ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು
ರಾಯರು ತಪಸ್ಸು ಮಾಡಿದ ಸ್ಥಳ- ಪಂಚಮುಖಿ
ಸತ್ಯಬೋಧರು ಜನಿಸಿದ ಸ್ಥಳ-ರಾಯಚೂರು
ವಿಜಯದಾಸರು ಜನಿಸಿದ ಸ್ಥಳ- ಚೀಕಲಪರವಿ
ವಿಜಯದಾಸರು ದೇಹತ್ಯಾಗ ಮಾಡಿದ ಸ್ಥಳ- ಚಿಪ್ಪಗಿರಿ
ಗೋಪಾಲದಾಸರು ಜನಿಸಿದ ಸ್ಥಳ- ಮೊಸರಕಲ್ಲು
ಜಗನ್ನಾಥ ದಾಸರು ಜನಿಸಿದ ಸ್ಥಳ-ಬ್ಯಾಗವಾಟ
ಶ್ಯಾಮಸುಂದರ ದಾಸರು ಜನಿಸಿದ ಸ್ಥಳ-ಕುರುಡಿ
ಸ್ವಯಂ ಉದ್ಭವ ಷೋಡಶಬಾಹು ನರಸಿಂಹ ದೇವರು-ಕೊಪ್ಪರ
ಕಾರ್ಪರ ಅಂಕಿತಸ್ಥರಾದ ಗಿರಿಯಾಚಾರ್ ಜನಿಸಿದ ಸ್ಥಳ-ಕೊಪ್ಪರ
ಲಕ್ಷ್ಮೀನಾರಯಣತೀರ್ಥರಿಗೆ ಶ್ರೀಪಾದರಾಜರು ಅನ್ನುವ ಶುಭನಾಮ ನೀಡಿದ ಸ್ಥಳ ಕೊಪ್ಪರ
ಶ್ರೀಕೃಷ್ಣದ್ವೈಯಪಾಯನತೀರ್ಥರ ಬೃಂದಾವನ-ಕುಸುಮೂರ್ತಿ
ಉತ್ತರಾದಿ ಮಠದ ಯತಿತ್ರಯರ ಬೃಂದಾವನ- ಆತಕೂರು
ಉತ್ತರಾದಿ ಮಠದ ಯತಿಗಳ ಬೃಂದಾವನ- ಕೊಲ್ ಪುರು
ರಾಯರ ಮಠದ ಯತಿಗಳ ಬೃಂದಾವನ- ಮುಡುಮಾಲ
ಗೋವಿಂದದಾಸರು ಜನಿಸಿದ ಸ್ಥಳ-ಅಸ್ಕಿಹಾಳ
ರಾಯರ ಮೂಲಬೃಂದಾವನ ಸ್ಥಳ ಮಂತ್ರಾಲಯ(ಈಗ ಆಂಧ್ರಪ್ರದೇಶದ ಆಡಳಿತದಲ್ಲಿದೆ)
ಉಪೇಂದ್ರತೀರ್ಥರು ಪ್ರತಿಷ್ಠಾಪಿತ ಪ್ರಾಣದೇವರು- ಕಾಡ್ಲೂರು
ವರದೇಶವಿಠಲರು ಜನಿಸಿದ ಸ್ಥಳ-ಲಿಂಗಸೂಗುರ್
ಗೊರೆಬಾಳ್ ಹನುಮಂತರಾಯರು ಜನಿಸಿದ ಸ್ಥಳ- ಗೊರೆಬಾಳ್
ಪ್ರಾಣೇಶದಾಸರು ಜನಿಸಿದ ಸ್ಥಳ- ಲಿಂಗಸೂಗುರ್
ಜಗನ್ನಾಥದಾಸರಿಗೆ ವೆಂಕಟರಮಣ ದರ್ಶನ ನೀಡಿದ ಸ್ಥಳ-ಬಾಗಲವಾಡ(ದ್ವಾರವಾಡ)
ಜಗನ್ನಾಥದಾಸರ ಸ್ಥಂಭ(ಇರುವ ಸ್ಥಳ) ಮಾನವಿ
ರಾಯರು ಚಾತುರ್ಮಾಸ್ಯಕ್ಕೆ ಕುಳಿತ ಸ್ಥಳ-ಮಾನವಿ(ಸಂಜೀವರಾಯ ಗುಡಿ)
ಸುವಿದ್ಯೇಂದ್ರ ತೀರ್ಥರು ಅವತರಿಸಿದ ಸ್ಥಳ- ಗಬ್ಬೂರು ಸಭೆ
ಶ್ರೀರಾಮ ಅಂಕಿತಸ್ಥರಾದ ಜೋಳದಹಡಗಿ ರಾಮದಾಸರು ಜನಿಸಿದ ಸ್ಥಳ- ದೇವದುರ್ಗ