ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ಗುರು ರಾಯರ ವೃಂದಾವನ ಒಂದು ಚಿಂತನೆ

ಶ್ರೀ ಗುರು ರಾಯರ ವೃಂದಾವನ ಒಂದು ಚಿಂತನೆ

ಶ್ರೀ ಮಂತ್ರಾಲಯ ಪ್ರಭುಗಳ ಬೃಂದಾವನವನ್ನು ಮೂರು ಭಾಗಗಳಲ್ಲಿ ನೋಡಬಹುದು.

೧. ಕೂರ್ಮಾಸನದಿಂದ ಹಿಡಿದು ವಸ್ತ್ರವನ್ನುಡಿಸುವ ಸ್ಥಳದ ವರೆಗೂ ಇರುವುದು ಮೊದಲನೆಯ ಭಾಗ.

ಇದರಲ್ಲಿ ೯ ಉಪಭಾಗಗಳಿವೆ. ಅವುಗಳು…

೧. ಪರಮ ಪುರುಷ ೨. ಆಧಾರ ರೂಪಿಣಿ ಶಕ್ತಿ ೩. ವಿಷ್ಣು, ಕೂರ್ಮ ೪. ವಿಷ್ಣು ಕೂರ್ಮ ೫. ವಾಯು ಕೂರ್ಮ ೬. ಆದಿಶೇಷ ೭. ಭೂಮಿ ೮. ಕ್ಷೀರಸಾಗರ ೯. ಶೇತದ್ವೀಪ

೨. ಬೃಂದಾವನದ ಮಧ್ಯ ಭಾಗದಿಂದ ತೆನೆಗಳ ವರೆಗಿನದ್ದು ಎರಡನೆಯ ಭಾಗ.

ಇಂದು ಬೃಂದಾವನದಲ್ಲಿ ನಾಮ ಹಾಗೂ ಕಣ್ಣು ಮೂಗು ಇತ್ಯಾದಿ ಹಚ್ಚುವ ಭಾಗದಿಂದ ಕೂಡಿಕೊಂಡು ೬ ತೆನೆಗಳ ವರೆಗೂ ಇರುವ ಭಾಗವು ಮಂಟಪಕ್ಕೆ ಪ್ರತಿ ರೂಪವಾಗಿದೆ.

೩. ತೆನೆಗಳಿಂದ ಕೂಡಿದ ಭಾಗ ಮೂರನೆಯ ಭಾಗ.

ಇದು ೬ ಊರ್ಧ್ವ ಲೋಕಗಳಿಗೆ ಪ್ರತಿ ರೂಪವಾಗಿದೆ. ಭೂಲೋಕದ ಮೇಲೆ…

೧. ಭುವರ್ಲೋಕ
೨. ಸ್ವರ್ಗಲೋಕ
೩. ಮಹಾಲೋಕ
೪. ಜನೋಲೋಕ
೫. ತಪೋಲೋಕ
೬. ಸತ್ಯಲೋಕ

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸತ್ಯಲೋಕದಿಂದಲೇ ಭುವಿಗಿಳಿದು ಬಂದ ಕಲ್ಪವೃಕ್ಷ – ಕಾಮಧೇನು.

ಶ್ರೀ ಮಂತ್ರಾಲಯ ಪ್ರಭುಗಳ ಬೃಂದಾವನದಲ್ಲಿರುವ ೭೧೩ ಸಾಲಿಗ್ರಾಮಗಳು ಪೀಠ ಪೂಜೆಯಲ್ಲಿ ಬರುವ ಭಗವಂತನ ಹಾಗೂ ಅವನ ಪರಿವಾರ ದೇವತೆಗಳಿಗೆ ಸೂಚಿತವಾಗಿವೆ.

ಶ್ರೀ ಗುರುಸಾರ್ವಭೌಮರು ಬ್ರಹ್ಮಾಂಡ – ಹರಿಮಂದಿರ – ಪೀಠಗಳಿಗೆ ಪ್ರತಿರೂಪವೆನಿಸಿದ, ಸುಂದರ ಬೃಂದಾವನದ ಕೆಳ ಭಾಗದಲ್ಲಿ ಕುಳಿತಿದ್ದಾರೆ. ಇದರಿಂದ ಶ್ರೀ ಗುರುರಾಜರ ಬೃಂದಾವನ ಶ್ರೀ ಹರಿಯ ಮಂದಿರವೇ ಆಗಿದೆ.

” ಶ್ರೀ ಗುರುರಾಜರ ಬೃಂದಾವನದಲ್ಲಿರುವ ಭಗವದ್ರೂಪಗಳು “

ಶ್ರೀ ವಿಜಯರಾಯರು…

ರಾಮ ನರಹರಿ ಕೃಷ್ಣ ಕೃಷ್ಣರ ।
ನೇಮದಿಂದೀ ಮೂರ್ತಿಗಳ ಪದ ।
ತಾಮರಸ ಭಜನೆಯನು ಮಾಳ್ಪರು ।
ಕೋಮಲಾಂಗರು ಕಠಿಣ ಪರವಾದಿ ।।

ಹಾಗೆಯೇ…

ಅಲವಬೋಧ ಮಿಕ್ಕಾದ ಮಹ । ಮುನಿ ।
ಗಳು ಸಾಂಶದಿ ಒಂದು ರೂಪದಿ ।
ನೆಲೆಯಾಗಿ ನಿತ್ಯದಲಿ ಯಿಪ್ಪರು ।
ಒಲಿಸಿ ಕೊಳುತಲಿ ಹರಿಯ ಗುಣಗಳ ।।

ಶ್ರೀ ಗೋಪಾಲದಾಸರು….

ನರಹರಿ ರಾಮ ಕೃಷ್ಣ ಸಿರಿ ವೇದವ್ಯಾಸ ।
ಎರಡೆರಡು ನಾಲುಕು ಹರಿ ಮೂರ್ತಿಗಳು ।
ಪರಿವಾರ ಸಹಿತವಾಗಿ ಸಿರಿ ಸಹಿತ ನಿಂದು ।
ಸುರಗುರು ಮಧ್ವಾಚಾರ್ಯರೇ ಮೊದಲಾಗಿ ।
ತರವಾಯದಲ್ಲಿನ್ನು ತಾರತಮ್ಯಾನುಸಾರ ।
ಪರಿಪರಿ ಯತಿಗಳು ಯಿರುತಿಪ್ಪವರಿಲ್ಲಿ ।।

ಶ್ರೀ ವೆಂಕಟವಿಠಲರು…

ಸತ್ಯಾಧಿ ಗುಣಸಿಂಧು ವೆಂಕಟವಿಠಲನ್ನ ।
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ ।
ಬೃಂದಾವನ ನೋಡಿರೋ ।।

  ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು ?

ಶ್ರೀ ಗುರು ಜಗನ್ನಾಥದಾಸರು…

ಶ್ರೀ ನಾರಸಿಂಹ ಯದುವೀರ ರಘುತ್ತಮಾಖ್ಯ ।
ವಾಶಿಷ್ಠಕೃಷ್ಣ ಹಯತುಂಡ ಪದಾಬ್ಜಭೃಂಗ ।।

ಹಾಗೆಯೇ ಇನ್ನೊಂದು ಪದ್ಯದಲ್ಲಿ ಶ್ರೀ ಗುರು ಜಗನ್ನಾಥದಾಸರು…

ಶ್ರೀವರನುತಾ ಚಕ್ರ ರೂಪದಿ ।
ಜೀವೋತ್ತಮ ಪ್ರಾಣದೇವನು ।
ಸಾವಿರಾಸ್ಯನೇ ರಾಯರೆಂದು ಸುರರು ನಿಂತಿಹರು ।।

ಅಲವಬೋಧ ಸುತೀರ್ಥ ಮುನಿಗಳು ।
ಹಲವು ಕಾಲದಿ ನಿಂತು ಜನರಘ ।
ವಳಿದು ಕೀರುತಿಯಿತ್ತು ಲೋಕ ವಿಖ್ಯಾತಿ ಮಾಡಿದರು ।।

ಎಲ್ಲ ಕಾಲದಿ ಪ್ರಾಣ ಲಕುಮೀ ।
ನಲ್ಲ ನಿನ್ನೊಳು ನಿಂತು । ಕಾರ್ಯಗ ।
ಲೆಲ್ಲ ತಾನೇ ಮಾಡಿ ಕೀರ್ತಿಯು ನಿನಗೆ ಕೊಡುತಿಪ್ಪ ।।

ಶ್ರೀ ಕನಕಾದ್ರಿವಿಠಲರು…

ಸ್ವಾಮಿ ನಿಮ್ಮರಿದೇನೆಂದು ಸುಮಹಾ ವೃಂದಾವನದ ।
ಆ ಮೂಲಾಗ್ರದಲಿ ಅಣು ಮಹದ್ರೂಪಾನಂತ ವಿಶ್ವ ದಾಸ್ಯೆಕೂಡಿ ।
ಶ್ರೀ ಮಹಾಲಕ್ಷ್ಮೀಕಾಂತ ತುರ್ಯ ಶಿರದ ಮೇಲೆ ।
ರಾಮ ವಿಶ್ವಾದಿ ಸುರರು ತೆನೆ ಕಂಕಣದಿ ಋಷಿಗಳು ।
ಆ ಮಹಾ ಹೃದ್ದೇಶದಿ ಪಿತ್ರಾದಿಗಳು । ಈ ।
ನೇಮದಿ ಕೆಳ ಕಂಕಣದಿ ಗಂಧರ್ವರು ।
ಈ ಮಾಡಗಳಲ್ಲಿ ಕ್ಷಿತಿಪರು ಪೀಠಾದಲ್ಲಿ ।
ಸ್ವಾಮಿ ಕಮಲಾಭಾದಿ ಯತಿಗಳು ।
ಸಮಸ್ತ ದಾಸರಿಹರು ವೇದಿಕದಿ ಪ್ರಾಕಾರದಲ್ಲಿ ।
ಭೂಮಿ ಸುರರು ಅಂಗಳದಿ ।
ಶೀಮೆ ರಾಯರು ಅನೇಕ ಶಾಖಸ್ತ ।
ರೋಮಾಂಚನರಾಗಿ ಕೈಯೆತ್ತಿ ತುತಿಪರೋ ।
ಶ್ರೀಮಂತ ಗುರು ರಾಘವೇಂದ್ರಂತರ್ಯಾಮಿ ।
ಶ್ರೀಮಂತ ಕನಕಾದ್ರಿವಿಠಲ ।
ನೀ ಮರೆಯದೆ ಜ್ಞಾನ ಶುದ್ಧಿಯ ನೀಯೋಗಿ ।।

ಹೀಗೆ ಶ್ರೀ ಭಗವಂತನ ವಿಭೂತಿ ರೂಪಗಳಿಂದಲೂ, ಶ್ರೀ ವಾಯುದೇವರ ನಿತ್ಯಾವೇಶದಿಂದಲೂ; ಶ್ರೀಮದಾಚಾರ್ಯರೇ ಮೊದಲಾದ ಯತಿವರೇಣ್ಯರ ಸನ್ನಿಧಾನದಿಂದಲೂ ಕೂಡಿರುವವರು ಶ್ರೀ ಗುರುರಾಜ ಗುರುಸಾರ್ವಭೌಮರು!!

ಮೇಲ್ಕಂಡ ಪದ್ಯಗಳಿಗನುಗುಣವಾಗಿ ಧಾರವಾಡದ ನಿವಾಸಿಗಳಾದ ಶ್ರೀ ಅರವಿಂದ ಕುಲಕರ್ಣಿಯವರು ತಮ್ಮ ೭೫ನೇ ವಯಸ್ಸಿನಲ್ಲಿ ಶ್ರೀ ರಾಯರ ವೃಂದಾವನವನ್ನು ಚಿತ್ರಿಸಿದ್ದು ಶ್ರೀ ರಾಯರು ಬೃಂದಾವನದ ಮುಂದೆ ಕುಳಿತಿದ್ದಾರೆ. ಅದರಲ್ಲಿ ಶ್ರೀ ಶ್ರೀನಿವಾಸ – ಶ್ರೀ ನರಸಿಂಹ – ಶ್ರೀ ರಾಮ – ಶ್ರೀ ಪಂಚಮುಖಿ ಪ್ರಾಣದೇವರು – ಶ್ರೀ ಕೃಷ್ಣ ಮತ್ತು ಕಾಮಧೇನುವನ್ನು ಚಿತ್ರಿಸಿದ್ದಾರೆ.

೧. ಶ್ರೀ ಶ್ರೀನಿವಾಸದೇವರು. ಶ್ರೀ ಶ್ರೀನಿವಾಸನ ಪರಮಾನುಗ್ರಹದಿಂದಲೇ ಶ್ರೀ ರಾಯರ ಅವತಾರ.

ಗುರುರಾಜರು! ಜಗದ್ವಿಖ್ಯಾತವಾದ ಗೌತಮ ಗೋತ್ರದಲ್ಲಿ ಮಂಗಳಕರವಾದ ಷಾಷ್ಠಿಕ ವಂಶದಲ್ಲಿ ಖ್ಯಾತ ನಾಮರಾದ ಶ್ರೀ ವೀಣಾ ತಿಮ್ಮಣ್ಣಭಟ್ಟರು, ಸಾಧ್ವೀ ಗೋಪಿಕಾಂಬಾ ದಂಪತಿಗಳ ತಪಸ್ಸಿಗೆ ಮೆಚ್ಚಿ ಶ್ರೀ ಶ್ರೀನಿವಾಸನು…

  ಗೋವಿನ ಪ್ರಾಧಾನ್ಯತೆ, ಸಾಕಣೆ, ಉಪಯುಕ್ತತೆ, ಅನಿವಾರ್ಯತೆ - ವೇದ ವಿಜ್ಞಾನ

” ತಿಮ್ಮಣ್ಣಾ! ನೀನು ನನಗೆ ಆಹ್ಲಾದವನ್ನುಂಟು ಮಾಡಿದ್ಯಾ! ನಿನಗೆ ಪ್ರಹ್ಲಾದನನ್ನೇ ಕೂಡುತ್ತೇನೆಂದೂ, ಲೋಕ ಪೂಜ್ಯನಾದ, ನನ್ನ ಭಕ್ತಾಗ್ರಣಿಯಾದ ಸತ್ಪುತ್ರನನ್ನು ಕೊಡುತ್ತೇನೆ “

ಯೆಂದು ವರವಿತ್ತು ಅನುಗ್ರಹಿಸಿದನು. ಆದ್ದರಿಂದಲೇ ಲೋಕ ವಿಲೋಕಾಕ್ಷನಾದ ರಮಾಪತಿಯ ವರದಿಂದ ಅವತರಿಸಿದ ಶ್ರೀ ರಾಯರು ಪರಮ ಪಾವನ ಮೂರ್ತಿಗಳಾಗಿದ್ದಾರೆ.

ಅಂತೆಯೇ, ಶ್ರೀ ರಾಯರು ಗರುಡವಾಹನನಾದ, ವೈಕುಂಠ ಪತಿಯಾದ ಶ್ರೀಮಲ್ಲಕ್ಷ್ಮೀನಾರಾಯಣನ ಕರುಣೆಯಿಂದ ಲಬ್ಧವಾದ ಧರ್ಮ – ಅರ್ಥ – ಕಾಮ – ಮೋಕ್ಷಗಳೆಂಬ ಚತುರ್ವಿಧ ಶುಭಾರ್ಥಗಳುಳ್ಳವರಾಗಿದ್ದಾರೆ ( ಶ್ರೀ ರಾಘವೇಂದ್ರೋ ಹರಿಪಾದಕಂಜ ನಿಷೇವಣಾಲಬ್ಧ ಸಮಸ್ತ ಸಂಪತ್ ).

ಇಷ್ಟೇ ಅಲ್ಲ, ತಮ್ಮನ್ನು ಆಶ್ರಯಿಸಿದ ಭಕ್ತ ಜನರಿಗೆ ಶ್ರೀ ಹರಿಯ ವರ ಬಲದಿಂದ, ಅನುಗ್ರಹದಿಂದ ನಾಲ್ಕು ವಿಧ ಪುರುಷಾರ್ಥಗಳನ್ನು ( ಮೋಕ್ಷವನ್ನು ) ಕೊಡಲೂ ಸಮರ್ಥರಾಗಿದ್ದಾರೆ.

ಅಗಮ್ಯ ಮಹಿಮರೂ, ಭಗವತಾಗ್ರಣಿಗಳೂ ಆದ್ದರಿಂದಲೇ, ಇಂದ್ರನ ಅಮರಾವತಿಯಲ್ಲಿ ದೇವತೆಗಳೂ ಸಹ ಶ್ರೀ ರಾಯರ ಅಮರ ಚರಿತ್ರೆಯ ಕೀರ್ತಿಯನ್ನು ಗಾನ ಮಾಡುತ್ತಿದ್ದಾರೆ ( ಕೀರ್ತಿ೦ ವಿಶುದ್ಧಾ೦ ಸರಲೋಕ ಗೀತಾಮ್ – ಶ್ರೀಮದ್ಭಾಗವತಮ್ )

ಶ್ರೀ ಗುರು ಜಗನ್ನಾಥದಾಸರು…

ಏನು ಪುಣ್ಯವೋ ನಿನ್ನ ವಶದಲಿ ।
ಶ್ರೀನಿವಾಸನು ಸತತ ಯಿಪ್ಪನು ।
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ ।।

೨. ಶ್ರೀ ನರಸಿಂಹದೇವರು.

ಶ್ರೀ ನೃಸಿಂಹನು ಕ್ಷೇತ್ರ ಮಂತ್ರಾಲಯದ ಕ್ಷೇತ್ರಪಾಲಕ. ಶ್ರೀ ರಾಯರಲ್ಲಿ ನೃಸಿಂಹ ರೂಪದಿಂದ ಶ್ರೀ ಹರಿಯು ಭಕ್ತರ ದುರಿತಗಳನ್ನು ನಾಶ ಮಾಡುತ್ತಾನೆ.

೩. ಶ್ರೀ ರಾಮ. ಶ್ರೀರಾಮನು ಶ್ರೀ ರಾಯರ ಆರಾಧ್ಯ ದೈವ. ಶ್ರೀ ರಾಘವೇಂದ್ರ ನಾಮ ಶ್ರೀ ರಾಮನ ದ್ವಾದಶ ನಾಮಗಳಲ್ಲಿ ಒಂದು. ಅಂತೆಯೇ ಶ್ರೀ ವಾಮನ ಅವತಾರ ಕಾಲದಲ್ಲಿಯೇ ಶ್ರೀ ವಾಮನ ರೂಪಿ ಶ್ರೀ ಹರಿಯು ಶ್ರೀ ರಾಯರಿಗೆ ” ರಾಘವೇಂದ್ರ ” ಎಂದು ನಾಮಕರಣ ಮಾಡಿದ್ದಾನೆ. ಹೆಚ್ಚಿನ ವಿಷಯಗಳಿಗೆ ವಾಮನ ಪುರಾಣ ನೋಡುವುದು!!

ಶ್ರೀ ರಾಘವನೇ ಉಪಾಸ್ಯ ಮೂರ್ತಿಯಾಗುಳ್ಳ ಅಂದರೆ ಶ್ರೀಮೂಲರಾಮೋಪಾಸಕರೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.

ಶ್ರೀ ಶಂಖುಕರ್ಣರೆಂಬ ಕರ್ಮಜ ದೇವತೆಯು ನಾಲ್ಕು ಅವತಾರಗಳನ್ನೆತ್ತಿ, ಶ್ರೀ ಹರಿಭಕ್ತಿ – ಭಾಗವತ ಧರ್ಮ – ಸಜ್ಜನೋದ್ಧಾರ – ತತ್ತ್ವ ಪ್ರಸಾರಗಳನ್ನು ನೆರವೇರಿಸಿ ಲೋಕ ವಿಖ್ಯಾತರಾದರೆಂದೂ, ಆ ಶ್ರೀ ಶಂಖುಕರ್ಣರ ನಾಲ್ಕು ಅವತಾರಗಳು ಕ್ರಮವಾಗಿ…

೧. ಕೃತ ಯುಗದಲ್ಲಿ ” ಶ್ರೀ ಪ್ರಹ್ಲಾದರಾಜ ” ರಾಗಿಯೂ;

೨. ದ್ವಾಪರದಲ್ಲಿ ” ಶ್ರೀ ಬಾಹ್ಲೀಕರಾಜ ” ರಾಗಿಯೂ;

  ದೇವಸ್ಥಾನ ಚೆನ್ನಾಗಿದ್ದರೆ ಊರು ಚೆನ್ನಾಗಿರುತ್ತದೆ

ಮಹಾ ಭಾರತ ತಾತ್ಪರ್ಯ ನಿರ್ಣಯದಲ್ಲಿ ಶ್ರೀಮದಾಚಾರ್ಯರು…

ಬಾಹ್ಲೀಕೋರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರ: ।
ಪ್ರಹ್ಲಾದೋ ಭಗವತ್ಪ್ರಿಯಃ ವಾಯೂನಾ ಚ ಸಮಾವಿಷ್ಟ: ।।

ಶ್ರೀ ಅಭಿನವ ಜನಾರ್ಧನವಿಠಲರು..

ಮೊದಲು ಹಿರಣ್ಯಕಶಿಪುನರಸಿಯ ।
ಉದರದಲಿ ಸಂಭವಿಸಿದ ।
ಅದರ ತರುವಾಯದಲಿ ಬಾಹ್ಲೀಕ ಅಧಿಪನೆಂದೆನಿಸಿ ।।

ಶ್ರೀ ರಮಾಪತಿವಿಠಲರು…

ಈತನೇ ಪ್ರಹ್ಲಾದನು ಆಹ್ಲಾದಕರನು ಶೂರ ಬಾಹ್ಲೀಕನೆನಿಸಿದ ।।

ಈ ಕಲಿಯುಗದಲ್ಲಿ…..

೩. ಶ್ರೀ ವ್ಯಾಸರಾಜ ಗುರುಸಾರ್ವಭೌಮರಾಗಿಯೂ; ೪ನೇ ಹಾಗೂ ಕೊನೆಯ ಅವತಾರವೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!!

ಶ್ರೀ ಗೋಪಾಲದಾಸರು…

ಪ್ರಥಮ ಪ್ರಹ್ಲಾದ ವ್ಯಾಸಮುನಿಯೇ ರಾಘವೇಂದ್ರ ಯತಿಯೇ ।।

ಶ್ರೀ ಜಗನ್ನಾಥದಾಸರು…

ವ್ಯಾಸರಾಯ ನೆನಿಸಿ ನೃಪನಾ ।
ಕ್ಲೇಶ ಕಳೆದವನೇ ಬಾರೋ ।
ಶ್ರೀ ಸುಧೀಂದ್ರರ ಕರ ಸಂಜಾತ ।
ವಾಸುದೇವಾರ್ಚಕನೇ ಬಾರೋ ।।

ಶ್ರೀ ಪ್ರಾಣೇಶದಾಸರು….

ರಾಯರ ನೋಡಿರೈ ಗುರುರಾಯರ ಪಾಡಿರೈ ।
ಸಿರಿ ಪ್ರಹ್ಲಾದ ವರ ಬಾಹ್ಲೀಕ ಗುರು ವ್ಯಾಸ ರಾಘವೇಂದ್ರ ।।

ಶ್ರೀ ರಾಮನು ಶ್ರೀ ರಾಯರಲ್ಲಿ ಶ್ರೀರಾಮ ರೂಪದಿಂದ ಶ್ರೀ ಹರಿಯು ನಿರ್ಗತಿಕರಿಗೆ ಗತಿಯನ್ನುಂಟು ಮಾಡುವನು.

೩. ಶ್ರೀ ಕೃಷ್ಣನು ಶ್ರೀ ರಾಯರಲ್ಲಿ ಶ್ರೀ ಕೃಷ್ಣ ರೂಪದಿಂದ ಶ್ರೀ ಹರಿಯು ಭಕ್ತರ ಸಕಲ ಮನೋಭೀಷ್ಟಗಳನ್ನು ಪೂರೈಸುತ್ತಾನೆ.

೪. ” ಶ್ರೀ ಪಂಚಮುಖಿ ಪ್ರಾಣದೇವರು “. ಶ್ರೀ ರಾಯರು ಶ್ರೀ ವಾಯುದೇವರ ನಿತ್ಯಾವೇಶಯುಕ್ತರು.

ವಾಯುನಾ ಚ ಸಮಾವಿಷ್ಟ: ಮಹಾಬಲ ಸಮನ್ವಿತಃ ।।

೫. ” ಕಾಮಧೇನು “

ಶ್ರೀ ಅಪ್ಪಣ್ಣಾಚಾರ್ಯರು…

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।

ಶ್ರೀ ಗುರು ಗೋಪಾಲದಾಸರು…

ಗುರುವೇ ಕಾಮಿತ ತರುವೇ ತ್ರಿಕಾಲಜ್ಞ ।
ವರಯೋಗಿ ಅನಘ ನಿ:ಸ್ಸಂಗ ।।

ಶ್ರೀ ಜಗನ್ನಾಥದಾಸರು…

ಕಾಮಧೇನುವಿನಂತೆ ಇಪ್ಪ ಗುರುವರನ । ಸಾರ್ವ ।
ಭೌಮ ಸುಧಿಯೀ೦ದ್ರ ಸುತ ರಾಘವೇಂದ್ರ ।।

ಶ್ರೀ ರಾಮಚಂದ್ರವಿಠಲರು…

ಸುರತರುವೆ ನಿರುತದಲಿ ಎನ್ನನು ।
ಪೊರೆಯೊ ಬಾರಿಂದೆರವು ಮಾಡದೆ ।
ಕರೆದು ಕೈ ಪಿಡಿಯೋ ಯೆನ್ನ ಶ್ರೀ ರಾಘವೇಂದ್ರ ।।

ಅಂಥಾ ಮಹಾ ಮಹಿಮರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸರ್ವರನ್ನೂ ಸರ್ವ ಕಾಲಗಳಲ್ಲಿಯೂ ರಕ್ಷಿಸಲೆಂದು ಪ್ರಾರ್ಥಿಸೋಣ….

☆■ರಾಯರಿದ್ದಾರೆ■☆

Leave a Reply

Your email address will not be published. Required fields are marked *

Translate »