ಹಾಸಿಗೆ ಇದ್ದಷ್ಟು ಕಾಲು ಚಾಚು – ಈ ನುಡಿಗಟ್ಟಿನ ಅಕ್ಷರಶಃ ಅರ್ಥವೆಂದರೆ – “ಹಾಸಿಗೆ ನಿಮಗೆ ಅನುಮತಿಸುವಷ್ಟು ಮಾತ್ರ ನಿಮ್ಮ ಕಾಲುಗಳನ್ನು ವಿಸ್ತರಿಸು” ಅಂದರೆ ನಿಮ್ಮ ಜೀವನದಲ್ಲಿ ಯಾವುದೇ ವಿಷಯದ ಮೇಲೆ ನಿಮ್ಮ ಸ್ವಂತ ಮಿತಿಯನ್ನು ದಾಟಬೇಡ.
ಒಬ್ಬರ ಜೀವನ ಶೈಲಿಯಲ್ಲಿ ಸಾಮರ್ಥ್ಯದ ಮಿತಿಯ ಮಹತ್ವವನ್ನು ತಿಳಿಸಲು ಈ ಗಾದೆಯನ್ನು ಬಳಸಲಾಗುತ್ತದೆ. ಒಂದು ವೇಳೆ ಮನುಷ್ಯ ಕಾಲುಗಳನ್ನು ಹಾಸಿಗೆ ಮೀರಿ ವಿಸ್ತರಿಸಿದರೆ, ನಂತರ ಬಹಳ ಚಡಪಡಿಕೆ ಅಥವಾ ಅನಾನುಕೂಲತೆಗೆ ಒಳಗಾಗಬೇಕಾಗುತ್ತದೆ. ಅಂತೆಯೇ, ಒಬ್ಬರ ಸಾಮರ್ಥ್ಯವಿದ್ದಷ್ಟು ಮಾತ್ರ ಹಣ ಖರ್ಚು ಮಾಡಬೇಕು. ಯಾವುದೇ ವಿಷಯದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಈ ಗಾದೆ ಅನ್ವಯಿಸುತ್ತದೆ. ನಾವು ನಮ್ಮ ಮಿತಿಗಳಿಗೆ ಅಂಟಿಕೊಳ್ಳಬೇಕು ಎಂಬುದೇ ಈ ಗಾದೆಯ ಮೂಲಾರ್ಥ. ಈ ಗಾದೆ ಮಾತು ಜೀವನದ ಇತಿಮಿತಿಯನ್ನು ಸೂಚಿಸುತ್ತದೆ. ಬುದ್ಧ ಹೇಳುವಂತೆ ಆಸೆಯೇ ದುಃಖಕ್ಕೆ ಮೂಲ; ಆಸೆಯ ನಾಶವೇ ಸಂತೋಷದ ಮೂಲವಾಗಿದೆ. ಆದ್ದರಿಂದ ಇರುವುದರಲ್ಲಿ ತೃಪ್ತಿಕರವಾದ ,ಆರೋಗ್ಯಕರವಾದ ಜೀವನವನ್ನು ನಡೆಸಬೇಕು. ಮಿತಿಯನ್ನು ಅರಿತು ಬಾಳು ಎಂಬುದು ಮೇಲಿನ ಗಾದೆ ಮಾತಿನ ಸಂದೇಶವಾಗಿದೆ.
gaade – haasige iddastu kaalu chachu literal Meaning of this proverb is – “Stretch your legs only as much as the mattress allows you to” means don’t cross the limit of your own on any topic in your life.
Nice. But it have to be long
Super
Good
Thank u t is very useful to me
Thank u t is very useful to me Thank you
It is easy and useful but we should understand
Nice,it was a help for me
Nice but too long
I really like this it was helpful to me