ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪುತ್ತೂರಿನ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸಂಬಂಧ ಪಟ್ಟ ನಾಲ್ಕು ದುರ್ಗಾದೇವಿ ದೇವಸ್ಥಾನಗಳಲ್ಲಿ ಇದೂ ಒಂದು. ಉಡುಪಿ ಪುತ್ತೂರಿನ ಭಗವತೀ ದುರ್ಗಾಪರಮೇಶ್ವರಿ ದೇವಸ್ಥಾನ.

ಪರಶುರಾಮ ಈ ದೇವಸ್ಥಾನವನ್ನು ನಿರ್ಮಿಸಿದ ಎನ್ನುತ್ತಾರೆ. 13ನೇ ಶತಮಾನದ್ದಿರಬಹುದು ಎಂದು ಕೆಲವರು ಗುರುತಿಸುತ್ತಾರೆ. ಮೂಲದಲ್ಲಿ ದುರ್ಗೆ ಉದ್ಭವ ಮೂರ್ತಿ. ಕಡೆಯುವ ಕಲ್ಲಿನ ರೂಪದಲ್ಲಿದ್ದಾಳೆ ಎನ್ನುತ್ತಾರೆ. ಅದಕ್ಕೊಂದು ಕಥೆಯೂ ಇದೆ. ಹೂವಿನ ಅಲಂಕರಾರದಲ್ಲಿ ನಾವು ಮುಚ್ಚಿದ ಬಿಂಬವನ್ನಷ್ಟೇ ನೋಡುತ್ತೇವೆ. ಅದೂ ಬಹಳ ಆಕರ್ಷಕ ರೂಪ.

ಬೆಳ್ಳಂಬೆಳಿಗ್ಗೆ ಸುತ್ತಾಡುವ ನನ್ನ ಭಾಗ್ಯವೆಂದರೆ, ಹೆಚ್ಚಿನ ದೇವಸ್ಥಾನಗಳಲ್ಲಿ ನಾನು ಹೋಗುವ ಹೊತ್ತಿಗೆ ಅಲಂಕಾರಕ್ಕೆ ಅಣಿಯಾಗುತ್ತಾರಷ್ಟೆ. ಹಾಗಾಗಿ ಅನೇಕ ಕಡೆ ಮೂಲ ವಿಗ್ರಹಗಳನ್ನು ನೋಡಲು ಸಾಧ್ಯವಾಗುತ್ತಿದೆ. ನೂರಾರು ವರ್ಷಗಳಿಂದ ಲಕ್ಷ, ಕೋಟಿ ಭಕ್ತರ ಭಕ್ತಿಗೆ, ನಂಬಿಕೆಗೆ ಕಾರಣವಾದ ರೂಪವನ್ನು ನೋಡುವುದೆಂದರೆ ನನಗೆ ಕುತೂಹಲ.

  ಜಗತ್ತಿನಲ್ಲಿರುವ 5 ತುಂಬಲಾಗದ ಕೊಡಗಳು ಯಾವುವು ಗೊತ್ತೇ ?

ಎತ್ತರದಿಂದ ಮೆಟ್ಟಿಲಿಳಿದು ದೇವಸ್ಥಾನ ಪ್ರವೇಶಿಸುವಾಗ ವಿಭಿನ್ನ ಅನುಭವ ನಮ್ಮದಾಗುತ್ತದೆ. ಆರೇಳು ವರ್ಷದ ಹಿಂದೆ ಜೀರ್ಣೋದ್ಧಾರವಾಗಿದೆ. ಹಳತರ ನೋಟವಿಲ್ಲದಿದ್ದರೂ ಹೊಸತು ಬಹಳ ಅಚ್ಚುಕಟ್ಟಾಗಿದೆ. ಹೊರಗಿನ ಅಂಗಳವಾಗಲೀ, ಒಳಗಿನ ಸುತ್ತುಪೌಳಿಯಲ್ಲಾಗಲೀ ನಡೆಯುವಾಗ ಮನಸ್ಸು ಪ್ರಶಾಂತ.

ಬಾವಿಯಿಂದ ತಾಮ್ರದ ಕೊಡಪಾನದಲ್ಲಿ ನೀರನ್ನೆಳೆದು, ತಲೆಗೆ ಸುರಿದು ಸ್ನಾನ ಮಾಡಿ, ಯುವ ಅರ್ಚಕರು ಗಂಧದ ಕೊರಡನ್ನು ಉಜ್ಜಿ ಗಂಧ ತೆಗೆದು, ಗಣಪತಿ ಮತ್ತು ವೀರಭದ್ರ ಮೂರ್ತಿಗೆ ಜಳಕ‌ಮಾಡಿ ಸಿಂಗರಿಸಿದರೆ, ಹಿರಿಯರು, ಸಂಧ್ಯಾವಂದನೆ ಮುಗಿಸಿ ಗರ್ಭಗುಡಿ ಪ್ರವೇಶಿಸಿ, ಹಿಂದಿನ ದಿನದ ಅಲಂಕಾರ, ದೇವಿಯ ಮುಖ ಬಿಂಬ ಸರಿಸಿ, ಮೂಲ ದುರ್ಗೆಗೆ ಅಭಿಷೇಕ ಮಾಡಿ, ಶುಚಿಗೊಳಿಸಿ, ಅಲಂಕಾರ ಮಾಡುವ ದೃಶ್ಯ ಖುಷಿಕೊಟ್ಟಿತು. ತುಸು ದೂರ ಗದ್ದೆಗಳ ಅಂಚಿಗೆ ಬಾವಿಯಾಕಾರದ ಕೆರೆ ಇದೆ. ಬಹಳ ಸುಂದರವಾಗಿದೆ.

  ಚಾಂದ್ರಮಾನ ಯುಗಾದಿ ಹಬ್ಬ ಇತಿಹಾಸ ಮತ್ತು ಆಚರಣೆ ಮತ್ತು ವೈಜ್ಞಾನಿಕ ವಿಶ್ಲೇಷಣೆ

ಉಡುಪಿಯಿಂದ ಐದು ಕಿ.ಮೀ ದೂರದಲ್ಲಿರುವ ಈ ದೇವಸ್ಥಾನಕ್ಕೆ ಕೃಷ್ಣಮಠದ ಪರ್ಯಾಯ ಸ್ವೀಕರಿಸುವ ಮೊದಲು ಮಠಾಧಿಪತಿಗಳು ಇಲ್ಲಿ ಆಗಮಿಸಲೇ ಬೇಕೆಂಬ ನಿಯಮವಿದೆ.

Leave a Reply

Your email address will not be published. Required fields are marked *

Translate »