ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಚಂದ್ರಘಂಟ ಅವತಾರ – ನವರಾತ್ರಿ 3ನೇ ದಿನ – ಪೂಜಾ ವಿಧಾನ

ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆ ಹೀಗಿರಲಿ

ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟ ಅವತಾರವೂ ಒಂದಾಗಿದ್ದು, ನವರಾತ್ರಿಯ ಮೂರನೇ ದಿನ ಪೂಜಿಸಲ್ಪಡುತ್ತಾಳೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟ
ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ, ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟೆ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಹಾಗೂ ಚಂದ್ರಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

ಚಂದ್ರಘಂಟೆಯ ಮಹತ್ವ
ಚಂದ್ರಘಂಟೆಯು ಶುಕ್ರ ಗ್ರದ ಅಧಿದೇವತೆಯಾಗಿರುತ್ತಾಳೆ. ಚಂದ್ರಘಂಟೆಯು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು

  ಬೆಲೆ ಕಟ್ಟಲಾಗದ ಭಾವನಾತ್ಮಕ ಗ್ರಾಮೀಣ ಜಗತ್ತು

ಚಂದ್ರಘಂಟೆಯ ಪುರಾಣ ಕಥೆ
ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ.

ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

ಚಂದ್ರಘಂಟೆಯ ಪೂಜಾ ವಿಧಿ
ಚಂದ್ರಘಂಟೆಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ. ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟೆಯನ್ನು ಪ್ರಾರ್ಥಿಸಿ.

ಚಂದ್ರಘಂಟೆಯ ಮಂತ್ರ
ಓಂ ದೇವಿ ಚಂದ್ರಘಂಟಾಯೈ ನಮಃ

ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಪ್ರಾರ್ಥನೆ
ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

  ಅಜ್ಜಿಕಾನು ಶ್ರೀರಾಜರಾಜೇಶ್ವರಿ ದೇವಸ್ಥಾನ

ಚಂದ್ರಘಂಟೆಯ ಧ್ಯಾನ
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ

ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ

ಚಂದ್ರಘಂಟಾ ದೇವಿಯ ಸ್ತೋತ್ರ
ಅಪಾದುದ್ಧಾರಿಣಿ ತ್ವಂಹೀ ಆದ್ಯ ಶಕ್ತಿಃ ಶುಭ್‌ಪರಂ
ಅನಿಮಾದಿ ಸಿದ್ಧಿಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಮಿಖಿ ಇಷ್ಟ ಧಾತ್ರಿ ಇಷ್ಟಂ ಮಂತ್ರ ಸ್ವರೂಪಿಣಿಂ
ಧನಧಾತ್ರಿ, ಆನಂದಧಾತ್ರಿ ಚಂದ್ರಘಂಟೇ ಪ್ರಣಮಾಮ್ಯಹಂ
ನಾನಾರೂಪಧಾರಿಣಿ ಇಚ್ಛಾಮಯಿ ಐಶ್ವರ್ಯದಾಯಿನೀಂ
ಸೌಭಾಗ್ಯಾರೋಗ್ಯದಾಯಿನಿ ಚಂದ್ರಘಂಟೇ ಪ್ರಣಮಾಮ್ಯಹಂ

ಚಂದ್ರಘಂಟಾ ದೇವಿಯ ಕವಚ
ರಹಸ್ಯಂ ಶ್ರಿನನಿ ವಕ್ಷ್ಯಾಮಿ ಶೈವೇಶಿ ಕಮಲಾನನೇ
ಶ್ರೀ ಚಂದ್ರಘಂಟಸ್ಯ ಕವಚಂ ಸರ್ವಸಿದ್ಧಿದಾಯಕಂ

ಬಿನಾ ನ್ಯಾಸಂ ಬಿನಾ ವಿನಿಯೋಗಂ ಬಿನಾ ಶಪೋಧ ಬಿನಾ ಹೋಮಂ
ಸ್ನಾನಂ ಶೌಚಾದಿ ನಾಸ್ತಿ ಶ್ರದ್ಧಾಮಾತ್ರೇನ ಸಿದ್ಧಿದಾಂ
ಕೌಶಿಶ್ಯಾಂ ಕೌಟಿಲ್ಯ ವಂಚಕಾಯ ನಿಂದಕಾಯ ಚ
ನ ದಾತಾವ್ಯಂ ನ ದಾತಾವ್ಯಂ ನ ದಾತಾವ್ಯಂ ಕದಾಚಿತಂ

  ಪ್ರಭಾವದಿಂದ ಸ್ವಭಾವ ಬದಲಾಗದು - ಕಥೆ

ಪೂಜೆಯ ಮಹತ್ವ
ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುವುದು. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು ಹಾಗಾಗಿ ಚಂದ್ರಘಂಟೆಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟೆಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟೆ. ಹೀಗಾಗಿ ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಪೂಜೆ ಮಾಡಿ, ಮಾತೆಯ ಆಶೀರ್ವಾದ ಪಡೆದುಕೊಳ್ಳಿ

Leave a Reply

Your email address will not be published. Required fields are marked *

Translate »