ್ಷವೆಂದು ಹೆಸರು. ಈ ಒಟ್ಟು ಮೂವತ್ತು ಕಲ್ಪಗಳು ಕಳೆದರೆ ಬ್ರಹ್ಮನಿಗೆ ಒಂದು ತಿಂಗಳು. ಈ ವಿಧವಾದ ಹನ್ನೆರಡು ತಿಂಗಳು ಕಳೆದರೆ ಒಂದು ವರ್ಷ. ಬ್ರಹ್ಮನಿಗೆ ಈ ಪ್ರಮಾಣದ ನೂರು ವರ್ಷಗಳು ಆಯಸ್ಸು.

ಸದ್ವಿಚಾರ ಸಂಗ್ರಹ
( ನಿತಿನ್ ಶಾಮನೂರು )

Leave a Reply

Your email address will not be published. Required fields are marked *

Translate »