ರಥ ಸಪ್ತಮೀ
ಪ್ರತೀ ಹೆಣ್ಣು ಮಕ್ಕಳು ಮಾಡಲೇ ಬೇಕಾದ ವೃತ ಇದು ..
ರಥ ಸಪ್ತಮೀ ದಿನ ತೀರ್ಥ ಸ್ನಾನಕ್ಕೆ ಬಹಳ ಮಹತ್ವವಿದೆ . ಆದಿನ ಎಲ್ಲಿಯೂ ತೀರ್ಥಸ್ನಾನಕ್ಕೆ ಹೋಗಲು ಅನಕೂಲವಾಗದಿದ್ದರೆ ಮನೆಯಲ್ಲೇ ಸ್ನಾನದ ವಿಧಿಯನ್ನು ಮಾಡಿ …
ಸ್ನಾನದ ವಿಧಿ
ಸಂಕಲ್ಪ….
ಮಮ ಇಹ ಜನ್ಮನಿ ಜನ್ಮಾಂತರೇ ಚ ಸಪ್ತವಿಧವಾಪಕ್ಷಯಾರ್ಥಂ ತೀರ್ಥ ಸ್ನಾನಂ ಕರಿಷ್ಯೇ.
ಈ ಶ್ಲೋಕವನ್ನು ಹೇಳಿ …
ಯದ್ಯಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು l
ತನ್ಮೇ ಶೋಕಂ ಚ ರೋಗಂ ಚ ಮಾಕರೀ ಹಂತು ಸಪ್ತಮೀll
ಏತ ಜನ್ಮಕೃತಂ ಪಾಪಂ ಯಚ್ಚಜನ್ಮಾಂತರಾರ್ಜಿತಮ್ l
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತಂ ಚ ಯತ ಪುನಃll
ಇತಿ ಸಪ್ತವಿದಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ l
ಸಪ್ತವ್ಯಾಧಿ ಸಮಾಯುಕ್ತಂ ಹರಮಾಕರಿ ಸಪ್ತಮಿ ll
ಒಂದು ಯಕ್ಕದ ಎಲೆಯನ್ನು ತಲೆಯಮೇಲಿಟ್ಟುಕೊಂಡು ತಲೆಸ್ನಾನ ಮಾಡಬೇಕು … ನಂತರ ಯಥಾ ಶಕ್ತಿ ಯಿಂದು ಒಂದು ಮಣೆ ಮೇಲೆ ಸೂರ್ಯ ರಥದಲ್ಲಿರುವಂತೆ ರಂಗವಲ್ಲಿಹಾಕಿ …..ಪ್ರಾರ್ಥನೆ ಮಾಡಿಕೊಳ್ಳಬೇಕು ..
ಜನನಿ ಸರ್ಮ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll
ನಂತರ ಗಂಧ ಅಕ್ಷತೆ ಹೂವುಗಳಿಂದ ಪೂಜಿಸಿ ನಮಸ್ಕಾರಮಾಡಿ,
ನಮಃ ಸವಿತ್ರೇ ಜಗದೇಕ ಚಕ್ಷುಷೇ ಜಗತ್ ಪ್ರಸೂತಿಸ್ಥಿತಿ ನಾಶಹೇತವೇ lತ್ರಯಾಮಯಾಯ ತ್ರಿಗುಣಾತ್ಮ ಧಾರಿಣೆ
ವಿರಿಂಚಿನಾರಾಯಣ ಶಂಕರಾತ್ಮನೇ ll
ಸೂರ್ಯ ನಿಗೆ ಹನ್ನೇರಡು ಅರ್ಘ್ಯವನ್ನು ಕೊಡಬೇಕು ..
ಮಿತ್ರಾಯನಮಃ ಇದಮರ್ಘ್ಯಂ ದತ್ತಂ ನಮಮ ರವಯೇ ನಮಃ ಸೂರ್ಯಾಯ ನಮಃ ಭಾನವೇ ನಮಃ ಖಗಾಯ ನಮಃ ಪೂಷ್ಣೇ ನಮಃ ಹಿರಣ್ಯಗರ್ಭಾಯ ನಮಃ ಮರೀಚಯೇ ನಮಃ ಆದಿತ್ಯಾಯ ನಮಃ ಸವಿತ್ರೇ ನಮಃ ಅರ್ಕಾಯ ನಮಃ ಭಾಸ್ಕರಾಯ ನಮಃ ಇದಮರ್ಘ್ಯಂ ದತ್ತಂ ನಮಮ
ನಂತರ ಇದ್ದಿಲುಒಲೆ ಇಟ್ಟು ರಂಗವಲ್ಲಿಹಾಕಿ ಇದ್ದಿಲು ಹಾಕಿ ಹಚ್ಚಿ ಅದಕ್ಕೆ ಅರಿಷಿಣ ಕುಂಕುಮ ಎರಿಸಿ ಪೂಜಿಸಿ ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವಿದ್ಯ ಮಾಡಿದಲ್ಲಿ ಖಂಡಿತ ನೌಮ್ಮ ದಾರಿದ್ರ್ಯ ಹೋಗುತ್ತದೆ….
ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!