ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಶ್ರೀರಾಮ ನಾಮದಿಂದ ಸಂಪೂರ್ಣ ಶರಣಾಗತಿ

ಶ್ರೀ. ರಾಮ ನಾಮದಿಂದ ಸಂಪೂರ್ಣ ಶರಣಾಗತಿ – प्रेम मुदित मनसे कहो राम राम राम॥

ಶ್ರೀರಾಮ ಕೋಟಿ ಎಂಬುದು ಶ್ರೀರಾಮನ ಪ್ರಸಾದವೇ ಆಗಿದ್ದು ರಾಮನಾಮ ಜಪ ಮತ್ತು ನಾಮಾವಳಿಯಲ್ಲಿನ ನಾಮ ಸಂಕೀರ್ತನೆಯಾಗಿದೆ.

ಶ್ರೀರಾಮ ನಾಮವನ್ನು ಬರೆಯುವುದಕ್ಕೆ ಲಿಖಿತ ಜಪವನ್ನುತ್ತಾರೆ. ಇದು ಸಂಪೂರ್ಣ ಶರಣಾಗತಿಯ ಭಾವನೆಯನ್ನು ಮನದಲ್ಲಿ ತುಂಬುತ್ತದೆ.

ರಾಮನಾಮವನ್ನು ಯಾವುದೇ ಭಾಷೆಯಲ್ಲಿಯಾದರೂ ಬರೆಯಬಹುದು. ಇದು ಜೀವಾತ್ಮ ಮತ್ತು ಪರಮಾತ್ಮನೊಂದಿಗೆ ಸೇರಿಸುವ ತಂತುವಾಗಿದೆ.

ಹಿಂದಿನ ಕಾಲಗಳಲ್ಲಿ ಶ್ರೀ ರಾಮನಾಮವನ್ನು ಪುಸ್ತಕದಲ್ಲಿ ಬರೆದು, ಅವುಗಳನ್ನು ದೇವಾಲಯಗಳ ನಿರ್ಮಾಣ ಸಂದರ್ಭಗಳಲ್ಲಿ ತಳಪಾಯಲಗಳಲ್ಲಿ ಇಟ್ಟು ದೇವಾಲಯಗಳನ್ನು ಕಟ್ಟುತ್ತಿದ್ದರು. ಇದರಿಂದ ದೇವಾಲಯಗಳಿಗೆ ಮತ್ತಷ್ಟು ದಿವ್ಯತೆ ಮತ್ತು ಭದ್ರತೆಯನ್ನು ಕೊಡುತ್ತವೆಂಬುದಾಗಿ ತಿಳಿಯುತ್ತಿದ್ದರು.

  ರಥ ಸಪ್ತಮಿ : ಪೂಜೆ ವಿಧಾನ, ಶುಭ ಮುಹೂರ್ತ, ಮಹತ್ವ ಮತ್ತು ಪ್ರಯೋಜನ ..!

ಶ್ರೀರಾಮನಾಮವನ್ನು ಸ್ಮರಿಸುವವರಿಗೆ ಶಾಂತತೆ, ಜ್ಞಾನದ ಪ್ರಖರತೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿಯನ್ನು ಕೊಡುತ್ತದೆ. ಉದಾಹರಣೆಗೆ: ಸಂತ ತುಳಸೀದಾಸರು, ತ್ಯಾಗರಾಜಸ್ವಾಮಿಗಳು, ಸಂತ ಕಬೀರ.. ಹೀಗೆ ಅನೇಕರನ್ನು ಸ್ಮರಿಸಬಹುದು.

ಸೂರ್ಯನು ಕತ್ತಲೆಯನ್ನು ಹೋಗಲಾಡಿಸುವಂತೆ ಶ್ರೀರಾಮನಾಮ ಜಪವು ಮನದ ಕತ್ತಲೆ, ಜೀವನದ ಅಜ್ಞಾನವನ್ನು ಹೋಗಲಾಡಿಸುವಂತಹುದು. ಅಂತಹ ಶಕ್ತಿ ಶ್ರೀರಾಮನಾಮದಲ್ಲಿದೆ.

ಇದಕ್ಕೆ ಯಾವುದೇ ನಿರ್ದಿಷ್ಟ ಸಮಯ, ದಿನ, ವರ್ಷ ಎಂದು ಯೋಚಿಸದೇ ಜಪಿಸಬಹುದು, ಲಿಖಿತ ಜಪ ಆಚರಿಸಬಹುದು. ಅದಕ್ಕೇ ಪುರಂದರದಾಸರು, ರಾಮ ಮಂತ್ರವ ಜಪಿಸೋ, ಹೇ ಮನುಜ.. ಆ ಮಂತ್ರ ಈ ಮಂತ್ರ ಜಪಿಸಿ ಕೆಡಲುಬೇಡ, ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ.

  ತೆನಾಲಿ ರಾಮನಿಗೆ ದೇವರ ಉಡುಗೊರೆಯ ಕಥೆ

ಸಂತ ತುಳಸೀದಾಸರು ಹೇಳುತ್ತಾರೆ: ಯಾವಾಗ ನೀನು ರಾಮ ನಾಮವನ್ನು ನಿನ್ನ ನಾಲಗೆಯ ತುದಿಯಲ್ಲಿಡುವೆಯೋ, ಆಗ ನೀನು ನಿನ್ನ ಒಳಗೆ ಮತ್ತು ಹೊರಗೆ ದೇದೀಪ್ಯವಾದ ಜ್ಯೋತಿಯನ್ನು ಕಾಣುವೆ.

ವಿಶ್ವಕಲ್ಯಾಣಕ್ಕಾಗಿ ತಾರಕ ಮಂತ್ರ “ॐ ಶ್ರೀರಾಮ ಜಯರಾಮ ಜಯ ಜಯ ರಾಮ”

ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »

You cannot copy content of this page