ಹಣ್ಣು…ಹಣ್ಣು….ಹಣ್ಣು ….
************************
ವೈದ್ಯರ ದೂರವಿಡಲು ಸೇಬುಹಣ್ಣು
ಮಧುಮೇಹ ದೂರಾಗಲು ನೇರಳೆಹಣ್ಣು
ದೇಹವ ತಣಿಸಲು ಬೇಲದಹಣ್ಣು
ಸುಲಭದಿ ಪಚನವಾಗಲು ಬಾಳೆಹಣ್ಣು
ಶಕ್ತಿಯ ಆಗರ ಹಲಸಿನ ಹಣ್ಣು
ಕಬ್ಬಿಣದ ಮೂಲಾಗ್ರ ಕವಳೀಹಣ್ಣು
ಸಕ್ಕರೆಯು ಹೆಚ್ಚಿರುವ ಖರ್ಜೂರದಣ್ಣು
ಹುಳಿಗೆ ಶ್ರೇಷ್ಟ ಹುಣಸೇ ಹಣ್ಣು
ಕೊಬ್ಬು ಕರಗಿಸಲು ಪುನರ್ಪುಳಿಯಣ್ಣು
ಕೊಬ್ಬು ಹೆಚ್ಚಿಸಲು ಬೆಣ್ಣೇ ಹಣ್ಣು
ರೋಗನಿರೋಧಿಸಲು ಕಿತ್ತಳೆ ಹಣ್ಣು
ಕ್ಯಾನ್ಸರ್ ತಡೆಗೆ ಹನುಮಾನ್ ಫಲ
ಬರದಲೂ ಬೆಳೆವುದು ಸೀತಾಫಲ
ಫಲದಲದು ರಾಜ ಮಾವಿನಹಣ್ಣು
ಹಣ್ಣುಗಳ ರಾಣಿ ಮ್ಯಾಂಗೋಸ್ಟೀನ್
ಬೇಸಿಗೆಯಲಿ ಬೇಕಾಗುವ ಕಲ್ಲಂಗಡಿ ಹಣ್ಣು
ಶರಬತ್ತಿಗೆ ಸೂಕ್ತ ನಿಂಬೇಹಣ್ಣು
ವೈನು ಮಾಡಲು ಬೇಕು ದ್ರಾಕ್ಷಿಹಣ್ಣು
ಜೆಲ್ಲಿಗೆ ಅತಿ ಸೂಕ್ತ ಸೀಬೇಹಣ್ಣು
ಜಾಮ್ ಮಾಡಲು ಅನಾನಸು
ತಿನ್ನಲು ಬಲು ಸಿಹಿ ಚಿಕ್ಕು ಹಣ್ಣು
ದುಡ್ಡುಮಾಡಲು ದಾಳಿಂಬೆಹಣ್ಣು
ದೃಷ್ಟಿ ಚೆನ್ನಾಗಿರಲು ಪರಂಗಿಹಣ್ಣು
ಒಣಗಿಸಿಟ್ಟರೆ ಚೆನ್ನ ಅಂಜೂರದಣ್ಣು
ಐಸ್ ಕ್ರೀಂನೊಂದಿಗೆ ಸ್ಟ್ರಾಬೆರಿಯಣ್ಣು
ಇದೀಗ ಬರುತಿದೆ ಮಲ್ಬೆರಿಯಣ್ಣು
ಹೆದರದೇ ತಿನ್ನಿರಿ ಪಿಯರ್ ಹಣ್ಣು
ಹಸಿದು ತಿನ್ನಿರಿ ಹಲಸಿನಣ್ಣು
ಉಂಡು ತಿನ್ನಿರಿ ಮಾವಿನಣ್ಣು
ಹೊಸಬಗೆಯ ಹೊಸವಿಧಧ
ರಾಂಬೂಟಾನ್ ಲಿಚಿ ಲೊಕ್ವಾಟ್
ವಾಟರ್ ಆಪಲ್ ಲೊಂಗಾನ್
ಸಿಕ್ಕಿದರೆ ತಿನ್ನಬಹುದಾದ ಈಚಲಣ್ಣು
ಜ್ಯೂಸಿಗಾಗಿ ಫ್ಯಾಶನ್ ಫ್ರೂಟ್
ಬಿಸಿಲಿಗೂ ಜಗ್ಗದ ಬೋರೆಹಣ್ಣು
ಅಪರೂಪಕೆ ಸಿಗುವ ಕಮರಾಕ್ಷಿ ಹಣ್ಣು
ಖನಿಜಗಳ ಆಗರ ಕಿವಿ ಫ್ರೂಟ್
ತಿನ್ನಬೇಕು ಎಲ್ಲಾ ಫ್ರೂಟ್
ಆರೋಗ್ಯಕ್ಕಾಗಿ ಹಣ್ಣು ತಿನ್ನಿ
ಆನಂದಕ್ಕಾಗಿ ಹಣ್ಣು ತಿನ್ನಿ
ಪೌಷ್ಟಿಕ ಭದ್ರತೆಗೂ ಹಣ್ಣು ತಿನ್ನಿ