ಪ್ರತಿನಿತ್ಯದ ಪೂಜೆಯಲ್ಲಿ ಈ ನಿಯಮ ಪಾಲಿಸಿದರೆ ನಿಮಗೆ ಒಳ್ಳೆಯ ಫಲ ದೊರೆಯುತ್ತದೆ….!
ಪ್ರತಿ ಧರ್ಮದ ಜನರು ಪ್ರತಿದಿನ ತಮ್ಮ ದೇವರನ್ನು ಪೂಜಿಸುತ್ತಾರೆ. ಆದರೆ ಪ್ರತಿನಿತ್ಯದ ಪೂಜೆಗೆ ಒಂದು ಕ್ರಮವಿದೆ ಅದರಂತೆ ಪೂಜೆ ಮಾಡಿದರೆ ನಿಮಗೆ ಉತ್ತಮ ಫಲದೊರೆಯುತ್ತದೆ. ಇಲ್ಲವಾದರೆ ಇದರಿಂದ ನಿಮ್ಮ ಇಷ್ಟಾರ್ಥಗಳು ಪೂರ್ತಿಯಾಗುವುದಿಲ್ಲ ಮತ್ತು ಆ ಪೂಜೆ ಅಪೂರ್ಣವೆನಿಸುತ್ತದೆ. ಹಾಗಾಗಿ ಪ್ರತಿನಿತ್ಯದ ಪೂಜೆಯಲ್ಲಿ ಈ ನಿಯಮಗಳನ್ನು ಪಾಲಿಸಿ.
👉 ದೇವರ ಪೂಜೆ ಮಾಡುವಾಗ ಮನಸ್ಸು, ಶಾಂತ ಮತ್ತು ಸಂತೋಷವಾಗಿರಬೇಕು. ನಿಮ್ಮ ಆಲೋಚನೆಗಳು ಸಕರಾತ್ಮಕವಾಗಿರಬೇಕು.
👉 ದೈನಂದಿನ ಪೂಜೆಗೆ ಸರಿಯಾದ ಸಮಯವನ್ನು ನಿಗದಿಪಡಿಸಿ, ಪ್ರತಿದಿನ ಅದೇ ಸಮಯದಲ್ಲಿ ಪೂಜೆ ಮಾಡಿ. ಇದರಿಂದ ದೇವರ ಅನುಗ್ರಹ ದೊರೆಯುತ್ತದೆ.
👉 ಯಾವಾಗಲೂ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ ನೆಲದ ಮೇಲೆ ಆಸನ ಹಾಕಿ ಅದರ ಮೇಲೆ ಕುಳಿತುಕೊಂಡು ದೇವರಿಗೆ ಪೂಜೆ ಸಲ್ಲಿಸಿ.
👉 ದೇವರಿಗೆ ಪೂಜೆ ಮಾಡುವಾಗ ನಿಮ್ಮ ಮುಖ ಪೂರ್ವ ಅಥವಾ ಉತ್ತರ ಅಥವಾ ಈಶಾನ್ಯ ದಿಕ್ಕಿನ ಕಡೆಗೆ ಇರಬೇಕು. ಹಾಗೇ ಶ್ರೀಗಂಧವನ್ನು ತಾಮ್ರದ ಪಾತ್ರೆಯಲ್ಲಿಟ್ಟು ಪೂಜೆ ಮಾಡಬೇಡಿ.
👉 ದೇವರಿಗೆಂದು ಬೆಳಗುವ ದೀಪದ ಕೆಳಗೆ ಅಕ್ಕಿಯನ್ನು ಇಡಿ. ಪೂಜೆಯ ಬಳಿಕ ನೀವು ಕುಳಿತುಕೊಳ್ಳುವ ಆಸನದ ಕಡೆಗೆ 2 ಹನಿ ನೀರನ್ನು ಹಾಕಿ ಅದನ್ನು ಹಣೆಗೆ ಹಚ್ಚಿಕೊಂಡು ಎದ್ದೇಳಿ. ಇದರಿಂದ ಇಂದ್ರದೇವನ ಅನುಗ್ರಹ ಸಿಗುತ್ತದೆಯಂತೆ.
👉 ಪೂಜೆ ಮಾಡುವಾಗ ಬೆಳಿಗ್ಗೆ ಮತ್ತು ಸಂಜೆ ಆರತಿ ಬೆಳಗಿ. ಆರತಿಯನ್ನು ದೇವರ ಮುಂದೆ 7 ಬಾರಿ ದೇವರ ಪಾದಗಳಿಗೆ 4 ಬಾರಿ ಮತ್ತು ಹೊಕ್ಕುಳ ಕಡೆಗೆ 2 ಬಾರಿ ಅಂತಿಮವಾಗಿ ಮುಖದ ಕಡೆಗೆ ಒಂದು ಬಾರಿ ಮಾಡಿ