೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = ಸಚ್ಚಾರಿತ್ರ್ಯ
೨ ಎಲ್ಲ ದುರ್ದೈವಕ್ಕೆ ಕಾರಣ= ಆಲಸ್ಯ
೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = ಭೀತಿ
೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= ಸಮಯ
೬ ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ = ಪರೋಪಕಾರ.
೭ ಅತ್ಯಂತ ಶ್ರೇಷ್ಠ ಸ್ವಭಾವ = ತಾಳ್ಮೆ .
೮ ಅತ್ಯಂತ ಕೆಟ್ಟ ಗುಣ = ಪರನಿಂದೆ.
೯ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕಾರಣ = ಅಜೀರ್ಣ .
೧೦ ಚಟಗಳಲ್ಲಿ ಅತೀ ಕೆಟ್ಟ ಚಟ = ಚಾಡಿ ಹೇಳುವದು.
೧೧ ಬಂಧುಗಳಲ್ಲಿ ಶ್ರೇಷ್ಠ ಬಂಧು = ವಿಶ್ವಾಸ .
೧೨ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = ಅಹಂಕಾರ .
೧೩ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = ದೈವಬಲ .
೧೪ ಜಗತ್ತಿನಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ = ಆಧ್ಯಾತ್ಮಿಕ ಶಿಕ್ಷಣ .
೧೫ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = ಸಾಲಬಾಧೆ.
೧೭ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = ಹೊಗಳಿಸಿಕೊಳ್ಳುವದು.
೧೮ ಬದುಕಿನಲ್ಲಿಯೇ ಅತೀ ಹೀನ ಬದುಕು = ಹಂಗಿನ ಬದುಕು.
೨೦ ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = ವಿಶ್ವಾಸ .
೨೧ ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು = ಅಜ್ಞಾನ.
೨೩ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = ಸಜ್ಜನರ ನಿಷ್ಕ್ರಿಯತೆ .
೨೫ ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = ನಾಲಿಗೆ.
೨೬ ವರಗಳಲ್ಲಿ ಅತೀ ದೊಡ್ಡ ವರ = ಆರೋಗ್ಯ .
೨೭ ದೊಡ್ಡ ಶ್ರೀಮಂತಿಕೆ = ಸಂತೃಪ್ತಿ.
೨೮ ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = ಮೌನ
ಬಾಳ್ಗೆ ಸಮೃದ್ದಿ ಯೊಂದಿಗೆ 🙏