ಶ್ರೀ ಅನಂತಪದ್ಮನಾಭ ದೇವರು ಹೆಬ್ರಿಯ ಪ್ರಧಾನ ಗ್ರಾಮ ದೇವರು…!
ಉಡುಪಿ ಜಿಲ್ಲೆಯ, ಹೆಬ್ರಿ ಶ್ರೀ ಅನಂತಪದ್ಮನಾಭ ದೇವರು ಹೆಬ್ರಿಯ ಪ್ರಧಾನ ಗ್ರಾಮ ದೇವರು. ಸುಮಾರು 500 ಕ್ಕಿಂತ ಹೆಚ್ಚಿನ ವರ್ಷಗಳ ಇತಿಹಾಸ ಇರುವ ಈ ದೇವಾಲಯ ಆಗಮೋಕ್ತ ದೇವಾಲಯ. ಇಲ್ಲಿ ವರ್ಷಂಪ್ರತಿ ರಥೋತ್ಸವ ನಡೆಯುತ್ತದೆ.
ಇಲ್ಲಿ ರಾತ್ರಿ ರಥೋತ್ಸವ ಆದ ನಂತರ ರಥದಿಂದ ದೇವರನ್ನು ಇಳಿಸಬೇಕಾದರೆ ದೇವರ ದರ್ಶನ ಪಾತ್ರಿಗಳು ದರ್ಶನ ಸೇವೆಯೊಂದಿಗೆ ಅಲ್ಲಿಗೆ ಆಗಮಿಸುವ ವಿಶಿಷ್ಟ ಸಂಪ್ರದಾಯ ಇದೆ. ಪ್ರಾಯಶಃ ಉಡುಪಿ ಜಿಲ್ಲೆಯ ಆಗಮೋಕ್ತ ದೇವಾಲಯಗಳಲ್ಲಿ ಇಂತಹ ಸಂಪ್ರದಾಯ ಇರುವುದು ಕೇವಲ ಎರಡೇ ದೇವಸ್ಥಾನಗಳಲ್ಲಿ, ಒಂದು ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನ, ಇನ್ನೊಂದು ಮುದ್ರಾಡಿ ಗ್ರಾಮದ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ. ಆದರೆ ಈ ಸಂಪ್ರದಾಯ ನಿನ್ನೆ, ಮೊನ್ನೆ ಆರಂಭ ಆದದ್ದಲ್ಲ. ದೇವಾಲಯ ನಿರ್ಮಾಣ ಆಗಿ, ಉತ್ಸವ ಆರಂಭ ಆದ ಕಾಲದಿಂದ ಇದ್ದದ್ದಕ್ಕೆ ಮಾಹಿತಿ ಇದೆ. ಕನಿಷ್ಟ 500 ವರ್ಷಗಳ ಇತಿಹಾಸ ಇದೆ.
ಆಗಮೋಕ್ತ ದೇವಸ್ಥಾನವಾದ ಹೆಬ್ರಿ ಶ್ರೀ ಅನಂತಪದ್ಮನಾಭ..