ಒಂದಾನೊಂದು ಕಾಲದಲ್ಲಿ ಟಾಸೂಯಿ ಪ್ರಸಿದ್ಧ ಝೆನ್ ಶಿಕ್ಷಕರಾಗಿದ್ದರು. ಅವರು ಅನೇಕ ದೇವಾಲಯಗಳಲ್ಲಿ ವಾಸಿಸುತ್ತಿದ್ದರು ಮತ್ತು ವಿವಿಧ ಪ್ರಾಂತಗಳಿಗೆ ಹೋಗಿ ಝೆನ್ ಶಿಕ್ಷಣವನ್ನು ಜನರಿಗೆ ಕಲಿಸಿದರು.
ಅವರು ಭೇಟಿ ನೀಡಿದ ಕೊನೆಯ ದೇವಾಲಯವು ಟಸುಯಿ, ಅಲ್ಲಿನ ಅನೇಕ ಅನುಯಾಯಿಗಳು ಅವರ ಬಗ್ಗೆ ತಿಳಿದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಅವರು ಝೆನ್ ಉಪನ್ಯಾಸದ ಶಿಕ್ಷಣವನ್ನು ಸಂಪೂರ್ಣವಾಗಿ ತೊರೆಯಲು ನಿರ್ಧರಿಸಿದ್ದರು. ಆದ್ದರಿಂದ ತನ್ನ ಶಿಷ್ಯಂದಿರಿಗೆ , ತಮ್ಮ ಇಷ್ಟಕ್ಕೆ ತಕ್ಕಂತೆ ಎಲ್ಲಿಗೆ ಬೇಕಾದರೂ ಹೋಗಿ ತಮ್ಮ ಜೀವನವನ್ನು ಮುಂದುವರೆಸಿ ಎಂದು ಸಲಹೆ ನೀಡಿದರು. ಅದರ ನಂತರ ಯಾರೂ ಟಾಸೂಯಿಯವರನ್ನು ಯಾರು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಮೂರು ವರ್ಷಗಳ ನಂತರ ಆತನ ಶಿಷ್ಯರಲ್ಲಿ ಒಬ್ಬರು ಕ್ಯೋಟೋದಲ್ಲಿನ ಸೇತುವೆಯ ಅಡಿಯಲ್ಲಿ ಕೆಲವು ಭಿಕ್ಷುಕರ ಜೊತೆ ಟಾಸೂಯಿ ವಾಸಿಸುತ್ತಿದ್ದುದ್ದನ್ನು ಕಂಡುಕೊಂಡರು. ಅವರು ಟಾಸೂಯಿ ಯವರ ಬಳಿ ಝೆನ್ ಶಿಕ್ಷಣವನ್ನು ಕಲಿಸಲು ಬೇಡಿಕೊಂಡರು.
“ನಾನು ಮಾಡುವಂತೆ ಒಂದೆರಡು ದಿನಗಳವರೆಗೆ ನೀವು ಮಾಡಿದರೆ, ನಾನು ನಿಮಗೆ ಝೆನ್ ಶಿಕ್ಷಣವನ್ನು ಕಲಿಸಬಹುದು,” ಎಂದು ಟಾಸೂಯಿ ಉತ್ತರಿಸಿದರು.
ಹಾಗಾಗಿ ಮಾಜಿ ಶಿಷ್ಯನು ಭಿಕ್ಷುಕನಂತೆ ವೇಷ ಧರಿಸಿ ಆ ದಿನವನ್ನು ಟಾಸೂಯಿಯೊಂದಿಗೆ ಕಳೆದರು. ಮರುದಿನ ಒಬ್ಬ ಭಿಕ್ಷುಕರ ಮರಣಹೊಂದಿದನು. ಟಾಸೂಯಿ ಮತ್ತು ಆತನ ಶಿಷ್ಯರು ಮಧ್ಯರಾತ್ರಿಯಲ್ಲಿ ದೇಹವನ್ನು ತೆಗೆದುಕೊಂಡು ಹೋಗಿ ಪರ್ವತದ ಮೇಲೆ ಸಮಾಧಿ ಮಾಡಿದರು. ಅದರ ನಂತರ ಅವರು ಸೇತುವೆಯ ಕೆಳಗೆ ತಮ್ಮ ಆಶ್ರಯಕ್ಕೆ ಮರಳಿದರು.
ಟಾಸೂಯಿ ರಾತ್ರಿಯ ಉಳಿದ ಸಮಯವನ್ನು ಚೆನ್ನಾಗಿ ನಿದ್ರಿಸಿದನು, ಆದರೆ ಶಿಷ್ಯನು ನಿದ್ರಿಸಲಿಲ್ಲ. ಬೆಳಿಗ್ಗೆ ಆದಾಗ ಟಾಸೂಯಿ ಹೇಳಿದರು: “ನಾವು ಇಂದು ಆಹಾರವನ್ನು ಭಿಕ್ಷೆ ಬೇಡುವುದು ಬೇಡ. ನಮ್ಮ ಸತ್ತ ಸ್ನೇಹಿತನು ಕೆಲವು ತಿಂಡಿ ಪದಾರ್ಥಗಳನ್ನು ಅಲ್ಲಿ ಬಿಟ್ಟು ಹೋಗಿದ್ದಾನೆ. ಅದನ್ನೇ ನಾವು ಇಂದು ತಿನ್ನೋಣ” ಎಂದು ಹೇಳಿ ತನ್ನ ಶಿಷ್ಯನಿಗೂ ಹಂಚಿದರು. ಆದರೆ ಶಿಷ್ಯನಿಗೆ ಅದರ ಒಂದು ತುಂಡ್ಅನ್ನು ತಿನ್ನಲು ಸಾಧ್ಯವಾಗಲಿಲ್ಲ.
“ನೀನು ನನ್ನ ಹಾಗೆ ಮಾಡಲಾರೆ ಎಂದು ನಾನು ಹೇಳಿದ್ದೇನೆ” ಎಂದು ಟಾಸೂಯಿ ತೀರ್ಮಾನಿಸಿದರು. “ಇಲ್ಲಿಂದ ಹೊರಟು ಹೋಗಿರಿ ಮತ್ತು ನನಗೆ ಮತ್ತೆ ತೊಂದರೆ ಮಾಡಬೇಡಿ.” ಎಂದು ಹೇಳಿ ತನ್ನ ಶಿಷ್ಯನನ್ನು ಬಿಳ್ಕೊಟ್ಟರು.