ರಾಮಾಯಣವನ್ನು ಮಹಾಕಾವ್ಯ, ಪುರಾಣ , ನಮ್ಮ ಇತಿಹಾಸ. ವಾಲ್ಮೀಕಿ ಮಹರ್ಷಿಗಳು ಒಂದೇ ಸ್ಥಳದಲ್ಲಿ ಇದ್ದು ಇಡೀ ಅಖಂಡ ಭಾರತದ ಪ್ರತಿಯೊಂದು ಸ್ಥಳ ಅಲ್ಲಿನ ಸ್ಥಳ ಇತಿಹಾಸ, ಅಲ್ಲಿನ ವಾತಾವರಣ, ಬೆಟ್ಟಗುಡ್ಡ- ಪರ್ವತ, ಪ್ರಕೃತಿ ಸೌಂದರ್ಯ, ಕೆಲವು ಸ್ಥಳಗಳಲ್ಲೆ ಬೆಳೆಯುವ ಗಿಡ ಮರಗಳ ವಿವರಣೆ, ಸರೋವರ, ನದಿ-ಸಮುದ್ರಗಳ ವಿವರಣೆ ಈ ರೀತಿ ಪ್ರತಿಯೊಂದ ಕರಾರುವಕ್ಕಾಗಿ ಬರೆದು ನಮ್ಮ ಭರತವರ್ಷದ ಮಹಾನ್ ಸಂಸ್ಕೃತಿಯನ್ನು ಪಸರಿಸಿದ ಆ ಮಹಾನ್ ಮಹರ್ಷಿ ವಾಲ್ಮೀಕಿ ರವರಿಗೆ ಎಂತಹ ಆಗಾದ ಆಧ್ಯಾತ್ಮಿಕ ತಪಸ್ ಶಕ್ತಿ ! ಇಂತಹ ಶ್ರೇಷ್ಠ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿ 24 ಅಕ್ಟೋಬರ್.
ಪ್ರಪಂಚಕ್ಕೆ ರಾಮಾಯಣ ಎಂಬ ಮಹಾಕಾವ್ಯದ ಮೂಲಕ ತ್ರೇತಾಯುಗದ ಇತಿಹಾಸ ತಿಳಿಸಿದ ಮತ್ತು ಪ್ರಥಮವಾಗಿ ಶ್ಲೋಕ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಋಷಿಯ ಜನ್ಮ ದಿನದ ಶುಭಾಶಯಗಳು, ವಾಲ್ಮೀಕಿ ಮಹರ್ಷಿಗಳನ್ನು ಆದಿಕವಿ ಎಂದು ಕರೆಯಲಾಗಿದೆ.
ಶ್ರೀ ವಾಲ್ಮೀಕಿ ಮಹರ್ಷಿಗಳ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತರಾಗಿದ್ದರು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದರು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವರು ನಾರದನನ್ನು ದರೋಡೆ ಮಾಡಲು ಯತ್ನಿಸಿದರು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತು.
ನಾರದ ಮುನಿಗಳ ಆದೇಶದಂತೆ ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು.
ರಾಮಾಯಣ ರಚನೆಗೆ ಪ್ರೇರಣೆ ಪ್ರಪಂಚದ ಮೊಟ್ಟಮೊದಲ ಮಹರ್ಷಿಗಳ ಬಾಯಿಂದ ಬಂದ ಈ ಸಂಸ್ಕೃತ ಶ್ಲೋಕ.
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.
ಈ ಶ್ಲೋಕದ ಅರ್ಥ ಹೀಗಿದೆ :
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಸಂಸ್ಕೃತ ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.
ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಇತಿಹಾಸ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.
ಮಹಾಕಾವ್ಯ ರಾಮಾಯಣ ಇತಿಹಾಸವು ಇಂದಿಗೂ ಪಾಶ್ಚಾತ್ಯರ ದೃಷ್ಟಿಯಲ್ಲಿ ಆದರ್ಶ ಕಾವ್ಯವಾಗಿದೆ. ಪ್ರಪಂಚದಲ್ಲಿರುವ ಅನೇಕ ಭಾಷೆಗಳಲ್ಲಿ ರಾಮಾಯಣ ಗ್ರಂಥ ಹೊರಬಂದಿದೆ. ಹಾಗೂ ರಾಮಾಯಣವು ಭರತಖಂಡದಲ್ಲಿ ಜನ್ಮತಾಳಿದರೂ, ವಿಶ್ವಮಾನ್ಯತೆ ಪಡೆದಿದೆ. ಆದ್ದರಿಂದ ಇಂದಿಗೂ ಮಲೇಷಿಯಾದ ರಾಷ್ಟ್ರಾಧ್ಯಕ್ಷರು “ಸೆರಿಪಾದುಕಾಧೂಲಿಯ ಮೇಲೆ” ಅಂದರೇ ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿಯೇ ಅಧಿಕಾರ ಸ್ವಿಕರಿಸುತ್ತಾರೆ. ಇನ್ನೂ ಥಾಯ್ಲೆಂಡಿನ ರಾಜವಂಶದಲ್ಲಿ ರಾಜರುಗಳಿಗೆ “ರಾಮ” ಎಂದೇ ಗೌರವದಿಂದ ಕಾಣುತ್ತಾರೆ. ಹಾಗೂ ಈ ವಾಲ್ಮೀಕಿ ರಾಮಾಯಣವನ್ನು ಆಧರಿಸಿಕೊಂಡು ಹೋರಬಂದಿರುವ ಅನೇಕ ಪದ್ಯ, ಪ್ರಬಂಧಗಳು, ಕಾವ್ಯಗಳು, ನಾಟಕಗಳು, ಗ್ರಂಥಗಳು, ಹಾಗೂ ಮುಂತಾದ ನಾನಾ ವಿಧದ ಕಾವ್ಯ ಕೃತಿಗಳಿಗೆ ವಾಲ್ಮೀಕಿ ರಾಮಾಯಣ ಜನ್ಮದಾತೆಯಾಗಿದೆ. ಹಾಗೂ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು “ಧರ್ಮ ಮಾರ್ಗದಲ್ಲಿ ಧಾರ್ಮಿಕ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ದಾರಿ ದೀಪವಾಗಿ, ಜ್ಞಾನದ ದಾರಿ ತೋರಿಸುತ್ತಿದೆ” ಎಂಬುದು ನಿತ್ಯ ಸತ್ಯ.
ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ರಾಮಾಯಣಕ್ಕೆ ಒಂದು ವಿಶೇಷ ಸ್ಥಾನವನ್ನು ಒದಗಿಸಿದ ಶ್ರೇಯಸ್ಸು ಆದಿಕವಿ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆ. ಹಾಗೂ ವಾಲ್ಮೀಕಿ ಮಹರ್ಷಿಯು ಒಂದು ರೀತಿಯಲ್ಲಿ ಸರ್ವತೋಮುಖಿ ಚಿಂತಕ, ಚರಿತ್ರೆಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿ ತಜ್ಞ, ತತ್ವ ಜ್ಞಾನಿ ಹಾಗೂ ಆದಿಕವಿಯಾಗಿ ಬಹು ವೈವಿಧ್ಯಮಯವಾಗಿ ಜನರ ಮನಸೊರೆಗೊಂಡಿದ್ದಾರೆ. ಇಂತಹ ಮಹಾನ್ ಮಹರ್ಷಿಯ ಹೆಸರು ಜಗತ್ತಿಗೆ ಪರಿಚಯವಾದದ್ದು, ರಾಮಾಯಣ ಕಾವ್ಯದ ಮೂಲಕ. ಆದ್ದರಿಂದ ನಾವು ವಾಲ್ಮೀಕಿ ಮಹರ್ಷಿಯನ್ನು ಸಾಧಕ ಗುಣದವರು ಎಂದು ಹೇಳಬಹುದು. ಕಾರಣ ವಾಲ್ಮೀಕಿ ಮಹರ್ಷಿ ಕಾಡಿನಲ್ಲಿ ಅರಳಿದ ಸುಗಂಧ ಪುಷ್ಪ . ಶ್ರೇಷ್ಠ ಆದಿಕವಿ ರಚಿಸಿದ ರಾಮಾಯಣ ಇತಿಹಾಸವನ್ನು ಜೀವನದಲ್ಲಿ ಒಮ್ಮೆಯಾದರೆ ಓದಲೇ ಇಲ್ಲ ಅಂದರೆ ಹಿಂದೂಸ್ಥಾನ್ ದಲ್ಲಿ ಹುಟ್ಟಿ ಪ್ರಯೋಜನವಿಲ್ಲ.
ಇನ್ನು ನಾವು ಕನ್ನಡದವರಾಗಿ ಹೆಮ್ಮೆ ಪಡುವಂತ ವಿಚಾರವೆಂದರೆ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಮೂಲನೆಲೆ ಕರ್ನಾಟಕದ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಆವಣಿ ಎಂಬ ಇತಿಹಾಸ ಪ್ರಸಿದ್ಧ ಸ್ಥಳ
ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ಕರ್ನಾಟಕದ ಇತರೆ ಪ್ರದೇಶಗಳು : ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ಋಷಿಮುಖ ಪರ್ವತ, ಆಂಜನೇಯಸ್ವಾಮಿ ಹುಟ್ಟಿದ ಸ್ಥಳ ಅಂಜನಾಪರ್ವತ,
ಇಂತಹ ಶ್ರೇಷ್ಠ ಮಹಾಕಾವ್ಯ ಶ್ಲೋಕ ದ ಮೂಲಕ ಇತಿಹಾಸವನ್ನು ನಮಗೆ ಕೊಟ್ಟ ಶ್ರೀ ವಾಲ್ಮೀಕಿ ಮಹರ್ಷಿಗಳ ಪಾದ ಚರಣಗಳಿಗೆ ಅನಂತ ಕೋಟಿ ಸಾಷ್ಟಾಂಗ ಪ್ರಣಾಮಗಳು.
ನಮೋ ನಮಃ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ.
ಜೈ ಹಿಂದ್