ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಗವಂತನ ನಾಮತ್ರಯ ಮಹಾತ್ಮೆ

ಶ್ರೀಧನ್ವಂತರಿ_ಚಿಂತನ

ಭಗವಂತನ ನಾಮತ್ರಯ ಮಹಾತ್ಮೆ

ಅಚ್ಯುತ ,ಅನಂತ , ಗೋವಿಂದ ಎಂಬ ಭಗವಂತನ ನಾಮತ್ರಯಗಳನ್ನು ಜಪಿಸುವುದರಿಂದ ಮನುಷ್ಯನಿಗೆ ವಿಷದಿಂದ ಮರಣ ಅಗ್ನಿಯಿಂದ ಮರಣ ರೋಗಾದಿಗಳಿಂದ ಮರಣ ಎಂದು ಉಂಟಾಗುವುದಿಲ್ಲ ಅದು ಹೇಗೆ ? ತಿಳಿದುಕೊಳ್ಳುವ ಅಲ್ಪ ಪ್ರಯತ್ನ. ಮಾಡೋಣ .

ಅಚ್ಯುತಃ ಕಲ್ಪವೃಕ್ಷಶ್ಚ ಅನಂತಃ ಕಾಮದೇನವಃ |
ಚಿಂತಮಣಿಸ್ತು ಗೋವಿಂದ ನಾಮತ್ರಯಮುದಾಹೃತಮ್ ||

ಭಗವಂತನ ಅಚ್ಯುತ ನಾಮವು ಕಲ್ಪವೃಕ್ಷವಿದ್ದಂತೆ ಅನಂತನಾಮವು ಕಾಮದೇನುವಿದ್ದಂತೆ ಮತ್ತು ಗೋವಿಂದ ನಾಮವು ಚಿಂತಮಣಿಯಂತೆ ಇದೆ .
ಇಂಥ ಮಹತ್ವಪೂರ್ಣವೆನಿಸಿದ ಭಗವಂತನ ನಾಮತ್ರಯಗಳನ್ನು ಜಪಿಸಿ ಎಲ್ಲ ಭಯಗಳಿಂದ ಪಾರಗಬೇಕು .
ಪುರಾಣ ವಚನ


ರೋಗಪರಿಹಾರಕ್ಕಾಗಿ ಸಂಬಂಧಪಡುವ ಎಲ್ಲ
ಭಗವದ್ರೂಪಗಳಲ್ಲಿ ಸಲ್ಲಿಸಲಾಗುವ ಪ್ರಾರ್ಥನೆ

ರೋಗಪರಿಹಾರಕ್ಕಾಗಿ ಭಗವಂತನಲ್ಲಿ ಸಲ್ಲಿಸಲು ಅನೇಕ ಪ್ರಾರ್ಥನೆಗಳು ಮಂತ್ರಗಳು
ವಿನಿಯೋಗಿಸಲ್ಪಡ ಲಾಗುತ್ತಿದದ್ದು ಅವುಗಳಲ್ಲಿ ರೋಗ ಪರಿಹಾರಕ್ಕೆ ಸಂಬಂಧಿಸುವ ಎಲ್ಲ ಭಗವದ್ರೂಪಗಳನ್ನು ಉಲ್ಲೇಖಿಸುವ ಪ್ರಯುಕ್ತ ವೈಶಿಷ್ಟ್ಯಪೂರ್ಣವಾದಪ್ರಾರ್ಥನೆ –

ಅಚ್ಯುತಾನಂತಗೋವಿಂದಸ್ಮೃತಿಮಾತ್ರಾರ್ತಿನಾಶನ |
ರೋಗಾನ್ಮೇ ನಾಶಯಾsಶೇಷಾನ್
ಆಶು ಧನ್ವಂತರೇ ಹರೇ ||

ಅಚ್ಯುತ ,ಅನಂತ ,ಗೋವಿಂದ ,ಸ್ಮೃತಿಮಾತ್ರಾರ್ತಿನಾಶ,
ಹರೇ ಧನ್ವಂತರೇ –
ಎಂಬ ಆರುಸಂಭೊಧನೆಗಳನ್ನೂಳಗೊಂಡ ಈ ಶ್ಲೋಕದಲ್ಲಿ ಎಲ್ಲ ರೋಗಗಳನ್ನು ಆದಷ್ಟು ಬೇಗ ಪರಿಹರಿಸು -ಅಶೇಷಾನ್ ರೋಗಾನ್ ಆಶು ನಾಶಯ – ಎಂದು ಪ್ರಾರ್ಥಿಸಲಾಗಿದೆ .

  ಮರಣದ ನಂತರ ಮನುಷ್ಯನ ಬದುಕು ಹೇಗಿರುತ್ತೆ? ಆತ್ಮ ಎಲ್ಲಿಗೆ ಹೋಗುತ್ತದೆ …?

ಇದರ ಜೋತೆಗೆ ಶ್ರೀಮದ್ ಭಾಗವತದ ಶ್ಲೋಕವನ್ನು ಸೇರಿಸಿ ಪಠಿಸುವ ಸಂಪ್ರದಾಯವಿದೆ .

ಧನ್ವಂತರಿರ್ಧೀರ್ಘತಮಸ ಆಯುರ್ವೇದಪ್ರವರ್ತಕಃ |
ಯಜ್ಞಭುಗ್ವಾಸುದೇವಾಂಶಃ ಸ್ಮೃತಿ ಮಾತ್ರಾರ್ತಿನಾಶನಃ ||

ದೀರ್ಘತಮನ ಪುತ್ರನಾಗಿ ಧನ್ವಂತರಿ ರೂಪಿ ಪರಮಾತ್ಮ ಅವತರಿಸಿದ ಈತ ಆಯುರ್ವೇದ ಪ್ರವರ್ತಕ ಯಜ್ಞಭೋಕ್ತ .ಶ್ರೀಹರಿಯ ಅಂಶ ಸ್ಮರಣಮಾತ್ರದಿಂದ ಎಲ್ಲ ದುಃಖಗಳನ್ನು ಪರಿಹರಿಸುವವನು .

(ಈ ಧನ್ವಂತರಿ ಸಮುದ್ರಮಥನಕಾಲದಲ್ಲಿ ಆವಿರ್ಭವಿಸಿದ ಧನ್ವಂತರಿಯದೆ ಇನ್ನೊಂದು ರೂಪ ಇಬ್ಬರೂ ಆಯುರ್ವೇದ ಪ್ರವರ್ತಕರು ಎಂದು ತಿಳಿಯಬೇಕು )

 ****************************** 

ವೇದವ್ಯಾಸದೇವರು ಘೋಷಿಸಿದ ಔಷಧ

ಅಚ್ಯುತಾನಂತಗೋವಿಂದ
ನಾಮೋಚ್ಚಾರಣಭೀಷಿತಾಃ(ಭೇಷಜಾತ್) |
ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂ ವದಾಮ್ಯಹಮ್ ||

ಭಗವಂತನು ತನ್ನ ಅಚ್ಯುತ ಅನಂತ ಹಾಗೂ ಗೋವಿಂದ ಎಂಬ ರೂಪಗಳಿಂದ ವಾತ ಪಿತ್ತ ಕಫಗಳೆಂಬ ತ್ರಿಧಾತುಗಳನ್ನು ನಿಯಂತ್ರಿಸುತ್ತಿರುವನು ಆದ್ದರಿಂದ ಈ ಧಾತುಗಳನ್ನು ನಿಯಂತ್ರಿಸುತ್ತಿರುವನು ಆದ್ದರಿಂದ ಈ ತ್ರಿಧಾತುಗಳ ವೈಶಮ್ಯದಿಂದ ಉಂಟಾಗುವ ಎಲ್ಲ ರೋಗಗಳೂ ಆ ಮೂರು ಭಗವದ್ರೂಪಗಳ ನಾಮಗಳ ಭಕ್ತಿಪೂರ್ವಕ ಉಚ್ಚಾರಣೆ ಎಂಬ ಔಷಧದಿoದ ಪರಿಹಾರ ಹೊಂದುವುವು
ಶ್ರೀವೇದವ್ಯಾಸದೇವರು ಇದು ಸತ್ಯ ಇದು ಸತ್ಯ -ಎಂದು ಶಪಥಪೂರ್ವಕವಾಗಿ ಉದ್ಘೋಷಿಸಿರುವರು

      *-ಕೃಷ್ಣಾಮೃತಮಹಾರ್ಣವ*

🌷ನಾಮತ್ರಯಜಪದ ಅನುಸಂಧಾನ🌷

ಭಗವಂತನರೂಪಚಿಂತನಯಿಂದೊಡಗೂಡಿದ ನಾಮಸ್ಮರಣೆಯು ಶರಿರಕ್ಕೆ ಉಂಟಾದ ರೋಗ ಹಾಗೂ ಇತರ ಸರ್ವದುಃಖಗಳನ್ನು ಹೋಗಲಾಡಿಸುತ್ತದೆ. ಆದ್ದರಿಂದ ಇದು ಕರ್ತವ್ಯರೂಪವಾಗಿದೆ ಎಂಬುದನ್ನು.ತಿಳಿಸಲು ವೇದವ್ಯಾಸದೇವರಿಂದ ಹೇಳಲ್ಪಟ್ಟ ಅಚ್ಯುತ ,ಅನಂತ ,ಗೋವಿಂದನೆಂಬ ನಾಮೋಚ್ಚಾರಣ ಔಷಧಿಯಿಂದ ಸಕಲರೋಗಗಳು ನಾಶವಾಗುತ್ತವೆ .ಇದು ಪುನಃ ಪುನಃ ಸತ್ವವೆಂದು ನಾನು ಹೇಳುತ್ತೇನೆ ಎಂಬ ವೇದವ್ಯಾಸದೇವರ ವಾಕ್ಯವನ್ನು ಶ್ರೀಮದಾಚಾರ್ಯರು ನಮಗೆ ಹೇಳುತಿದ್ದಾರೆ .

  ಹನುಮಾನ್ ಚಾಲೀಸಾ hanuman chalisa

ಅಚ್ಯುತಃ ಚತುರ್ವಿಧನಾಶರಹಿತಃ |ಅನಂತಃ ದೇಶಕಾಲದ್ಯಪರಿಚ್ಚಿನ್ನಃ |ಗೋವಿಂದಃ ವೇದಪ್ರತಿಪಾದ್ಯಃ ||

ಅಚ್ಯುತನೆಂದರೆ ಚತುರ್ವಿಧನಾಶನಿಲ್ಲದವನು (ಚತುರ್ವಿಧ ನಾಶವೆಂದರೆ ಅನಿತ್ಯತ್ವ ,
ದೇಹಹಾನಿ ,ದುಃಖಪ್ರಾಪ್ತಿ ಅಪೂರ್ಣತೆಗಳು , ಅನಿತ್ಯತ್ವಂ ದೇಹಹಾನಿಃ. ದುಃಖಪ್ರಾಪ್ತಿರಪೂರ್ಣತಾ|ನಾಶಶ್ಚತುರ್ವೀಧಃ ಪ್ರೋಕ್ತಃ ತದಭಾವೋ ಹರೇಃ ಸದಾ || ಇತಿ ವಾಮನೇ ಗೀತಾತಾತ್ಪರ್ಯ 2-17

ಅನಂತನೆಂದರೆ
ದೇಶ ಹಾಗೂ ಕಾಲದ ಪರಿಮಿತಿಗೆ ಒಳಪಡದವನು .

ಗೋವಿಂದನೆಂದರೆ
ವೇದಗಳಿಂದ ಪ್ರತಿಪಾದ್ಯನಾದವನು .

ಅಚ್ಯುತ ,ಅನಂತ ,ಗೋವಿಂದನೆಂಬ ತ್ರಿರೂಪಾತ್ಮಕನಾದ ಹರಿಯ ನಾಮೋಚ್ಚಾರಣೆಯೆಂಬ ಔಷಧಿ ಯಾರ ಬಳಿ ಇದೆಯೋ ಅವರ ಎಲ್ಲ ರೋಗಗಳು ನಾಶವಾಗುತ್ತವೆ . ಭೇಷಜಾಶಬ್ದದ ಬದಲು ಬಿಷಿತಾಃ ಎಂಬ ಪಾಠಾಂತರದಲ್ಲಿ ರೋಗಗಳೆಲ್ಲವೂ ಭಯವನ್ನು ಹೊಂದುತ್ತವೆ ಅಂದರೆ ನಾಶಹೊಂದುತ್ತದೆ ಎಂದು ಅರ್ಥ .ವೇದವ್ಯಾಸದೇವರು ಹೇಳಿದ ಈ ಮಾತು ಔಪಚಾರಿಕವಲ್ಲವೆಂದು ಸತ್ಯಶಬ್ದದಿಂದ ತಿಳಿಯುತ್ತದೆ .ಅಥವಾ ಭಗವಂತನ ನಾಮೋಚ್ಚರಣೆ ಯಿಂದ ಸಕಲರೋಗನಾಶವಾಗುವುದು ಸತ್ಯ ,ಸತ್ಯ ,ಸತ್ಯವೇ .
ಭಗವಂತನನಾಮೋಚ್ಚಾರಣೆ ಯಿಂದ ಸಕಲರೋಗನಾಶವಾಗುವುದೆಂದು ಸತ್ಯವನ್ನೇ ನಾನು ಹೇಳುತ್ತೇನೆ ಇದರಲ್ಲಿ ಸಂಶಯಬೇಡ .ಸತ್ಯಶಬ್ದವು ಎರಡುಬಾರಿ ಮೇಲಿನ ಶ್ಲೋಕದಲ್ಲಿ ಯಾಕೆ ಹೇಳಲ್ಪಟ್ಟಿದೆಯೆಂದರೆ ದ್ವಿರುಕ್ತಿರಾದರಾತ್ ದ್ವಿರುಕ್ತಿಯಿಂದ ಆದರವು ಹೇಳಲ್ಪಟ್ಟಿದೆ .ಆದ್ದರಿಂದ ಅಚ್ಯುತ ,ಅನಂತ ,ಗೋವಿಂದ ನಾಮೋಚ್ಚಾರಣೆಯು ಕರ್ತವ್ಯವಾಗಿದೆ ಎಂದು ಸ್ಮೃತಿಮುಕ್ತಾವಳಿ ಕೃಷ್ಣಾಚಾರ್ಯರು ಕೃಷ್ಣಾಮೃತಮಹಾರ್ಣವದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ .

        *|| ಶ್ರೀಕೃಷ್ಣಾರ್ಪಣಮಸ್ತು ||*

ಕರೋನ ಎಂಬ ಮಾರಾಣಾಂತಿಕ ವೈರಸ್ ಹಾವಳಿ ಹೆಚ್ಚುಗುತ್ತಿರುವುದರಿಂದ ರೋಗನಿವಾರಕ ಶಿಘ್ರಫಲದಾಯಕ ಶ್ರೀವೇದವ್ಯಾಸದೇವರು ಮತ್ತು ಶ್ರೀಮಧ್ವಾಚಾರ್ಯರು ಅನುಗ್ರಹಿಸಿದ ನಾಮತ್ರಯಮಂತ್ರಗಳ ಮಹಿಮೆಯ ಬಗ್ಗೆ ಈಲೇಖನದಲ್ಲಿ ಸಂಗ್ರಹಿಸಿದ್ದೇನೆ .

1) ಶ್ರೀಅಚ್ಯುತಾನಂತ ಸ್ಮೃತಿಮಾತ್ರಾರ್ತಿನಾಶನ ಎಂಬಮಂತ್ರವನ್ನು ಮತ್ತು
ಅಚ್ಯುತಾನಂತಗೋವಿಂದ ನಾಮೋಚ್ಚರಣ ಬೇಷಜಾತ್
( ಪೂರ್ತೀಮಂತ್ರವನ್ನು ಲೇಖನದಲ್ಲಿ ಕೊಡಲಾಗಿದೆ.)

2) ಶ್ರೀಅಚ್ಯುತಾಯನಮ ಶ್ರೀಅನಂತಾಯನಮಃ ಶ್ರೀಗೋವಿಂದಾಯನಮಃ

3) ಶ್ರೀಅಚ್ಯುತಾನಂತಗೋವಿಂದಾಯನಮಃ

ಈ ಮಂತ್ರಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಯಥಾಶಕ್ತಿ ರೋಗನಿವಾರಣೆಗಾಗಿ ಯಾರಿಗೂ ರೋಗಭಾಧಿಸದಿರಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸಿ ಜಪಮಾಡಬೇಕಾಗಿ ವಿನಂತಿ .

*|| ಸರ್ವೇಜನಾಃ ಸುಖಿನೋಭವಂತು ||*

Leave a Reply

Your email address will not be published. Required fields are marked *

Translate »