ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಾದೆ / ನಾಣ್ಣುಡಿ ಸಂಗ್ರಹ ಭಾಗ – ೧೦ Wisdom / Proverbs Kannada


ಕನ್ನಡ ಗಾದೆ ಮಾತು | ಗಾದೆ ವಿಸ್ತರಣೆ | Gaade expand | ಗಾದೆ ಅರ್ಥ ಸಹಿತ | proverbs with meanings | Kannada Gaadegalu | ಕನ್ನಡ ಗಾದೆಗಳು | Kannada Proverbs | ಕನ್ನಡ ಜನಪ್ರಿಯ ಗಾದೆಗಳು | Kannada Popular Proverbs | Janapriya Gaadegalu | ಜನಪ್ರಿಯ ಗಾದೆಗಳು | Kannada Gaade Maathu |

ಗಾದೆ / ನಾಣ್ಣುಡಿ ಸಂಗ್ರಹ ಭಾಗ – ೧೦ Wisdom / Proverbs Kannada

ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಬಂದ ದಾರಿಗೆ ಸುಂಕವಿಲ್ಲ
ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ
(ಉಪ್ಪು) ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
ಒಬ್ಬರ ಕೂಳು ಇನ್ನೊಬ್ಬರ ಕುತ್ತು.
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
ಕಲ್ತ ಕೈ ಕದ್ದಲ್ಲದೆ ಬಿಡದು
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಅತ್ತ ದರಿ, ಇತ್ತ ಪುಲಿ.
ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
ಮೋರೆ ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
ಮಾತಿಗೊಂದು ಮಾತು ಬಂತು ವಿಧಿ ಬಂದು ಆತುಕೊಣ್ತು
ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ
ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ
ತಿರಿತಿರಿಗಿ ತಿಮ್ಮಪ್ಪನ ಹತ್ತರ ಹೋದರೆ ತಿರಿದುಂಬೋದು ತಪ್ಪೀತೇ?
ಹೆಣ್ಣು ಚಂದ,ಕಣ್ಣು ಕುರುಡು
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
ಕಣ್ಣರಿಯದಿದ್ದರೂ ಕರುಳರಿಯುತ್ತದೆ
ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ತರಲಿಲ್ಲ ಬರಲಿಲ್ಲ ಬರ ಹ್ಯಾಗೆ ಹಿಂಗೀತು
ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು (ಮುದ್ದಣ)
ಬಂಗಾರಕ್ಕೆ ಕುಂದಣವಿಟ್ಟಂತೆ
ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
ಅಲಾ ಬಲಾ ಪಾಪಿ ತಲೀ ಮ್ಯಾಲೆ ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ
ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ ಅಂದ.
ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
ವಯಸ್ಸಿಗೆ ತಕ್ಕ ಬುದ್ಧಿ ಕಲಿ.
ಹಣ ಇಲ್ಲದವ ಹೆಣಕ್ಕಿಂತ ಕಡೆ
ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು
ಅಜ್ಜ! ಮದುವೆ ಅಂದ್ರೆ ನನಗೋ ಅಂದ
‘ಕೋ’ ಅನ್ನೋದು ಕುಲದಲ್ಲಿಲ್ಲ ,’ತಾ’ ಅನ್ನೋದು ತಾತರಾಯನ ಕಾಲದ್ದು
ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ.
ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು
ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ
ಮದುವೆ ಮಡಿನೋಡು ಮನೆ ಕಟ್ಟಿ ನೋಡು
ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
ಕಂಡೋರ ಆಸ್ತಿಗೆ ನೀನೇ ಧಣಿ
ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
ಹೀನ ಸುಳಿ ಬೋಳಿಸಿದರೂ ಹೋಗದು
ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು
ಅಹಂಕಾರಕ್ಕೆ ಉದಾಸೀನವೇ ಮದ್ದು.
ಮನೆಗೆ ಮಾರಿ, ಪರರಿಗೆ ಉಪಕಾರಿ
ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
ಉಪದೇಶಕ್ಕಿಂತ ಉದಾಹರಣೆ ಆಗಿರುವುದು ಉತ್ತಮ
ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
ತಾ ಕೋಡಗ ಪರರ ಅಣಕಿಸಿತು
ಬಾಯಿ ಬಿಟ್ಟರೆ ಬಣ್ಣಗೇಡು.
ಬಾಲೇರ ಮನಸ್ಸು ನೆಲೆಯಿಲ್ಲ
ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
ಅಡಿ ಅನ್ನಕ್ಕೆ ಅವಳೇ ಇಲ್ಲೆ ; ಪಿಳ್ಳೆ ಪೇರು ರಾಮಕೃಷ್ಣ
ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
ಹೊರಗೆ ಬೆಳಕು ಒಳಗೆ ಕೊಳಕು
ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ
ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ
ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
ಮಾಟ ಮಾಡಿದೋನ ಮನೆ ಹಾಳು.
ಕಾಲಿಗೆ ಬಿದ್ದು ಕಾಲುಂಗರ ಉಚ್ಚಿಕೊಂಡರಂತೆ
ಹೆಸರು ಸರಸ್ವತಿ, ಎಡಗೈ ಹೆಬ್ಬೆಟ್ಟಿನ ಸಹಿ.
ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
ಕೋಪ ಬೀವುದೇ ಸಮತೆ
ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ
ಕೇಡು ಬರೋ ಕಾಲಕ್ಕೆ ಬುದ್ಧಿಗೇಡು
ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು.
ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು
ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ
ಶಂಖದಿಂದ ಬಿದ್ದರೆ ತೀರ್ಥ
ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ
ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
ಗುಟ್ಟು ನಿಲ್ಲದ ಬಾಯಿಗೆ ಮುತ್ತು ಕೊಟ್ಟ ಹಾಗೆ
ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
ಅಗ್ಗದ ಮಾಲು;ಮುಗ್ಗಿದ ಜೋಳ
ರವಿ ಕಾಣದ್ದನ್ನು ಕವಿ ಕಂಡ
ತಾನೂ ತಿನ್ನ; ಪರರಿಗೂ ಕೊಡ
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ?
ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು
ಹೆಣ್ಣು ಜಲ್ಮಕ್ಕೆ ಹೆಜ್ಜೆಗೊಂದು ಮುಳ್ಳು
ಬೆಣ್ಣೇಲಿ ಕೂದಲು ತೆಗೆದ ಹಾಗೆ
ದುಡಿಮೆಯೇ ದೇವರು
ತಾವು ಮಾಡುವುದು ಗಂಧರ್ವರು ಮಾಡಿದರು
ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
ತಿರುಳು ತಿಂದರೂ ಮರುಳು ಹೋಗಲಿಲ್ಲ
ತುಂಬೆ ಗಿಡಕ್ಕೆ ಏಣಿ ಹಾಕಿದಂತೆ
ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಳಗೆ ತೂರು
ತಟದಲ್ಲಾಗಲೀ ಮಠದಲ್ಲಾಗಲೀ ಹಟದ ಜಂಗಮನ ಕಾಟ ತಪ್ಪುವುದಿಲ್ಲ
ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು
ತಾರೇಮರದ ಕಾಯಾದರೂ ಕರೆದರೆ ಬಂದೀತೇ
ಏತಿ ಅಂದರೆ ಪ್ರೇತಿ
ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ
ದೇವನೊಬ್ಬ ನಾಮ ಹಲವು
ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
ತಳಿಗೆ ಚಂಬು ಹೋದ ಮೇಲೆ ಮಳಿಗೇ ಬಾಗಿಲು ಮುಚ್ಚಿದ ಹಾಗೆ
ಹಸ ಕಟ್ಟಿ ಮೊಸರಿಗೆ ಪರದಾಡಬೇಡ
ಅರಸು ಆದೀಕ (=ಆದಾಯ) ತಿಂದ,
ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
೨೦ ಕ್ಕೆ ಯಜಮಾನಿಕೆ ಸಿಕ್ಕಬಾರದು ೭೦ ಕ್ಕೆ ಕೆಮ್ಮ ಬರಬಾರದು.
ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು
ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
ನೆಂಟರಿಗೆ ದೂರ ; ನೀರಿಗೆ ಹತ್ತಿರ
ಎಡವಿದ ಕಾಲು ಎಡವುದು ಹೆಚ್ಚು
ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ
ಆಕಳಿದ್ದವನಿಗೆ ವ್ಯಾಕುಲವಿಲ್ಲ.
ಅರಿತೂ ಮಾಡಿದ ಪಾಪ ವಜ್ರಲೇಪ
ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ
ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
ಕೆಟ್ಟು ಪಟ್ಟಣ ಸೇರು
ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು
ಹಳೇ ಗಂಡನ ಪಾದವೇ ಗತಿ
ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ ತಿರುಪಿನಂತೆ ಇರಬೇಕು
ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
ಖಂಡಿತ ವಾದಿ,ಲೋಕ ವಿರೋಧಿ
ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು
ತರುವವ ಮರೆತರೆ ಮೊರ ಏನು ಮಾಡೀತು
ಬಣ ಬಣ ಬೆಳಕು ಹರಿದಾಗ ಕತ್ತಲು
ಆಡೋಣ ಬಾ ಕೆಡಿಸೋಣ ಬಾ
ತಪ್ಪಿ ಬಿದ್ದವನಿಗೆ ತೆಪ್ಪ ಏನು ಮಾಡೀತು
ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು
ನಾಯಿ ಹೆಸರು’ಸಂಪಿಗೆ’ಅಂತ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
ಸಾವಿರ ಚಿತ್ತಾರ ಮಸಿ ನುಂಗಿತು
ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ
ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
ಬೇಸರವಿರಬಾರದು, ಅವಸರ ಮಾಡಬಾರದು. ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
ಮನಸಿದ್ದರೆ ಮಾರ್ಗ.
ಊಟಕ್ಕಿಲ್ಲದ ಉಪ್ಪಿನಕಾಯಿ ..ಕ್ಕೆ ಸಮಾನ
ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
ಉತ್ತಮವಾದ ನಗು ನೇಸರನ ಮಗು.
ಸದಾಶಿವನಿಗೆ ಅದೇ ಧ್ಯಾನ
ಅಳೋ … ಮೇಲೆ ಗಳು ಬಿತ್ತು
ಮೇಲೆ ಬಸಪ್ಪ ಒಳಗೆ ವಿಷಪ್ಪ
ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ
ಬಿದ್ದಿನ ಬಂದು ಹಾಳು ಮನೇ ಯಜಮಾನ ಕುಂತು ಹಾಳು
ಹಸಿ ಗೋಡೆ ಮೇಲೆ ಹರಳು ಎಸೆದಂತೆ
ಒಡೆಯನಿಗೆ ಹಾಲಿಲ್ಲವೆ೦ದು ಎಮ್ಮೆ ಈಯುತ್ಯೇ?
ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
ಕೋಪ ಪಾಪ ತಂತು ಪಾಪ ತಾಪ ತಂತು
ತಾಳ್ಮೆ ಇದ್ದ ಪುರುಷರಲ್ಲಿ ಬೀಳು ಬಿದ್ದರೆ ಬಾಳ್ಯಾನು
ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
ಹುಚ್ಚು ಮನಸಿಗೆ ಹತ್ತು ಹಲವು ಮುಖಗಳು
ಗುರುವಿಗೇ ತಿರುಮಂತ್ರ
ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?
ಇಡೀ ಮುಳುಗಿದರೂ ಮೂಗು ಮೇಲೆ
ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
ಕಿಡಿಯಿಂದ ಕಾಡ ಸುಡ ಬಹುದು
ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
ಅದ್ನೇ ಉಂಡೇನ್ ಅತ್ತೆಮ್ನೋರೇ,ಕದ ತೆಗೀರಿ ಮಾವ್ನೋರೇ ಅಂದ್ರಂತೆ
ನಾಯಿಯ ಕನಸೆಲ್ಲ ಮೂಳೇನೇ.
ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು
ಕಬ್ಬು ಡೊಂಕಾದ್ರೆ ಸವಿ ಡೊಂಕೇ
ತಬ್ಬಳಿ ದೇವರಿಗೆ ತಂಗಳ ನೈವೇದ್ಯ
ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
ಬಾಯಲ್ಲಿ ಬೆಲ್ಲ ಕರುಳು ಕತ್ತರಿ
ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ
ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
ಹೆಣ್ಣು ಹೊನ್ನು ಮಣ್ಣು ಇನ್ನೊಬ್ಬರ ಕೈ ಸೇರಿದರೆ ಹೋದಂತೆ
ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು
ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.
ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ
ತಿರುಳು ಹೋಗಿ ಬೆಂಡು ಉಳೀತು
ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
ಅಂಬಲಿಗೆ ಗತಿ‌ಇಲ್ಲದವ ಕಟ್ಟಾಣಿ ರಂಬೆಯ ಬಯಸಿದ
ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ
ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
ಸಾವಿರ ಸುಳ್ಳು ಹೇಳಿ ಮದುವೆ ಮಾಡು
ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ
ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
ಚಂಡಾಲ ದೇವರಿಗೆ ಚಪ್ಪಲಿ ಸೇವೆ
ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ
ಕೋರಿ ಒಲುಮೆ ತನಗೆ ಅನ್ನೋ ಮಾರನಿಗೆ ಮಾರಿ ಹಿಡಿಯಿತು.
ತಕ್ಕುದನ್ನು ಅರಿಯದ ಓದು ಲಕ್ಷ ಓದಿದರೇನು
ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
ಹುತ್ತ ಬಡಿದರೆ ಹಾವು ಸಾಯುವುದೇ
ಹರಕಿನಲ್ಲಿ ಇಲಿ ಕಡಿಯಿತು
ಆಡು ಮುಟ್ಟದ ಸೊಪ್ಪಿಲ್ಲ
ಎರಡೂ ಕೈ ಸೇರಿದರೆ ಚಪ್ಪಾಳೆ
ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
ತಿಗಳಗಿತ್ತಿಯ ಬಾಯಿ ಕೆಣಕಬೇಡ ಬಗಳೊ ನಾಯಿ ಬಡಿಯಬೇಡ
ಏನಾದರೇನು ತಾನು ತಾನಾಗದ ವರೆಗೆ
ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
ಬಡವ ನೀ ಮಡಗಿದ ಹಾಗಿರು
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
ಎಡಗಣ್ಣು ಹೊಡೆದರೆ ನಾರಿಗೆ ಶುಭ.
ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
ತರಗು ತಿಂಬವನಿಗೆ ಒರಗೊಂದು ಕೇಡು
ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ?
ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ)
ಅಟ್ಟ ಹತ್ತಲು ಹೋದವ ಏಣಿಯ ಮೋಹಕ್ಕೆ ಬಿದ್ದಂತೆ
ತರುಬಿ ಹೋಗುವನ್ನ ಕರುಬಿ ಮಾಡುವುದೇನು?
ಕಬ್ಬಿಣ ಕಾದಿರುವಾಗಲೇ ಬಡಿಯಬೇಕು
ಅರಸನ ಕುದುರೆ ಲಾಯದಲ್ಲೆ ಮುಪ್ಪಾಯಿತು
ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು
ಒಡೆದ ಹಾಲು ಹೆಪ್ಪಿಗೆ ಬಂದೀತೇ
ಹೆದರುವವರ ಮೇಲೆ ಕಪ್ಪೆ ಎಸೆದಂತೆ
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು
ಆಡೋದು ಮಡಿ ಉಂಬೋದು ಮೈಲಿಗೆ
ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
ಮಂದಾಳಿಗೊಂದು ಮುಂದಾಳು.
ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
ಬಡವ ನೀ ಸೆಣಸಿ ಕೆಡಬೇಡ
ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
ಮೀಸೆ ಬ೦ದವಗೆ ದೇಶ ಕಾಣದು, ಮೊಲೆ ಬ೦ದವಳಿಗೆ ನೆಲ ಕಾಣದು.
ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ.
ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ
ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು
ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
ಚೈತ್ರದಲ್ಲಿ ಮಿತ್ರನಾದರೂ ಮೈ ತಗಲಿಸಕೂಡದು
ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
ಹೂವಿನ ಜೊತೆ ದಾರ ಮುಡಿಯೇರಿತು
ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ
ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
ಉ೦ಡೂ ಹೋದ, ಕೊ೦ಡೂ ಹೋದ.
ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
ಆಡೋಕಾಗಲ್ಲ,ಅನುಭವಿಸಕ್ಕಾಗಲ್ಲ
ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ
ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡಬಾರದು
ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ
ಮನೆಗೆ ಮಾರಿ, ಊರಿಗೆ ಉಪಕಾರಿ.
ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ
ಎದ್ದವನು ಗೆದ್ದಾನು
ಮಂತ್ರಕ್ಕಿಂತ ಉಗುಳೇ ಜಾಸ್ತಿ
ಉದ್ಯೋಗವೇ ಗಂಡಸಿಗೆ ಲಕ್ಷಣ
ಹಾದಿ ತಪ್ಪಿದವನಿಗೆ ಹದಿನೆಂಟು ಹಾದಿ
ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು
ಊರಿಗೆ ಉಪಕಾರಿ, ಮನೆಗೆ ಮಾರಿ
ತನಗೆ ಬಂದ ಹಾನಿ ದುಡ್ಡಿನಿಂದ ಹೋಯಿತು
ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ
ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
ಕಳ್ಳನಿಗೊಂದು ಪಿಳ್ಳೆ ನೆವ
ನಾಯಿ ಬಾಲ ಡೊಂಕು
ಕಾಸಿದ್ದರೆ ಕೈಲಾಸ.
ಸಿದ್ದಿಗಿಂತ ಬಲವಿಲ್ಲ ಬುದ್ಧಿಗಿಂತ ಹಿರಿದಿಲ್ಲ
ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ?
ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ
ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ
ಉಣ್ಣು ಬಾ ಅಂದ್ರೆ,ಇರಿ ಬಾ ಅಂದ್ರಂತೆ
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
ಮಂತ್ರಿಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ
ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
ಕಲ್ಲಿನಲ್ಲಿ ಕಳೆಯ ನಿಲ್ಲಿಸಿದ ಗುರುವಿನ ಸೊಲ್ಲಿನಲ್ಲೇ ದೈವ
ಆಳಾಗಬಲ್ಲವನು ಅರಸಾಗಬಲ್ಲ
ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
ಬಾಯಲ್ಲಿ ಬೆಣ್ಣೆ;ಬಗಲಲ್ಲಿ ದೊಣ್ಣೆ.
ಸನ್ಯಾಸಿ ಬೆಕ್ಕು ಸಾಕಿದ ಹಾಗೆ
ತಿಳಿದವ ಮಾಡ್ಯಾನು ನಳಪಾಕವ
ಕರೆಯದವರ ಮನೆಗೆ ಕಳಸಗಿತ್ತಿಯಾಗು
ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ
ಅಹಂಕಾರಕ್ಕೆ ಉದಾಸೀನವೇ ಮದ್ದು
ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ
ಬಾಯಿ ಬಿಟ್ಟರೆ ಬಣ್ಣಗೇಡು
ಸ೦ಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗ೦ಡನ್ನ ಸುಬೇದಾರ ಅ೦ದರೆ ಎಷ್ಟೋ ಹೆಚ್ಚಳ ಅ೦ದಳ೦ತೆ.
ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
ನಿಜವ ಹಿಡಿ ಘಟವ ನೆಚ್ಚದಿರು
ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ
ತಟ್ಟು ಇದ್ದರ‍ೇ ತಟಾಯಿಸಿ ನಡದಾನು
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ದರಾತ್ರಿಲೀ ಕೊಡೆ ಹಿಡಿದ ಹಾಗೆ
ಸೇರಿಗೆ ಸವ್ವಾ ಸೇರು
ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
ಕೂತುಕೊಂಡು ಹೇಳುವವನ ಕೆಲಸ ಊರು ಮಾಡಿದರೂ ಸಾಲದು
ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು
ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ
ತಾನೊಲಿದ ಮಂಕು ಮಾಣಿಕ್ಯ
ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂ..ನ ಚಿಂತೆ
ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು
ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ
ಹೆಣ್ಣು ಚಂದ ಕಣ್ಣು ಕುರುಡು ಅಂದಂಗೆ
ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
ಎಣ್ಣೆ ಚೆಲ್ಲಿದವನೂ ಅತ್ತ, ಕಾಯಿ ಚೆಲ್ಲಿದವನೂ ಅತ್ತ.
ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?
ತಲೇ ಮೂರು ಸುತ್ತು ತಿರುಗಿದರೂ ತುತ್ತು ಬಾಯಿಲೇ
ಹಿಂದಲ ಮಾತು ಮರಿ ಮುಂದಲ ಬಾಳು ಅರಿ
ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ
ಅನ್ನ ಹಾಕಿದ ಮನೆಗೆ ಕನ್ನ ಹಕಬೇಡ
ಹಿರಿದು ಪಾಪ ಮಾಡಿ ಗಂಗೆಗೆ ಹರಿದರು
ತಾಳಿದವ ಬಾಳ್ಯಾನು
ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.
ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
ಸುಳ್ಳು ದೇವರಿಗೆ ಕಳ್ಳ ಪೂಜಾರಿ
ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ
ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ
ತಾಸಿನ ಗೊತ್ತು ದಾಸಿಗೆ ತಿಳಿದೀತೇ?
ತನ್ನೂರಲಿ ರಂಗ, ಪರೂರಲಿ ಮಂಗ
ಆತುರಗಾರನಿಗೆ ಬುದ್ಧಿ ಮಟ್ಟ
ಕೆಲಸವಿಲ್ಲದ ಬಡಗಿ ಮಗುವಿನ … ಕೆತ್ತಿದ
ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ ಸ್ವರ್ಗ ಬೇಕು ಅಂದ
ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
ಊರಿಗಾಗದ ಗೌಡ, ಮೇಲೆರಗುವ ಗಿಡುಗ
ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು
ಹೋದ ಪುತ್ತ ಬಂದ ಪುತ್ತ ಪುಟ್ಟನ ಕಾಲಿಗೆ ನೀರಿಲ್ಲ
ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
ನರಿ ಕೂಗು ಗಿರಿ ಮುಟ್ಟುತ್ತದೆಯೆ ?
ಇರುವೆಗೆ ಇರುವೆ ಮೈ ಭಾರ, ಆನೆಗೆ ಆನೆ ಮೈ ಭಾರ
ಬಲ್ಲವನೇ ಬಲ್ಲ ಬೆಲ್ಲದ ರುಚಿಯ
ಗಂಜಿಯ ಕುಡಿದರೂ ಗಂಡನ ಮನೆ ಲೇಸು
ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ
ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ
ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.
ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
ಏರಿದವ ಇಳಿದಾನು
ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ
ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
ಕುದಿಯುವುದರೊಳಗಾಗಿ ಮೂರು ಸಾರಿ ಹಳಸಿದಂತೆ
ಇಂದಿನ ಸೋಲು ನಾಳಿನ ಗೆಲುವು.
ಜೀವ ಜೀವವ ತಿಂದು ಜೀವಿಸುತಿದೆ ಜಗವೆಲ್ಲ
ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
ತಾನು ಹೋದರೆ ಮಜ್ಜಿಗೆ ಇಲ್ಲ ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ
ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
ಸಾಮವೇದದ ಗಾನ ಭೂಮಿ ದಾನದ ಫಲವ ಜಂಬೂದ್ವೀಪದವರೇ ಬಲ್ಲರು
ಇಟ್ಟ ವಿಭೂತಿ ಪಟ್ಟದಂತೆ ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ
ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ
ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು
ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ
ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು
ಪರದಾನಿ ಹೂಸು ಕುಡಿದ ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
ಊರಿಗೊಂದು ದಾರಿಯಾದ್ರೆ,ಎಡವಟ್ಟಂಗೆ ಅವನದ್ದೇ ದಾರಿ
ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ
ಆನೆಯಂಥದೂ ಮುಗ್ಗರಿಸ್ತದೆ
ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
ಊರು ಸುಟ್ಟರೂ ಹನುಮಂತರಾಯ ಹೊರಗೆ
ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಣ ಕೆಡ್ತು
ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
ಕೈ ಕೆಸರಾದ್ರೆ ಬಾಯಿ ಮೊಸರು
ಸ್ವತಂತ್ರವೋ,ಸ್ವರ್ಗಲೋಕವೋ
ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು
ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು
ತಿಳಿಯಕ್ಕಿಲ್ಲ ನೋಡಕ್ಕಿಲ್ಲ ಹುಚ್ಚು ಮೂಕನ ಆಟ
ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
ಮುಖ ನೋಡಿ ಮಣೆ ಹಾಕು
ಅಣ್ಣಿಗೇರ್‍ಯಾಗ ಎಣ್ಣೆ ಮೊಣಕಾಲ ಮಟ್ಟ
ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
ಕೆಲಸವಿಲ್ಲದ ಬಡಗಿ ಮಗುವಿನ ಕು೦ಡೆ ಕೆತ್ತಿದನ೦ತೆ.
ಬಿದ್ದರೂ ಮೀಸೆ ಮಣ್ಣಾಗಲಿಲ್ಲ
ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
ಹೊತ್ತು ಕಳೆದರೆ ಮತ್ತೆ ಬಾರದು
ಲಿಂಗ ಹರಿದ ಮೇಲೆ ಜಂಗಮನ ಹಂಗೇನು
ಓದುವಾಗ ಓದು, ಆಡುವಾಗ ಆಡು.
ಎಲ್ಲಾ ಬಣ್ಣ ಮಸಿ ನುಂಗಿತು
ತಿರುಪಿನಂತೆ ಇರಬೇಕು ತಿಳಿದವ
ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
ಚಿತ್ತವಿಲ್ಲದವಳ ಒಡಗೂಟ
ಕಳ್ಳನ ನಂಬಿದರೂ ಕುಳ್ಳನ್ನ ನಂಬಬೇಡ
ಆಕಾಶ ನೋಡೋಕೆ ನೂಕಾಟವೇಕೆ?
ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ
ಹಾಲಲ್ಲಾದ್ರೂ ಅದ್ದು, ನೀರಲ್ಲಾದ್ರೂ ಅದ್ದು.
ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
ಊಟಕ್ಕೇಳೋ ಗು೦ಡ ಅ೦ದ್ರೆ ಯಾವಕ್ಕಿ ಬೇಯಿಸಿದ್ದೀ ಅ೦ದ.
ಹಾಲಿಗಿಂತ ಕೆನೆ ರುಚಿ
ತಗಣೇ ಉಪದ್ರವ ಮಗಳಿಗೂ ಬಿಡಲಿಲ್ಲ
ತಾಟುಗಾರ ಆಟಕ್ಕೆ ಹೋಗಿ ಮೋಟಗಾರನಾಗಿ ಬಿದ್ದ ತಾತಾಚಾರ‍್ಯರ ಮನೆಗೆ ಏನಪ್ಪಣೆ?
ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು
ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು ಎಳ್ಳ ತಿಂದ ಋಣ
ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ
ಎಲ್ಲರ ಮನೆಯ ದೋಸೆಯೂ ತೂತೆ !
ಕಳ್ಳನ ಹೆಂಡತಿ ಎಂದಿದ್ದರೂ …ಯೆ
ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು
ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು
ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
ಮೋಕ್ಷಕ್ಕೆ ಗ್ನಾನ ಬೇಕು ಯೋಗಕ್ಕೆ ಧ್ಯಾನ ಬೇಕು
ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ
ಬೇಸರವಿರಬಾರದು, ಅವಸರ ಮಾಡಬಾರದು.
ಹುಳ್ಳಿಕಾಳು ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
ನಾರಿ ಮುನಿದರೆ ಮಾರಿ.
ತಲೆ ಸೀಳಿದರೆ ಎರಡಕ್ಷರ ಇಲ್ಲ
ಉ.. ಕುಡಿದರೂ ತನ್ನಿಚ್ಚೇಯಿಂದ ಇರಬೇಕು
ನಾಯಿ ಹೆಸರು’ಸಂಪಿಗೆ’ಅಂತ
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
ತಾಳ ತಪ್ಪಿದರೆ ಕುಣಿಯೊದು ತಪ್ಪುವುದಿಲ್ಲ
ಕೊಡದ ಲೋಭಿ ಮಾತು ಕೊಡಲಿ ಪೆಟ್ಟು
ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
ನೆತ್ತರು ಉಕ್ಕಿದರೆ ಜೀವ ತೊಡಕೀತು
ವೇದ ಸುಳ್ಳಾದರು ಗಾದೆ ಸುಳ್ಳಾಗದು.
ವಶಗೆಡದೆ ಹಸಗೆಡಲ್ಲ
ಅವರವರ ತಲೆಗೆ ಅವರವರದೇ ಕೈ
ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು
ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
ಕಣ್ಣರಿಯದಿದ್ದರೂ ಕರುಳರಿಯುತ್ತದೆ.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ಚಮ್ಮಾರ ದೇವರಿಗೆ ಚಪ್ಪಲಿ ಪೂಜೆ.
ಕೃಷಿತೋನಾಸ್ತಿ ದುರ್ಭಿಕ್ಷಂ
ಉಪಾಸ ಇದ್ರೂ ಉಪದ್ರ ಇರಬಾರ್‍ದು
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
ತಿಪ್ಪೇ ಮೇಲೇ ಮುಪ್ಪಾದ ಕುಂಬಾರ
ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ
ಯಾರದೊ ದುಡ್ಡಿನಲ್ಲಿ ಯೆಲ್ಲಮನ್ನ ಜಾತ್ರೆ
ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ
ಅಕ್ಕಿಲ್ಲ ಬ್ಯಾಳಿಲ್ಲ ಅಕ್ಕನ್ನ ಕರತರಬೇಕು
ಹೆತ್ತವರಿಗೆ ಹೆಗ್ಗಣ ಮುದ್ದು.
ಹೆಣ್ಣಿನ ಬಾಳು ಕಣ್ಣೀರಿನ ಗೋಳು
ಅಗ್ಗದ ಆಸೆಗೆ ಗೊಬ್ಬರ ತಗೊಂಡರು
ಬಿಳಿ ಆನೆ ಸಾಕಿದ ಹಾಗೆ
ಅಕ್ಕಸಾಲಿ ಅಕ್ಕನ ಚಿನ್ನಾನೂ ಬಿಡ
ಚೇಳಿಗೆ ಮುತ್ತು ಕೊಟ್ಟ ಹಾಗೆ
ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು
ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ
ಮಾಡಿದವರ ಪಾಪ ಆಡಿದವರ ಬಾಯಲ್ಲಿ.
ನೀರೆ ನಿನ್ನ ಮಾತು ನಿಜವೇನೆ ನೀರ ಕಡಿದರೆ ಬೆಣ್ಣೆ ಬಂದಾದೇನೆ
ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ
ಅಂಜಿದವನ ಮೇಲೆ ಕಪ್ಪೆ ಹಾರಿದಂಗೆ
ಬಂಗಾರಕ್ಕೆ ಕುಂದಣವಿಟ್ಟಂತೆ ವಜ್ರಕ್ಕೆ ಸಾಣಿ ಹಿಡಿದಂತೆ
ನಗುವೇ ಆರೋಗ್ಯದ ಗುಟ್ಟು.
ಪದದೊಳಿಲ್ಲ ತಾನರ್ಥದೊಳಿಲ್ಲವು ಪದಾರ್ಥ ಸ೦ಘಾತದೊಳಿಲ್ಲ
ತರಹರಿಸಾಳಾರದವಳು ಮರಣಕ್ಕೆ ಪಾತ್ರಳು
ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
ಒಂದು ಹೊತ್ತು ತಿನ್ನೋವ್ನು ಯೋಗಿ, ಎರಡು ಹೊತ್ತು ತಿನ್ನೋವ್ನು ಭೋಗಿ, ಮೂರು ಹೊತ್ತು ತಿನ್ನೋವ್ನು ರೋಗಿ, ನಾಕು ಹೊತ್ತು ತಿನ್ನೋವ್ನ ಎತ್ಕೊಂಡು ಹೋಗಿ
ಎಲೆ ಎತ್ತೋ ಜಾಣ ಅ೦ದರೆ ಉಂಡವರು ಎಷ್ಟು ಜನ ಅ೦ದನ೦ತೆ.
ಮಾತು ಮನೆ ಮುರೀತು, ತೂತು ಒಲೆ ಕೆಡಿಸ್ತು
ಅಶ್ವಿನೀ ಸಸ್ಯನಾಶಿನೀ.
ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ತಟ್ಟನೆ ಆಡಿದರೆ ಕೊಟ್ಟಷ್ಟು ಫಲ
ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
ಬೆಂದ ಮನೆಗೆ ಹಿರಿದದ್ದೇ ಲಾಭ
ತಾಸಿನ ಬಟ್ಟಲು ನೀರ ಕುಡಿದರೆ ತಾಸಿಗೆ ಕೊಡತೀ ಪೆಟ್ಟು
ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು?
ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
ಮಂತ್ರಕ್ಕಿಂತ ಉಗುಳೇ ಹೆಚ್ಚು.
ಮನೇಲಿ ಇಲಿ, ಬೀದೀಲಿ ಹುಲಿ
ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
ತನಗೆ ಇಲ್ಲ ಕೂಸಿಗೇನು ಹೊದ್ದಿಸಲಿ
ತೋಟದ ಬೇಲಿಯನ್ನು ದಾಟಿ ನೋಡದವರಾರು
ತರಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು
ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
ಬೆಳ್ಳಗಿರೋದೆಲ್ಲಾ ಹಾಲಲ್ಲ
ನೋಡಿ ನಡೆದವನಿಗೆ ಕೇಡಿಲ್ಲ.
ಬಡವನ ಸಿಟ್ಟು ದವಡೆಗೆ ಮೂಲ
ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
ಹಿಡಿ ಘಟವ ನೆಚ್ಚದಿರು ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ
ಕನಿಗೇಡಿಗೆ ಗತಿ ಇಲ್ಲ
ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
ಭಂಗಿ ರಸ ನೆತ್ತಿಗೇರಿ ಬಿಂಗಿಯಂತಾದ
ತಲೆ ಹೋಗುವುದಕ್ಕೆ ಕಾಲು ಹೊಣೆಯಾದ ಹಾಗೆ
ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
ಹೂವಿನಿಂದ ನಾರಿಗೂ ಸ್ವರ್ಗ
ಬಡವರ ಮನೆ ಊಟ ಚೆನ್ನ, ಶ್ರೀಮಂತರ ಮನೆ ನೋಟ ಚೆನ್ನ.
ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
ಗಿಡ ಮೂರು ಮೊಳ, ಕಾಯಿ ಆರು ಮೊಳ.
ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ
ದಾಕ್ಷಿಣ್ಯಕ್ಕೆ ಬಸಿರಾದರೆ ಹಡೆಯೋದು ಕಷ್ಟ
ತೇಗಿ ತೇಗಿ ಬೀಗಿ ಬಿದ್ದ
ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
ಕೋಮಟಿ ಕೊಡ;ಜೈನಿಗ ಬಿಡ
ನಿನ್ನ ಹಿತು(ಮುದ್ದು), ನನ್ನ ತಿಂತು
ಊಟ ತನ್ನಿಚ್ಚೆ,ನೋಟ ಪರರಿಚ್ಚೆ
ಏತಿ ಅಂದರೆ ಪ್ರೇತಿ ಅಂದಂತೆ
ಚಳಿಗಾಲಕ್ಕಿಂತ ಮಳೆಗಾಲ ವಾಸಿ
ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು
ಮಳೆಗಾಲದೇಲಿ ಚಿಗಿಯೂದಿಲ್ಲ ಬೇಸಿಗೇಲಿ ಒಣಗೂದಿಲ್ಲ
ತಾರುಣ್ಯವೇ ರೂಪು ಕಾರುಣ್ಯವೇ ಗುಣ
ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
ತನ್ನ ಕಾಲಿಗೆ ತಾನೇ ಶರಣು ಮಾಡಿ ಹರಸಿಕೊಂಡ ಹಾಗೆ
ದಿನಾ ಸಾಯೋರಿಗೆ ಅಳೋರ್ ‍ಯಾರು?
ಗಂಟೂ ಹೋಯ್ತು;ನಂಟೂ ಹೋಯ್ತು
ಹಂಚು ಕಾಣದ ಕೈ ಕಂಚು ಕಾಣ್ತು
ಮಾನ ಹೋದ ಮೇಲೆ ಮರಣ ಬಂದ ಹಾಗೆ.
ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
ಕಳ್ಳನ ಮನಸ್ಸು ಹುಳ್ಳಗೆ
ನಿಜ ಆಡಿದರೆ ನಿಷ್ಠೂರ
ತಾಯಿಲ್ಲದ ತವರು ಕಾಟಕದಿದ್ದ ಅಡವಿ
ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ
ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು
ಮಾಘ ಕಾವ್ಯ ಮಗನಿಗೆ ಬೇಡ
ಗ್ರಾಮ ಶಾ೦ತಿಗೆ ತಳವಾರತಲೆ ಬೋಳಿಸಿಕೊ೦ಡನ೦ತೆ.
ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
ಹದರಿದವರ ಮೇಲೆ ಕಪ್ಪೆ ಎಸೆದರು
ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.
ಮನೆ ತುಂಬ ಮುತ್ತಿದ್ದರೆ …ಗೂ ಪೋಣಿಸಿಕೊಂಡರಂತೆ
ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ
ಸಾವಿರ ಉಳಿ ಪೆಟ್ಟು, ಒಂದು ಚಿತ್ತಾರ
ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ
ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ
ದೊಡ್ಡ ಗೌಡನ ಮನೇಲಿ ದೊಡ್ಡ ಗುಡಾಣ ಎತ್ತಿದರೆ ಏನೂ ಇಲ್ಲ.
ಬಳ್ಳಿಗೆ ಕಾಯಿ ಭಾರವೇ
ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
ತನ್ನ ತಾನರಿತರೆ ತನ್ನರಿವೆ ಗುರು
ತುಟ್ಟಿಯಾದರೂ ಹೊಟ್ಟೆ ಕೇಳದು
ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
ಎಲ್ಲರೂ ಪಾಲಕೀಲಿ ಕೂತರೆ ಹೊರೋರು ಯಾರು
ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
ಕಡ್ಡೀನ ಗುಡ್ಡ ಮಾಡು
ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
ಕಂಡ ಕಳ್ಳ ಜೀವ ಸಹಿತ ಬಿಡ
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಬಾಳಿ ಬದುಕಿದವ ಕಲಿ,
ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
ಗಳಕ್ಕನೇ ಉಂಡವ ರೋಗಿ, ಗಳಿಗೆ ಉಂಡವ ಭೋಗಿ
ಇರುಳು ಕಂಡ ಭಾವೀಲಿ ಹಗಲು ಬಿದ್ದರು
ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
ಅರೆಪಾವಿನವರ ಅಬ್ಬರ ಬಹಳ
ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
ತೂತು ಗತ್ತಲೇಲಿ ತಾತನ ಮದುವೆ
ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
ಗಾಳಿ ಬಂದಾಗ ತೂರಿಕೋ
ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು
ಆಗೊದೆಲ್ಲ ವೊಳ್ಳೆದಕ್ಕೆ
ಹಗೆ ಬಿತ್ತಿ ಬೆಂಕಿ(ಹೊಗೆ) ಬೆಳೆದ
ತಾಯಿ ಬೇಕು ಇಲ್ಲವೇ ಬಾಯಿ ಬೇಕು.
ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
ತಾರು ಮಾರು ಮಾಡುವವನಿಗೆ ಯಾರು ತಾನೆ ನಂಬ್ಯಾರು
ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ
ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
ಬೊಗಳೊ ನಾಯಿ ಬಡಿಯಬೇಡ ತಿಗುಳಗೆ
ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ
ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
ಸೋದರ ಮಾವನ ಚಾಳು ತುಂಡಪುಂಡರ ಪಾಲು
ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು
ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
ಚೋಟುದ್ದ ಹುಡುಗನಿಗೆ ಮಾರುದ್ದ ಕಂಬಳಿ
ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು
ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.
ಬಾಡಿಗೆ ಎತ್ತೆಂದು ಬಡಿದು ಬಡಿದು ಹೂಡಬೇಕೆ
ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
ಚೆಲ್ಲಿಲ್ಲಿ ಮುಕ್ಕ ಎಲ್ಲಿದ್ದರೇನು ಮಾಡಿದ ರಾಗೀಲಿ ಕಲ್ಲಿದ್ದರೇನು.
ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
ಕಣ್ಣು ಕುರುಡಾದರೆ ಬಾಯಿ ಕುರುಡೇ
ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ.
ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
ಎಂಟು ವರ್ಷಕ್ಕೆ ನನ್ನ ಮಗ ದಂಟಾದ
ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು
ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು
ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
ದುಡಿಮೆಯೇ ದುಡ್ಡಿನ ತಾಯಿ
ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
ಇಕ್ಕಲಾರದ ಕೈ ಎಂಜಲು
ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ
ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
ರಾಜ ಇರೋತನಕ ರಾಣಿ ಭೋಗ
ಮೂರೂ ಬಿಟ್ಟೋನು, ಊರಿಗೆ ದೊಡ್ಡೋನು
ಕೊಡುವವನ ಕೈ ಯಾವಾಲು ಮೇಲೆ
ಬಿರಿದು ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ
ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
ಕಾಸಿಗೆ ತಕ್ಕ ಕಜ್ಜಾಯ.
ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು
ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
ತಾನುಂಟೋ? ಮೂರು ಲೋಕವುಂಟೋ?
ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ
ಬೆಳೆಯುವ ಪೈರು ಮೊಳಕೆಯಲ್ಲಿ
ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
ಹಾಲಿನಲ್ಲಿ ಹುಳಿ ಹಿಂಡಿದಂತೆ
ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
ತಿಳಿದವನಾದರೂ ಮಲಮೂತ್ರ ಬಿಟ್ಟೀತೇ?
ಕೋತಿ ಮೊಸರನ್ನ ತಿಂದು,ಮೇಕೆ ಬಾಯಿಗೆ ಒರೆಸಿದಂತೆ
ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ
ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
ಅಗಸನ ಸಿಟ್ಟು ಅನ್ಯರ ವಸ್ತ್ರದ ಮೇಲೆ.
ಅತ್ತಿತ್ತಲ ಮಾರಿ ಬಂದು ಅತ್ತೆಯ ಬಡಕೊಂಡು (ಬಡಿದು ಕೊಂದು) ಹೋಗಲಿ
ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
ಮಾತಿನ ಬೊಮ್ಮ ತೂತಾದ ಮಡಕೆಯ ಪರಿ
ನಾಯಿ ಬಾಲ ಎ೦ದಿಗೂ ಡೊ೦ಕು.
ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ತೊಟ್ರಂತೆ.
ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ.
ದಾನ ಮಾಡೋಕೆ ಕನಲುವ ಮಾನವ ದಂಡ ಚಕಾರ ಎತ್ತದೆ ತೆರುವ
ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
ತಾನು ನೆಟ್ಟ ಬೀಳು ತನ್ನ ಎದೆಗೆ ಹಬ್ಬಿತು
ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
ಸಂತೇಲಿ ಮಂತ್ರ ಹೇಳಿದಂಗೆ
ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
ತಡವ ಮಾಡುವವನ ಗೊಡವೆ ಬೇಡ
ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
ತುಂಬಿದ ಕೊಡ ತುಳುಕುವುದಿಲ್ಲ
ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ?
ವ್ರತ ಕೆಟ್ಟರೂ ಸುಖ ಪಡಬೇಕು
ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ
ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
ಮಾತಿಗೆ ಮಾತುಗಳ ಓತು ಸಾಸಿರ ಉಂಟು
ತಟ್ಟಿನಲ್ಲಿ ಬಿದ್ದಾಗ್ಯೆ ಗಟ್ಟಿ ಆಗಲಾರ
ಗೆದ್ದೆತ್ತಿನ ಬಾಲ ಹಿಡಿದ ಹಾಗೆ
ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ
ಬೆಣ್ಣೆಯೊಳಗಿನ ಕೂದಲು ತೆಗೆದಂತೆ.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
ಅಧರಕ್ಕೆ ಕಹಿ ಉದರಕ್ಕೆ ಸಿಹಿ
ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
ಆನೆಗೂ ಅಡಿ ತಪ್ಪೀತು
ನಡೆವರು ಎಡವದೇ ಕುಳಿತವರು ಎಡವುವರೇ
ತಗ್ಗಿದವ ಎಂದಿಗೂ ನುಗ್ಗಾಗ
ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
ಅಪಾಯ ತೀರಿತು, ದೇವರನ್ನು ಮರೆತಾಯಿತು.
ಗಂಡ ಹೆಂಡಿರ ಜಗಳ ಉಂಡು ಮಲಗುವತನಕ
ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
ನುಡಿಯಲಿ ಸಲ್ಲನದಾವುದಕೂ.
ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ
ಎಂಜಲ ತಿಂದರೂ ಅಂಜದೆ ತಿನ್ನು
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
ಗ೦ಡ ಪಟ್ಟೆ ಸೀರೆ ತರುತ್ತಾನೆ೦ದು ಇದ್ದ ಬಟ್ಟೆ ಸುಟ್ಟಳ೦ತೆ.
ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು ಬೇರೆ
ಆಪತ್ತಿಗಾದವನೇ ನೆ೦ಟ.
ಬೊಗಳುವ ನಾಯಿ ಕಚ್ಚುವುದಿಲ್ಲ
ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ ಎತ್ತುಕೊಂಡು ಹೋಗಿ
ಕೈ ಕೆಸರಾದರೆ ಬಾಯಿ ಮೊಸರು.
ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ,ಆತ ಆಕೇನ ಬಿಟ್ಟು ಆರು ವರ್ಷ ಆಗಿತ್ತಂತೆ.
ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ.
ಅತಿ ಸ್ನೇಹ ಗತಿ ಕೇಡು
ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
ಹೇಮಗೇಡಿ ನೇಮ ಬೆಳಗಿದ
ತರಲೆ ಕೇಳುವವ ಮರುಳಗಿಂತ ಕಡೆ
ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ
ಹಾದಿ ಹಣವಡ್ಡ ಹಾದರಗಿತ್ತಿ ಮನೆ ಯಾವುದು.
ತಾನು ಬಾಳಲಾರದೆ ವಿಧಿಯ ಬೈದಂತೆ
ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ
ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ
ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
ಹಾವು ಸಾಯಬಾರದು, ಕೋಲು ಮುರೀಬಾರದು.
ಕೆರೆಯ ನೀರ ಕೆರೆಗೆ ಚೆಲ್ಲಿ ವರ ಪಡೆದುಕೊಂಡಂತೆ
‍*ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ
ಕಷ್ಟ ಪಟ್ಟರೆ ಫಲವುಂಟು
ಮಹಾಜನಗಳು ಹೋದದ್ದೇ ದಾರಿ.
ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
ಕುದುರೆ ಕಂಡರೆ ಕಾಲುನೋವು
ಮೊಂಡ ಕೊಡಲಿ ರಟ್ಟೆಗೆ ಮೂಲ
ಬೇಲೀನೇ ಎದ್ದು ಹೊಲ ಮೇಯ್ದಂತೆ
ಕಾರ್ಯವಾಸಿ ಕತ್ತೆ ಕಾಲು ಕಟ್ಟು
ಹಾಯೋ ಎತ್ತು ಹಾಯ್ದರೂ ಬಂತು ಬಿಟ್ಟರೂ ಬಂತು
ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ
ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು
ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ
ಹಣ ಅಂದರೆ ಹೆಣಾನೂ ಬಾಯಿ ಬಿಡುತ್ತದೆ
ನಮ್ಮ ಕಣ್ಣು ನಮಗೆ ಕೆಡಿಸಿತು
ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ
ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
ಕರ್ಮ ಕಳೆಯುವವರೆಗೆ ಮರ್ಮದಲ್ಲಿರು
ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.
ಬುಟ್ಟಿಯಷ್ಟು ಬುದ್ಧಿಗಿಂತ ಮುಷ್ಠಿಯಷ್ಟು ತಾಳ್ಮೆ ಲೇಸು
ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
ಹರೆಯಕ್ಕೆ ಬಂದಾಗ ಹಂದಿನೂ ಚಂದ
ನೋಡಿ ನಡೆದವರಿಗೆ ಕೇಡಿಲ್ಲ.
ಆಳಾಗಬಲ್ಲವನು ಅರಸನಾಗಬಲ್ಲ.
ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
ನೆಚ್ಚಿನೆಮ್ಮೆ ಕೋಣನನ್ನೀಯಿತು
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
ಬೇಲಿನೆ ಎದ್ದು ಹೊಲ ಮೇಯಿತಂತೆ
ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
ಉತ್ತುಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ?
ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
ಮಾಡಿದುಣ್ಣೊ ಮಾರಾಯ
ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
ಆಸೆಯೇ ಜೀವನ, ಜೀವನವೇ ಆಸೆ.
ಬೀಜ ಸಣ್ಣದಾದರೆ ಮರ ಸಣ್ಣದೋ
ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ.
ಕಡು ಕೋಪ ಬಂದಾಗ ತಡಕೊಂಡವನೇ ಜಾಣ
ಬಾಳುವ ಮನೆಗೊಂದು ಬೊಗಳುವನಾಯಿ.
ಛಲವಿಲ್ಲದ ಹೆಂಡ್ತಿ ಕಟ್ಕೊಂಡ್ರೆ ಕಷ್ಟ ಬುಟ್ರೆ ಔಮಾನ.
(ಅವರು) ಚಾಪೆ ಕೆಳಗೆ ತೂರಿದರೆ (ನೀನು) ರಂಗೋಲಿ ಕೆಳಗೆ ತೂರು.
ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು
ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
ಗಾಯದ ಮೇಲೆ ಬರೆ ಕೊಟ್ಟಂತೆ
ಡಾವರ ಹತ್ತಿದಾಗ ದೇವರ ಧ್ಯಾನ
ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ ಪುಣ್ಯದ ಪಾಲು ನನಗಿರಲಿ ಅಂದ
ಅಂಬಲಿಗೆ ಗತಿ ಇಲ್ಲದವ ಕಟ್ಟಾಣಿ ರಂಬೆಯ ಬಯಸಿದ
ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
ಸಾವಿರ ಕೊಟ್ಟರೂ ಸವತಿ ಮನೆ ಬೇಡ
ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
ನಾ ಬಡವ ವಾಲಗ ಸಾವಕಾಶ ಊದು ಅಂದಂತೆ
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
ಭಾವಿಗೆ ಬಿದ್ರೆ,ಸಾಲಿಗ್ರಾಮ ಸಿಗ್‌ತಂತೆ
ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
ಕೆಟ್ಟ ಅಡಿಗೆ ಅಟ್ಟವಳೇ ಜಾಣೆ
ದುಷ್ಟರಿಂದ ದೂರವಿರು
ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
ಆತ್ಮೀಯವಾದ ಪ್ರೇಮ ಅಮರವಾದದ್ದು.
ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
ಹಂಚಿದವರಿಗೆ ಹಲ್ಲು ಬಾಯಿ
ಅಡವಿಯ ದೊಣ್ಣೆ ಪರದೇಸಿಯ ತಲೆ
ಸುಡುವ ಮನೆಯ ಗಳ ಹಿರಿದಂತೆ
ಆಲಸ್ಯಂ ಅಮೃತಂ ವಿಷಂ
ಬಂಟರ ಅಬ್ಬರ ಸೇವಿನ ಗೊಬ್ಬರ
ಉಂಡರೆ ಉಬ್ಬಸ , ಹಸಿದಿದ್ದರೆ ಸಂಕಟ(ನಾಜೂಕು ದೇಹಸ್ಥಿತಿ)
ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
ಇದ್ದದ್ದನ್ನು ಇದ್ದಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರಂತೆ
ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
ದಾನಿಗೆ ದೀನತನ ಸಲ್ಲ, ಗ್ನಾನಿಗೆ ಮೌನ ಸಲ್ಲ
ಮಾಡಿದ ಕರ್ಮ ಬೆನ್ನಾಡಿ ಬಂತು
ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
ಗಂಟು ಕಳ್ಳರು ಸಂತೇಲಿ ಮಂತ್ರ ಹೇಳಿದಂಗೆ
ಜಲ ಶೋಧಿಸಿ ನೀರು ತರಬೇಕು , ಕುಲ ಶೋಧಿಸಿ ಹೆಣ್ಣು ತರಬೇಕು .
ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು
ತರುವವ ಹೋದಮೇಲೆ ಮರಗುವವರುಂಟೇ
ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ
ಹಾವು ಸಾಯಬಾರದು ;ಕೋಲು ಮುರಿಯಬಾರದು
ನಾಯಿ ಬೊಗಳಿದರೆ ದೇವಲೋಕ ಹಾಳೇನು
ಹಾಲು ಕುಡಿದ ಮಕ್ಕಳೇ ಬದುಕೊಲ್ಲ; ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೇ ?
ತಡೇ ಕಟ್ಟುವವನ ಮುಂದೆ ಮುಡಿಯೇನು
ದನ ತಿನ್ನುವವನಿಗೆ ಗೊಬ್ಬರದ ಆಣೆ
ಜನ ಮರುಳೋ ಜಾತ್ರೆ ಮರುಳೋ
ಗ೦ಡಸಿಗೇಕೆ ಗೌರಿ ದುಃಖ ?
ಏತಿ ಅಂದರೆ ಪ್ರೇತಿ .
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ಇದ್ದದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದನಂತೆ
ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಮಿಂದರೆ ಮೈಯ ಕೊಳೆ ಹೋಯ್ತು
ಹೆಣ್ಣು ಪಂಜರ ಜೀವಿ. ಗಂಡು ಅಂಬರ ಜೀವಿ
ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ
ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
ಬಿತ್ತುವಾಗ ಮಲಗಿದರೆ ಕೊಯ್ಯುವಾಗ ಹಗುರವಾಯಿತು.
ವಿರೂಪಾಕ್ಷ ಹ೦ಪೆ ಬಿಡ, ವಿಘ್ನೇಶ್ವರ ಕೊ೦ಪೆ ಬಿಡ.
ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ
ತಲೆಗೆ ಒಂದು ಕಡ್ಡೀಯಾದರೆ ಒಂದು ತಲೆಯ ಹೊರೆ
ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು
ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
ಹೊಳೆಗೆ ಸುರಿದರೂ ಅಳೆದು ಸುರಿಯಬೇಕು.
ಇಮ್ಮನದಿಂದ ಸುಮ್ಮನೆ ಕೆಟ್ಟೆ
ಯಂಕ, ಸೀನ, ನೊಣ ಅಂತ ಮನೇಲಿ ಮೂರೇ ಜನ ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ
ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ
ಹಣ ಎರವಲು ತಂದು ಮಣ ಉರುವಲು ಕೊಂಡ
ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
ಅಳಿಯ ಮನೆ ತೊಳಿಯ
ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
ಕೈಗೆಟುಕದ ದ್ರಾಕ್ಷಿ ಹುಳಿ
ಹೊರಗೆ ಥಳುಕು, ಒಳಗೆ ಹುಳುಕು
ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ
ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
ಆವು ಕಪ್ಪಾದ್ರೆ ಹಾಲು ಕಪ್ಪೇನು
ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು
ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
ಹೆಡ್ಡಾಳಾದ್ರೂ ದೊಡ್ಡಾಳು ಮೇಲು
ಅಯ್ಯೋ ಅಂದರೆ ಅರೆ ವಯಸ್ಸು
ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
ಹಬ್ಬದ ದಿನವೂ ಹಳೇ ಗಂಡನೇ ?
ಹುಣ್ಣಿಮೆ ಬರುವನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು
ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು
ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
ಅಂಗೈ ಹುಣ್ಣಿಗೆ ಕನ್ನಡಿ ಯಾಕೆ
ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಹೊನ್ನಿನ ಶೃತಿ ಕೇಳಿ ಎಂಥೆಂಥಾವರೆಲ್ಲ ಭ್ರಮೆಗೆ ಬಿದ್ದರು
ಯೋಗ ಇದ್ದಷ್ಟೇ ಭೋಗ
ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
ಆಕಾಶಕ್ಕೆ ಏಣಿ ಹಾಕಿದ ಹಾಗೆ
ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ
ತಲೇ ಕೂದಲು ನೆರೆಯಾದ ಮೇಲೆ ತಬ್ಬಿಕೊಂಡ ತಬ್ಬಲಿ ಮುರವ (=ತಿರುಕ)
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.
ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು
ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
ಲಕುಮಿ ತೊಲಗಿದ ಬಳಿಕ ಕುಲ ವೀರವಿದ್ದು ಫಲವಿಲ್ಲ
ಹೊಕ್ಕು ಬಳಸಿದರೆ ನಂಟು
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
ಹಿಂದಲ ಮಾತು ಮರಿ ಮುಂದಲ ಬಾಳು ಅರಿ.
ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
ವಿಧಿ ಮುನಿದರೆ ಸರಿ ಬೆಸವಾಯ್ತು
ಹೂವ ತರುವ ಮನೆಗೆ ದೇವ ಹುಲ್ಲು ಹೊರುವ.
ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
ಹೂವ ತರುವ ಮನೆಗೆ ದೇವ ಹುಲ್ಲು ಹೊರುವ
ಒಲಿದರೆ ನಾರಿ ಮುನಿದರೆ ಮಾರಿ
ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ
ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ
ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
ಪಾಪಿ ಚುನಾವಣೆಗೆ ನಿ೦ತರೆ ಮೂರೇ ಓಟು.
ಸಂದೀಲಿ ಸಮಾರಾಧನೆ ಮಾಡ್ದಂಗೆ
ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.
ಅಡಿಗೆ ಬಿದ್ಫರೂ ಮೀಸೆ ಮೇಲೆ
ಶಂಖದಿಂದ ಬಂದರೇ ತೀರ್ಥ
ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ
ಕೋಟಿ ಕೊಟ್ಟರೂ ಕೂಟ ಕರ್ಮಿಯ ದುಂದುಗವೇ ಬೇಡ
ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
ಬರಿಗೈಯವರ ಬಡಿವಾರ ಬಹಳ.
ಹಾಳೂರಿಗೆ ಉಳಿದವನೇ ಗೌಡ
ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು
ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
ಮಾತಿಂದಲೇ ಉಪಚಾರ ಮಾತಿಂದಲೇ ಅಪಚಾರ
ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ
ನಮ್ಮ ದೇವರ ಸತ್ಯ ನಮಗೆ ಗೊತ್ತು.
ಸಂತೆಗೂ ಮುಂಚೆ ಗಂಟು ಕಳ್ಳರು ನೆರೆದರಂತೆ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
ತಗಲುಗಾರನಿಗೆ ಬಗಲ ಮೇಲೆ ಜ್ಞ್ಯಾನ
ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ
ತಿನ್ನೋದು ತವಡು ನಡೆಯೋದು ವೈಯಾರ
ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ
ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
ತಟಸ್ಥನಾದವನಿಗೆ ತಂಟೆಯೇನು?
ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
ಊರಿಗೆ ಬಂದ ನೀರೆ ನೀರಿಗೆ ಬಾರದಿರುತ್ತಾಳೆಯೇ?
ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ
ತನ್ನ ಹಲ್ಲು ತಾ ಮರಕೊಂಡು ಇನ್ನೊಬ್ಬನ ಮೇಲೆ ದೂರು ಹೇಳಿದ
ಆಸೆಗೆ ಕೊನೆಯಿಲ್ಲ
ತರತರವಾಗಿ ಹೇಳಿದ್ದು ಮರೆತರೆ ಮರಕ್ಕಿಂತಾ ಕಡೆ
ಎಡದ ಎತ್ತಿಗೆ ಬಡಿದರೆ ಬಲದ ಎತ್ತಿಗೆ ತಾಕಿತು
ಕಾಲಿನದು ಕಾಲಿಗೆ; ತಲೆಯದು ತಲೆಗೆ
ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
ಆತುರಕ್ಕೆ ಅಜ್ಜಿ ಮೈನೆರೆದಳು
ಅಳಿವುದೇ ಕಾಯ ಉಳಿವುದೇ ಕೀರ್ತಿ
ತಾನಾಗಿ ಬೀಳುವ ಮರಕ್ಕೆ ಕೊದಲಿ ಏಟು ಹಾಕಿದ ಹಾಗೆ .
ಅಂದು ಬಾ ಅಂದ್ರೆ ಮಿಂದು ಬಂದ
ಎದೆಎದೆಯನು ಪಿಸು ಮಾತೊಳಗರಳಿಸಿ ಮುದ ಹರಡುವ ಕಲೆ ಋಷಿ ಬಲ್ಲ.
ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
ತಾನೂ ತಿನ್ನ, ಪರರಿಗೂ ಕೊಡ.
ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ
ಊರು ದೂರಾಯಿತು ಕಾಡು ಹತ್ತರಾಯಿತು
ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ
ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
ಗಂಡ ಸರಿಯಿದ್ರೆ ಗುಂಡೂ ಪಾವನ
ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ
ದೀಪದ ಕೆಳಗೆ ಯಾವತ್ತೂ ಕತ್ತಲೆ.
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
ಅಕ್ಕ ಬರಬೇಕು ಅಕ್ಕಿ ಮುಗೀಬಾರದು
ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
ಹಾರ‍್ಸೋನೋ ತೀರ‍್ಸೋನೋ.
ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ

  ಸುಂದರಕಾಂಡದಲ್ಲಿ ಹನುಮಂತ ದೇವರ ಒಂದು ಸುಂದರ ಪ್ರಸಂಗ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೨ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೩ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೪ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೫ ಕ್ಕೆ ಇಲ್ಲಿ ಕ್ಲಿಕ್ ಮಾಡಿ

  ಭೋಕ್ತಾ ಎಂದರೆ ಏನು? ಭಗವಂತ ಹೇಗೆ ಭೋಕ್ತ?

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೬ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೭ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೮ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೯ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧೦ ಕ್ಕೆ ಇಲ್ಲಿ ಕ್ಲಿಕ್ ಮಾಡಿ

  ಗುರುಗಳ ಉಪದೇಶದಿಂದ ಶಿಷ್ಯನಲ್ಲಿ ಯಾವ ರೀತಿ ಬದಲಾವಣೆಯಾಗುತ್ತದೆ …?

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧೧ ಕ್ಕೆ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

Translate »