ಜಲಪೂರಣ ತ್ರಯೋದಶಿ
ಆಶ್ವೀಜ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ. ಅಂದು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ಹಂಡೆಗಳನ್ನು ತೊಳೆದು ಅವನ್ನು ಅಲಂಕರಿಸಬೇಕು. ಅನಂತರ ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬಿಸಿ, ಗಂಗೆ ಪೂಜೆ ಮಾಡಬೇಕು. ದೇವರ ಮುಂದೆ ಮಂಡಲವನ್ನು ಹಾಕಿ (ನೀರಿನಲ್ಲಿ), ರಂಗೋಲಿಯನ್ನು ಬರೆದು, ಅದನ್ನು ಅಲಂಕರಿಸಿ, ಗಂಗೆಯನ್ನು ಒಂದು ಪಾತ್ರೆಯಲ್ಲಿ ಇಟ್ಟು ದೇವರಿಗೆ ಸಮರ್ಪಿಸಬೇಕು. ದೇವರ ಮುಂದೆ ಮತ್ತು ತುಳಸೀ ಗಿಡದ ಮುಂದೆ ದೀಪವನ್ನು ಹಚ್ಚಿ, ಆಚಮನ ಮಾಡಿ, ಸಂಕಲ್ಪ ಪುರಸ್ಸರವಾಗಿ, ದ್ವಾದಶ ನಾಮಗಳಿಂದ ಗಂಗೆಯನ್ನು ಪೂಜಿಸಿ, ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಸ್ಮರಿಸಿ, ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಗಂಗೆಯನ್ನು ಪೂಜಿಸಬೇಕು, ಇಲ್ಲಿ ನೀರೇ ಗಂಗೆಯಲ್ಲ. ಅದರಲ್ಲಿ ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದು ಭಾವಿಸಬೇಕು.
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ |
ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |
ಗಂಗಾಯೈ ನಮ: | ಗಂಗಾಂ ಅಸ್ಮಿನ್ ಕಲಶೇ ಆವಾಹಯಾಮಿ, ಅರ್ಘ್ಯಪಾದ್ಯ ಆಚಮಾನೀಯಾದಿ ಸರ್ವೋಪಚಾರ ಪೂಜಾಂ ಸಮರ್ಪಯಾಮಿ |
ದ್ವಾದಶನಾಮ ಪೂಜ – ನಂದಿನೈ ನಮ: | ನಲಿನ್ಯೈ ನಮ: | ಸೀತಾಯೈ ನಮ: | ಮಾಲತ್ಯೈ ನಮ: | ಮಲಾಪಹಾಯೈ ನಮ: | ವಿಷ್ಣುಪಾದಾಬ್ಜಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ: | ಭಾಗೀರಥ್ಯೈ ನಮ:|ಭೋಗವತ್ಯೈ ನಮ: | ಜಾಹ್ನವ್ಯೈ ನಮ: | ತ್ರಿದಶೇಶ್ವರ್ಯೈರ್ನಮ: |
ಧೂಪಂ, ದೀಪಂ, ಗೂಡಾಪೂಪ ನೈವೇದ್ಯಂ ಸಮರ್ಪಯಾಮಿ |
ನೀರಾಜನಂ ಸಮರ್ಪಯಾಮಿ |
ಯಮದೀಪದಾನ : ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ. ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು. ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ |
ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.
ಮೊದಲ ದಿನ ಯಮದೀಪ ಮತ್ತು ಜಲಪೂರಣ
ಏರಡನೆ ದಿನ ತೈಲಾಭ್ಯಂಜನ, ನರಕ ಚತುರ್ದಶಿ
ಮೂರನೇ ದಿನ ಯಮದೀಪ ದೀಪಾವಳಿ ಧನ ಧಾನ್ಯ ಲಕ್ಷ್ಮಿ ಪೂಜೆ, ಬಲೀಂದ್ರ ಪೂಜೆ
.▬▬▬ஜ۩۞۩ஜ▬▬▬▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬