ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೀಪಾವಳಿ ಅಭ್ಯಂಜನ ಸ್ನಾನ ಯಾಕೆ , ಹೇಗೆ ಮಾಡಬೇಕು ?

ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬದಲ್ಲಿ ಅಭ್ಯಂಜನ ಸ್ನಾನಕ್ಕೆ ವಿಶೇಷ ಮಹತ್ವವಿದೆ. ತ್ರಯೋದಶಿಯ ದಿನದಂದು ನೀರು ತುಂಬುವ ಮೂಲಕ ಹಬ್ಬಕ್ಕೆ ಶುಭಾರಂಭ. ಅಂದು ನೀರಿನ ಪಾತ್ರೆ, ಹಂಡೆಗಳನ್ನು ಶುದ್ದಿ ಮಾಡಿ ಪೂಜಿಸಿ ಮುಂಜಾನೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಪದ್ಧತಿ. ಕೃಷ್ಣಪಕ್ಷದ ನರಕಚತುರ್ದಶಿಯಂದು ಎಲ್ಲರೂ ಅಭ್ಯಂಗ ಸ್ನಾನ ಮಾಡಬೇಕು. ಈ ಶುಭಕರವಾದ ಅಭ್ಯಂಗ ಸ್ನಾನವನ್ನು ಸನ್ಯಾಸಿಗಳೂ ಸಹ ಮಾಡಬೇಕು. ಇದರಿಂದ ನಾರಾಯಣನಿಗೆ ಸಂತೋಷ ಉಂಟಾಗಿ ನರಕಭೀತಿ ನಿವಾರಣೆಯಾಗುತ್ತದೆ ಎನ್ನುತ್ತವೆ ಸ್ಕಂದ ಮತ್ತು ಪದ್ಮ ಪುರಾಣಗಳು.

ಆ ದಿನದಂದು ತೈಲದಲ್ಲಿಲಕ್ಷಿತ್ರ್ಮಯು ಮತ್ತು ಜಲದಲ್ಲಿಗಂಗೆಯು ನೆಲಸಿರುವಳೆಂಬ ನಂಬಿಕೆಯಿದೆ. ಆದ್ದರಿಂದ ಅಭ್ಯಂಗ ಸ್ನಾನ ಮಾಡುವುದರಿಂದ ದಾರಿದ್ರ್ಯ ದೂರವಾಗುವುದು ಮತ್ತು ಯಮಲೋಕದಿಂದ ಪಾರಾಗುವನು.

ನರಕಚತುರ್ದಶಿಯ ಬ್ರಾಹ್ಮೀ ಮುಹೂರ್ತದಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ಗಂಗಾಸ್ನಾನದ ಫಲವನ್ನು ನೀಡುವುದು. ಕೃಷ್ಣಚತುದರ್ಶಿಯ ದಿನದಂದು ಎಣ್ಣೆ ಮತ್ತು ಜಲದಲ್ಲಿವಿಶೇಷ ಶಕ್ತಿಯಿರುವುದು ಎನ್ನುವರು ಜ್ಞಾನಿಗಳು. ನರಕಾಸುರನನ್ನು ಕೊಂದ ಪಾಪಪರಿಹಾರಕ್ಕೆ ಶ್ರೀಕೃಷ್ಣನು ಎಣ್ಣೆ ಸ್ನಾನ ಮಾಡಿದನಂತೆ. ದೀಪಾವಳಿಯ ದಿನದಂದು ಅಭ್ಯಂಗ ಸ್ನಾನ ಮಾಡಿದರೆ ಸಕಲ ಪಾಪಗಳು ನಿವಾರಣೆಯಾಗಿ ಆಯಸ್ಸು ಮತ್ತು ಆರೋಗ್ಯ ವೃದ್ಧಿಸುವುದು ಎನ್ನುವ ನಂಬುಗೆಯಿದೆ.

  ಅಷ್ಟಮಿ ದಿನ ಶೀತಲಾ ದೇವಿ ಪೂಜೆ

ಪಂಚಕರ್ಮ ವಿಧಾನದಲ್ಲಿ

ಆಯುರ್ವೇದ ಪಂಚಕರ್ಮ ಚಿಕಿತ್ಸಾ ವಿಧಾನದಲ್ಲಿಅಭ್ಯಂಗವನ್ನು ಶಾರೀರಿಕ ಶೋಧನಾ ಕ್ರಮವಾಗಿ ಬಳಸಲಾಗುತ್ತದೆ. ಆಧುನಿಕ ವೈದ್ಯಕೀಯ ವಿಧಾನವೂ ಸಹ ಅಭ್ಯಂಗದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ ಎಂಬುದನ್ನು ದೃಢೀಕರಿಸಿವೆ. ಸಾಂಪ್ರದಾಯಿಕ ಅಭ್ಯಂಜನ ಪದ್ಧತಿಯಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಿಂದಾಗಿ ದೇಹ ಮತ್ತು ಮನಸ್ಸು ವಿಶ್ರಾಂತಗೊಳ್ಳುತ್ತದೆ. ಅದರಲ್ಲೂ ದೀಪಾವಳಿಯಂದು ಮಾಡುವ ಅಭ್ಯಂಗ ಸ್ನಾನಕ್ಕೆ ವಿಶೇಷ ಮಹತ್ವವಿದೆ.

ಉಪಯೋಗ:

ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಅದರ ಪ್ರಯೋಜನಗಳು ಹಲವಾರು. ವಿವಿಧ ಎಣ್ಣೆ ಹಚ್ಚಿಕೊಂಡು ನಿಧಾನವಾಗಿ ಮಾಂಸಪೇಶಿಗಳಿಗೆ ಅನುಗುಣವಾಗಿ ಸರಿಯಾದ ಒತ್ತಡ ಬಳಸಿ ನವಿರಾಗಿ ಮರ್ಧನ ಮಾಡುವುದೇ ಒಂದು ಕಲೆ. ಅದುವೇ ಅಭ್ಯಂಗ. ಈ ಕಲೆಯನ್ನು ಕಲಿತವರು, ಅನುಭವವುಳ್ಳವರು ಅಭ್ಯಂಗವನ್ನು ಮಾಂಸ ಮತ್ತು ನರಸಂಬಂಧಿ ರೋಗಗಳಿಗೆ ಉತ್ತಮ ಚಿಕಿತ್ಸೆಯಾಗಿ ಬಳಸುತ್ತಾರೆ. ಹಿಂದೆ ಪೈಲ್ವಾನರು, ಜಟ್ಟಿಗಳಿಗೆ ಈ ಕಲೆ ಕರಗತವಾಗಿತ್ತು.

  • ಅಭ್ಯಂಗ ಸ್ನಾನದಲ್ಲಿ ಎಣ್ಣೆಯನ್ನು ವಿಶೇಷವಾಗಿ ತಲೆ, ಕಿವಿ ಮತ್ತು ಪಾದಗಳಿಗೆ ಹೆಚ್ಚು ಹಚ್ಚಿ ಉಜ್ಜಬೇಕಾದ್ದು ಅತ್ಯಗತ್ಯವಾಗಿದೆ.
  • ನಿತ್ಯ ಅಭ್ಯಂಗ ಸ್ನಾನ ಮಾಡುವುದರಿಂದ ಅದರ ನೇರ ಪರಿಣಾಮ ಚಿಕಿತ್ಸಾ ರೂಪದಲ್ಲಿರುವುದು. ಶಾರೀರಿಕ ಸಮಸ್ಯೆಗಳಾದ ಮುಪ್ಪು ಮತ್ತು ಅಯಾಸವನ್ನು ದೂರಮಾಡುವುದು. ವಾತರೋಗಗಳು ಉಪಶಮನಗೊಳ್ಳುತ್ತವೆ.
  • ಅಂಗಾಲಿಗೆ ಎಣ್ಣೆಯನ್ನು ಹಚ್ಚಿ ಉಜ್ಜುವುದರಿಂದ ಕಣ್ಣಿನ ದೃಷ್ಟಿಶಕ್ತಿ ಹೆಚ್ಚುತ್ತದೆ. ಪುರುಷನ ಲೈಂಗಿಕ ಶಕ್ತಿ
  ಅಪರಾ / ಅಚಲ ಏಕಾದಶಿ ಮಹತ್ವ

ವರ್ಧಿಸುತ್ತದೆ. ಪುಷ್ಟಿಯು ದೊರೆಯುತ್ತದೆ. ಶರೀರದ ಸ್ನಾಯುಗಳು ಸದೃಢವಾಗುತ್ತವೆ. ಅಂಗಾಂಗಗಳೂ ಪುಷ್ಟಿಯಾಗಿ ಶರೀರಕ್ಕೆ ಒಳ್ಳೆಯ ಆಕಾರ ಬರುತ್ತದೆ.

  • ಎಣ್ಣೆ ಹಚ್ಚಿಕೊಂಡು ಬಿಸಿನೀರಿನಲ್ಲಿಸ್ನಾನ ಮಾಡುವುದರಿಂದ ಸುಖವಾಗಿ ನಿದ್ರೆ ಬರುವುದು, ಚರ್ಮವು ದೃಢವಾಗಿ ಕಾಂತಿಯುತವಾಗುತ್ತದೆ.
  • ಮಸಾಜ್‌ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚುವುದು. ಇದರಿಂದ ರಕ್ತಸಂಚಾರ ಹೆಚ್ಚುವುದಲ್ಲದೆ ಅಂಗಾಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ.
  • ಮಾಂಸದ ಬಲವನ್ನು ಹೆಚ್ಚಿಸುವುದು, ದೇಹದಲ್ಲಿನ ಟಾಕ್ಸಿನ್‌ ಅನ್ನು ಹೊರಹಾಕುತ್ತದೆ.
  • ಅಂಗೈ ಮತ್ತು ಅಂಗಾಲಿನಲ್ಲಿನಮ್ಮ ದೇಹವನ್ನು ನಿಯಂತ್ರಿಸುವ ಸೂಕ್ಷತ್ರ್ಮ ಕೇಂದ್ರಗಳಿವೆ. ಮಸಾಜ್‌ ಮಾಡುವುದರಿಂದ ಹಾರ್ಮೋನುಗಳು ಸ್ರವಿಸಿ ಮನಸ್ಸಿನ ಉಲ್ಲಾಸದಿಂದಿರಲು ಸಹಾಯಮಾಡುತ್ತದೆ.
  • ಹೊಟ್ಟೆಗೆ ಮಸಾಜ್‌ ಮಾಡುವುದರಿಂದ ಯಕೃತ್‌ ಮತ್ತು ಪ್ಲೀಹಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಜೀರ್ಣಶಕ್ತಿ ಹೆಚ್ಚುತ್ತದೆ.
  • ನಿತ್ಯ ಮಸಾಜ್‌ ಮಾಡುವುದರಿಂದ ಸ್ಟೆ್ರಚ್‌ ಮಾರ್ಕ್ಗಳು ಮಾಯವಾಗುತ್ತವೆ. ಆದರೆ ಕಫ ಹೆಚ್ಚಿರುವ ಸಂದರ್ಭದಲ್ಲಿ ಅಥವಾ ಅಜೀರ್ಣ ರೋಗಿಗಳಿಗೆ ಮಸಾಜ್‌ ಮಾಡಬಾರದು.
  ಶ್ರೀ ವ್ಯಾಸರಾಜ ತೀರ್ಥ ಪ್ರತಿಷ್ಠಾಪಿಸಿರುವ 732 ಆಂಜನೇಯ - Sree Vyasaraja Built 732 Anjaneya statues list

▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Leave a Reply

Your email address will not be published. Required fields are marked *

Translate »