ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಭಾವದಿಂದ ಸ್ವಭಾವ ಬದಲಾಗದು – ಕಥೆ

ಪ್ರಭಾವದಿಂದ ಸ್ವಭಾವ ಬದಲಾಗದು:-

ಇದು ವೇದವ್ಯಾಸರು ಹೇಳಿದ ಮಹಾಭಾರತದ ಕಥೆ. ಶಾಂತಿಪರ್ವದಲ್ಲಿ ಭೀಷ್ಮರು ಧರ್ಮರಾಯನಿಗೆ ಬೋಧಿಸಿದ ನೀತಿಕಥೆ. ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಒಬ್ಬ ಋಷಿ ತಪಸ್ಸನ್ನಾಚರಿಸುತ್ತಿದ್ದರು.ಕಾಡಿನಲ್ಲಿರುವ ಹಣ್ಣುಗಳು, ಕಂದಮೂಲಗಳೇ ಅವರ ಆಹಾರವಾಗಿತ್ತು. ಋಷಿಗಳು, ಇಂದ್ರಿಯನಿಗ್ರಹದಿಂದ, ಹಾಗೂ ವ್ರತ- ಕಥೆ, ನೇಮ- ನಿಷ್ಟೆ, ಉಪವಾಸಗಳಿಂದ ಆತ್ಮಶಕ್ತಿ ಗಟ್ಟಿಯಾಗಿತ್ತು. ಕಾಡಿನಲ್ಲಿರುವ ಎಲ್ಲಾ ಪ್ರಾಣಿ, ಪಕ್ಷಿಗಳನ್ನು ಪ್ರೀತಿಯಿಂದ ನೋಡುತ್ತಿದ್ದು, ಮರಗಿಡಗಳನ್ನೂ ಸಂರಕ್ಷಿಸಿದ್ದರು.ಮುನಿಗಳು ಮಧ್ಯಾನದ ಸಮಯದಲ್ಲಿ ಕಾಡಿನ ಸೌಂದರ್ಯ ಅಹ್ಲಾದಿಸುತ್ತಾ ಕುಳಿತಾಗ, ಜಿಂಕೆ, ಮೊಲೆ, ನವಿಲು, ಸಾರಂಗ, ಪ್ರಾಣಿಗಳು, ಗಿಳಿ, ಕೋಗಿಲೆ, ಗುಬ್ಬಿ, ಪಾರಿವಾಳಗಳಂಥ ಪಕ್ಷಿಗಳು ಅವರ ಸುತ್ತಲೂ ಬಂದು ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದವು.

ಕ್ರೂರ ಪ್ರಾಣಿಗಳಾದ ಸಿಂಹ, ಹುಲಿ, ಚಿರತೆ ಮತ್ತು ಆನೆಗಳ ಸಹ ಋಷಿಗಳ ಹತ್ತಿರ ಬರುತ್ತಿದ್ದವು. ಅವುಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಋಷಿಗಳ ಬಳಿ ಒಂದು ನಾಯಿ ಇತ್ತು. ಅದನ್ನು ಕಂಡರೆ ಋಷಿಗೆ ಬಹಳ ಪ್ರೀತಿ. ಆಶ್ರಮದಲ್ಲೇ ಇದ್ದುದರಿಂದ ಅದು ಅವರಂತೆ, ಗೆಡ್ಡೆಗೆಣಸು ಕಂದಮೂಲಗಳನ್ನು ತಿಂದು ಜೀವಿಸುತ್ತಿತ್ತು. ಋಷಿಗಳು ಮಾಡುವ ಏಕಾದಶಿ, ಉಪವಾಸ, ವ್ರತಗಳಂತೆ ನಾಯಿಯು ಆಹಾರ ಸೇವಿಸದೆ ಬರಬರುತ್ತಾ ಅದು ಬಹಳ ಬಡಕಲಾಗಿತ್ತು. ಒಂದು ದಿನ ಕಾಡಿನಲ್ಲಿ ಹಸಿದು ಕಂಗಾಲಾಗಿದ್ದ ಚಿರತೆಯೊಂದು ನಾಯಿ ತಿನ್ನಲು ಬಂದಿತು. ನಾಯಿ ಹೆದರಿ ತನ್ನ ರಕ್ಷಣೆ ಮಾಡಿಕೊಳ್ಳಲು ಋಷಿ ಇದ್ದಲ್ಲಿಗೆ ಓಡಿತು. ಅದರ ಮೇಲೆ ಕನಿಕರಗೊಂಡ ಆ ಋಷಿಯು ತಮ್ಮ ತಪಃಶಕ್ತಿಯಿಂದ ನಾಯಿಯನ್ನು ಶಕ್ತಿಯುತವಾದ ಚಿರತೆಯಾಗಿ ಮಾರ್ಪಡಿಸಿದರು. ನಾಯಿಯ ಮೇಲೆ ಎರಗಲು ಬಂದಿದ್ದ ಚಿರತೆ ಹೆದರಿ ಓಡಿಹೋಯಿತು.

  ಗಣಪತಿ ಅಷ್ಟೋತ್ತರ ಮಹತ್ವ

ಸ್ವಲ್ಪ ದಿನಗಳ ನಂತರ ಚಿರತೆಯಾಗಿ ಮಾರ್ಪಟ್ಟಿದ್ದ ನಾಯಿಯ ಮೇಲೆ ಒಂದು ಭಯಂಕರವಾದ ಹುಲಿಯು ಎರಗಲು ಬಂದಿತು. ಹೆದರಿದ ಚಿರತೆ ಮತ್ತೊಮ್ಮೆ ಋಷಿಯ ಹತ್ತಿರ ಹೋಯಿತು. ಮತ್ತೆ ಕನಿಕರಗೊಂಡ ಋಷಿಯು ಚಿರತೆಯನ್ನು ದೊಡ್ಡ ಹುಲಿಯನ್ನಾಗಿ ಮಾಡಿದರು. ಇದನ್ನು ನೋಡಿದ ಕಾಡಿನ ಹುಲಿಯು ಹೆದರಿ ಓಡಿಹೋಯಿತು. ಈ ರೀತಿಯಾಗಿ ಹುಲಿಯಾಗಿ ಮಾರ್ಪಟ್ಟ ನಾಯಿಯು ಗೆಡ್ಡೆ ಗೆಣಸುಗಳನ್ನು ತಿನ್ನುವುದನ್ನು ಬಿಟ್ಟು, ಕಾಡಿನಲ್ಲಿರುವ ಇತರೆ ಪ್ರಾಣಿಗಳನ್ನು ಕೊಂದು ತಿನ್ನತೊಡಗಿತು. ತಾನೇ ಅರಣ್ಯದ ರಾಜನೆಂದು ತಿಳಿಯಿತು. ಮತ್ತೆ ಸ್ವಲ್ಪ ದಿನಗಳು ಕಳೆದ ಹಾಗೆ, ಆನೆಯೊಂದು ಬಂದು ಹುಲಿಯನ್ನು ಹೆದರಿಸಿತು. ಮತ್ತೆ ಹುಲಿಯು ತನ್ನ ರಕ್ಷಣೆಗಾಗಿ ಋಷಿಯ ಬಳಿ ಹೋಯಿತು . ಪುನಹ ಋಷಿಯು ಕನಿಕರದಿಂದ ಆ ಹುಲಿಯನ್ನು ಆನೆಗಿಂತ ಬಲವಾದ ಹುಲಿಯನ್ನಾಗಿ ಮಾರ್ಪಡಿಸಿದರು. ಆನೆಯು ತನಗಿಂತ ಶಕ್ತಿಯುತವಾದ ಹುಲಿಯನ್ನು ನೋಡಿ ಹೆದರಿ ಓಡಿ ಹೋಯಿತು. ಋಷಿಯ ಅನುಗ್ರಹದಿಂದ ನಾಯಿಯಾಗಿದ್ದ, ನಾಯಿಯು ಹುಲಿಯಾಗಿತ್ತು.

  ಯಾರಿಗೆ ಯಾವಾಗ ಏನು ಎಷ್ಟು ಕೊಡಬೇಕೆಂಬುದನ್ನು ಆ ಭಗವಂತನೇ ಬಲ್ಲ

ಒಂದಷ್ಟು ಕಾಲಾ ನಂತರ ಎಂಟು ಕಾಲುಗಳು, ಹಣೆಯ ಮೇಲೆ ಕಣ್ಣುಗಳುಳ್ಳ ಶರಭವೊಂದು ನಾಯಿ ರೂಪದಿಂದ ಸಿಂಹವಾಗಿದ್ದ, ಸಿಂಹದ ಮೇಲೆ ಎರಗಿ ಬಂದಿತು. ಮತ್ತೆ ಸಿಂಹವು ಹೆದರಿ ರಕ್ಷಣೆಗಾಗಿ ಋಷಿಯ ಬಳಿ ಹೋಯಿತು.
ಕನಿಕರಗೊಂಡ ಋಷಿಯು ಸಿಂಹವನ್ನು ಬಂದಿರುವ ಶರಭ ಕ್ಕಿಂತಲೂ, ದಷ್ಟಪುಷ್ಟವಾದ ಸಿಂಹವನ್ನಾಗಿ ಮಾರ್ಪಡಿಸಿದರು. ದೈತ್ಯಾಕಾರದ ಶರಭನನ್ನು ಕಂಡು ಬಂದಿದ್ದ ಶರಭ ಹೆದರಿ ಓಡಿಹೋಯಿತು.

ಪರಿವರ್ತನೆಗೊಂಡ ಶರಭ, ಯಾರ ಅಳತೆ- ಅಂಕೆಯಿಲ್ಲದೆ ಕಾಡಿನ ತುಂಬಾ ಸಂಚರಿಸುತ್ತಾ, ಹಸಿವಿರಲಿ, ಇಲ್ಲದಿರಲಿ ಕಣ್ಣಿಗೆ ಕಂಡ ಪ್ರಾಣಿಗಳನ್ನೆಲ್ಲಾ ಕೊಂದು ತಿನ್ನುತ್ತಾ, ಇಡೀ ಕಾಡನ್ನೇ ಹೆದರಿಸಿ ಕೊಂಡು ಓಡಾಡತೊಡಗಿತು.
ಇದರ ಭಯದಿಂದಾಗಿ ಬೇರೆ ಪ್ರಾಣಿಗಳು ಹೆದರಿ ಅಡಗಿ ಕೊಳ್ಳತೊಡಗಿದವು. ಬದಲಾಗಿದ್ದ ನಾಯಿ ಶರಭವು, ಋಷಿ ಮಾಡಿದ ಉಪಕಾರವನ್ನು ಮರೆತು, ಹೀಗೆ ಯೋಚಿಸಿತು. ಈಗ ಕಾಡಿನಲ್ಲಿ ನನ್ನಷ್ಟು ಬಲಿಷ್ಠವಾದ ಪ್ರಾಣಿ ಯಾರು ಇಲ್ಲ. ಶರಭ ತನ್ನನ್ನು ತಾನೇ, ಚಿರತೆ,ಹುಲಿ, ಸಿಂಹ, ಆನೆ,ಎಲ್ಲಕ್ಕಿಂತ, ಶಕ್ತಿಯುತವಾಗಿರುವೆನು ಎಂದು ಅಂದುಕೊಂಡಿತು. ಈಗ ನನಗೆ ಯಾರು ಶತ್ರುಗಳಿದ್ದಾರೆ? ನನಗೆ ಶತ್ರು ಅಂದರೆ ಋಷಿ ಒಬ್ಬನೇ, ಏಕೆಂದರೆ ನಾಯಿಯಾದ ನನ್ನನ್ನು ಚಿರತೆ, ಹುಲಿ, ಸಿಂಹ ,ಶರಭವನ್ನಾಗಿ ಮಾಡಿದವನು ಮುಂದೊಂದು ದಿನ ಎಲ್ಲಾ ಪ್ರಾಣಿಗಳನ್ನು ನನಗಿಂತ ಬಲಶಾಲಿಯನ್ನಾಗಿ ಮಾಡಿದರೆ, ನನ್ನನ್ನು ಕೇಳುವವರೇ ಇರುವುದಿಲ್ಲ. ಆದ್ದರಿಂದ ನನ್ನಷ್ಟು ಬಲಶಾಲಿಯಾದ ಪ್ರಾಣಿಗಳು ಕಾಡಿನಲ್ಲಿ ಇನ್ನುಮುಂದೆ ಇರಬಾರದು ಅದಕ್ಕಾಗಿ ಋಷಿಯನ್ನೆ ಕೊಂದುಬಿಡಲು ಯೋಚಿಸಿತು, ದಿವ್ಯದೃಷ್ಟಿಯಿಂದ ಇದನ್ನು ಅರಿತ ಋಷಿಯು ” ಏ ನಾಯಿಯೇ ನಿನ್ನ ಪ್ರಾಣವನ್ನು ಉಳಿಸುವ ಸಲುವಾಗಿ ಬೇರೆ ಬೇರೆ ಆಕಾರಗಳನ್ನು ಕೊಟ್ಟೆ. ಇದಕ್ಕೆಲ್ಲ ಕಾರಣ ಪ್ರೀತಿ. ನಿನಗೆ ಅನುಗ್ರಹ ಮಾಡಿದ ನನ್ನನ್ನೇ ಕೊಲ್ಲಲು ಯೋಚಿಸುತ್ತಿರುವೆ. ಇದು ನಿನ್ನ ಪ್ರಾರಬ್ಧಕರ್ಮ”. ಹಿಂದಿದ್ದ ಕ್ಷುದ್ರ ರೂಪವಾದ ನಾಯಿ ಜನ್ಮವೇ ನಿನಗೆ ಇರಲಿ ಎಂದನು. ಶರಭ ವಾಗಿದ್ದ ನಾಯಿಯು ಮತ್ತೆ ಬಡಕಲು ನಾಯಿಯಾಯಿತು.

  ಅನ್ನದಾನ ದ ಮಹತ್ವದ ಕಥೆ

ಮಧು ಸಿಕ್ತೋ ನಿಂಬ ಖಂಡಹ
ದುಗ್ದ ಪುಷ್ಟೋ ಭುಜಂಗಮಹ
ಗಂಗಾ ಸ್ನಾತೋಪಿ ದುರ್ಜನ
ಸ್ವಭಾವಂ ನೈವ ಮುಂಚತಿ!

ಬೇವಿನ ಕಾಂಡಕ್ಕೆ ಜೇನುತುಪ್ಪವನ್ನು ಹಚ್ಚಿದರೂ,
ಹಾವಿಗೆ ಹಾಲನ್ನು ಎರೆದರೂ,
ದುರ್ಜನರು ಗಂಗೆಯಲ್ಲಿ ಸ್ನಾನ ಮಾಡಿದರೂ
ಯಾರ ಸ್ವಭಾವವೂ ಕೂಡ ಬದಲಾಗದು.

ವಂದನೆಗಳೊಂದಿಗೆ,
ಬರಹ:- ಆಶಾ ನಾಗಭೂಷಣ.

ಸನಾತನ ರಾಷ್ಟ್ರಭಕ್ತರು🚩

Leave a Reply

Your email address will not be published. Required fields are marked *

Translate »