ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಾಗೆಯ ಕಥೆ

*ಕಾಗೆ ಜನ್ಮ ಮತ್ತು ಅದ್ವೈತ ಸಂದೇಶ:*
****************************
*ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ:-*

*”ಸ್ವಾಮೀಜಿ,ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ?*

*ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ?*

*ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬೇಕು?*

*ಇನ್ಯಾವುದೇ ಶ್ರೇಷ್ಠ ಹಕ್ಕಿಯಾಗಕೂಡದೆ?*

*ಸ್ವಾಮೀಜಿ ನಸುನಕ್ಕು ಹೇಳಿದರು…*

*ಕಾಗೆಯನ್ನು ನಾವು ಕಾಕಾ ಅಂತ ಕರೆಯುತ್ತೇವೆ.*

*ಬೇರಾವುದೇ ಹಕ್ಕಿಯನ್ನು ಅದು ಕೂಗುವ ದನಿಯಿಂದ ಕರೆಯುವ ರೂಢಿ ಇಲ್ಲ.*

*ನಮ್ಮೆಲ್ಲರ ಮುದ್ದಿನ ಗಿಳಿಯನ್ನಂತೂ ಕೀಕೀ ಅಂತ ಅನ್ನೆವು ತಾನೇ?.*

  ಶ್ರೀ ರಾಮ ಜನ್ಮಭೂಮಿ ಇತಿಹಾಸ ಮತ್ತು ಪ್ರವಾಸಿ ಕ್ಷೇತ್ರ

*ಕಾ ಅಂದರೆ ಕಾಪಾಡು ಎಂದರ್ಥ.*

*ನಮ್ಮ ಹಿರಿಯರನ್ನು ಕರೆದು, “ರಕ್ಷಿಸಿ,ರಕ್ಷಿಸಿ” ಎಂದು ನಾವು ಬೇಡಿಕೊಳ್ಳುವೆವು.*

*ಕಾಗೆ ಸುಲಭವಾಗಿ ಕಾಣ ಸಿಗುತ್ತದೆ.*

*ಅಷ್ಟೇ ಅಲ್ಲ,ಅದಕ್ಕೆ ಏನನ್ನು ಕೊಟ್ಟರೂ ತಿನ್ನುತ್ತದೆ.*

*ನಮ್ಮ ಸುತ್ತಮುತ್ತಲ ಪರಿಸರವನ್ನು ಕಾಗೆಯಷ್ಟು ಶುದ್ಧಗೊಳಿಸುವ ಪಕ್ಷಿ ಇನ್ನೊಂದಿಲ್ಲ.*

*ಅದಕ್ಕೇ,ಅದನ್ನು,ಕೀಳು ದರ್ಜೆಯ ಹಕ್ಕಿ ಅನ್ನುತ್ತೇವೇನೋ?*

*ಅದೊಂದು ಸುಂದರ ಹಕ್ಕಿ ಕೂಡ.*

*ಯಾಕೆ ಗೊತ್ತೆ?*

*ಸರಿಯಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ ಹಕ್ಕಿ ಅದೊಂದೇ.*

*ಸದಾ ಮಂಕಾಗಿರುವ ಕೋಳಿಯೂ ತಡವಾಗಿ ಕೂಗುವುದು.*

*ಬ್ರಾಹ್ಮೀ ಮುಹೂರ್ತದಲ್ಲಿ ನೀವು ಧ್ಯಾನ ಮಾಡಲು ಅದು ಪ್ರೇರಣೆ.*

  ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ

*ಆಹಾರ ಸಿಕ್ಕಿದರೆ ಅದು ತನ್ನ ಬಳಗವನ್ನೇ ಕರೆಯುತ್ತದೆ.*

*ಸಂಜೆಯಾದಾಗ ತನಗೆ ಆಹಾರ ಕರುಣಿಸಿದ ದೇವರಿಗೆ ಕಾಕಾ ಎಂದು ಧನ್ಯವಾದ ಹೇಳುತ್ತದೆ.*

*ಶಾಸ್ತ್ರವನ್ನು ಅನುಸರಿಸುವ ಕಾಗೆ ಸಂಜೆ ಆದ ನಂತರ ಆಹಾರ ಮುಟ್ಟದು.*

*ಈ ಉತ್ತಮ ಸಂಪ್ರದಾಯವನ್ನು ಪಾಲಿಸುವ ಜನರು ವಿರಳವಾಗುತ್ತಿದ್ದಾರೆ.*

*ಆದ್ದರಿಂದಲೇ ಇವುಗಳನ್ನು ಪಿತೃ ರೂಪಿಗಳೆಂದು ಕಾಣುತ್ತಾರೆ.*

*ದಿನಾ ಕಾಗೆಗೆ ಆಹಾರ ಕೊಟ್ಟು ನೋಡಿ.ತುಂಬ ಖುಶಿ ಪಡುತ್ತದೆ. ನೀವೂ ಸಂತೃಪ್ತಿ ಹೊಂದುತ್ತೀರಿ.*

*ಅದ್ವೈತ ಅಂದರೆ ಇದೇ ತಾನೆ?.”*

Leave a Reply

Your email address will not be published. Required fields are marked *

Translate »