ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಯಾವ ದೇವರಿಗೆ ಯಾವ ಕಾಷ್ಠ ?

ಸಮಿತ್ತು ಎಂಬ ಪದಕ್ಕೆ ಸಮಿಧಾ ಎಂಬ ಅನ್ವರ್ಥಕ ನಾಮವಿದೆ.

ಸಮಿತ್ತು ಎಂಬುದು ನಾಮಪದ. ನಿರ್ದಿಷ್ಟ ಉದ್ದ ಮತ್ತು ದಪ್ಪನಾದ, ಹವನ ಹೋಮಗಳಲ್ಲಿ ಅಗ್ನಿಗೆ ಅರ್ಪಿಸಲ್ಪಡುವ ಕೆಲವು ನಿರ್ದಿಷ್ಟ ವೃಕ್ಷಗಳ ಕಾಷ್ಟಗಳನ್ನು (ಕಟ್ಟಿಗೆ) ಸಮಿತ್ತು ಅಥವಾ ಸಮಿಧಾ ಎಂದು ಕರೆಯಲಾಗುತ್ತದೆ.
ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಗೊಂಡಿರುವ ಹಲವಾರು ವೃಕ್ಷಗಳು ವಿಧವಿಧವಾದ ಔಷಧೀಯ ಗುಣಗಳನ್ನು ಹೊಂದಿರುತ್ತವೆ.

ಮೇಲಾಗಿ ವೃಕ್ಷಗಳ ಕಾಷ್ಠಗಳು ನೇರವಾದ ಪೃಥ್ವೀ ತತ್ವವನ್ನು ಹೊಂದಿರುತ್ತವೆ. ಅಗ್ನಿಗೆ ಅರ್ಪಿಸಲ್ಪಟ್ಟ ಕಾಷ್ಠಗಳು ದಗ್ಧವಾಗುವಾಗ ಹೊಮ್ಮುವ ಹೊಗೆಯಲ್ಲಿ ಆಯಾ ವೃಕ್ಷಗಳ ಔಷಧೀಯ ಗುಣಗಳು ವಾತಾವರಣದೊಂದಿಗೆ ಬೆರೆತು ನಾವು ಉಸಿರಾಡುವ ಗಾಳಿಯಲ್ಲಿ ಬೆರೆತು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ತನ್ಮೂಲಕ ನಮ್ಮ ದೇಹದ ಬಾಹ್ಯ ಮತ್ತು ಆಂತರಿಕ ಭಾಗಗಳನ್ನು ಶುದ್ಧೀಕರಿಸಿ, ಕೀಟಾಣುಗಳನ್ನು ನಾಶಪಡಿಸಿ, ನಾವು ಆರೋಗ್ಯವಾಗಿರುವಂತೆ ವ್ಯವಸ್ಥೆಯನ್ನು ಕಲ್ಪಿಸುತ್ತವೆ.

  ರಾಮಾಯಣ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ - Ramayana Poet Valmiki Jayanti

ಸಾಧಾರಣವಾದ ಶೀತ, ಕೆಮ್ಮು, ಉಬ್ಬಸ, ಪಿತ್ಠೋದ್ರೇಕ, ತಲೆಶೂಲೆ ಮುಂತದ ತೊಂದರೆಗಳಿಂದ ನಮ್ಮನ್ನು ಅಗ್ನಿಗೆ ಸಮರ್ಪಿಸಲ್ಪಟ್ಟ ಸಮಿತ್ತುಗಳಿಂದುಂಟಾಗುವ ಹೊಗೆಯು ಸಂರಕ್ಷಿಸುತ್ತದೆ.ಪ್ರತಿಯೊಂದು ಗ್ರಹಕ್ಕೂ ನಿರ್ದಿಷ್ಟವಾದ ವೃಕ್ಷದ ಕಾಷ್ಠವನ್ನು ನಿಷ್ಕರ್ಷಿಸಲಾಗಿದೆ.
ಸೂರ್ಯನಿಗೆ ಅರ್ಕ ಅಥವಾ ಎಕ್ಕ

ಚಂದ್ರನಿಗೆ ಪಲಾಶ ಅಥವಾ ಮುತ್ತುಗ

ಮಂಗಳನಿಗೆ ಖದೀರ ಅಥವಾ ಕಗ್ಗಲಿ

ಬುಧನಿಗೆ ಉತ್ತರಣಿ ಅಥವಾ ಅಪಮಾರ್ಗ

ಗುರುವಿಗೆ ಅಶ್ವಥ ಅಥವಾ ಅರಳಿ

ಶುಕ್ರನಿಗೆ ಔದುಂಬರ ಅಥವಾ ಅತ್ತಿ

ಶನಿಗೆ ಶಮೀ
ರಾಹುವಿಗೆ ದೂರ್ವ ಅಥವಾ ಗರಿಕೆ

ಮತ್ತು ಕೇತುವಿಗೆ ಕುಶ ಅಥವಾ ದರ್ಭೆ

ಎಂಬ ಕಾಷ್ಠಗಳನ್ನು ಶಾಸ್ತ್ರಗಳು ನಿರ್ದೇಶಿಸಿವೆ.

  ಏಕಾದಶಿಗಳ ಹೆಸರುಗಳು ಮತ್ತು ಫಲ

ಹಾಗೆಯೇ, ವಿಷ್ಣು, ಈಶ್ವರ ಮುಂತಾದ ದೇವಾನುದೇವತೆಗಳಿಗೂ ವಿವಿಧ ಕಾಷ್ಟಗಳನ್ನು ನಿಗದಿಪಡಿಸಲಾಗಿದ್ದು ಅವುಗಳಲ್ಲಿ ತತ್ಸಂಬಧಿತ ದೇವದೇವತೆಗಳ ಸನ್ನಿಧಾನವಿರುತ್ತದೆ.
ನಿರ್ದಿಷ್ಟ ಸಮಿತ್ತುಗಳನ್ನು ಯಜ್ಞ-ಹೊಮಾದಿಗಳಿಗೆ ಅರ್ಪಿಸುವುದರಿಂದ ಆಯಾ ದೇವತೆಗಳು ಪರಮಪ್ರೀತರಾಗಿ ಹೋಮಕರ್ತೃವಿಗೆ ಸಕಲ ಮನೋಭೀಷ್ಟಗಳನ್ನು ನೆರವೇರಿಸುತ್ತಾರೆ. ಆದ್ದರಿಂದ ನಿರ್ದಿಷ್ಟ ಸಮಿತ್ತುಗಳ ಅರ್ಪಣೆ ಶುಭಪ್ರದ, ಫಲಪ್ರದ ಮತ್ತು ಇಷ್ಟಪ್ರದ.

🙏🙏🙏🙏🙏

ಸಂಗ್ರಹ.

ಸಾತ್ವಿಕ್ ಸ್ಟೋರ್ ಪರ್ಕಳ.

Leave a Reply

Your email address will not be published. Required fields are marked *

Translate »