ಆಧ್ಯಾತ್ಮಿಕ ಪರಿಹಾರಕ್ಕಾಗಿ ‘ದಶಪ್ರಣವೀ ಗಾಯತ್ರಿ ಮಂತ್ರ’
ಗಾಯತ್ರಿ ಮಂತ್ರದ ಋಷಿಗಳು, ದೇವತೆಗಳು ಮತ್ತು ಛಂದಸ್ಸು
ಗಾಯತ್ರ್ಯಾ ವಿಶ್ವಾಮಿತ್ರ ಋಷಿಃ ಸವಿತಾ ದೇವತಾ ಗಾಯತ್ರೀಚ್ಛನ್ದ:
ಅರ್ಥ : ಗಾಯತ್ರಿ ಮಂತ್ರದ ಜ್ಞಾನ ಪಡೆದ ಋಷಿಗಳೆಂದರೆ ವಿಶ್ವಾಮಿತ್ರ, ಆರಾಧ್ಯ ದೇವತೆಯೆಂದರೆ ಸವಿತಾ (ಸೂರ್ಯ), ಮತ್ತು ಛಂದಸ್ಸು ‘ಗಾಯತ್ರಿ’ ಆಗಿವೆ.
ದಶಪ್ರಣವೀ ಗಾಯತ್ರಿ ಮಂತ್ರ
ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಮ್ ।
ಓಂ ಭೂರ್ಭುವಃ ಸ್ವಃ । ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್ ।
ಓಂ ಆಪೋ ಜ್ಯೋತೀ ರಸೋಽಮೃತಂ ಬ್ರಹ್ಮಭೂರ್ಭುವಸ್ವರೋಮ್ ।
ಅರ್ಥ : ಓಂಕಾರದೊಂದಿಗೆ ಏಳು ವ್ಯಾಹೃತಿಗಳನ್ನು (ಏಳು ಲೋಕ) ಧ್ಯಾನಿಸುವ ಮೂಲಕ, ನಾವು ಆ ದೈದೀಪ್ಯಮಾನ ಭಗವಾನ್ ಸವಿತಾ (ಸೂರ್ಯನ) ದೇವತೆಯ ತೇಜವನ್ನು ಧ್ಯಾನಿಸುತ್ತೇವೆ. ಇದು (ತೇಜ) ನಮ್ಮ ಬುದ್ಧಿಶಕ್ತಿಗೆ ಸತ್ಪ್ರೇರಣೆಯನ್ನು ನೀಡಲಿ.
ಆಪ ತತ್ವವು ಜ್ಯೋತಿ (ಊರ್ಜೆ), ರಸ, ಅಮೃತ, ಬ್ರಹ್ಮ, ಭೂಲೋಕ, ಭೂವರ್ಲೋಕ, ಸ್ವರ್ಗಲೋಕ ಮತ್ತು ಓಂಕಾರದ ರೂಪವಾಗಿದೆ.

ಈ ಗಾಯತ್ರಿ ಮಂತ್ರದಲ್ಲಿ ‘ಓಂ’ (ಪ್ರಣವ) ಹತ್ತು ಬಾರಿ ಉಚ್ಛರಿಸುವುದರಿಂದ ಅದನ್ನು ‘ದಶಪ್ರಣವೀ ಗಾಯತ್ರಿ ಮಂತ್ರ’ ಎಂದು ಕರೆಯುತ್ತಾರೆ. ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾಗಲು ದಶಪ್ರಣವೀ ಗಾಯತ್ರಿ ಮಂತ್ರವು ಉಪಯುಕ್ತವಾಗುತ್ತದೆ.
ಗಾಯತ್ರಿ ಮಂತ್ರದ ಬಗ್ಗೆ ಮಾಹಿತಿ
- ಮಂತ್ರಗಳು ಬಾಣಗಳಂತೆ. ಮಂತ್ರಗಳನ್ನು ಯೋಗ್ಯವಾಗಿ ಉಚ್ಚರಿಸಿದರೆ ಮಾತ್ರ ಮಂತ್ರಗಳನ್ನು ಪಠಿಸುವ ಉದ್ದೇಶವು ಸಾಧಿಸಲ್ಪಡುತ್ತದೆ. ಮಂತ್ರವನ್ನು ತಪ್ಪಾಗಿ ಹೇಳಿದರೆ, ಅದರಿಂದ ಉಂಟಾಗುವ ತೊಂದರೆದಾಯಕ (ಅಯೋಗ್ಯ) ಸ್ಪಂದನಗಳಿಂದ ಸಂಬಂಧಪಟ್ಟ ವ್ಯಕ್ತಿಗೆ ತೊಂದರೆಯುಂಟಾಗುತ್ತದೆ; ಆದುದರಿಂದ ಮೇಲಿನ ಗಾಯತ್ರಿ ಮಂತ್ರವನ್ನು ಸೂಕ್ತ ಗುರುಗಳ ಮಾರ್ಗದರ್ಶನದಲ್ಲಿ ಉಪನಯನ ಆದವರು ಮಾತ್ರ ಪಠಿಸಬೇಕು. ಈ ಮಂತ್ರವನ್ನು ಬೆಳಗ್ಗೆ ಸ್ನಾನದ ನಂತರ ಪಠಿಸಿದರೆ ಹೆಚ್ಚು ಪ್ರಯೋಜನಕಾರಿ.
- ಯಾರಿಗಾದರೂ ತನ್ನ ಗುರುಗಳು ಈ ಮಂತ್ರವಾನ್ನು ನಿತ್ಯ ಉಪಾಸನೆಯಲ್ಲಿ ಜಪಿಸಬೇಕು ಎಂದು ಹೇಳಿದ್ದರೆ, ಗುರುಗಳ ಸಂಕಲ್ಪದಿಂದಾಗಿ ಮಂತ್ರದಿಂದ ಉತ್ಪತ್ತಿಯಾಗುವ ಶಕ್ತಿಯಿಂದಾಗಿ ಆ ವ್ಯಕ್ತಿಗೆ ತೊಂದರೆಯಾಗುವುದಿಲ್ಲ.
- ಮಂತ್ರಗಳನ್ನು ಪಠಿಸುವಾಗ ಆಹಾರ ಮತ್ತು ಆಚಾರದ ನಿಯಮಗಳನ್ನು ಅನುಸರಿಸುವುದು ಆವಶ್ಯಕವಾಗಿದೆ, ಆಗ ಮಾತ್ರ ಮಂತ್ರದಿಂದ ಯೋಗ್ಯ ಲಾಭವಾಗುತ್ತದೆ. ಆಹಾರ ಮತ್ತು ಆಚಾರದ ನಿಯಮಗಳನ್ನು ಪಾಲಿಸದಿರುವುದರಿಂದ ಉಂಟಾಗುವ ದೋಷಗಳನ್ನು ತೆಗೆದುಹಾಕಲು ಮಂತ್ರಶಕ್ತಿಯು ವ್ಯಯವಾಗುತ್ತದೆ; ಆದ್ದರಿಂದ ಮಂತ್ರಗಳನ್ನು ಪಠಿಸುವವರಿಗೆ ನಿರೀಕ್ಷಿತ ಲಾಭ ಸಿಗುವುದಿಲ್ಲ.
ಗಾಯತ್ರಿ ಮಂತ್ರವನ್ನು ಯಾವಾಗ ಪಠಿಸಬಾರದು?
- ಸೂರ್ಯಾಸ್ತದ ನಂತರ ಗಾಯತ್ರಿ ಮಂತ್ರವನ್ನು ಹೇಳಬಾರದು.
- ಜನನ ಮತ್ತು ಮೃತ್ಯುವಿನ ಸೂತಕದ ಅವಧಿಯಲ್ಲಿ ಮಂತ್ರ ಪಠಿಸಬಾರದು.
- ಮಹಿಳೆಯರು ಗಾಯತ್ರಿ ಮಂತ್ರವನ್ನು ಜಪಿಸಬಾರದು; ಏಕೆಂದರೆ ಮಂತ್ರದಲ್ಲಿರುವ ತೇಜತತ್ತ್ವದಿಂದ ಅವರಿಗೆ ತೊಂದರೆ ಉಂಟಾಗಬಹುದು.
ಮಂತ್ರದಿಂದಾಗುವ ಪ್ರಯೋಜನಗಳು
ಕೆಟ್ಟಶಕ್ತಿಗಳ ತೊಂದರೆಯಿಂದ ಬಳಲುತ್ತಿರುವವರ ಮೇಲೆ ಈ ಮಂತ್ರದಿಂದ ಆಧ್ಯಾತ್ಮಿಕ ಉಪಚಾರವಾಗುತ್ತದೆ. ತೊಂದರೆದಾಯಕ ಆವರಣದಿಂದ ಉಂಟಾಗುವ ಜಡತ್ವವು ಕಡಿಮೆಯಾಗಿ ಹಗುರವೆನಿಸುತ್ತದೆ.
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!