ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಣೇಶನ ರೂಪ

ಗಣೇಶನ ರೂಪ..!

ಗಣೇಶನನ್ನು ನಾವು ನೆನೆಸಿಕೊಂಡ ತಕ್ಷಣ ನಮ್ಮ ಕಣ್ಣೆದುರಿಗೆ ಬರುವುದು ಅವನ ಆನೆ ಮುಖ‌, ದೊಡ್ಡ ಕವಿ, ದೊಡ್ಡ ಹೊಟ್ಟೆ ಹೀಗೆ ಇದೊಂದು ರೂಪ ನಮ್ಮ ಕಣ್ಣ ಮುಂದೆ ಬಂದು ಹೋಗುತ್ತದೆ.

ಆದರೆ ವಾಸ್ತವದಲ್ಲಿ ಗಣೇಶನೆಂದರೆ “ಗಣಗಳ ಈಶ” “ಗಣಗಳ ಒಡೆಯ” ನೆಂಬ ಅರ್ಥ ಬರುತ್ತದೆ.

ನಾವು ಪೂಜಿಸುವ ಪ್ರತಿ ದೇವರಿಗೂ ಒಂದೊಂದು ರೂಪವಿದೆ, ಮತ್ತು ನಮ್ಮ ಪೂರ್ವಿಕರು ಒಂದು ದೇವರಿಗೆ ನೀಡಿದ ರೂಪಕ್ಕೆ ತನ್ನದೇ ಆದ ಮಹತ್ವ ಮತ್ತು ವಿಷೇಶತರಗಳು ಇವೆ.

ಗಣೇಶನ ಸ್ವರೂಪದ ಹಿಂದಿರುವ ತತ್ವ ಮತ್ತು ಸ್ವರೂಪದ ಮಹತ್ವವನ್ನು ಈಗಾಗಲೇ ಶ್ರೀಕಾಂತ್ ಶೆಟ್ಟಿ ಅವರು ಬಹಳ ಸೊಗಸಾಗಿ ವಿವರಿಸಿದ್ದಾರೆ, ಆ ಲೇಖನ ಕೊಂಚ ಉದ್ದವಿದೆ ಆದರೆ ಬಹಳ ಸೊಗಸಾಗಿದೆ, ಹಾಗಾಗಿ ನಾನು ಗಣೇಶನ ಸ್ವರೂಪವನ್ನು ಮತ್ತೊಮ್ಮೆ ವಿವರಿಸಲು ಹೋಗದೆ ಆ ಲೇಖನದ ಲಿಂಕನ್ನು ಕೊನೆಯಲ್ಲಿ Paste ಮಾಡುತ್ತೇನೆ, ತಿಳಿದುಕೊಳ್ಳುವ ಇಚ್ಚೆ ಇರುವವರು ಅದನ್ನು ಓದಬಹುದು.

ನಮ್ಮ ಸನಾತನ ಧರ್ಮದಲ್ಲಿ ಮೂರ್ತಿ ಪೂಜೆಯನ್ನು ಶ್ರೇಷ್ಠ ಪೂಜಾ ವಿಧಾನ ಅಂತ ಕರೆದಿಲ್ಲ, ನಮ್ಮ ಧರ್ಮದಲ್ಲಿ ಶ್ರೇಷ್ಠ ಪೂಜಾ ವಿಧಾನ ಮಾನಸ ಪೂಜೆ.

ಮಾನಸ ಪೂಜೆ ಎಂದರೆ ಏನು ಅಂತ ಹೇಳ್ತೀನಿ ಕೇಳಿ… ಈಗ ರಾಮ‌ ನಿಮ್ಮ ಇಷ್ಟ ದೈವ ಅಂದುಕೊಳ್ಳಿ, ಅವನಿಗೆ ನೀವು ಪೂಜೆ ಮಾಡಬೇಕು, ಈಗ ನಿಮ್ಮ ಬಳಿ ರಾಮನ ಪೋಟೋ, ವಿಗ್ರಹ ಏನೂ ಇಲ್ಲ, ನೀವು ರಾಮನಿಗೆ ಪೂಜೆ ಮಾಡಬೇಕಾದರೆ ಮೊದಲಿಗೆ ನಿಮಗೆ ರಾಮನ ಸ್ವರೂಪ ನಿಮ್ಮ ಮನದಲ್ಲಿ ಕೂರಬೇಕು, ಹಾಗೆ ಮನಸ್ಸಿನಲ್ಲಿ ಮೂಡಿದ ರಾಮನ ಮೂರ್ತಿಯಲ್ಲಿ ನೀವು ನಿಮ್ಮ‌ ಮನಸ್ಸನ್ನು ಕೇಂದ್ರೀಕರಿಸಬೇಕು, ಮತ್ತು ಅನಂತರ ನಿಮ್ಮ ಮನದಲ್ಲಿ ನೆಲೆಸಿರುವ ರಾಮನಿಗೆ ನೀವು ಶೋಷಶೋಪಚಾರ ( 16 ಉಪಚಾರ) ಪೂಜೆ ಮಾಡುತ್ತಿರುವಂತೆ ಕಲ್ಪಿಸಿಕೊಂಡು ಅದನ್ನು ಮಾಡಿ ಮುಗಿಸಬೇಕು, ಇದು ಶ್ರೇಷ್ಠ ಪೂಜಾ ವಿಧಾನ, ಇದು ಅಹಂ ಬ್ರಹ್ಮಾಸ್ಮಿ ಅದೈತ ತತ್ವ, ಅಧ್ಯಾತ್ಮದ ತುತ್ತತುದಿ, ಈಗ ಹೇಳಿ… ಇದನ್ನು ಎಷ್ಟು ಜನರಿಗೆ ಮಾಡಲು ಸಾಧ್ಯ..?

  ಬಾಳೆ ಎಲೆಯಲ್ಲಿ ಏಕೇ ಊಟ ಮಾಡಬೇಕು?

ಇದು ಸಾಮಾನ್ಯ ಮನುಷ್ಯನಿಂದ ಮಾಡಲು ಅಸಾಧ್ಯವಾದ ಪೂಜಾ ವಿಧಾನ, ಹಾಗಾಗಿಯೇ ನಮ್ಮ ಪೂರ್ವಿಕರು ಸಾಮಾನ್ಯರಿಗೂ ಪೂಜೆ ಮಾಡಲು ಅನುವಾಗುವಂತೆ ಪ್ರತಿ ದೇವರಿಗೂ ಮೂರ್ತರೂಪ ಕೊಟ್ಟು ಆ ಮೂರ್ತಿಗಳನ್ನು ನಮ್ಮ ಮುಂದೆ ಇರಿಸಿದರು, ಮತ್ತು ನಮ್ಮ ಪೂರ್ವಿಕರಿಗೆ ಆ ಮೂರ್ತಿಯ ಮತ್ತದರ ಸ್ವರೂಪದ ಮಹತ್ವ ಗೊತ್ತಿತ್ತು.

ಮತ್ತು ಬಹುಮುಖ್ಯವಾಗಿ ಧರ್ಮದ ತಿರುಳನ್ನು ತಿಳಿದ ಮನುಷ್ಯನ ಎದೆಯಲ್ಲಿ ಅವನು ಯಾವ ಆಚರಣೆ ಮಾಡದಿದ್ದರೂ ಧರ್ಮ ನೆಲೆಸಿರುತ್ತದೆ, ಆದರೆ ಧರ್ಮದ ತಿರುಳೇ ಗೊತ್ತಿಲ್ಲದವನು ಆಚರಣೆಗಳನ್ನು ಬಿಟ್ಟ ಕೆಲವೇ ಕೆಲವು ವರ್ಷಗಳಲ್ಲಿ ಅವನ ಎದೆಯಿಂದ ಧರ್ಮವೂ ನಶಿಸಿ ಹೋಗುತ್ತದೆ.

ಹಾಗಾಗೆಯೇ ನಮ್ಮ ಪೂರ್ವಿಕರು ಧಾರ್ಮಿಕ ಆಚರಣೆಗಳಿಗೆ ಅಷ್ಟು ಮಹತ್ವ ನೀಡಿದ್ದು .

ತಲೆಮಾರುಗಳ ಉರುಳುತ್ತಾ ಉರುಳುತ್ತಾ ನಮ್ಮ ಆಚರಣೆಗಳ‌ ಹಿಂದಿನ ಕಾರಣಗಳು ನಮಗೆ ತಿಳಿಯದೆ ಕೇವಲ ಆಚರಣೆಗಳನ್ನು ಮಾತ್ರ ನಾವು ಉಳಿಸಿಕೊಂಡು ಬಂದೆವು, ಯಾರಿಗೂ ಯಾವುದನ್ನೂ ಪ್ರಶ್ನೆ ಮಾಡುವ ಮನಸ್ಥಿತಿಯೇ ಇರಲಿಲ್ಲ, ಮತ್ತು ಕೇಳಿದ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಲು ಬಹುತೇಕರಿಗೆ ಶಕ್ತಿ ಇಲ್ಲ, ಇಂದಿನ ಎಲ್ಲ ಪರಿಸ್ಥಿತಿಗೆ ನಮ್ಮ ಈ ಮನಸ್ಥಿತಿಯೇ ಕಾರಣ.

ನಮ್ಮ ಧರ್ಮ ಯಾವತ್ತಿಗೂ ಪ್ರಶ್ನೆಗಳನ್ನು ಧಿಕ್ಕರಿಸಲಿಲ್ಲ ಮತ್ತು ಉತ್ತರ ಕೊಡಲು ಹಿಂಜೆರಿಯಲೂ ಇಲ್ಲ, ಆದರೆ ಪ್ರಶ್ನೆ ಕೇಳುವ ಮನಸ್ಥಿತಿ ಎಲ್ಲೂ ಒಂದು ಸಮಯದಲ್ಲಿ ನಿಮ್ಮಿಂದ ದೂರವಾದ್ದರಿಂದ ಈ ಎಲ್ಲ ಸಮಸ್ಯೆಗಳೂ ಉದ್ಭವಿಸಿದವು ಅಷ್ಟೆ,ಹಾಗೆ ಪ್ರಶ್ನೆ ಕೇಳುವ ಮನಸ್ಥಿತಿ ನಮ್ಮಿಂದ ದೂರವಾದ್ದರಿಂದ ಮುಂದಿನ Generation ಗಳು ಮತ್ತೆ ಪ್ರಶ್ನೆ ಕೇಳುವ ಮನಸ್ಥಿತಿಗೆ ವಾಪಸ್ ಆಗುತ್ತಿದ್ದರೂ ಆ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವ ತಾಕತ್ತು ನಮ್ಮಲ್ಲಿ ಬಹುತೇಕರಿಗೆ ಇಲ್ಲ.

  ಶ್ರೀಮತಿ ದ್ರೌಪದಿ ಮುರ್ಮು - ಭಾರತದ 15ನೆಯ ರಾಷ್ಟ್ರಪತಿಯವರ ಕಿರು ಪರಿಚಯ

ಈಗ ಗಣೇಶನ ಸ್ವರೂಪದ ಹಿಂದಿರುವ ಯೋಗಿಕ ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ಮಲ, ವಿಕ್ಷೇಪ, ಅವರಣ

ಇವು ಮೂರೂ ಮನುಷ್ಯ ಸಮಾಧಿ ಸ್ಥಿತಿ ತಲುಪಲು ಇರುವ ತೊಡಕುಗಳು

ಮಲ ನಮ್ಮಲ್ಲಿರುವ Impure thoughts, ಅಥವಾ ನಮ್ಮ ಮನದಲ್ಲಿ ಉಳಿಯುವ ನಮ್ಮಿಷ್ಟದ ವಿಕಾರಗಳು.

ವಿಕ್ಷೇಪ ಅನ್ನೋದು Distractions

ಆವರಣ ನಮ್ಮ ಬುದ್ದಿಗೆ ಕವಿದಿರುವ ಮಂಕು…

ವಿಕಾರಗಳಿಗೆ ನಾವು ಅಂಟಿಕೊಂಡಿರುತ್ತೇವೆಯೇ ಹೊರತು ವಿಕಾರಗಳು ನಮಗೆ ಅಂಟಿಕೊಂಡಿರುವುದಿಲ್ಲ, ಅವು ನಮಗೆ ನಮಗೆ ಇಷ್ಟವಾಗಿರುವುದರಿಂದ ನಾವು ಅವುಗಳಿಗೆ ಅಂಟಿಕೊಂಡಿರುತ್ತೇವೆ ಅಷ್ಟೆ.

ಈ ವಿಚಾರಗಳು ನಿಜವಾಗಿಯೂ ಶಕ್ತಿಗಳಾಗಿರುತ್ತವೆ, ಆದರೆ ಅವನ್ನು ನಮಗೆ ಸರಿಯಾದ ರೀತಿಯಲ್ಲಿ ಬಳಸಲು ಬರದೇ ಇರೋದರಿಂದ ಅವು ವಿಕಾರಗಳಾಗಿ ಮಾರ್ಪಾಡಾಗಿರುತ್ತವೆ ಅಷ್ಟೆ.

ಪಾರ್ವತಿಯೂ ಕೂಡ ತನಗಿಷ್ಟವಾದ ವಿಕಾರಗಳಿಗೆ ಅಂಟಿಕೊಂಡಿರುತ್ತಾಳೆ ( ಗಣೇಶನ ರೂಪ) ಮತ್ತು ಆ ವಿಚಾರಗಳನ್ನು ಶಿವನೆಂಬ ಆದಿಯೋಗಿ ತ್ರಿಶೂಲದಿಂದ ಗಣೇಶನ‌ ತಲೆ ಕತ್ತರಿಸುವ ಮೂಲಕ ನಾಶ ಮಾಡುತ್ತಾನೆ, ನಾವು ನಮ್ಮ ವಿಕಾರಗಳನ್ನು ಅರಿಯಬೇಕಾದರೆ ಮತ್ತು ಅವುಗಳಿಂದ ಹೊರಗೆ ಬರಬೇಕಾದರೆ ಸತ್ವ, ರಜ, ತಮೋ ಎಂಬ ಮೂರು ಗುಣಗಳನ್ನೂ ನಾವು ಬಳಸಬೇಕು, ಹೀಗಾಗಿಯೇ ಶಿವ ತ್ರಿಶೂಲದಿಂದ ಕೇವಲ ಗಣಪತಿಯ ತಲೆ ಕತ್ತರಿಸಿದ.

ನಾವು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ನಾವು ಮನದಲ್ಲಿ ( ತಲೆಯಲ್ಲಿ ) ಆಲೋಚಿಸಿ ಅನಂತರ Actually ಆ ಕೆಲಸ ಮಾಡುತ್ತೇವೆ, ಹಾಗಾಗಿ ತಲೆಯಲ್ಲಿ ಮೊದಲಿಗೆ ಒಂದು ಕೆಲಸದ ಬಗ್ಗೆ ಆಲೋಚನೆ ಬರದಿದ್ದರೆ Actually ಆ ಕೆಲಸ ನಡೆಯೋದೇ ಇಲ್ಲ, ಹಾಗಾಗಿಯೇ ಆದಿಯೋಗಿ ಗಣೇಶನ ತಲೆ ಕಡಿದದ್ದು.

  ಮರಣದ ನಂತರ ಮನುಷ್ಯನ ಬದುಕು ಹೇಗಿರುತ್ತೆ? ಆತ್ಮ ಎಲ್ಲಿಗೆ ಹೋಗುತ್ತದೆ …?

ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಂದು ಹೆಣ್ಣಿದ್ದಾಳೆ, ಒಬ್ಬ ಗಂಡಿದ್ದಾನೆ, ನೀವು ಹುಟ್ಟಿನಿಂದ ಗಂಡು-ಹೆಣ್ಣು ಏನಾದರೂ ಆಗಿರಬಹುದು, ಆದರೆ ನಮ್ಮಲ್ಲಿ ಗಂಡು ಹೆಣ್ಣು ಎರಡೂ ಇದೆ, ಏಕೆಂದರೆ ನಮ್ಮೆಲ್ಲರ ಜನ್ಮ ಆಗಿರುವುದೇ ಗಂಡು-ಹೆಣ್ಣಿನ ಸಮಾಗಮದಿಂದ, ಈ ತತ್ವವನ್ನು ನಮಗೆ ಸಾರಿ ಹೇಳುವುದೇ ಶಿವನ ಅರ್ಧನಾರೀಶ್ವರ ಸ್ವರೂಪ.

ಹೀಗಾಗಿ ಶಿವ ತನ್ನನ್ನು ತಾನು Complete ಆಗಿಸಿಕೊಳ್ಳಲು ಗಣೇಶನ ಅಸ್ತಿತ್ವ ಅನಿವಾರ್ಯ ಎಂಬುದನ್ನು ಅರಿಯುತ್ತಾನೆ, ಹೀಗಾಗಿ ಬುದ್ದಿ, ಜ್ಞಾಪಕ ಶಕ್ತಿ, ಮತ್ತು ಮಾಡುತ್ತಿರುವ ಕಾರ್ಯದ ಬಗ್ಗೆ ಅರಿವಿರುವ ಗುಣಗಳಿಗೆ ಹೆಸರಾದ ಆನೆಯ ತಲೆಯನ್ನು ಗಣೇಶನಿಗೆ ಜೋಡಿಸುತ್ತಾನೆ.

ಹೀಗಾಗಿಯೇ ನಮ್ಮ ಸಂಸೃತಿಯಲ್ಲಿ ನಾವು ಗಣೇಶನಿಗೆ ( ಬುದ್ದಿ , ಸಾವಧಾನತೆಗೆ) ಆದಿಪೂಜೆ ಸಲ್ಲಿಸುವುದು, ಯಾವುದೇ ಕೆಲಸ ಮಾಡಬೇಕಾದರೂ ಅವು ನಮ್ಮ ಸಹಾಯಕ್ಕೆ ಬರಲಿ ಎಂದು.

ಇದು ಯೋಗಿಕ ಅರ್ಥದಲ್ಲಿ ಗಣೇಶನ ಸ್ವರೂಪ, ಆದರೆ ಇದೆಲ್ಲವೂ ಗೊತ್ತಿಲ್ಲದ ಕಾಂಜೀಪೀಂಜಿಗಳು ಮಾತ್ರ ಗಣೇಶನಂಥ ಮನುಷ್ಯ ಇರಲು ಸಾಧ್ಯವೇ ಅಂತ ಪ್ರಶ್ನೆ ಮಾಡುತ್ತಾರೆ.

Leave a Reply

Your email address will not be published. Required fields are marked *

Translate »