ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ವಿಜಾಪುರ ಶ್ರೀ ಸಿದ್ದೇಶ್ವರ / ಸಿದ್ಧರಾಮೇಶ್ವರ

ವಿಜಾಪುರ ಶ್ರೀ ಸಿದ್ದೇಶ್ವರ..!

ಜಾತ್ರೆ
ವಿಜಾಪುರವು ವಿಶ್ವಗುರು ಬಸವಣ್ಣನವರ ಜನನದ ಜಿಲ್ಲೆಯಾಗಿ, ಸಂತ ಮಹಾತ್ಮರ ಪುಣ್ಯದ ಬೀಡಾಗಿ, ಕಲಾ ಸಾಹಿತಿಗಳ ಸಂಗಮವಾಗಿದೆ. ಇಲ್ಲಿಯ ಗೋಲಗುಮ್ಮಟ, ವಚನಗುಮ್ಮಟ ಹಾಗೂ ಜ್ಞಾನ ಯೋಗಾಶ್ರಮದ ಜ್ಞಾನಗುಮ್ಮಟ ಹೀಗೆ ತ್ರಿವೇಣಿ ಸಂಗಮವಾಗಿ, ಸಂಗೀತ ಸಾಹಿತ್ಯ ಸಂಸ್ಕೃತಿಯ ಬೀಡಾಗಿದೆ. ಇಂತಹ ವಿಜಾಪುರ ನಗರದಲ್ಲಿ ಪ್ರತಿವರ್ಷ ಮಕರ ಸಂಕ್ರಮಣ ಕಾಲದಲ್ಲಿ ಪ್ರಸಿದ್ಧ ಶ್ರೀ ಸಿದ್ಧರಾಮೇಶ್ವರ ಜಾತ್ರೆಯು ನಡೆಯುತ್ತದೆ.

ಸಿದ್ಧರಾಮೇಶ್ವರರ ಜನನ ಮತ್ತು ಇತಿಹಾಸ
೮೫೬ವರ್ಷಗಳ ಹಿಂದೆ ಸೊನ್ನೊಲಾಪುರದ ಸುಗ್ಗಲಾದೇವಿ- ಮುದ್ದಗೊಂಡ ದಂಪತಿಗಳ ಕಾರಣಿಕ ಶಿಶುವಾಗಿ ಹುಟ್ಟಿದ ಸಿದ್ಧರಾಮ, ಬಾಲ್ಯದಲ್ಲಿಯೇ ವಿಭಿನ್ನ ಸ್ವಭಾವವನ್ನು ಹೊಂದಿದ್ದರು. ಅವರು ಶಿವಲಿಂಗದ ಪೂಜೆಯಲ್ಲಿ ನಿರತರಾಗುತ್ತಿದ್ದರು. ಸದಾ ಭಾವ ಸಮಾಧಿಯಲ್ಲಿರುತ್ತಿದ್ದ ಇವರು ಜನರ ಕಣ್ಣಿಗೆ ಪೆದ್ದನಂತೆ ಕಾಣುತ್ತಿದ್ದರು.

  ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ! - ಗಾದೆ ಅರ್ಥ

ಅವರ ತಂದೆ-ತಾಯಿ ಅವರನ್ನು ದನ ಕಾಯಲು ಕಳುಹಿಸುತ್ತಿದ್ದರು. ಒಮ್ಮೆ ಹೊಲದಲ್ಲಿ ಇರುವಾಗ ಜಂಗಮ ಮೂರ್ತಿಯು ಪ್ರತ್ಯಕ್ಷನಾಗಿ, ಸದಾ ಧ್ಯಾನದಲ್ಲಿರುತ್ತಿದ್ದ ಸಿದ್ಧರಾಮನನ್ನು, ‘ಮನೆಗೆ ಹೋಗಿ ಅಂಬಲಿ ಮಜ್ಜಿಗೆ ತೆಗೆದುಕೊಂಡು ಬಾ’ ಎಂದರು. ಆಗ ಸಿದ್ಧರಾಮನು, ‘ನೀನು ಯಾರು’ ಎಂದು ಕೇಳಿದಾಗ, ‘ನಾನು ಶ್ರೀಶೈಲದ ಮಲ್ಲಯ್ಯ’ ಎಂದು ಹೇಳಿದರು. ಸಿದ್ಧರಾಮ ಓಡಿ ಹೋಗಿ ಅಂಬಲಿ ಮಜ್ಜಿಗೆ ತರುವಷ್ಟರಲ್ಲಿ ಮಲ್ಲಯ್ಯ ಅಲ್ಲಿ ಇರಲಿಲ್ಲ. ಆಗ ಅವರು ಮಲ್ಲಯ್ಯನನ್ನು ಹುಡುಕಲು ಆರಂಭಿಸಿದರು. ಆಗ ಅಲ್ಲಿದ್ದ ಯಾತ್ರಿಕರು, ‘ಮಲ್ಲಯ್ಯ ಇವನೇ’ ಎಂದು ಜ್ಯೋತಿರ್ಲಿಂಗವನ್ನು ತೋರಿಸಿದರು. ಆಗ ‘ಮಲ್ಲಯ್ಯ ಇವನಲ್ಲ, ನನಗೆ ಮಲ್ಲಯ್ಯ ಮೋಸ ಮಾಡಿದ. ಅವನು ಸಿಗುವ ತನಕ ನಾನು ಹೋಗುವುದಿಲ್ಲ’, ಎಂದು ಕಾಡಿನಲ್ಲೇ ಹುಡುಕಾಡಿ ಕೊನೆಗೆ ಶ್ರೀಶೈಲಗಿರಿಯ ಮೇಲೆ ಬಂದ ನಂತರ ರುದ್ರಗಮ್ಮರಿಗೆ (ಕೊಳವನ್ನು) ನೋಡಿ, ಅದರಲ್ಲಿ ಜಿಗಿದ. ನಂತರ ಎಚ್ಚರವಾದಾಗ ಸಿದ್ಧರಾಮನು ಮಲ್ಲಯ್ಯನ ತೊಡೆಯ ಮೇಲಿದ್ದ. ಆಗ ಮಲ್ಲಯ್ಯ ಹೇಳಿದ, ‘ನಾನು ನಿನಗೆ ಹುಟ್ಟಿಸಿದ್ದು ನನ್ನ ಜೊತೆ ಕಲ್ಲು, ಮರದಂತೆ ಬಾಳಲು ಅಲ್ಲ, ನಿನ್ನಿಂದ ಲೋಕಕಲ್ಯಾಣವಾಗಬೇಕಿದೆ! ದುಃಖಿತರ ದುಃಖ ನಿವಾರಣೆ ಆಗಬೇಕಾಗಿದೆ! ನೀನು ಸೊನ್ನಲಾಪುರಕ್ಕೆ ಹೋಗು, ಅದನ್ನೇ ಅಭಿನವ ಶ್ರೀಶೈಲವನ್ನಾಗಿ ಮಾಡು’ ಎಂದು ಹರಸಿ ಕಳುಹಿಸಿದರು.

  ಕರ್ಣನ ಕಥೆ

ಶಿವನ ಸಾಕ್ಷಾತ್ಕಾರವಾದ ನಂತರ ಸಿದ್ಧರಾಮ ಸೊನ್ನಲಾಪುರಕ್ಕೆ ಬಂದು, ಯೋಗದಂಡ ತ್ಯಜಿಸಿ ಗುದ್ದಲಿಯನ್ನು ಹೆಗಲ ಮೇಲೆ ಇಟ್ಟು ಸಹಸ್ರಾರು ಭಕ್ತರಿಗೆ ಬರಗಾಲವನ್ನು ದೂರಗೊಳಿಸಿದರು ಮತ್ತು ಸುತ್ತಮುತ್ತ ಗ್ರಾಮಗಳಿಗೆ ಕೆರೆಗಳನ್ನು ಕಟ್ಟಿಸಿದರು. ಸಿದ್ಧರಾಮೇಶ್ವರನ ಕೀರ್ತಿಗೆ ಬೆರಗಾಗಿ ಅಲ್ಲಿಗೆ ಅಲ್ಲಮರೂ ಬಂದು, ದೇಹದ ಒಳಗೆ ದೇವಾಲಯವಿದ್ದು ಮತ್ತೇಕೆ ಬೇರೆ ದೇವಾಲಯ ಎಂದು ಅವರಿಗೆ ಜ್ಞಾನೋದಯ ಮಾಡಿದರು. ತದನಂತರ ಅಲ್ಲಮರು ಕಲ್ಯಾಣಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅವರ ವಿಚಾರಗಳು ವಚನಗಳಾಗಿ ರೂಪುಗೊಂಡವು.

ಕಪಿಲಸಿದ್ದ ಮಲ್ಲಿಕಾರ್ಜುನ ಈ ಅಂಕಿತನಾಮದಿಂದ ಸಿದ್ದರಾಮ ೬೮ಸಾವಿರ ವಚನಗಳನ್ನು ರಚಿಸಿದರು.

  ರಥ ಸಪ್ತಮಿ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆ

Leave a Reply

Your email address will not be published. Required fields are marked *

Translate »