ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ರಾಯರ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ

ಗುರು ರಾಯರ ಆರಾಧನೆಯ ಪ್ರಯುಕ್ತ ರಾಯರ ಬಗ್ಗೆ ಕೆಲವು ವಿಷಯಗಳನ್ನು ತಿಳಿಯೋಣ ಬಂಧುಗಳೇ 🌺🪷🌺

ರಾಘವೇಂದ್ರ ಸ್ವಾಮಿಗಳ ಕುರಿತು ಪ್ರಶ್ನೋತ್ತರಗಳು :

  1. ರಾಯರ ಮೂಲ ರೂಪ ಯಾವುದು ?
    ಉತ್ತರ : ಶಂಖುಕರ್ಣ
  2. ರಾಯರ ಮೂಲರೂಪಕ್ಕೆ ಶಪಿಸಿದವರಾರು?
    ಉತ್ತರ : ಬ್ರಹ್ಮ ದೇವರು
  3. ಶಂಖುಕರ್ಣನಿಗೆ ಶಾಪ ನೀಡಲು ಕಾರಣ ?
    ಉತ್ತರ : ದೇವರ ಪೂಜೆಗೆ ಪುಷ್ಪ ತಡವಾಗಿ ತಂದಿದ್ದು.
  4. ಶಂಖುಕರ್ಣ ಯಾವ ದೇವತೆ ?
    ಉತ್ತರ : ಕರ್ಮಜದೇವತೆ (19ನೇ ಕಕ್ಷ್ಯ)
  5. ಮೊದಲನೇ ಅವತಾರ ಯಾವುದು ?
    ಉತ್ತರ : ಪ್ರಹ್ಲಾದರಾಜರು
  6. ಎರಡನೇ ಅವತಾರ ಯಾವುದು ?
    ಉತ್ತರ : ಬ್ಲಾಹೀಕ ರಾಜರು
  7. ಮೊದಲನೇ ಅವತಾರದಲ್ಲಿ ಪರಮಾತ್ಮನ ಯಾವ ರೂಪವ ಕಂಡರು ?
    ಉತ್ತರ : ನರಸಿಂಹಾವತಾರ
  8. ಎರಡನೇ ಅವತಾರದಲ್ಲಿ ವಾಯುದೇವರ ಯಾವ ರೂಪ ಕಂಡರು ?
    ಉತ್ತರ : ಭೀಮಾವತಾರ
  9. ಮೂರನೇ ಅವತಾರ ಯಾವುದು ?
    ಉತ್ತರ : ವ್ಯಾಸರಾಯರು
  10. ರಾಯರ ತಂದೆ ಯಾರು ?
    ಉತ್ತರ : ವೀಣಾ ತಿಮ್ಮಣ್ಣ ಭಟ್ಟರು
  11. ರಾಯರ ಜನ್ಮನಾಮವೇನು ?
    ಉತ್ತರ : ವೆಂಕಟನಾಥ
  12. ರಾಯರ ಗೋತ್ರ ಯಾವುದು ?
    ಉತ್ತರ : ಗೌತಮ ಗೋತ್ರ
  13. ರಾಯರ‌ ತಂದೆತಾಯಿ ಯಾರ‌‌ ಸೇವೆ ಮಾಡಿ ರಾಯರನ್ನು ಪಡೆದರು ?
    ಉತ್ತರ : ತಿರುಪತಿ ತಿಮ್ಮಪ್ಪ
  14. ರಾಯರ ಜನ್ಮಸ್ಥಳ ಯಾವುದು ?
    ಉತ್ತರ : ಕುಂಭಕೋಣಂ ಹತ್ತಿರ ಭುವನಗಿರಿಯಲ್ಲಿ
  15. ರಾಯರ ವೃಂದಾವನ ಎಲ್ಲಿದೆ ?
    ಉತ್ತರ : ಮಂತ್ರಾಲಯದಲ್ಲಿ
  16. ರಾಯರ ಮಠದ ಪ್ರಸ್ತುತ ಪೀಠಾಧಿಪತಿಗಳು ಯಾರು ?
    ಉತ್ತರ : ಸುಬುದೇಂದ್ರ ತೀರ್ಥರು
  17. ರಾಯರ ಜನ್ಮ ನಕ್ಷತ್ರ ಯಾವುದು ?
    ಉತ್ತರ : ಮೃಗಶಿರ
  18. ರಾಯರ ಜನ್ಮ ದಿನ ಎಂದು ?
    ಉತ್ತರ : ಫಾಲ್ಗುಣ ಶುದ್ಧ ಸಪ್ತಮಿ
  19. ರಾಯರ ಜನ್ಮ ಸಂವತ್ಸರ
    ಉತ್ತರ : ಮನ್ಮಥ ನಾಮ ಸಂವತ್ಸರ 1595 AD ಶಾಲೀವಾಹನ ಶಕ 1518
  20. ರಾಯರ ಅಕ್ಷರಾಭ್ಯಾಸವಾದ ವರ್ಷ ಯಾವುದು?
    ಉತ್ತರ : ಕ್ರಿ.ಶಕ 1600 (ಶಾಲೀವಾಹನ ಶಕ 1520)
  21. ರಾಯರ ಉಪನಯನವಾದ ವರ್ಷ ಯಾವುದು?
    ಉತ್ತರ : 1606 AD (ಶಾಲೀವಾಹನ ಶಕ 1526)
  22. ರಾಯರ ಆಶ್ರಮ ದಿನ ಎಂದು ?
    ಉತ್ತರ : ಫಾಲ್ಗುಣ ಶುದ್ಧ ಬಿದಿಗೆ
  23. ರಾಯರ ವೃಂದಾವನ ಪ್ರವೇಶದ ದಿನ ಎಂದು ?
    ಉತ್ತರ : ಶ್ರಾವಣ ಬಹುಳ ಬಿದಿಗೆ ಶುಕ್ರವಾರ
  ವಿಷ್ಣುವಿನ ವಾಹನವಾದ ಗರುಡ ಯಾರು ? ಗರುಡ ಜಯಂತಿ ಏನು?

24..ರಾಯರ ಗುರುಕುಲ ವಾಸ ಎಲ್ಲಿ ?
ಉತ್ತರ : ಕಾವೇರಿ ಪಟ್ಟನಂ

  1. ರಾಯರ ಆಶ್ರಮ ಸ್ಥಳ ಎಲ್ಲಿ ?
    ಉತ್ತರ : ತಂಜಾವೂರು

26 ರಾಯರು ಯಾವ ವಾದನದಲ್ಲಿ ಕುಶಲರಾಗಿದ್ದರು ?
ಉತ್ತರ : ವೀಣಾವಾದನದಲ್ಲಿ

  1. ರಾಯರು ಉಪಯೋಗಿಸುತ್ತಿದ್ದ ವೀಣೆ ಹೆಸರು?
    ಉತ್ತರ : ವಾಗ್ದೇವಿ

28 ರಾಯರ ಆರಂಭಿಕ ವಿದ್ಯಾ ಗುರುಗಳು ಯಾರು ?
ಉತ್ತರ : ರಾಯರ ಅಣ್ಣನಾದ ಗುರುರಾಜಾಚಾರ್ಯರಿಂದ ಹಾಗೂ ಭಾವನವರಾದ ಲಕ್ಷ್ಮೀನರಸಿಂಹಾಚಾರ್ಯರ ಬಳಿ

  1. ರಾಯರ ಹೆಚ್ಚಿನ ವಿದ್ಯಾಭ್ಯಾಸ ಯಾರಲ್ಲಿ ?
    ಉತ್ತರ : ವಿಜಯೀಂದ್ರತೀರ್ಥರ ಹಾಗೂ ಸುಧೀಂದ್ರ ತೀರ್ಥರ ಬಳಿ.
  2. ರಾಯರ ಆಶ್ರಮ ಗುರುಗಳು ಯಾರು ?
    ಉತ್ತರ : ಸುಧೀಂದ್ರ ತೀರ್ಥರು.
  3. ರಾಯರ ಆಶ್ರಮ ನಾಮವೇನು ?
    ಉತ್ತರ : ರಾಘವೇಂದ್ರ ತೀರ್ಥರು
  4. ರಾಯರ ಆಶ್ರಮ ಶಿಷ್ಯರಾರು ?
    ಉತ್ತರ : ಯೋಗೀಂದ್ರತೀರ್ಥರು
  5. ರಾಯರ ಪರಿಮಳ ಗ್ರಂಥ ಯಾವುದರ ವ್ಯಾಖ್ಯಾನ ?
    ಉತ್ತರ : ಶ್ರೀಮನ್ಯಾಯಸುಧಾ
  6. ರಾಯರ ಕೃತಿ ರಾಮಾಯಣದ ಸಂಕ್ಷಿಪ್ತ ಗ್ರಂಥ ಯಾವುದು ?
    ಉತ್ತರ : ರಾಮಚಾರಿತ್ರ್ಯ ಮಂಜರಿ
  7. ಕೃಷ್ಣಾವತಾರದ ಬಗ್ಗೆ ರಚಿಸಿದ ಕೃತಿ ?
    ಉತ್ತರ : ಕೃಷ್ಣ ಚಾರಿತ್ರ್ಯ ಮಂಜರಿ
  8. ರಾಯರ ಗ್ರಂಥಗಳನ್ನು ಏನೆಂದು ಕರೆಯುತ್ತಾರೆ ?
    ಉತ್ತರ : ಭಾವದೀಪ
  ಹೋಳಿ ಹುಣ್ಣಿಮೆ - ಪುರಾಣ ಕಥೆ

37 ರಾಯರ ಅಂಕಿತವೇನು ?
ಉತ್ತರ : ಧೀರ ವೇಣುಗೋಪಾಲ.

38 ನದಿಗಳ ತಾರತಮ್ಯ ಬಗ್ಗೆ ರಾಯರ ಸ್ತೋತ್ರ ?
ಉತ್ತರ : ನದಿ ತಾರತಮ್ಯ ಸ್ತೋತ್ರ

  1. ಉಪನಿಷತ್ತುಗಳಿಗೆ ರಾಯರು ರಚಿಸಿದ ವ್ಯಾಖ್ಯಾನವನ್ನು ಏನೆನ್ನುತ್ತಾರೆ ?
    ಉತ್ತರ : ಖಂಡಾರ್ಥ
  2. ರಾಯರು ಪೂರ್ವಾಶ್ರಮದಲ್ಲಿ ರಚಿಸಿದ ಗ್ರಂಥ ?
    ಉತ್ತರ : ಪ್ರಮೇಯ ನವಮಾಲಿಕಾ
    (ಅಣುಮಧ್ವವಿಜಯ)
  3. ರಾಯರ ಅಷ್ಟೋತ್ತರ ರಚಿಸಿದವರಾರು ?
    ಉತ್ತರ : ಅಪ್ಪಣ್ಣಾಚಾರ್ಯರು.
  4. ಮಂತ್ರಾಲಯ ಗ್ರಾಮದೇವತೆ ಯಾರು?
    ಉತ್ತರ : ಮಂಚಾಲಮ್ಳ
  5. “ಅಣುಭಾಷ್ಯ” ಗ್ರಂಥಕ್ಕೆ ರಾಯರ ವ್ಯಾಖ್ಯಾನ ಯಾವುದು ?
    ಉತ್ತರ : ತತ್ವಮಂಜರಿ
  6. ರಾಯರ ಅಷ್ಟೋತ್ತರಕ್ಕೆ ರಾಯರು ಕಡೆಯಲ್ಲಿ ಹೇಳಿದ ವಾಕ್ಯ ಯಾವುದು ?
    ಉತ್ತರ : ಸಾಕ್ಷಿ ಹಯಾಸ್ಯೋತ್ರಹಿ
  7. ಮಂಚಾಲೆ ಯಾವ ಕ್ಷೇತ್ರವೆಂದು ಪ್ರಸಿದ್ಧಿ ?
    ಉತ್ತರ : ಪ್ರಹ್ಲಾದರಾಜರು ತಪಸ್ಸು ಮಾಡಿದ ಸ್ಥಳ
  8. ರಾಯರು ರಚಿಸಿದ ಮಹಾಭಾರತ ಸಂಬಂಧಿ ಗ್ರಂಥ ಯಾವುದು?
    ಉತ್ತರ : ಭಾವಸಂಗ್ರಹ:
  ಅನ್ನವು ‘ಬ್ರಹ್ಮಸ್ವರೂಪ’ವಾಗಿದೆ - ಶ್ರೀ ಅನ್ನಪೂರ್ಣಾದೇವಿ

47.ವ್ಯಾ‌ಸರಾಜರ ತಾತ್ಪರ್ಯ ಚಂದ್ರಿಕಾ ಗ್ರಂಥದ ವ್ಯಾಖ್ಯಾನ ಯಾವುದು ?
ಉತ್ತರ : ಚಂದ್ರಿಕಾ ಪ್ರಕಾಶ

  1. ರಾಯರು ಚಾತುರ್ಮಾಸ್ಯ ವ್ರತದಲ್ಲಿ ಉಪಯೋಗಿಸದ ಯಾವ ಪದಾರ್ಥವನ್ನು ಕನಕದಾಸರ ಅವತಾರದ ರೂಪದಿಂದ ಸ್ವೀಕರಿಸಿದರು ?
    ಉತ್ತರ : ಸಾಸಿವೆ
  2. ರಾಯರಿಗೆ ಚಾತುರ್ಮಾಸ್ಯ ವ್ರತದಲ್ಲಿ ಸ್ವೀಕರಿಸದ ಸಾಸಿವೆಯನ್ನು ನೀಡಿದವರಾರು ?
    ಉತ್ತರ : ಕನಕದಾಸರು
  3. ರಾಘವೇಂದ್ರ ಸ್ವಾಮಿಗಳ ಉತ್ತರಾಧಿಕಾರಿಗಳು ಯಾರು?
    ಉತ್ತರ ; ಶ್ರೀ ಯೋಗೀಂದ್ರ ತೀರ್ಥರು

ಸಂಗ್ರಹ
ಲಕ್ಷ್ಮೀ ಭಟ್

Leave a Reply

Your email address will not be published. Required fields are marked *

Translate »