ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕ್ಯಾಮೇನಹಳ್ಳಿಯ ಎದುರು ಮುಖದ ಆಂಜನೇಯ ಸ್ವಾಮಿ ದೇವಾಲಯ

ಎದುರು ಮುಖದ ಆಂಜನೇಯ ಸ್ವಾಮಿ ದೇವಾಲಯ..!

ಎಲ್ಲಾ ಆಂಜನೇಯನ ದೇಗುಲದಲ್ಲಿ ಆಂಜನೇಯನು ಎಡಕ್ಕೆ ತಿರುಗಿರುವುದನ್ನು ನಾವು ಕಾಣುತ್ತೇವೆ.

ಕೆಲವು ದೇಗುಲಗಳಲ್ಲಿ ಮಾತ್ರ ಎದುರು ಮುಖದಲ್ಲಿ ಆಂಜನೇಯನನ್ನು ನೋಡುತ್ತೇವೆ.

ಅಂತಹ ಒಂದು ದೇಗುಲವೇ

ತುಮಕೂರುಜಿಲ್ಲೆ ಕೊರಟಗೆರೆ ತಾಲ್ಲೂಕು ಕ್ಯಾಮೇನಹಳ್ಳಿಯ ಹನುಮನ ದೇಗುಲ .

ಇದನ್ನು #ಜನಮೇಜಯ ರಾಜನು 5000 ವರ್ಷಗಳ ಹಿಂದೆ ನಿರ್ಮಿಸಿದರು ಎಂದು ಐತಿಹ್ಯ ಹೇಳುತ್ತದೆ.

ಕಾಲಾಂತರದಲ್ಲಿ #ವಿಜಯನಗರ ಅರಸರು ಜೀರ್ಣೋದ್ದಾರ ಮಾಡಿಸಿದ್ದಾರೆ. ಈ ಸ್ಥಳವನ್ನು ಸ್ಕಾಂದ ಪುರಾಣದಲ್ಲಿ ಕಮನೀಯ ಕ್ಷೇತ್ರ ಎಂದು ಕರೆಯಲಾಗಿದೆ.

  ಹುಲಿಗಿ ಕ್ಷೇತ್ರದ ಮಾಹಿತಿ - ಶ್ರೀ ಹುಲಿಗೆಮ್ಮ ದೇವಿ

ಈ ಕ್ಷೇತ್ರದಲ್ಲಿ ಜಯ , ಮಂಗಳ, ಹಾಗೂ ಗರುಡಾಚಲ ಎಂಬ ಮೂರು ನದಿಗಳು ಸಂಗಮವಾಗುವುದರಿಂದ ಇದನ್ನು ಸಂಗಮ ಕ್ಷೇತ್ರ ಎಂದೂ ಕರೆಯುತ್ತಾರೆ. ಇಲ್ಲಿನ ಹನುಮನ ವಿಗ್ರಹಕ್ಕೆ ಹಲವು ವಿಶೇಷತೆಗಳಿವೆ.

ಇಲ್ಲಿ ಹನುಮನಿಗೆ ಮೀಸೆ ಇದೆ , ಸೊಂಟದಲ್ಲಿ ಕಿರುಗತ್ತಿ ಇದೆ ಹಾಗೂ ಎದುರುಮುಖ ಇದೆ ಹಾಗೂ ಹನುಮನ ಎಡಬಲದಲ್ಲಿ ಶಂಖಚಕ್ರಗಳಿವೆ. ಇಲ್ಲಿನ ವಿಗ್ರಹದಲ್ಲಿ ಹನುಮ, ಭೀಮ , ಮಧ್ವ ಮೂವರ ಅಂಶವೂ ಇದೆ ಎಂದು ಅಲ್ಲಿನ ಪುರೋಹಿತರು ತಿಳಿಸುತ್ತಾರೆ.ಪ್ರತಿವರ್ಷ ಫೆಬ್ರವರಿಯಲ್ಲಿ ಇಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆಯುತ್ತದೆ. ಇಲ್ಲೂ ಒಂದು ವಿಶೇಷತೆ ಇದೆ.

  ವಿಸ್ಮಯ ತುಂಬಿದ ಜೀವಜಗತ್ತು

ರಥೋತ್ಸವದ ದಿನ ರಥದ ಅಲಂಕಾರ ಎಲ್ಲಾ ಮುಗಿದ ಮೇಲೆ ಗರುಡವೊಂದು ಎಲ್ಲಿಂದಲೋ ಬಂದು ರಥಕ್ಕೆ ಒಂದು ಪ್ರದಕ್ಷಿಣೆ ಹಾಕುತ್ತದೆ ನಂತರವೇ ರಥವನ್ನು ಭಕ್ತಾದಿಗಳು ಎಳೆಯುತ್ತಾರೆ. ಇಲ್ಲಿ ಸೀತಾರಾಮರ ಸನ್ನಿಧಿಯೂ ಇದೆ.

ಕೊರಟಗೆರೆಯಿಂದ 8ಕಿಮೀ ಗೊರವನಹಳ್ಳಿಯಿಂದ 6ಕಿಮೀ ದೂರದಲ್ಲಿರುವ ಈ ಕ್ಯಾಮೇನಹಳ್ಳಿಗೆ ಭೇಟಿ ನೀಡಿ ನಿಮ್ಮ ಮನವಿಗಳನ್ನು ಆದೇವನಿಗೆ ಸಲ್ಲಿಸಿ. ಏಕೆಂದರೆ ಆತ ಭಕ್ತ ಪರಾಧೀನ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಎಂದು ಅಲ್ಲಿಗೆ ನಡೆದುಕೊಳ್ಳುವ ಸಾವಿರಾರು ಭಕ್ತರ ಅಭಿಪ್ರಾಯ.

Leave a Reply

Your email address will not be published. Required fields are marked *

Translate »