ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಂಧ ಹುಡುಗ ಮತ್ತು ಮರದ ಕಥೆ

ನೀವು ಗಿಡದ ಯಾವ ಭಾಗವಾಗಲು ಇಷ್ಟಪಡ್ತೀರಾ ? ಮತ್ತು ಏಕೆ ? – ಮೇಷ್ಟ್ರು ಕೇಳಿದ್ರು

ಒಬ್ಬ ಹುಡುಗ ಎದ್ದು ನಿಂತು ಹೇಳ್ದ – ಸರ್ ನಾನು ಎಲೆಯಾಗೋಗೆ ಇಷ್ಟಪಡ್ತೀನಿ .. ಏಕೆಂದರೆ ಎಲೆ ದಣಿದು ಬಂದವರಿಗೆ ನೆರಳಾಗುತ್ತೆ , ಎಲ್ಲಾ ಜೀವಿಗಳಿಗೂ ಉಸಿರು ನೀಡುತ್ತೆ , ಹಣ್ಣಾಗಿ ಉದುರಿದರೆ ಕೊಳೆತು ಗೊಬ್ಬರವಾಗುತ್ತೆ .

ಮೇಷ್ಟ್ರು – ಶಭಾಷ್ , ಕೂತ್ಕೋ .. ಮೂಲೆಯವ್ನು ನೀನು ಹೇಳು ಏನಾಗ್ತಿಯಾ ?

ಮೂಲೆಯ ಹುಡುಗ – ಸರ್ ನಾನು ಹೂವಾಗ್ತೀನಿ , ಏಕೆಂದರೆ ಹೂವನ್ನು ಎಲ್ಲರೂ ಮೆಚ್ತಾರೆ , ಅದು ಬೀರುವ ಸುಗಂಧವನ್ನು ಎಲ್ಲರೂ ಇಷ್ಡಪಡ್ತಾರೆ .. ದೇವರಿಗೂ ಕೂಡಾ ಹೂವಿನಿಂದಲೇ ಅಲಂಕಾರ ಮಾಡ್ತಾರೆ ..

  ರಾಮನಾಮದ ಶಕ್ತಿ ಎಷ್ಟು ?

ಮೇಷ್ಟ್ರು – ಗುಡ್ . ಲಾಸ್ಟ್ ಬೆಂಚು , ನೀನ್ ಏನಾಗ್ತೀಯೋ?

ಲಾಸ್ಟ್ ಬೆಂಚು – ಸರ್ ಹಣ್ಣಾಗಲು ಬಯಸ್ತೀನಿ . ಏಕೆಂದರೆ ಹಣ್ಣು ರುಚಿರುಚಿಯಾಗಿರುತ್ತೆ, ಚಿಕ್ಕಮಕ್ಳು ದೊಡ್ಡವ್ರು ಎಲ್ರೂ ಇಷ್ಟಪಡ್ತಾರೆ , ಹಸಿದವರಿಗೆ ಆಹಾರವಾಗುತ್ತೆ, ಮಾರಿದರೆ ದುಡ್ಡು ಸಿಗುತ್ತೆ . ಕಷ್ಟದಲ್ಲಿ ಸಹಾಯವಾಗುತ್ತೆ

ಮೇಷ್ಟ್ರು – ವೆರಿಗುಡ್ ..ಏಯ್ ಮುಂದಿನವ್ನು , ನೀನ್ ಏನಾಗ್ತೀಯೋ ?

ಹುಡುಗ – ಸರ್ ರೆಂಬೆಯಾಗೋಕೆ ಇಷ್ಟಪಡ್ತೀನಿ , ಏಕೆಂದರೆ ರೆಂಬೆಗಳಲ್ಲಿ ಪಕ್ಷಿಗಳೆಲ್ಲ ಕೂತು ವಿಶ್ರಾಂತಿ ಪಡ್ಕೊತವೆ , ಗೂಡುಗಳನ್ನು ಕಟ್ಟಿ ಮರಿಗಳನ್ನು ಸಾಕ್ತವೆ , ರೆಂಬೆ ಒಣಗಿ ಬಿದ್ದರೆ ಅದನ್ನೇ ಒಲೆಗೆ ಒಟ್ಟೋದಿಕ್ಕೂ ಬಳಸ್ತೀವಿ .

  ಭಾನುಮತಿ, ಶ್ರೀಕೃಷ್ಣರ ಭೇಟಿ - ವ್ಯಾಸ ಮಹಾಭಾರತ

ಮೇಷ್ಟ್ರು – ಫೈನ್, ಕೂತ್ಕೋ . ಕೈ ಎತ್ತಿದ್ದೀಯಲ್ಲ , ನೀನ್ ಆಗೋಕೆ ಇಷ್ಟಪಡ್ತೀಯಾ ?

ಕೈ ಎತ್ತಿದವನು ಸಂಕೋಚದಿಂದ ಎದ್ದು ನಿಂತು – ಸರ್ ನಾನು ಬೇರಾಗಲು ಇಷ್ಟಪಡ್ತೀನಿ ..ಬೇರು ಭೂಮಿಯೊಳ್ಗಡೆ ಗಟ್ಟಿ ಮಣ್ಣನ್ನು ಸೀಳ್ಕೊಂಡು ಕಷ್ಟದಿಂದ ಬೆಳೆಯುತ್ತೆ .. ಬೇರಿಗೆ ಬೆಟ್ಟಗುಡ್ಡ ಸೂರ್ಯ ಚಂದ್ರ ನಕ್ಷತ್ರಗಳು ಮನುಷ್ರ್ಯು ಪ್ರಾಣಿಪಕ್ಷಿಗಳು ಮನೆಗಳು ಒಂದೂ ಕಾಣಿಸಲ್ವಂತೆ , ಆದ್ರೂ ಅದು ಕೊರಗದೆ ತನ್ನ ಪಾಡಿಗೆ ಸತ್ವ ಹೀರಿ ಗಿಡವನ್ನು ಬೆಳೆಸುತ್ತಂತೆ …. ನಾನೂ ಕೂಡಾ ಪ್ರಪಂಚ ನೋಡಿಲ್ಲ , ಬೇರೂ ಕೂಡೂ ಪ್ರಪಂಚ ನೋಡಿಲ್ಲ.. ಬೇರು ಕತ್ತಲಿನಲ್ಲೇ ಹುಟ್ಟಿ ಕತ್ತಲಿನಲ್ಲೇ ಕಮರಿ ಹೋಗುತ್ತೆ .. ಬೇರಿನಂತೆ ನಾನೂ ಕೂಡಾ ಅಡೆತಡೆಗಳನ್ನು ಎದುರಿಸಿ ಬೇಳೀಬೇಕು ..ದುಃಖವಾದಾಗಲೆಲ್ಲ ಬೇರನ್ನು ನೆನೆದು ಸಮಾಧಾನ ಮಾಡ್ಕೊತಿನಿ .

  ಮಕ್ಕಳಿಗಾಗಿ ತೆನಾಲಿ ರಾಮ ಲಂಚದ ಕಥೆ

ಮೇಷ್ಟ್ರು ಅತ್ಯಾನಂದದಿಂದ ಆ ಅಂಧ ಹುಡುಗನ ಕೆನ್ನೆಗಳನ್ನು ಚಿವುಟಿ ಮುದ್ದಿಸಿ ಭಾವುಕರಾದರು.

ಲೇಖಕರು: ಗವಿಸ್ವಾಮಿ.
ಸಂಗ್ರಹ :ವೀರೇಶ್ ಅರಸಿಕೆರೆ.


Leave a Reply

Your email address will not be published. Required fields are marked *

Translate »