ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹೆಣ್ಣು ಮಗಳು – power of women

ಹೆಣ್ಣು ಮಗಳು

ಹುಡುಗಿಯರು ಕಲಿಯುತ್ತಿರುವ ಪ್ರೌಢಶಾಲೆಯ ಅಧ್ಯಾಪಿಕೆಯಾಗಿದ್ದಳು ಆಕೆ…
ಪಾಠ ಹೇಳಿ ಕೊಡಲು ಸಮರ್ಥರಾದ ಅಧ್ಯಾಪಿಕೆಯರಲ್ಲಿ ಒಬ್ಬಳಾಗಿದ್ದಳು ಮತ್ತು ಚೆಲುವೆಯಾಗಿದ್ದಳು ಆಕೆ…
ಆಕೆಯ ಮದುವೆ ಆಗಿರಲಿಲ್ಲ….

ಒಂದು ದಿನ ತರಗತಿಯ ಹೆಣ್ಣು ಮಕ್ಕಳು ಆ ಟೀಚರತ್ರ ಕೇಳಿದರು –
“ ಮಿಸ್.. ನೀವು ಮದುವೆಯಾಗದೇ ಇರೋದು ಯಾಕೆ…?”

ಟೀಚರ್ ಹೇಳಿದರು – ” ನಾನೊಂದು ಕಥೆ ಹೇಳುತ್ತೇನೆ. ಎಲ್ಲರೂ ಶ್ರಧ್ಧೆಯಿಂದ ಕೇಳಬೇಕು…”

ಟೀಚರ್ ಕಥೆ ಶುರು ಮಾಡಿದರು – ಒಂದು ಮನೆಯಲ್ಲಿ ನಾಲ್ಕು ಹೆಣ್ಣು ಮಕ್ಕಳಿದ್ದರು… ಐದನೆಯ ಬಾರಿಯೂ ಆ ತಾಯಿ ಗರ್ಭಿಣಿಯಾದಳು…
ಪ್ರಸವದ ದಿನ ಹತ್ತಿರವಾಗುತ್ತಿದ್ದಂತೆ ಆಕೆಯ ಪತಿಯು
” ಈ ಮಗು ಕೂಡಾ ಹೆಣ್ಣುಮಗುವಾದರೆ ಅದನ್ನು ಎಲ್ಲಾದರು ತಗೊಂಡುಹೋಗಿ ಬಿಸಾಕುತ್ತೇನೆ” ಅಂತ ಎಚ್ಚರಿಸುತ್ತಲೇ ಇದ್ದರು….

ಆದರೆ , ವಿಧಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಲ್ಲವೇ….
ಈ ಬಾರಿಯೂ ಹೆಣ್ಣುಮಗುವಿಗೇ ಜನ್ಮವಿತ್ತಳು ಆ ತಾಯಿ….

“ಅಂದು ರಾತ್ರಿ ಆ ತಂದೆಯು ಆ ನವಜಾತ ಶಿಶುವನ್ನು ತಗೊಂಡು ಹೋಗಿ ದೂರ ಬೀದಿದೀಪದ ಹತ್ತಿರ ಮಲಗಿಸಿ ವಾಪಾಸಾದರು…

  ಹಾಲು ಮೊಸರುತುಪ್ಪ ಆಗುವುದು ಯಾಕೆ?

ಪಾಪ ಆ ತಾಯಿಯು ಆ ಮಗುವಿಗಾಗಿ ಪ್ರಾರ್ಥಿಸುತ್ತಿದ್ದಳು…

ಮರುದಿನ ಬೆಳ್ಳಂಬೆಳಿಗ್ಗೆ ಆ ತಂದೆಯು ಆ ಬೀದಿ ದೀಪದ ಹತ್ತಿರ ಹೋಗಿ ನೋಡಿದಾಗ ಆ ಮಗುವು ಅಲ್ಲೇ ಇತ್ತು…. ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ….

ಆ ತಂದೆಯು ಮಗುವನ್ನು ಎತ್ತಿಕೊಂಡು ಮನೆಗೆ ಮರಳಿದರು.

ಮರುದಿನವು ರಾತ್ರಿ ಆ ತಂದೆಯು ಆ ಮಗುವನ್ನು ಎತ್ತಿಕೊಂಡು ಹೋಗಿ ದೂರದ ಬೀದಿದೀಪದ ಹತ್ತಿರ ಇಟ್ಟು ಬಂದರು..
ಆದರೆ , ಆ ತಂದೆ ಮರುದಿನ ಬೆಳಿಗ್ಗೆ ಹೋಗಿ ನೋಡಿದಾಗಲೂ ಆ ಮಗು ಅಲ್ಲೇ ಇತ್ತು.
ಹೀಗೇ ಮೂರನೇ ದಿನವು ಆ ತಂದೆಯು ಮಗುವನ್ನು ಬಿಟ್ಟು ಬಂದಿದ್ದರು.
ಆದರೆ ಮಗುವನ್ನು ಯಾರೂ ಕೊಂಡೊಯ್ದಿರಲಿಲ್ಲ.

ಕೊನೆಗೆ ಆ ತಂದೆಯು ಸೃಷ್ಟಿಕರ್ತನ ವಿಧಿಯನ್ನು ಸ್ವೀಕರಿಸುತ್ತಾ ಆ ಮಗುವನ್ನು ಬಿಸಾಕುವ ಪ್ರಯತ್ನವನ್ನು ಕೈಬಿಟ್ಟರು…

ಒಂದೂವರೆ ವರ್ಷದ ನಂತರ ಆ ತಾಯಿ ಪುನಃ ಒಂದು ಮಗುವಿಗೆ ಜನ್ಮವಿತ್ತಳು….

ಅದು ಗಂಡು ಮಗುವಾಗಿತ್ತು….

  ದಾನ ಮತ್ತು ಭಿಕ್ಷುಕ

ಆದರೆ ಕೆಲವೇ ತಿಂಗಳೊಳಗೆ ಐದು ಹೆಣ್ಣು ಮಕ್ಕಳಲ್ಲಿ ಒಬ್ಬಳು ಹೆಣ್ಣು ಮಗಳು ರೋಗಪೀಡಿತಳಾಗಿ ಸಾವನ್ನಪ್ಪಿದಳು….

ಪುನಃ ಆ ತಾಯಿ ಗಂಡು ಮಗುವೊಂದಕ್ಕೆ ಜನ್ಮಕೊಟ್ಟಳು…

ಆದರೆ ವಿಧಿ ಆ ತಾಯಿಯನ್ನು ಪರೀಕ್ಷಿಸುತ್ತಲೇ ಇತ್ತು…

ಒಂದೊಂದು ಗಂಡು ಮಗು ಹುಟ್ಟುವಾಗಲೂ, ತಿಂಗಳುಗಳೊಳಗೆ ಒಂದೊಂದು ಹೆಣ್ಣುಮಗು ರೋಗಪೀಡಿತಳಾಗಿ ಅಥವಾ ಅಪಘಾತದಲ್ಲಿ ಸತ್ತು ಹೋಗುತ್ತಲೇ ಇತ್ತು….

ಕೊನೆಗೆ ಆ ಮನೆಯಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣುಮಕ್ಕಳು ಸತ್ತುಹೋಗಿ ಒಬ್ಬಳು ಹೆಣ್ಣುಮಗಳು ಮಾತ್ರ ಉಳಿದಳು..
ಆ ಹೆಣ್ಣು ಮಗಳು ಆ ತಂದೆಯು ಬಿಸಾಕಲು ಕೊಂಡು ಹೋಗಿದ್ದ ಹೆಣ್ಣು ಮಗಳೇ ಆಗಿದ್ದಳು..

ಒಂದು ದಿನ ಆ ತಾಯಿಯೂ ಸಾವನ್ನಪ್ಪಿದಳು….

ನಾಲ್ಕು ಗಂಡುಮಕ್ಕಳು, ಒಬ್ಬಳು ಹೆಣ್ಣು ಮಗಳು ಮತ್ತು ಆ ತಂದೆ ಆ ಮನೆಯಲ್ಲಿ ವಾಸವಾಗಿದ್ದರು…

ಕಾಲಚಕ್ರ ಉರುಳುತ್ತಿದ್ದಂತೆ ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದರು…

ಆ ಟೀಚರ್ ನಿಟ್ಟುಸಿರು ಬಿಡುತ್ತಾ ಮುಂದುವರಿಸಿದರು…

ಆ ಮನೆಯ ತಂದೆಯು ಬಿಸಾಕಲು ಪ್ರಯತ್ನಿಸಿದ್ದ ಆ ಹೆಣ್ಣುಮಗಳೇ ನಾನು…..

  ಬಾಬಾಪುರದ ರಾಮಲೀಲಾ ರಹಸ್ಯ - ತೆನಾಲಿ ರಾಮ ಕಥೆ

ಮಕ್ಕಳೆಲ್ಲರೂ ಮೂಖವಿಸ್ಮಿತರಾಗಿ ತದೇಕಚಿತ್ತದಿಂದ ಟೀಚರ್ ನ ಮಾತುಗಳನ್ನೇ ಆಲಿಸುತ್ತಿದ್ದರು…

ನಾನು ಮದುವೆಯಾಗದಿರಲು ಕಾರಣವನ್ನು ಈಗ ಹೇಳುತ್ತೇನೆ –
ನನ್ನ ತಂದೆಗೆ ವಯಸಾಗಿದೆ….
ಸ್ವತಃ ಆಹಾರವನ್ನು ಕೂಡಾ ತಿನ್ನೋದಕ್ಕೆ ಆಗುತ್ತಿಲ್ಲ…

ನನ್ನ ಸಹೋದರರೆಲ್ಲರೂ ಮದುವೆಯಾಗಿ ಅವರವರ ಪಾಡಿಗೆ ಹೋದರು….
ಈಗ ತಂದೆಯ ಯೋಗಕ್ಷೇಮವನ್ನು ನೋಡೋದಕ್ಕಾಗಲಿ, ಪರಿಚರಿಸಲಿಕ್ಕಾಗಲಿ ನಾನಲ್ಲದೆ ಬೇರೆ ಯಾರೂ ಇಲ್ಲ…..

ನನ್ನ ತಂದೆ ಆವಾಗಾವಾಗ ಅಳುತ್ತಾ ಹೇಳುತ್ತಾರೆ – ನೀನು ನವಜಾತ ಶಿಶುವಾಗಿದ್ದಾಗ ನಾನು ನಿನ್ನ ಮೇಲೆ ಮಾಡಿದ ತಪ್ಪನ್ನು ಕ್ಷಮಿಸಿಬಿಡು ಮಗಳೇ ಅಂತ….

ಟೀಚರ್ ತುಂಬಿ ಬಂದ ಕಣ್ಣೀರನ್ನು ಸೀರೆಯ ಸೆರಗಿನಿಂದ ಒರೆಸುತ್ತಾ ಕಥೆಯನ್ನು ನಿಲ್ಲಿಸಿದರು….

ನೆನಪಿರಲಿ ಸ್ನೇಹಿತರೆ….
ಒಬ್ಬ ತಂದೆಗೆ ಸೃಷ್ಟಿಕರ್ತನಿಂದ ಸಿಗುವ ಅತ್ಯಂತ ಅಮೂಲ್ಯವಾದ ವರದಾನಗಳಲ್ಲಿ ಒಂದಾಗಿದೆ ಹೆಣ್ಣುಮಕ್ಕಳು…..
😰😰😰😰😰

Leave a Reply

Your email address will not be published. Required fields are marked *

Translate »