ಆರೋಗ್ಯಕಾರಿ ನಿಂಬೆರಸ !!!!
ನಿಂಬೆರಸವನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ನಿಂಬೆರಸದೊಡನೆ ಜೇನನ್ನು ಬೆರೆಸಿ ಮುಖಕ್ಕೆ ಲೇಪಿಸುವುದರ ಮೂಲಕ ಮುಖದ ಸುಕ್ಕು ಹಾಗೂ ಮೊಡವೆಗಳನ್ನು ನಿವಾರಿಸಿಕೊಳ್ಳುವುದಲ್ಲದೇ ಕಾಂತಿಯನ್ನು ಪಡೆಯಬಹುದು.
ಪ್ರತಿದಿನ ಬೆಳಗ್ಗೆ ನಿಂಬೆರಸದೊಡನೆ ಉಪ್ಪು ಹಾಗೂ ಜೇನುತುಪ್ಪ ಹಾಕಿ ಸೇವಿಸಿದರೆ ಹೊಟ್ಟೆಯಲ್ಲಿನ ಜಂತುಹುಳುಗಳನ್ನು ನಾಶಮಾಡಬಹುದು.
ಬೆಚ್ಚಗಿನ ನೀರಿನೊಡನೆ ಜೇನುಹನಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ಬೊಜ್ಜು ನಿವಾರಣೆಯಾಗುತ್ತದೆ.
ನಿಂಬೆಹಣ್ಣಿನ ರಸವನ್ನು ತಯಾರಿಸಿಟ್ಟುಕೊಂಡು ದಿನವೂ ಸೇವಿಸುವುದು ಹೃದಯದ ಆರೋಗ್ಯಕ್ಕೆ ಉತ್ತಮ.
ನಿಂಬೆರಸದೊಡನೆ ವೀಳ್ಯದೆಲೆಯರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಮಾಡಿ ಕುದಿಸಿ, ಸ್ವಲ್ಪ ಅರಿಶಿನ ಪುಡಿ ಸೇರಿಸಿ ಹಚ್ಚಿಕೊಳ್ಳುವುದರಿಂದ ಕಜ್ಜಿ, ತುರಿಕೆ ನಿವಾರಣೆಯಾಗುತ್ತವೆ.
ಅಂಗೈ ಮತ್ತು ಅಂಗಾಲುಗಳು ಬಿರುಕುಬಿಟ್ಟಿದ್ದರೆ ನಿಂಬೆರಸವನ್ನು ಸವರುವುದರಿಂದ ಬಿರುಕು ಮಾಯವಾಗುತ್ತವೆ.
ನಿಂಬೆರಸ ಮತ್ತು ಉಪ್ಪನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸುತ್ತಿದ್ದರೆ ಬಾಯಿಹುಣ್ಣು ನಿವಾರಿಸಬಹುದು.
ಉಗುರು ಸುತ್ತಾಗಿರುವ ಬೆರಳಿಗೆ ನಿಂಬೆಹಣ್ಣು ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ.
ನಿಂಬೆರಸದೊಡನೆ ಕೆಂಪು ಕೇಸರಿ, ಏಲಕ್ಕಿಪುಡಿ ಹಾಗೂ ಸಕ್ಕರೆ ಬೆರೆಸಿ ಪಾನಕದಂತೆ ಸೇವಿಸುವುದರಿಂದ ಬಾಯಾರಿಕೆ, ದಣಿವು, ವಾಂತಿ ಮತ್ತು ಪಿತ್ತ ನಿವಾರಿಸಿಕೊಳ್ಳುವುದು.
ತಣ್ಣೀರಿಗೆ ಸ್ವಲ್ಪ ನಿಂಬೆರಸ ಸೇರಿಸಿ ಕುಡಿಯುವುದರಿಂದ ಎದೆಯುರಿ ಮತ್ತು ಹುಳಿತೇಗು ನಿವಾರಿಸಬಹುದು.
ಕವಡೆಯನ್ನು ನಿಂಬೆರಸದಲ್ಲಿ ತೇಯ್ದು ಹಣೆಗೆ ಲೇಪಿಸಿದರೆ ತಲೆಸಿಡಿತ ನಿವಾರಣೆಯಾಗುತ್ತದೆ.
ನಿಂಬೆರಸ, ನೆಲ್ಲಿರಸ ಹಾಗೂ ಎಳ್ಳೆಣ್ಣೆಯನ್ನು ಬೆರೆಸಿ ಕಾಯಿಸಿ ತೈಲ ಮಾಡಿಟ್ಟುಕೊಂಡು ನಿತ್ಯವೂ ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವಿಕೆ ನಿವಾರಿಸಬಹುದು.
ನಿಂಬೆರಸ, ಪಚ್ಚೆಕರ್ಪೂರ ಹಾಗೂ ಜೇನುತುಪ್ಪ ಸೇರಿಸಿ ದಿನನಿತ್ಯ ಕಣ್ಣಿಗೆ ಕಾಡಿಗೆಯಂತೆ ಹಚ್ಚಿಕೊಳ್ಳುವ ಮೂಲಕ ಇರುಳು ಕುರುಡು ಹಾಗೂ ದೃಷ್ಟಿ ಮಾಂದ್ಯತೆಯನ್ನು ನಿವಾರಿಸಬಹುದು.
ನಿಂಬೆರಸಕ್ಕೆ ಜೇನು ಹಾಗೂ ಏಲಕ್ಕಿಪುಡಿ ಬೆರೆಸಿ ಸೇವಿಸಿದರೆ ವಾಂತಿ ಮತ್ತು ಭೇದಿ ಶಮನವಾಗುವುದು.
ಬಿಸಿನೀರಿನೊಂದಿಗೆ ನಿಂಬೆರಸ ಸೇರಿಸಿ ಮುಕ್ಕಳಿಸುವುದರಿಂದ ವಸಡುಗಳು ಬಲಿಷ್ಠವಾಗುತ್ತವೆ.
ನಿಂಬೆರಸವನ್ನು ಬಾಳೆಹಣ್ಣಿನೊಡನೆ ಬೆರೆಸಿ ಮುಖಕ್ಕೆ ಲೇಪಿಸಿದರೆ ಚರ್ಮ ಮೃದುವಾಗಿ ಕಾಂತಿ ಹೆಚ್ಚುತ್ತದೆ.
ನಿಂಬೆರಸದಲ್ಲಿ ಹೆಚ್ಚಾಗಿರುವ ಸಿ-ಜೀವಸತ್ವವು ರೋಗನಿರೋಧಕಶಕ್ತಿಯನ್ನು ವೃದ್ಧಿಸುತ್ತದೆ.