ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಏಕಾದಶಿಗಳ ಹೆಸರುಗಳು ಮತ್ತು ಫಲ

🌼 ೨೪ ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ

🌼

🌺 ಚೈತ್ರ ಶುಕ್ಲ ಏಕಾದಶಿ – ಕಾಮದಾ – ಕೋರಿಕೆಗಳನ್ನು ಪೂರೈಸುತ್ತದೆ.

🌺 ಚೈತ್ರ ಬಹುಳ ಏಕಾದಶಿ – ವರೂಧಿನಿ – ಸಹಸ್ರ ಗೋದಾನ ಫಲವು ಲಭಿಸುತ್ತದೆ.

🌺 ವೈಶಾಖ ಶುದ್ಧ ಏಕಾದಶಿ – ಮೋಹಿನಿ – ದರಿದ್ರನು ಧನವಂತನಾಗುತ್ತಾನೆ.

🌺 ವೈಶಾಖ ಬಹುಳ ಏಕಾದಶಿ – ಅಪರಾ – ರಾಜ್ಯಪ್ರಾಪ್ತಿ.

🌺 ಜ್ಯೇಷ್ಠ ಶುಕ್ಲ ಏಕಾದಶಿ – ನಿರ್ಜಲ – ಆಹಾರ ಸಮೃದ್ಧಿ.

🌺 ಜ್ಯೇಷ್ಠ ಬಹುಳ ಏಕಾದಶಿ – ಯೋಗಿನಿ – ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ).

🌺 ಆಷಾಢ ಶುದ್ಧ ಏಕಾದಶಿ – ದೇವಶಯನಿ – ಸಂಪತ್ ಪ್ರಾಪ್ತಿ – ವಿಷ್ಣುವು ಯೋಗನಿದ್ರೆಗೆ ಜಾರುವ ದಿನ.

  ಶ್ರೀ ಗುರು ರಾಯರ ವೃಂದಾವನ ಒಂದು ಚಿಂತನೆ

🌺 ಆಷಾಢ ಬಹುಳ ಏಕಾದಶಿ – ಕಾಮಿಕಾ – ಬೇಡಿದ ವರಗಳು ಪ್ರಾಪ್ತಿಯಾಗುತ್ತವೆ.

🌺 ಶ್ರಾವಣ ಶುಕ್ಲ ಏಕಾದಶಿ – ಪುತ್ರದಾ – ಸತ್ ಸಂತಾನ ಪ್ರಾಪ್ತಿ.

🌺 ಶ್ರಾವಣ ಬಹುಳ ಏಕಾದಶಿ – ಅಜಾ – ರಾಜ್ಯ, ಪತ್ನೀಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ.

🌺 ಭಾದ್ರಪದ ಶುದ್ಧ ಏಕಾದಶಿ – ಪರಿವರ್ತನ (ಯೋಗ ನಿದ್ರೆಯಲ್ಲಿ ವಿಷ್ಣುವು ಪಕ್ಕಕ್ಕೆ ಹೊರಳುತ್ತಾನಂತೆ ಹಾಗಾಗಿ ಇದು ಪರಿವರ್ತನ) – ಯೋಗ ಸಿದ್ಧಿ.

🌺 ಭಾದ್ರಪದ ಬಹುಳ ಏಕಾದಶಿ – ಇಂದಿರಾ – ಸಂಪದಗಳು ಮತ್ತು ರಾಜ್ಯ ಪ್ರಾಪ್ತಿ ಉಂಟಾಗುತ್ತದೆ.

🌺 ಆಶ್ವಯುಜ ಶುಕ್ಲ ಏಕಾದಶಿ – ಪಾಪಾಂಕುಶ – ಪುಣ್ಯಪ್ರದವಾದುದು.

🌺 ಆಶ್ವಯುಜ ಬಹುಳ ಏಕಾದಶಿ – ರಮಾ – ಸ್ವರ್ಗಪ್ರಾಪ್ತಿ.🌺 ಕಾರ್ತೀಕ ಶುಕ್ಲ ಏಕಾದಶಿ – ಪ್ರಬೋಧಿನಿ (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) – ಜ್ಞಾನಸಿದ್ಧಿ.

  ‌ಸನಾತನ ಧರ್ಮದಲ್ಲಿ ಹೊಸ್ತಿಲು ಪೂಜೆಗೆ ಅತ್ಯಂತ ಮಹತ್ವವೇಕೆ ?

🌺 ಕಾರ್ತೀಕ ಬಹುಳ ಏಕಾದಶಿ – ಉತ್ಪತ್ತಿ – ದುಷ್ಟ ಸಂಹಾರ (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ).

🌺 ಮಾರ್ಗಶಿರ ಶುಕ್ಲ ಏಕಾದಶಿ – ಮೋಕ್ಷದಾ – ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ).

🌺 ಮಾರ್ಗಶಿರ ಬಹುಳ ಏಕಾದಶಿ – ವಿಮಲಾ (ಸಫಲಾ) – ಅಜ್ಞಾನ ನಿವೃತ್ತಿ.

🌺 ಪುಷ್ಯ ಶುಕ್ಲ ಏಕಾದಶಿ – ಪುತ್ರದಾ – ಪುತ್ರಪ್ರಾಪ್ತಿ (ಪುಷ್ಯ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ ಏಕಾದಶಿಯಾಗುತ್ತದೆ).

🌺 ಪುಷ್ಯ ಕೃಷ್ಣ ಏಕಾದಶಿ – ಕಲ್ಯಾಣೀ (ಷಟ್ತಿಲಾ) – ಶಾರೀರಿಕ ಬಾಧೆಗಳಿಂದ ಮುಕ್ತಿ.

  ಹಿಂದೂ ಸಂಸ್ಕೃತಿಯಲ್ಲಿ ಕಾಗೆಗಳಿಗೆ ಇರುವ ಸ್ಥಾನ

🌺 ಮಾಘ ಶುಕ್ಲ ಏಕಾದಶಿ – ಕಾಮದಾ (ಜಯಾ) – ಶಾಪವಿಮುಕ್ತಿ.

🌺 ಮಾಘ ಕೃಷ್ಣ ಏಕಾದಶಿ – ವಿಜಯಾ – ಸಕಲ ಕಾರ್ಯ ವಿಜಯ (ಇದು ಭೀಷ್ಮೈಕಾದಶಿ ಎಂದು ಪ್ರಸಿದ್ಧಿಯಾಗಿದೆ).

🌺 ಫಾಲ್ಗುಣ ಶುಕ್ಲ ಏಕಾದಶಿ – ಆಮಲಕೀ – ಆರೋಗ್ಯ ಪ್ರಾಪ್ತಿ.

🌺 ಫಾಲ್ಗುಣ ಕೃಷ್ಣ ಏಕಾದಶಿ – ಸೌಮ್ಯಾ – ಪಾಪ ವಿಮುಕ್ತಿ.

|| ಶ್ರೀಕೃಷ್ಣಾರ್ಪಣಮಸ್ತು||

(ಸತ್ಸಂಗ ಸಂಗ್ರಹ)🙏🙏🙏🌹🌹

Leave a Reply

Your email address will not be published. Required fields are marked *

Translate »