ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀಶಿಂಶುಮಾರರೂಪಿ ಭಗವಂತನ ಅವತಾರ ಮತ್ತು ಸ್ತೋತ್ರ ಮಹಾತ್ಮೆ

ಶಿಂಶುಮಾರ ಎನ್ನುವುದು ಭಗವಂತನ ಸಾಕ್ಷಾತ್ ಅವತಾರ
ಇಡೀ ನಕ್ಷತ್ರ ಮಂಡಲವನ್ನು ಈ ರೂಪದಿಂದ ಭಗವಂತನು ಧಾರಣೆ ಮಾಡಿದ್ದಾನೆ.
ಬಾಲದ ತುದಿಯಲ್ಲಿ ಧೃವ ಮಂಡಲವನ್ನೂ, ಬಲಭಾಗದಲ್ಲಿ ಉತ್ತರಾಯಣ ನಕ್ಷತ್ರಗಳನ್ನೂ, ಎಡಭಾಗದಲ್ಲಿ ದಕ್ಷಿಣಾಯನ ನಕ್ಷತ್ರಗಳನ್ನು ಧಾರಣೆ ಮಾಡಿರುವ ಚೇಳಿನರೂಪ
ಮುಂದೆ ಇರುವ ಕೊಂಡಿಗಳು ಮೇರು ಪರ್ವತದ ಮೇಲಿರುವ ಬ್ರಹ್ಮದೇವರ ಸಭೆಯ ಹತ್ತಿರ ಇರುತ್ತದೆ.
ಸಪ್ತ ಋಷಿಗಳ ಮಂಡಲ, ತ್ರಿಶಂಕು ಸ್ವರ್ಗವೂ ಕೂಡ ಭಗವಂತನ ಈ ರೂಪವನ್ನು ಆಶ್ರಯ ಮಾಡಿಕೊಂಡಿವೆ.
ಈ ರೀತಿಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಯಾರು ಚಿಂತನ ಮಾಡುತ್ತಾರೋ ಅವರು ಅಂದಂದಿನ ಪಾಪವನ್ನು ಅಂದೇ ಕಳೆದುಕೊಂಡು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.
ಶ್ರೀ ಕೃಷ್ಣಾರ್ಪಣಮಸ್ತು.🙏🏻🙏🏻🙏🏻🙏🏻

ಯಸ್ಯ ಪುಚ್ಛಾಗ್ರೇsರ್ವಾಕ್ ಶಿರಸಃ ಕುಂಡಲೀಭೂತದೇಹಸ್ಯ ಧ್ರುವ ಉಪಕಲ್ಪಿತಸ್ತಸ್ಯ ಲಾಂಗಲೇ ಪ್ರಜಾಪತಿರಗ್ನರಿಂದ್ರೋ ಧರ್ಮ ಇತಿ||
ಪುಚ್ಛಮೂಲೇ ಧಾತಾ ವಿಧಾತಾ ಚ ಕಟ್ಯಾಂ ಸಪ್ತರ್ಷಯಸ್ತಸ್ಯ ದಕ್ಷಿಣಾವರ್ತಕುಂಡಲೀ ಭೂತಶರೀರಸ್ಯ ಯಾನ್ಯುದಗಯನಾನಿ ದಕ್ಷಿಣಪಾರ್ಶ್ವೇ ತು ನಕ್ಷತ್ರತ್ರಾಣಿ ಉಪಕಲ್ಪಯಂತಿ ||
ದಕ್ಷಿಣಾಯನಾನಿ ತು ಸವ್ಯೇ ಯಥಾ ಶಿಂಶುಮಾರಸ್ಯ ಕುಂಡಲೀಭೋಗಸನ್ನಿವೇಶಸ್ಯ ಪಾರ್ಶ್ವಯೋರುಭಯೋರಪ್ಯವಯವಾಃ ಸಮಸಂಖ್ಯಾ ಭವಂತಿ||
ಪೃಷ್ಠೇ ತ್ವಜವೀಥೀ ಆಕಾಶಗಂಗಾ ಚೋತ್ತರತಃ ಪುನರ್ವಸುಪುಷ್ಯೌ ದಕ್ಷಿಣವಾಮಯೋಃ ಶ್ರೋಣ್ಯೋರಾರ್ದ್ರಾsಶ್ಲೇಷಾ ಚ ದಕ್ಷಿಣವಾಮ ಪಾದಯೋರಭಿಜಿದುತ್ತರಾಷಾಢೇ ಚ ದಕ್ಷಿಣವಾಮಯೋಃ ನಾಸಿಕಯೋರ್ಯಥಾಸಂಖ್ಯಂ ಚ ಶ್ರವಣಪೂರ್ವಾಷಾಢೇ ಚ ದಕ್ಷಿಣವಾಮಯೋರ್ಲೋಚನಯೋರ್ಧನಿಷ್ಠಾಮೂಲಂ ಚ ದಕ್ಷಿಣವಾಮಯೋಃ ಕರ್ಣಯೋರ್ಮಘಾದೀನ್ಯಷ್ಟನಕ್ಷತ್ರಾಣಿ ದಕ್ಷಿಣಾಯನಾನಿ ವಾಮಪಾರ್ಶ್ವಪಂಕ್ತಿಷುಯುಂಜೀತ||
ತಥೈವ ಮೃಗಶೀರ್ಷಾದೀನ್ಯುದಗಯನಾನಿ ದಕ್ಷಿಣಪಾರ್ಶ್ವೇಷು ಪ್ರಾತಿಲೋಮ್ಯೇನ ಪ್ರತಿಯುಂಜೀತ||
ಶತಭಿಷಜ್ಯೇಷ್ಠೇ ದ್ವೇ ಸ್ಕಂದಯೋರ್ದಕ್ಷಿಣವಾಮಯೋರ್ನ್ಯಸೇತ್ ||
ಉತ್ತರಹನಾವಗಸ್ತ್ಯಃ ಅಧರಹನೌ ಯಮೋ ಮುಖೇ ಚಾಂಗಾರಕಃ ಶನೈಶ್ಚರ ಉಪಸ್ಥೇ ಬೃಹಸ್ಪತಿಃ ಕಕುದಿ ವಕ್ಷಸ್ಯಾದಿತ್ಯೋ ಹೃದಯೇ ನಾರಾಯಣೋ ಮನಸಿ ಚಂದ್ರೋ ನಾಭ್ಯಾಮುಶನಾಃ ಸ್ತನಯೋರಶ್ವಿನೌ ಬುಧಃ ಪ್ರಾಣಾಪಾನಯೋ ರಾಹುರ್ಗಲೇ ಕೇತವಃ ಸರ್ವಾಂಗೇಷು ರೋಮಸು ಸರ್ವೇ ತಾರಾಗಣಾಃ||
ಏತದುಹೈವ ಭಗವತೋ ವಿಷ್ಣೋಃ ಸರ್ವದೇವತಾಮಯಂ ರೂಪಂ ಅಹರಹಃ ಸಂಧ್ಯಾಯಾಂ ಪ್ರಯತೋ ವಾಗ್ಯತೋ ನಿರೀಕ್ಷ್ಯಮಾಣ ಉಪತಿಷ್ಠೇತ ನಮೋ ನಮೋ ಜ್ಯೋತಿರ್ಲೋಕಾಯ ಕಾಲಾಯನಾಯಾನಿಮಿಷಾಂ ಪತಯೇ ಮಹಾಪುರುಷಾಯ ಧೀಮಹೀತಿ||
ಗ್ರಹರ್ಕ್ಷತಾರಾಮಯಮಾಧಿದೈವಿಕಂ ರೂಪಂ ಹರೇರ್ಮಂತ್ರಕೃತಸ್ತ್ರಿಕಾಲಂ| ನಮಸ್ಕೃತಃ ಸಂಸ್ತುವತೋ ನಶ್ಯತೇ ವೈ ಸ್ವಯಂ ತ್ರಿಕಾಲಂ ಕೃತಮಾಶು ಪಾಪಂ||

 ಇದು ಶ್ರೀಮದ್ಭಾಗವತದ ಪಂಚಮಸ್ಕಂದದಲ್ಲಿ ಬರುವ ಶ್ರೀಶಿಂಶುಮಾರರೂಪಿ ಪರಮಾತ್ಮನ ಸ್ತೋತ್ರ ಇದನ್ನ ಇವತ್ತು ಮಾತ್ರ ಅಲ್ಲಾ ಪ್ರತಿನಿತ್ಯ ತ್ರಿಕಾಲದಲ್ಲೂ ಯಾರು ತಪ್ಪದೇ ಭಕ್ತಿಯಿಂದ ಹೇಳುತ್ತಾರೋ ಅವರ ಜಾತಕದಲ್ಲಿರುವ , ಸಾಡೇಸಾಥಿ , ಪಂಚಮ ಶನಿ , ಅಷ್ಟಮ ಶನಿ , ಅರ್ಧಕಾಳಸರ್ಪಯೋಗ , ಸಂಪೂರ್ಣಕಾಳಸರ್ಪಯೋಗ ,ಕುಜ-ರಾಹು ಸಂಧಿ , ಗುರುಚಾಂಡಾಲ ಯೋಗ , ಹೀಗೆ ಎಲ್ಲ ತರಹದ ದೋಷಗಳು ನಿವಾರಣೆಯಾಗಿ ತ್ರಿವಿಧತಾಪತ್ರಯಗಳೂ ನಿವಾರಣೆಯಾಗಿ ಭವಿಷ್ಯತ್ತಿನಲ್ಲಿ ಅವರು ಮನಸ್ಸಲ್ಲಿ ಅನ್ಕೊಂಡ ಸಕಲ ಕಾರ್ಯಗಳೂ ಶ್ರೀಶಿಂಶುಮಾರರೂಪಿ ಪರಮಾತ್ಮನ ಪರಮಾನುಗ್ರಹದಿಂದ ಶೀಘ್ರದಲ್ಲಿ ಕೈಗೂಡುತ್ತವೆ . ಅಲ್ಲದೇ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ಅವೆಲ್ಲವೂ ಶೀಘ್ರದಲ್ಲಿ ಪರಿಹಾರವಾಗಿ ಉತ್ತಮ ಆಯುರಾರೋಗ್ಯವಂತರಾಗಿ ಬಾಳುತ್ತಾರೆ . 
ಇದೆಲ್ಲವನ್ನೂ ಅನ್ನಲು ಅನಾನುಕೂಲವಾದಾಗ- 

ನಮೋ ಜ್ಯೋತಿರ್ಲೋಕಾಯ ಕಾಲಾಯನಾಯಾನಿಮಿಷಾಂ ಪತಯೇ ಮಹಾ ಪುರುಷಾಯ ಧೀಮಹಿ|| ಈ ಶ್ಲೋಕವನ್ನಾದರೂ ಹೇಳಬೇಕು . 🙏🏻🙇‍♂️ ಹರೇ ಶ್ರೀನಿವಾಸಾ 🙇‍♂️🙏🏻

 ಸಕಲ ಸದ್ಭಕ್ತರಿಗೂ ಶ್ರೀಶಿಂಶುಮಾರರೂಪಿ ಭಗವಂತನು ಉತ್ತಮ ಆಯುರಾರೋಗ್ಯ ದಯಪಾಲಿಸಿ ಸತತವಾಗಿ ಧರ್ಮಕಾರ್ಯಗಳಲ್ಲಿ ನಮ್ಮನ್ನು ಪ್ರೇರೇಪಿಸುತ್ತಿರಲಿ ಎಂದು ಅಸ್ಮದ್ಗುರ್ವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಅಸ್ಮತ್ಕುಲದೇವತಾ ಶ್ರೀಕಲ್ಹಳ್ಳಿಲಕ್ಷ್ಮೀವೇಂಕಟೇಶಾಭಿನ್ನ ಶ್ರೀಲಕ್ಷ್ಮೀಶಿಂಶುಮಾರ ರೂಪಿ ಭಗವಂತನಲ್ಲಿ ಭಕ್ತಿಪೂರ್ವಕ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಪ್ರಾರ್ಥಿಸಿಕೊಳ್ಳುವೆ 🙏🏻🙇‍♂️🙇‍♂️🙏🏻

Leave a Reply

Your email address will not be published. Required fields are marked *

Translate »