ಕಾಶಿಗೆ ಹೋದರೇ , ತರಕಾರಿ ಅಥವಾ ಹಣ್ಣನ್ನು ತ್ಯಾಗ ಮಾಡಬೇಕು ಎಂದು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಸರಿಯಾದ ಅರ್ಥ ತಿಳಿಯದೇ
ನಾನೂ ತಪ್ಪಾಗಿ ತಿಳಿದಿದ್ದೆ.ಈಗ ತಿಳಿಯುವ ವೇಳೆಗೆ , ಅಲ್ಲಿಗೆ ಹೋಗುವ ಶಕ್ತಿಯೇ ಕುಂದಿತು.
ಅದರ ನಿಜಾರ್ಥವು ಇಂತಿದೆ:
*ಕಾಶಿಗೆ ಹೋದಾಗ,ಕಾಯನ್ನೋ,ಫಲವನ್ನೋ ಬಿಡಬೇಕು ಎಂದು ನಮ್ಮ ಹಿರಿಯರು ಏಕೆ ಹೇಳುತ್ತಾರೆ? ಅದರ ಮರ್ಮವೇನು,ಅಂದರೆ,ರಹಸ್ಯವೇನು?
ಹಾಗೆ,ಅಧ್ಯಯನ ಮಾಡಿದರೆ, ನಮ್ಮ ಶಾಸ್ತ್ರಗಳಲ್ಲಿ,ಅಂದರೆ,ವೇದ,ಉಪನಿಷತ್ತು,ಪುರಾಣ,ಸ್ಮೃತಿಗಳಲ್ಲಿ ಎಲ್ಲೂ ಈ ಸಂಗತಿ(ಅಂದರೆ,ಒಂದು ಕಾಯನ್ನು ಮತ್ತು ಒಂದು ಹಣ್ಣನ್ನು ಬಿಡಬೇಕು,ಎಂಬುದನ್ನು) ಹೇಳಿಲ್ಲವಲ್ಲ ಎಂಬುದನ್ನು ಕಂಡುಕೊಂಡೆವು ನಾವು.
ಶಾಸ್ತ್ರವು ಹೇಳಿದ ವಿಷಯವನ್ನು,ಆಡುಭಾಷೆಯಲ್ಲಿ,ತಿರುಚಿ ಆದ ಪ್ರಮಾದ ನೋಡಿ ಹೀಗಿದೆ:
ಕಾಶೀ ಕ್ಷೇತ್ರದ ವಿಷಯದಲ್ಲಿ ಶಾಸ್ತ್ರಗಳು ಹೇಳುತ್ತಿರುವುದು – ಕಾಶೀ ಕ್ಷೇತ್ರಕ್ಕೆ ಹೋಗಿ,ಗಂಗಾ ಸ್ನಾನ ಮಾಡಿ,ಅಲ್ಲಿ,ಅಂದರೆ,ಆ ಗಂಗೆಯಲ್ಲಿ,ಕಾಯಾಪೇಕ್ಷೆ ಮತ್ತು ಫಲಾಪೇಕ್ಷೆಯನ್ನು ತ್ಯಾಗ ಮಾಡಿ,ಅಂದರೆ,ತೊರೆದು,ನಂತರ,ಭಕ್ತಿಯಿಂದ ವಿಶ್ವನಾಥನ ದರುಶನ ಮಾಡಬೇಕು ಎಂದು.
ಇಲ್ಲಿ ಕಾಯಾಪೇಕ್ಷೆ ಅಂತರ ತನ್ನ ಅಥವ ಇತರರ ದೇಹದ ಮೇಲಿನ ಅಪೇಕ್ಷೆ ಹಾಗು ಫಲಾಪೇಕ್ಷೆ ಅಂದರೆ,ಮಾಡಿದ ಕರ್ಮಂಗಳಿಂದ ಉಂಟಾಗುವ ಫಲಗಳ ಅಪೇಕ್ಷೆ ಬಿಡಬೇಕು ಎಂಬುದು ಶಾಸ್ತ್ರವಚನಾರ್ಥವು.
ಇವೆರಡನ್ನೂ ಮಾಡಿದ ಕ್ಷಣವೇ,ಜೀವನ್ಮುಕ್ತಿಯು ದೊರೆಯುವುದು ನಿಶ್ಚಿತವಾಗುವುದು,ಆಗ ಮಹಾಸ್ಮಶಾನವಾದ ಕಾಶಿಯ ವಿಶ್ವನಾಥನ ದರುಶನದಿಂದ, ನಿಜಫಲವು (ಅಂದರೆ,ಮುಕ್ತಿಯೇ) ಸಿಗುವುದು ಎಂದರ್ಥವು.
ಕಾಲ ಕಳೆದಂತೆ,ಈ ಶಾಸ್ತ್ರವಚನವು,ಅಪಭ್ರಂಶಗೊಂಡು,ಅಂದರೆ,ಭ್ರಷ್ಟಗೊಂಡು,ಕಾಶಿಗೆ ಹೋದಾಗ,ಒಂದು ಕಾಯಿ ಅಂದರೆ ತರಕಾರಿಯನ್ನೋ ಮತ್ತು ಒಂದು ಫಲ ಅಂದರೆ,ಯಾವುದೋ ಇಷ್ಟದ ತಿಂಡಿಯನ್ನೋ,ಹಣ್ಣನ್ನೋ,ಒಣಹಣ್ಣನ್ನೋ ಬಿಡುವುದು ಸಂಪ್ರದಾಯ ಆಯಿತು.
ಇದು ಸುಲಭ ಸಾಧ್ಯವಾದುದರಿಂದ ಜನರೆಲ್ಲಾ ಇದನ್ನೇ ಪುರಸ್ಕರಿಸಿದರು.
ಕಾಯ ಅಪೇಕ್ಷೆ ಅಂದರೆ ಶರೀರದ ಬಯಕೆಗಳನ್ನು ಮತ್ತು ಫಲ ಅಂದರೆ ಕರ್ಮಫಲಂಗಳ ಬಯಕೆ ಬಿಡುವುದು ಎಷ್ಟು ಕಷ್ಟ ಎಂಬುದು ಎಲ್ಲರಿಗೂ ಗೊತ್ತು.
🙏🙏🙏🙏🙏🙏🙏🙏🙏