ಮಂತ್ರಾಲಯದ ಪಂಚಮುಖಿ ಆಂಜನೇಯ ದೇವಸ್ಥಾನ..!
ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನವು ಮಂತ್ರಾಲಯದಿಂದ 20 ಕಿಮೀ ದೂರದಲ್ಲಿರುವ ತುಂಗಭದ್ರಾ ನದಿಯ ಇನ್ನೊಂದು ಬದಿಯಲ್ಲಿದೆ. ಇದು ಕರ್ನಾಟಕದಲ್ಲಿರುವ ಪ್ರಮುಖ ಹಾಗೂ ಶಕ್ತಿಶಾಲಿ ಆಂಜನೇಯ ಸ್ವಾಮಿ ದೇವಾಲಯವಾಗಿದೆ. ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ತೆರಳುವ ಮೊದಲು 12 ವರ್ಷಗಳ ಕಾಲ ಈ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಧ್ಯಾನ ಮಾಡಿದ್ದರು ಎಂದು ಹೇಳಲಾಗುತ್ತದೆ. ನೀವು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬಂದಾಗ ಭೇಟಿ ನೀಡಲೇಬೇಕಾದ ಆಂಜನೇಯ ಸ್ವಾಮಿ ದೇವಾಲಯವಿದು.
ಗುರು ರಾಘವೇಂದ್ರರು ಪಂಚಮುಖಿ ಆಂಜನೇಯನಿಗಾಗಿ 12 ವರ್ಷಗಳ ಕಾಲ ಇಲ್ಲಿ ತಪಸ್ಸು ಮಾಡಿದರು ಎಂದು ಜನರು ಹೇಳುತ್ತಾರೆ. ಇಲ್ಲಿ ಆಂಜನೇಯನು ವರಾಹ, ಗರುಡ, ನರಸಿಂಹ, ಹಯಗ್ರೀವ ಮತ್ತು ಹನುಮಂತನಿಂದ ಕೂಡಿದ ಪಂಚಮುಖದೊಂದಿಗೆ ಅಂದರೆ 5 ಮುಖದೊಂದಿಗೆ ರಾಘವೇಂದ್ರ ಸ್ವಾಮಿಯ ಮುಂದೆ ಪ್ರತ್ಯಕ್ಷನಾದನು ಎಂದು. ರಾಘವೇಂದ್ರ ಸ್ವಾಮಿಗಳು ಹನುಮಂತನ ದರ್ಶನ ಪಡೆದ ಸ್ವಾಮಿಗಳು ಹಾಡಿ ಹೊಗಳಿದರು ಎಂದು ಪ್ರತೀತಿ..