ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಆಧ್ಯಾತ್ಮಿಕ ತೊಂದರೆಗಳು ಎಂದರೇನು? ಲಕ್ಷಣಗಳು ?

ಆಧ್ಯಾತ್ಮಿಕ ತೊಂದರೆಗಳು ಎಂದರೇನು?

ವ್ಯಕ್ತಿಯ ಪ್ರಕೃತಿಯು ಸತ್ತ್ವ, ರಜ ಮತ್ತು ತಮ ಎಂಬ ತ್ರಿಗುಣಗಳಿಂದ ಆಗಿರುತ್ತದೆ. ಸತ್ತ್ವಗುಣವು ಮನಸ್ಸಿಗೆ ಸ್ಥಿರತೆಯನ್ನು ಕೊಡುವ, ಆನಂದದಾಯಕ ಮತ್ತು ವ್ಯಕ್ತಿಯ ಪ್ರವಾಸವು ಈಶ್ವರೀ ತತ್ತ್ವದ ಕಡೆಗೆ ಆಗಲು ಪೂರಕವಾಗಿರುತ್ತದೆ. ರಜ ಮತ್ತು ತಮ ಗುಣಗಳು ಸತ್ತ್ವಗುಣಕ್ಕೆ ವಿರುದ್ಧವಾಗಿರುತ್ತವೆ. ವ್ಯಕ್ತಿಯಲ್ಲಿ ರಜ ಮತ್ತು ತಮ ಗುಣಗಳು ಹೆಚ್ಚಾದರೆ ವ್ಯಕ್ತಿಯ ಮೇಲೆ ಅವುಗಳ ಅನಿಷ್ಟ ಪರಿಣಾಮವಾಗುತ್ತದೆ. ಇದನ್ನೇ ವ್ಯಕ್ತಿಯು ‘ಆಧ್ಯಾತ್ಮಿಕ ತೊಂದರೆ’ಗಳಿಂದ ಪೀಡಿತನಾಗುವುದು ಎನ್ನುತ್ತಾರೆ.

ಕೇವಲ ವ್ಯಕ್ತಿಗಳಷ್ಟೇ ಅಲ್ಲ, ವಾಸ್ತು ಮತ್ತು ವಾಹನದಂತಹ ನಿರ್ಜೀವ ವಸ್ತುಗಳೂ ಆಧ್ಯಾತ್ಮಿಕ ತೊಂದರೆಗಳಿಂದ ಪೀಡಿತವಾಗುತ್ತವೆ. ಹಾಗೆಯೇ ವಾಯುಮಂಡಲದಲ್ಲಿನ ರಜ-ತಮ ಘಟಕಗಳ ಪ್ರಾಬಲ್ಯ ಹೆಚ್ಚಾದರೆ ಆಧ್ಯಾತ್ಮಿಕ ತೊಂದರೆಗಳು ಉದ್ಭವಿಸುತ್ತವೆ.ಭುವರ್ಲೋಕ ಮತ್ತು ಪಾತಾಳ ಲೋಕಗಳಲ್ಲಿ ವಾಸಿಸುವ ಸೂಕ್ಷ್ಮ-ರೂಪದಲ್ಲಿನ ‘ಅಸುರೀ ಶಕ್ತಿಗಳ’ ಆಕ್ರಮಣದಿಂದ ಆಧ್ಯಾತ್ಮಿಕ ತೊಂದರೆಯಾಗುವ ಪ್ರಮಾಣವು ಅತ್ಯಧಿಕವಾಗಿರುತ್ತದೆ.

ಆಧ್ಯಾತ್ಮಿಕ ತೊಂದರೆಗಳ ಕೆಲವು ಲಕ್ಷಣಗಳು.

  PRAJAAKEEYA (Uttama Prajaakeeya Party) official social media accounts

ಆಧ್ಯಾತ್ಮಿಕ ತೊಂದರೆಗಳು ಸೂಕ್ಷ್ಮವಾಗಿರುತ್ತವೆ. ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಕ್ಷಮತೆಯಿರುವವರು ಮತ್ತು ಸಂತರೇ ಅವುಗಳನ್ನು ಗುರುತಿಸಬಲ್ಲರು. ಆಧ್ಯಾತ್ಮಿಕ ತೊಂದರೆಗಳ ಲಕ್ಷಣಗಳು ಮುಂದಿನಂತೆ ಸ್ಥೂಲದಲ್ಲಿಯೂ ಕಂಡುಬರುತ್ತವೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

ಅ. ಶಾರೀರಿಕ ಲಕ್ಷಣಗಳು :

ಔಷಧೋಪಚಾರ ಮತ್ತು ಪಥ್ಯ ಇತ್ಯಾದಿಗಳನ್ನು ಅನೇಕ ತಿಂಗಳು ಅಥವಾ ವರ್ಷಗಳ ಕಾಲ ಮಾಡಿಯೂ ರೋಗವು ಗುಣವಾಗದಿರುವುದು; ಶರೀರವು ಅಕಸ್ಮಾತ್ತಾಗಿ ಮಂಜುಗಡ್ಡೆಯಂತೆ ತಣ್ಣಗಾಗುವುದು; ಶರೀರದ ಮೇಲೆ ಗುಣಾಕಾರ ಚಿಹ್ನೆಗಳು ಮೂಡುವುದು; ನಾಲಿಗೆಯು ನೀಲಿಯಾಗುವುದು; ಕಣ್ಣುಗಳು ಬಿಳಿ ಮತ್ತು ನಿಸ್ತೇಜವಾಗುವುದು; ಅಕಸ್ಮಾತ್ತಾಗಿ ದೃಷ್ಟಿ, ಸ್ಮೃತಿ, ವಾಣಿ ಅಥವಾ ಸಂವೇದನೆಗಳು ಇಲ್ಲವಾಗುವುದು, ಕೂದಲು ಕೃತ್ರಿಮ (ನಕಲಿ) ಕೂದಲುಗಳಂತೆ ಹೊಳೆಯುವುದು ಅಥವಾ ನಿಸ್ತೇಜವಾಗುವುದು; ಉಗುರುಗಳ ಮೇಲೆ ಕಪ್ಪು ಚುಕ್ಕೆಗಳು ಮೂಡುವುದು; ಕೂದಲುಗಳಲ್ಲಿ ಪದೇಪದೇ ಹೇನುಗಳಾಗುವುದು ಇತ್ಯಾದಿ.

ಆ. ಮಾನಸಿಕ ಲಕ್ಷಣಗಳು :

ಸತತ ಒತ್ತಡ ಮತ್ತು ನಿರಾಶೆ ಬರುವುದು, ಅತಿಯಾದ ಭಯ, ಮನಸ್ಸಿನಲ್ಲಿ ಕಾರಣವಿಲ್ಲದೇ ನಕಾರಾತ್ಮಕ ವಿಚಾರಗಳು ಬಂದು ಮನಸ್ಸು ಅಸ್ವಸ್ಥವಾಗುವುದು ಇತ್ಯಾದಿ.

  ‌ಸನಾತನ ಧರ್ಮದಲ್ಲಿ ಹೊಸ್ತಿಲು ಪೂಜೆಗೆ ಅತ್ಯಂತ ಮಹತ್ವವೇಕೆ ?

ಇ. ಕೌಟುಂಬಿಕ ಲಕ್ಷಣಗಳು :

ಮನೆಯಲ್ಲಿ ಸತತವಾಗಿ ಜಗಳಗಳಾಗುವುದು, ಕುಟುಂಬದಲ್ಲಿನ ಯಾರಾದರೊಬ್ಬರಿಗೆ ಸಿಗರೇಟು ಅಥವಾ ಮದ್ಯದ ವ್ಯಸನ ತಗಲುವುದು, ಕುಟುಂಬದಲ್ಲಿನ ವ್ಯಕ್ತಿಗಳಿಗೆ ಚಿಕ್ಕ ದೊಡ್ಡ ಅಪಘಾತಗಳಾಗುವುದು ಇತ್ಯಾದಿ.

ಈ. ಶೈಕ್ಷಣಿಕ ಲಕ್ಷಣಗಳು :

ಬೌದ್ಧಿಕ ಕ್ಷಮತೆಯಿದ್ದರೂ ಅಧ್ಯಯನದಲ್ಲಿ ಏಕಾಗ್ರತೆ ಬರದಿರುವುದು, ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿಯೂ ಅನುತ್ತೀರ್ಣರಾಗುವುದು ಇತ್ಯಾದಿ.

ಉ.ಆರ್ಥಿಕ ಲಕ್ಷಣಗಳು :

ಪ್ರಯತ್ನ ಮಾಡಿಯೂ ನೌಕರಿ ಸಿಗದಿರುವುದು, ಯಾವುದೇ ವ್ಯವಹಾರದಲ್ಲಿ ಯಶಸ್ಸು ಸಿಗದಿರುವುದು, ಸತತವಾಗಿ ಆರ್ಥಿಕ ಮುಗ್ಗಟ್ಟು ಉಂಟಾಗುವುದು ಇತ್ಯಾದಿ.

ಊ. ವಿವಾಹ ಮತ್ತು ಅದಕ್ಕೆ ಸಂಬಂಧಿಸಿದ ಲಕ್ಷಣಗಳು :

ವಿವಾಹವಾಗದಿರುವುದು, ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಇಲ್ಲದಿರುವುದು, ಗರ್ಭಧಾರಣೆಯಾಗದಿರುವುದು, ಗರ್ಭಪಾತವಾಗುವುದು, ಮಗು ಅವಧಿಗಿಂತ ಮೊದಲೇ ಹುಟ್ಟುವುದು, ಮತಿಮಂದ ಅಥವಾ ವಿಕಲಾಂಗ ಮಕ್ಕಳಾಗುವುದು, ಚಿಕ್ಕಪ್ರಾಯದಲ್ಲಿಯೇ ಮಗು ಸಾಯುವುದು ಇತ್ಯಾದಿ.

  ಜಿಪುಣ ಮತ್ತು ಜೀವನದ ಮೌಲ್ಯ

ಎ. ನೈಸರ್ಗಿಕ ಲಕ್ಷಣಗಳು

ಮನೆಯ ಅಂಗಳದಲ್ಲಿನ ತುಳಸಿಯ ಗಿಡವು ಕಾರಣವಿಲ್ಲದೇ ಕರಟುವುದು, ಮರಗಳಿಗೆ ಗೆದ್ದಲು ಹಿಡಿಯುವುದು, ಮರದ ಎಲೆಗಳು ಅಕಾಲದಲ್ಲಿ ಉದುರುವುದು ಇತ್ಯಾದಿ

ಏ. ಆಧ್ಯಾತ್ಮಿಕ ಲಕ್ಷಣಗಳು :

ಶ್ರೀರಾಮರಕ್ಷಾ ಅಥವಾ ತತ್ಸಮಾನ ಸ್ತೋತ್ರಗಳನ್ನು ಹೇಳುವಾಗ ಆಕಳಿಕೆ ಬರುವುದು, ನಿದ್ರೆಯಲ್ಲಿ ಕಿರುಚುವುದು ಅಥವಾ ಹಲ್ಲು ಕಡಿಯುವುದು, ಹಾಗೆಯೇ ಕೆಟ್ಟ ಕನಸುಗಳು ಬೀಳುವುದು, ರಾತ್ರಿ ವಾಸ್ತುವಿನಲ್ಲಿ ಗೆಜ್ಜೆಯ ಶಬ್ದ ಕೇಳಿಸುವುದು; ಬಟ್ಟೆ ಅಥವಾ ದೇವರ ಚಿತ್ರಗಳ ಮೇಲೆ ಪರಚಿದ ಗುರುತುಗಳು ಅಥವಾ ರಕ್ತದ ಕಲೆಗಳು ಬೀಳುವುದು ಇತ್ಯಾದಿ.

Leave a Reply

Your email address will not be published. Required fields are marked *

Translate »