ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಣಪತಿ ಪುಳೆ ದೇವಸ್ಥಾನ ರತ್ನಗಿರಿ

ಗಣಪತಿ ಪುಳೆ..!

ಪುಳೆ ಒಂದು ಗಣಪತಿ ಕ್ಷೇತ್ರ. ಗಣಪತಿ ಪುಳೆ ಎಂತಲೂ ಪ್ರಸಿದ್ಧ ಭಾರತದ ನಾಲ್ಕು ದಿಸೆಗಳಲ್ಲಿ ಇರುವ ನಾಲ್ಕು ದ್ವಾರ ದೇವತೆಗಳಲ್ಲಿ ಇದೊಂದು. ರತ್ನಗಿರಿಯ ಉತ್ತರದಲ್ಲಿ ಹನ್ನೆರಡು ಮೈಲು ದೂರದಲ್ಲಿ ಸಮುದ್ರ ತೀರದಲ್ಲಿದೆ. ಇಲ್ಲಿಯ ಗಣಪತಿ ಸ್ವಯಂಭೂ. ಇಲ್ಲಿನ ಒಂದು ಪರ್ವತದ ತಪ್ಪಲಿನಲ್ಲಿ ಕಲ್ಲಿಗೆ ತಾಗಿಕೊಂಡೇ ಪóಶ್ಚಿಮಾಭಿಮುಖವಾಗಿ ಗಣಪತಿ ಮಂದಿರವಿದೆ. ಹರಕೆ ಹೊತ್ತರೆ ಕಷ್ಟ ನಿಜವಾಗಿಯೂ ನಿವಾರಣೆ ಆಗುತ್ತದೆಂಬ ನಂಬಿಕೆಯಿಂದ ತುಂಬ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಗಣಪತಿ ಫೋಟೋ ತೆಗೆಯಲು ಅನುಮತಿ ಇಲ್ಲ.

ಗರ್ಭಗುಡಿ ಚಿಕ್ಕದು. ಎರಡು ಮೂಡಿದ ವಿಗ್ರಹದ ಗಂಡಸ್ಥಳಗಳು, ಟೊಳ್ಳು ನಾಭೀ, ಎರಡು ಕೈ ಇಷ್ಟು ಮಾತ್ರ ಕಾಣುತ್ತವೆ. ಮೂರ್ತಿಯ ದೃಷ್ಟಿ ಕ್ಷಿತಿಜದ ಅಂಚಿನತ್ತ ಇದ್ದರೂ ವರ್ಷದಲ್ಲಿ ಎರಡೂ ಸಲ ಸೂರ್ಯ ಮೂಡುವ ಮತ್ತು ಕಂತುವ ವೇಳೆಗಳಲ್ಲಿ ಸೂರ್ಯ ಕಿರಣ ಈ ಮೂರ್ತಿಯ ಶಿರದ ಮೇಲೆ ಬೀಳುತ್ತದೆ.

  ದಿನಕ್ಕೆ ೫ ಕನ್ನಡ ಒಗಟುಗಳ ಕ್ವಿಜ್

ಸುತ್ತಣ ಪ್ರಾಕಾರ ಕಲ್ಲಿನದು. 1.2 ಕಿ.ಮೀ. ಉದ್ದವಾಗಿದೆ.

ಪುಲಿನ ಎಂದರೆ ಮರಳು. ಇಲ್ಲಿನ ದೇವಸ್ಥಾನ ಸಮುದ್ರ ತೀರದಲ್ಲಿರುವ ಮರಳು ಪ್ರದೇಶದಲ್ಲಿರುವುದರಿಂದ ಇದಕ್ಕೆ ಗಣಪತಿ-ಕುಳೆ ಎಂಬ ಹೆಸರು ಬಂದಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆ ಹೀಗಿದೆ. ಪರಶುರಾಮ ಗಣೇಶ ಭಕ್ತ. ಆರಾಧಿಸಿ ಆತನಿಂದ ಪರಶುವನ್ನು ಪಡೆದುಕೊಂಡು ದುಷ್ಟ ಕ್ಷತ್ರಿಯರನ್ನು ನಿರ್ನಾಮ ಮಾಡಿದ. ತನ್ನ ಉಪಾಸನೆಗಾಗಿ ಪóಶ್ಚಿಮ ಸಮುದ್ರವನ್ನು ಹಿಂದಕ್ಕೆ ತಳ್ಳಿ ಪರಶುರಾಮ ಕ್ಷೇತ್ರವನ್ನು ನಿರ್ಮಾಣ ಮಾಡಿದ. ಆ ಕ್ಡೇತ್ರಕ್ಕೆ ಬರಬೇಕೆಂದು ಗಣಪತಿಯನ್ನು ಪ್ರಾರ್ಥಿಸಿದ. ಗಣಪತಿ ಅಲ್ಲಿ ಬಂದು ನೆಲೆಸಿದ.

ಹಿಂದೆ ಬಿಜಾಪುರದಲ್ಲಿಯ ಬಾದಶಹರು ಈ ದೇವಸ್ಥಾನಕ್ಕೆ ಪ್ರತಿ ವರ್ಷ ಮುನ್ನೂರು ರೂಪಾಯಿಗಳ ಕಪ್ಪಕಾಣಿಕೆಗಳನ್ನು ನೀಡುತ್ತಿದ್ದರಂತೆ ; ಶಿವಾಜಿ ಮಹಾರಾಜ ಭೇಟಿ ನೀಡಿ ಅಲ್ಲಿ ನಿತ್ಯ ಪುರಾಣ ವಾಚನಕ್ಕಾಗಿ ವ್ಯವಸ್ಥೇ ಮಾಡಿಸಿದ್ದನಂತೆ. ಹರಭಟ್ ಪಟವರ್ಧನ್ ಈ ಪ್ರದೇಶದಲ್ಲಿ ಉಗ್ರ ತಪಸ್ಸು ಮಾಡಿ ಗಣಪತಿಯ ಆರಾಧನೆ ಮಾಡಿದರು. ಆ ವೇಳೆಯಲ್ಲಿ ಗಜಾನನ ಪ್ರತ್ಯಕ್ಷವಾಗಿ ಊರಿಗೆ ಹೋಗು ನಿನಗೆ ಭಾಗ್ಯೋದಯವಾಗುತ್ತದೆ ಎಂದು ಅಭಯ ನೀಡಿದನಂತೆ. ಅವರು ಊರಿಗೆ ಹಿಂತಿರುಗಿದರು. ಬಳಿಕ ಪೇಶ್ವೆಗಳ ಕಾಲದಲ್ಲಿ ಪಟವರ್ಧನ ಮನೆತನಗಳು ಅಭಿವೃದ್ಧಿಯಾದವು. ಅನಂತರ ಎಲ್ಲ ಪಟವರ್ಧನ ಸಂಸ್ಥಾನಿರೂ ಗಣಪನನ್ನು ತಮ್ಮ ಕುಲದೇವತೆಯೆಂದೂ ಪೇಶ್ವೆಗಳು ತಮ್ಮ ಇಷ್ಟದೇವರೆಂದೂ ಪರಿಗಣಿಸಿದರು. ಶ್ರೀಮಂತ ಮಾಧವರಾವ್ ಪೇಶ್ವೆ ಹಾಗೂ ಸೌ. ರಮಾಬಾಯಿ ಯಾನೀ ಅವರು ಈ ದೇವಾಲಯದ ಬಳಿಯಲ್ಲಿಯೆ ಧರ್ಮಶಾಲೆಯನ್ನು ಕಟ್ಟಿಸಿದರು. ಅಲ್ಲದೆ, ಪುರಾಣ ವಾಚನಕ್ಕಾಗಿ ಶಂಡೆಶಾಸ್ತ್ರಿಗಳಿಗೆ ಸನ್ನದು ಬರೆಸಿಯೂ ಇಟ್ಟರು. ಸರದಾರ ಗೋವಿಂದಪಂತ್ ಬುಂದೇಲ್ ಅವರು ಪ್ರದಕ್ಷಿಣೆಗಾಗಿ ಪ್ರಾಕಾರವನ್ನು ಕಟ್ಟಿಸಿದರು. ಇಂದಿಗೂ ಇಲ್ಲಿ ನಿತ್ಯಪೂಜೆ ಅನುಷ್ಠಾನ ನೈವೇದ್ಯ ಪುರಾಣವಾಚನ ಇವೇ ಮೊದಲಾದುವುಗಳೆಲ್ಲವೂ ವಿಧ್ಯುಕ್ತವಾಗಿ ನಡೆಯುತ್ತಿವೆ.

  ಪ್ರಜಾಕೀಯ ಪ್ರಜ್ಞಾವಂತರು ಗ್ರೂಪ್ - ಸೋಶಿಯಲ್ ಮೀಡಿಯಾ

ಪ್ರತಿ ಭಾದ್ರಪದ ಶುದ್ಧ ಪ್ರತಿಪದೆಯಿಂದ ಪಂಚಮಿಯವರೆಗೆ ಮತ್ತು ಮಾಘ ಶುದ್ಧ ಪ್ರತಿಪದೆಯಿಂದ ಪಂಚಮಿಯವರೆಗೆ ಉತ್ಸವಗಳಾಗುತ್ತವೆ. ಪ್ರತಿಯೊಂದು ಸಂಕಷ್ಟ ಚತುರ್ಥಿಯಂದು ವಿಶೇಷವಾಗಿ ಅಂಗಾರಕೀ ಚತುರ್ಥಿಯಂದು ಪೂಜೆ ಉತ್ಸವಗಳು ಸಂಭ್ರಮದಿಂದ ನಡೆಯುತ್ತವೆ.

Leave a Reply

Your email address will not be published. Required fields are marked *

Translate »