ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರದಕ್ಷಿಣೆ ನಮಸ್ಕಾರದ ಮಹತ್ವ

ಪ್ರದಕ್ಷಿಣೆ ನಮಸ್ಕಾರದ ಮಹತ್ವ..!

ಹೆಣ್ಣುಮಕ್ಕಳಿಗೆ ಪಂಚಾಂಗ ನಮಸ್ಕಾರ , ಗಂಡುಮಕ್ಕಳು ಉದ್ದಂಡ ನಮಸ್ಕಾರ..
ಪ್ರದಕ್ಷಿಣೆಗೆ ಕೂಡಾ ತನ್ನದೆ ಆದ ಮಹತ್ವವಿದೆ
ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ. ಪುರಾಣಗಳಲ್ಲಿ ಗಣೇಶನಿಗೆ ಒಂದು ಪ್ರದಕ್ಷಿಣೆ,ಸೂರ್ಯನಿಗೆ ಎರಡು,ಈಶ್ವರನಿಗೆ ಮೂರು,ಶಕ್ತಿದೇವತೆಗಳಿಗೆ,ವಿಷ್ಣುವಿಗೆ ನಾಲ್ಕು,ಅಶ್ವತ್ಥವೃಕ್ಷಕ್ಕೆ ಏಳು ಪ್ರದಕ್ಷಿಣೆಗಳನ್ನು ಮಾಡಬೇಕೆಂದು ಹೇಳಲಾಗಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

  ನವ ವಧು ವರರು ಆಷಾಢದಲ್ಲಿ ಒಟ್ಟಿಗಿರುವಂತಿಲ್ಲ ಯಾಕೆ ..?

ಸಾಷ್ಟಾಂಗ ನಮಸ್ಕಾರ ಮಾಡುವ ವಿಧಾನ

ಮೊದಲು ಎರಡೂ ಕೈಗಳನ್ನು ಎದೆಯ ಸಮೀಪ ಜೋಡಿಸಬೇಕು (ನಮಸ್ಕಾರದ ಮುದ್ರೆಯಂತೆ). ನಂತರ ಸೊಂಟ ಬಗ್ಗಿಸಬೇಕು, ನಂತರ ಎರಡೂ ಅಂಗೈಗಳನ್ನು ನೆಲದ ಮೇಲಿಡಬೇಕು, ಮೊದಲು ಬಲಗಾಲನ್ನು, ಆಮೇಲೆ ಎಡಗಾಲನ್ನು ಹಿಂದಕ್ಕೆ ಸರಿಸಿ ಎರಡೂ ಕಾಲುಗಳನ್ನು ನೇರವಾಗಿ ಉದ್ದ ಮಾಡಬೇಕು.
ಕೈಗಳನ್ನು ಮಡಚಿ ತಲೆ, ಎದೆ, ಅಂಗೈ, ಮೊಣಕಾಲು ಮತ್ತು ಕಾಲುಗಳ ಬೆರಳುಗಳು ನೆಲಕ್ಕೆ ತಾಗುವಂತೆ ಮಲಗಬೇಕು ಹಾಗೂ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು.
ಮನಸ್ಸಿನಿಂದ ನಮಸ್ಕರಿಸಬೇಕು ಮತ್ತು ಬಾಯಿಯಿಂದ ‘ನಮಸ್ಕಾರ’ ಎಂದು ಹೇಳಬೇಕು.
ಎದ್ದುನಿಂತು ಎರಡೂ ಕೈಗಳನ್ನು ಅನಾಹತಚಕ್ರದ ಬಳಿ (ಎದೆಯ ಮೇಲೆ) ಜೋಡಿಸಿ ಶರಣಾಗತ ಭಾವದಿಂದ ನಮಸ್ಕಾರ ಮಾಡಬೇಕು.
ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

  ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವವೇನು ?

ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||
ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.
ಗುರುಗಳಿಗೆ 🙏

Leave a Reply

Your email address will not be published. Required fields are marked *

Translate »