ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ನಕ್ಕು ನಗಿಸಲು ಒಂದಿಷ್ಟು ಕನ್ನಡ ಜೋಕ್ಸ್

ಕನ್ನಡ ಹಾಸ್ಯದ ಹೊನಲು ಒಮ್ಮೆ ನಕ್ಕು ಬಿಡಿ

ಕೆಸರಿನಲ್ಲಿ ಮಲಗಿದ ಎಮ್ಮೆ 🐃
ಸೀರಿಯಲ್ ನೋಡಲು ಕುಳಿತ ಹೆಣ್ಣು 👩
ಯಾವತ್ತೂ ಬೇಗ ಎದ್ದು ಬರುವುದಿಲ್ಲ…

😂😂😆😆

ಗ್ಯಾರೇಜಿಗೆ ಹೋಗಿ ಬಂದ ಬೈಕು…
ತವರಿಗೆ ಹೋಗಿ ಬಂದ ವೈಫು…
ಒಂದೆರಡು ದಿನ ಆದ ಮೇಲೇನೇ ದಾರಿಗೆ ಬರೋದು!

😂😂😀😀

ಮಹಿಳೆಯರಿಗೆ ಕಪಾಟು ತೆರೆದರೆ ಎರಡೇ ಚಿಂತೆ…
​ತೊಡುವುದಕ್ಕೆ ಬಟ್ಟೆ ಇಲ್ಲ​
ಇಡುವುದಕ್ಕೆ ಜಾಗವಿಲ್ಲ…

😂😂😀😀

ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ…
ತಲೆ ಮೇಲೆ ಇಟ್ಟುಕೊಂಡ್ರೆ ನೀವು ಸೇಫ್ ಆಗಿರ್ತೀರಿ

😂😂😂

ಅಪ್ಪ : ಯಾಕೋ ಶಾಲೆಗೆ ಹೋಗಿಲ್ಲ?​

ಪುಟ್ಟ : ನಿನ್ನೆ ನಮ್ಮನ್ನೆಲ್ಲಾ ತೂಕ ಮಾಡಿದ್ದಾರೆ… ಇವತ್ತು ಮಾರಿ ಬಿಡ್ತಾರೇನೋ ಅಂತ ಹೋಗಿಲ್ಲ!

  ಸೂರ್ಯ ಅಷ್ಟೋತ್ತರ ಶತನಾಮಾವಳಿ

😂🤦🏻‍♂😂

ಹೆಂಡತಿ: ಈ ಮನೇಲಿ ನಾನ್ ಇರಬೇಕು, ಇಲ್ಲ ನಿಮ್ಮ ಅಮ್ಮ ಇರಬೇಕು…

ಗಂಡ: ಇಬ್ರೂ ಬೇಕಾಗಿಲ್ಲ!! ಕೆಲಸದವಳು ಒಬ್ಬಳಿದ್ರೆ ಸಾಕು…

😉😜😝

ಅಪಘಾತ ವಲಯದ ಸೂಚನಾಫಲಕದ ಹೊಸ ಸಾಲು:
ಎಚ್ಚರಿಕೆ:-
ನಿಧಾನವಾಗಿ ಹೋಗದಿದ್ದಲ್ಲಿ
​ನಿಧನ​ವಾಗಿ ಹೋಗುವಿರಿ!

😂😂😂

ಜಗತ್ತಲ್ಲಿ ಹುಡುಗರ ಬಗ್ಗೆ ಇರೋ ದೊಡ್ಡ ತಪ್ಪು ತಿಳುವಳಿಕೆ:

“ಮದುವೆ ಆದ್ಮೇಲೆ ಹುಡುಗ ಸರಿಹೋಗ್ತಾನೆ”….!!!

😉😂😉

ಅತಿಥಿ: ಬಾಗಿಲವರೆಗೂ ಬಂದು ಬೀಳ್ಕೊಡುತ್ತಿದ್ದೀರಿ… ತುಂಬಾ ಸಂತೋಷ…

ಮನೆ ಒಡತಿ: ಹಾಗೇನಿಲ್ರಿ… ನಿನ್ನೆ ತಾನೇ ಹೊಸ ಚಪ್ಪಲಿ ತಗೊಂಡೆ… ಈಗಿನ ಕಾಲದಲ್ಲಿ ಯಾರನ್ನೂ ನಂಬಲಿಕ್ಕೆ ಬರಲ್ಲ ನೋಡಿ…

😝😝😝😝😝

ಲೇಡೀಸ್ ಹಾಸ್ಟೆಲ್ ಗೆ ಬೆಂಕಿ ಹತ್ತಿಕೊಂಡಿತು‌. ಪಕ್ಕದ ಹಾಸ್ಟಲಿನ ಹುಡುಗರು ಮುಗಿಬಿದ್ದರು. ಆಗ ದೂರದರ್ಶನದಲ್ಲಿ ಬಂದ ಬ್ರೇಕಿಂಗ್ ನ್ಯೂಸ್ – “ಹಾಸ್ಟಲ್ ಗೆ ಹತ್ತಿದ್ದ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ ಹುಡುಗರನ್ನು ಹತೋಟಿಗೆ ತರುವುದು ಕಷ್ಟವಾಗಿದೆ”

  ಗಂಡ ಹೆಂಡತಿ ಜೋಕ್ಸ್ ಗಳು - husband wife jokes

😀😀😀😀😀😀

ಮದುವೆ ಮನೆಯಲ್ಲಿ ಚಪ್ಪಲಿ ಕಳೆದುಕೊಂಡವನ ಕವಿತೆ:

ಒಂದು ಜೋಡಿ ಸೇರುವುದನ್ನು ನೋಡಲು ಬಂದು
ಇನ್ನೊಂದು ಜೋಡಿಯನ್ನ ಕಳೆದುಕೊಂಡೆ…

😜😝😁

ಸೋಮ : ನಿಂಗೆ ಎಷ್ಟು ಮಕ್ಳು? 🤔

ಗುಂಡ : 12, ಪುನಃ ಗರ್ಭಿಣಿ… 😊

ಸೋಮ : ಅಷ್ಟೊಂದು ಮಕ್ಳ? 😱

ಗುಂಡ : ಹೆಂಡ್ತಿನ ಯಾವತ್ತೂ ಖಾಲಿ ಹೊಟ್ಟೇಲಿ ಇಡಲ್ಲ ಅಂತ ಮಾವಂಗೆ ಮಾತು ಕೊಟ್ಟಿದ್ದೆ…

😂😂😜😜

ಮಗ: ಅಮ್ಮಾ ನನಗೆ ಈ ಅಂಗಡಿಯಿಂದ ಪಟಾಕಿ ಕೊಡ್ಸು…

ಅಮ್ಮ: ಅಯ್ಯೋ ಕರ್ಮ… ಅದು ಪಟಾಕಿ ಅಂಗಡಿ ಅಲ್ವೋ… ಅದು ladies hostel

  ಅನ್ನಂ ಬ್ರಹ್ಮ ಸ್ವರೂಪಂ

ಮಗ: ಮತ್ತೆ ಅಪ್ಪ ನೆನ್ನೆ ಅವರ ಫ್ರೆಂಡ್ ಹತ್ರ ಹೇಳ್ತಿದ್ದರು ಇಲ್ಲಿ ಮಸ್ತ್ ಪಟಾಕಿಗಳಿವೆ ಅಂತ…

😂😂😂

ಹೆಂಡತಿ (ಸಿಟ್ಟಿನಿಂದ) : ನಿಮ್ಮನ್ನು ಮದುವೆ ಆಗೋ ಬದಲು ನಾನು ಒಬ್ಬ ರಾಕ್ಷಸನ್ನ ಮದುವೆ ಆಗಿದ್ರೂ ಎಷ್ಟೋ ಸುಖವಾಗಿರ್ತಿದ್ದೆ…

ಗಂಡ : ಹಾಗೆಲ್ಲ ರಕ್ತಸಂಬಂಧದಲ್ಲಿ ಮದುವೆ ಆಗಬಾರದು ಕಣೇ ಒಳ್ಳೇದಲ್ಲ! 😜

      ನಗುನಗುತ್ತಾ ಇರಿ.

Leave a Reply

Your email address will not be published. Required fields are marked *

Translate »