ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಯೋಗ ಎಂದರೇನು ?

ಯೋಗ ಎಂದರೆ ಕೂಡುವುದು ಎಂದರ್ಥ…

ಯೋಗ ಪದವನ್ನು ಬಹಳಷ್ಟು ರೀತಿ ವ್ಯಾಖ್ಯಾನಿಸಬಹುದು…. | ಶಿವಯೋಗ ಶಿವಾನುಭವ ಮಂಟಪ

ಯುಜ್ ಎಂಬ ಸಂಸ್ಕೃತ ಧಾತುವಿನಿಂದ ಯೋಗ ಪದವು ಬಂದಿದೆ,
ಯುಜ್ಯತೇ ಅನೇನ ಇತಿಃ ಯೋಗಃ –
ಅನೇಕವನ್ನು (ಮನಸ್ಸು – ಅನೇಕ ಕಡೆ ಹರಿದಾಡುವ ಮನಸ್ಸನ್ನು) ಕೂಡಿಸುವುದು ಯೋಗ.

ಯೋಗಸಾಧಕರು ಆರಂಭದಲ್ಲಿ ಪಠಿಸುವ ಒಂದು ಶ್ಲೋಕವಿದೆ.

” ಯೋಗೇನ ಚಿತ್ತಸ್ಯ ಪದೇನಾ ವಾಚಾಂ
ಮಲಂ ಶರೀರಸ್ಯಚ ವೈದ್ಯಕೇನ ||
ಯೋಪಾಕರೋಕ್ತಮ್ ಪ್ರವರಂ ಮುನೀನಾಂ
ಪತಂಜಲೀಂ ಪ್ರಾಂಜಲಿನ್ ರಾನತೋಸ್ಮಿ ||

ಈ ಶ್ಲೋಕಾರ್ಥವೂ ಸಹ ಯೋಗವೆಂದರೆ ಚಿತ್ತಶುದ್ಧಿಯನ್ನು ಮಾಡುವ ಪ್ರಕಿಯೆ ಎಂದಿದೆ.

ಪಾಣಿನಿಯು ವ್ಯಾಕರಣಶಾಸ್ತದಲ್ಲಿ ಯೋಗಕ್ಕೆ ಹಲವಾರು ಅರ್ಥಗಳನ್ನ ಕೊಟ್ಟಿದ್ದಾನೆ ಅದರಲ್ಲಿ
“ಯುಜಿರೇ ಯೋಗೇ ” – ಯುಜ್ (ಸಮಾಧಿ ) ಸಾಧಿಸುವುದೇ ಯೋಗ , ಇಲ್ಲಿ ಸಮಾಧಿ ಎಂದರೆ ಮನಸ್ಸಿನ ಸಮಾಧಿ – ಮನೋಲಯ ಸಮಾಧಿ ಸ್ಥಿತಿಯನ್ನು ಸಾಧಿಸಯವ ಶಿಕ್ಷಣವೇ ಯೋಗ.

ಯೋಗ ಎಂದರೆ ಇತರೇ ದರ್ಶನಗಳಂತೆ
” ಅಥಾತೊ ಬ್ರಹ್ಮಜಿಜ್ಞಾಸ ” ಎಂದು ವಿಚಾರ ಮಾಡುತ್ತಾ ಜೀವ ಜಗತ್ತು ಈಶ್ವರರ ಬಗ್ಗೆ ಜಿಜ್ಞಾಸೆ ಮಾಡುವುದಲ್ಲ…!!!
ಯೋಗವೆಂದರೆ ಅನುಷ್ಟಾನ
ಈ ಕಾರಣಕ್ಕಾಗಿಯೇ ಯೋಗಸೂತ್ರ ರಚಿಸಿದ ಪತಂಜಲಿ ಮಹಾಮುನಿಗಳು ಆರಂಬದಲ್ಲಿ
“ಅಥ ಯೋಗಾನುಶಾಸನಂ ” ಎಂದಿರುವರು.

  ಪೂಜೆಯಲ್ಲಿ / ಧಾರ್ಮಿಕ ಕಾರ್ಯಗಳಲ್ಲಿ ನಿಷಿದ್ಧ ಕಾರ್ಯಗಳು

ಶಾಸನವೆಂದರೆ ವಿಧಿಸುವುದು ,
ಉದಾಹರಣೆಗೆ ತಂಬಾಕಿನ ಪ್ಯಾಕ್ ಮೇಲೆ ಶಾಸನ ವಿಧಿಸಿದ ಎಚ್ಚರಿಕೆ – ಅಥವಾ ಸಂವಿದಾನ ಶಾಸನ – ತ್ರಿಕಾಶಾಸನ ಎಂಬಂತೆ ಅನುಷ್ಟಾನ ಮಾಡುವ ಯಾವುದೇ ಜಿಜ್ಞಾಸೆ ತರ್ಕಕ್ಕೆ ಒಳಪಡದೆ ಅನುಷ್ಟಾನ ಮಾಡುವ ಪ್ರಕ್ರೀಯೆಯೇ ಯೋಗ.

ಯೋಗಃ ಕರ್ಮಸು ಕೌಶಲಮ್ – ನಿಷ್ಕಾಮ ಕರ್ಮ ಮಾಡುವ ಕೌಶಲ್ಯವೇ ಯೋಗ ಎಂದು ಭಗವದ್ಗೀತೆ ಹೇಳುತ್ತದೆ.

ಜೈನರ ಸಾಹಿತ್ಯದಲ್ಲಿ
” ಮೋಕ್ಷೇಣ ಯೋಜನಾದೇವ ಯೋಗೋಹ್ರತ್ಯ ನಿರುಚ್ಯತೇ ಯಶೋವಿಜಯ ಕೃತದ್ವಾಂತ್ರಿಂಶಿಕಾ” – ನಿರ್ವಾಣ ಸಿದ್ಧಿ ಪಡೆಯುವ ಇಂದ್ರಿಯದ ವೈರುದ್ಯಗಳನ್ನು ನಿಗ್ರಹಿಸಿ ಜಿನ ಮಾರ್ಗದಲ್ಲಿ ನೆಡೆದು ಜೀನೇಂದ್ರನಾಗುವ ಯಶೋವಿಜಯ ಮಾರ್ಗವೇ ಯೋಗ ಎಂದಿದ್ದಾರೆ , ಬಹುಷಃ ಇದು ಹರಿಭದ್ರಸೂರಿಯ ವ್ಯಾಖ್ಯಾನವಿದ್ದಿರಬಹುದು.

ಭೌದ್ಧ ದರ್ಶನದಲ್ಲಿ ಅಷ್ಟಾಂಗ ಸಮ್ಯಕ್ ಮಾರ್ಗಗಳ ಮೂಲಕ ಮಾಡುವ ನಿರ್ವಾಣ ಕ್ರಿಯೆ – ವಿಪಶನ್ಯ ಯೋಗ – ಶೂನ್ಯದೊಡನೆ ಲೀನವಾಗುವುದು ಎಂದಿದೆ.
ಹಲವಾರು ದರ್ಶನದಲ್ಲಿ ಅವರದ್ದೇ ವ್ಯಾಖ್ಯಾನವಿದೆ.

  ಹೀಗೂ ಉಂಟೆ - ಕೆಲವು ದೇವಾಲಯಗಳಲ್ಲಿ ಕಾಣಬರುವ ವಿಚಿತ್ರ ಸಂಗತಿಗಳು

ಬಹಳ ಪ್ರಸಿದ್ಧವಾದ ವ್ಯಾಖ್ಯಾನ ಎಂದರೆ ಪತಂಜಲಿ ಮುನಿಗಳ ” ಯೋಗಶ್ಚಿತ್ತವೃತ್ತಿ ನಿರೋಧಃ ” – ಚಿತ್ತ ವೃತ್ತಿಗಳ ಚಂಚಲತೆಯ ನಿವಾರಣೆಯೇ ಯೋಗ.

ಇನ್ನೊಂದು ದೃಷ್ಟಿಯಲ್ಲಿ ಕವಿ ಪಾಣಿನಿ ಹೇಳಿರುವುದು
” ಸಂಯೋಗೋ ಯೋಗ ಇತ್ಯುಕ್ತ ಜೀವಾತ್ಮ ಪರಮಾತ್ಮನೋಃ “
ಜೀವಾತ್ಮ – ಪರಮಾತ್ಮನ ಏಕತೆ ಐಕ್ಯತೆಯೇ ಯೋಗ. ವಿಪರ್ಯಾಸವೆಂದರೆ ಇಂದು ಯೋಗಶಿಕ್ಷಣವು ಯೋಗಸಾನ ಶಿಕ್ಷಣವಾಗಿ ವಿಶಾಲ ಅರ್ಥವನ್ನು ಒಂದು ಪರಿಮಿತಿಯಲ್ಲಿಟ್ಟಿದೆ. ಯೋಗಾಸನಗಳು ಯೋಗಕ್ಕೆ ಪೂರಕವಾದ ಒಂದು ಅಂಶವೇ ಹೊರತು ಅದಷ್ಟೇ ಯೋಗವಲ್ಲ.

ಋಗ್ವೇದದಲ್ಲಿ ಯೋಗದ ಬಗ್ಗೆ ಬರುತ್ತದೆ ,
ಯೋಗದ ಮೂಲಕರ್ತೃ ” ಹಿರಣ್ಯಗರ್ಭ “.
ಋಗ್ವೇದದ ಕಾಲದಲ್ಲಿ ವ್ರಾತ್ಯ ಹಾಗು ಕೇಶಿ ಎಂಬ ಇಬ್ಬರು ಯೋಗಸಾಧಕರಿದ್ದರು. ಉಪನಿಷತ್ತುಗಳು ಸಹ ಯೋಗಾನುಷ್ಟಾನವನ್ನು ಪ್ರತಿಪಾದಿಸುತ್ತವೆ.

ಯೋಗಕ್ಕೆ ಹಿರಣ್ಯಗರ್ಭನು ಕತೃವಾದರೆ ಶಿವಯೋಗಕ್ಕೆ ರುದ್ರನು ಕರ್ತೃ.

ಸುಮಾರು ಎರಡುವರೆ ಸಾವಿರ ವರ್ಷಕ್ಕೂ ಹಿಂದೆ ಪತಂಜಲಿ ಮಹಾಮುನಿಗಳು 195 ಸೂತ್ರಗಳ ಯೋಗಸೂತ್ರವನ್ನು ರಚಿಸಿರುವರು , ಇದರಲ್ಲಿ ಸಮಾಧಿಪಾದ , ಸಾಧನಾಪಾದ , ವಿಭೂತಿಪಾದ, ಕೈವಲ್ಯಪಾದ ಎಂಬ ಚತುಷ್ಪಾದಗಳು ಇವೆ. ( ಪಾದ ಎಂದರೆ ಸಂಸ್ಕೃತದಲ್ಲಿ ಜ್ಞಾನ ಎಂಬ ಅರ್ಥ ) .

  ಪ್ರಜಾಕೀಯ ಹನ್ನೆರಡು ಸೂತ್ರಗಳು ಹಾಗು ಪ್ರಜೆಗಳ ಅವಶ್ಯಕತೆಗಳು

ತದನಂತರ ವ್ಯಾಸ ಮಹರ್ಷಿಗಳು ಪತಂಜಲಿಯ ಯೋಗಸೂತ್ರಕ್ಕೆ ಭಾಷ್ಯ ಬರೆದಿದ್ದಾರೆ.
ಪಶುಪತಿ ವೃಷಭರುದ್ರನು ಶಿವಯೋಗದ ಪಾಶುಪತ ಸೂತ್ರವನ್ನು ರಚಿಸಿದ್ದಾನೆ ಇದನ್ನು ನಂತರ ಕೌಂಡಿಣ್ಯನೂ ರಚಿಸಿರುವನು.

ಶಿವಯೋಗವು ಅಭಿನವಗುಪ್ತ , ನಂದಿಕೇಶ್ವರ ಮೊದಲಾದವರಿಂದ ಹಲವಾರು ಆಯಾಮಗಳಲ್ಲಿ ಪರಿಷ್ಕೃತಗೊಂಡು ಕಡೆಗೆ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಪ್ರಮಥರಿಂದ ಶಿವಯೋಗವು ಒಂದು ಪರಿಪೂರ್ಣ ಸ್ವರೂಪವನ್ನು ಪಡೆದಿದೆ.

ಪತಂಜಲಿಯ ಅಷ್ಟಾಂಗಯೋಗವು ಯಮ , ನಿಯಮ , ಪ್ರಾಣ , ಪ್ರತ್ಯಾಹಾರ , ಧ್ಯಾನ , ಧಾರಣ , ಸಮಾಧಿ ಎಂಬ ಎಂಟು ಅಂಗದ ಮೇಲೆ ನಿಂತಿದೆ. ಶರಣರ ಶಿವಯೋಗದಲ್ಲಿ ಅಷ್ಟಾವರಣವೇ ಅಂಗ , ಪಂಚಾಚಾರವೇ ಪ್ರಾಣ , ಷಟ್ಸ್ಥಳವೇ ಆತ್ಮ.

Leave a Reply

Your email address will not be published. Required fields are marked *

Translate »