ವಿಷ್ಣುವಿನ ವಾಹನವಾದ ಗರುಡ ಯಾರು..? ಇದೊಂದು ಅಚ್ಚರಿಯ ಕಥೆ..!
ಇಂದು…ಶನಿವಾರ ಅವರಾತ್ತಿ ಅಮಾವಾಸ್ಯೆ ದಿನ ಜನವರಿ 21, 2023 ಗರುಡ ಜಯಂತಿ. ಗರುಡ ಮತ್ತು ವಿಷ್ಣುವಿನ ಪುರಾಣ:
ಋಷಿ ಕಶ್ಯಪ ಅನೇಕ ಪತ್ನಿಯರನ್ನು ಹೊಂದಿದ್ದನು. ಅವರಲ್ಲಿ ಇಬ್ಬರು ವಿನತಾ ಮತ್ತು ಕದ್ರು. ಈ ಇಬ್ಬರೂ ಸಹೋದರಿಯರು ಪರಸ್ಪರ ಅಸೂಯೆಯ ಭಾವನೆಯನ್ನು ಹೊಂದಿದವರಾಗಿದ್ದರು. ಇಬ್ಬರಿಗೂ ಮಕ್ಕಳಿರಲಿಲ್ಲ, ಆದ್ದರಿಂದ ಪತಿ ಕಶ್ಯಪ ಇಬ್ಬರಿಗೂ ಸಂತಾನ ಭಾಗ್ಯದ ವರವನ್ನು ನೀಡಿದನು. ವಿನತಾ ಎರಡು ಶಕ್ತಿಶಾಲಿ ಪುತ್ರರನ್ನು ಕೇಳಿದಳು ಮತ್ತು ಕದ್ರು ಮೊಟ್ಟೆಯ ರೂಪದಲ್ಲಿ ಹುಟ್ಟುವ ಸಾವಿರ ನಾಗಪುತ್ರರನ್ನು ಕೇಳಿದಳು. ಹಾವಿನಂತೆ ಕದ್ರುವಿನ ಸಾವಿರ ಗಂಡು ಮಕ್ಕಳು ಮೊಟ್ಟೆಯಿಂದ ಜನಿಸಿದರು ಮತ್ತು ಅವರ ತಾಯಿಯ ಸೂಚನೆಯಂತೆ ಕೆಲಸ ಮಾಡಲು ಪ್ರಾರಂಭಿಸಿದರು. ಕದ್ರುವಿಗೆ ನೀಡಿದ್ದ ವರದಲ್ಲಿ ಈಗಾಗಲೇ ಆಕೆ ಮಕ್ಕಳನ್ನು ಪಡೆದುಕೊಂಡಿದ್ದರೂ ವಿನತಾಗೆ ನೀಡಿದ್ದ ವರದಿಂದ ಇನ್ನೂ ಆಕೆ ಯಾವುದೇ ಮಗುವನ್ನು ಪಡೆದಿರಲಿಲ್ಲ. ಈ ತರಾತುರಿಯಲ್ಲಿ ವಿನತಾ ಮೊಟ್ಟೆ ತಾನಾಗಿಯೇ ಒಡೆಯುವ ಮುನ್ನವೇ ಸ್ವತಃ ತಾನೇ ಒಡೆದಳು. ಅರೆ-ಅಭಿವೃದ್ಧಿ ಹೊಂದಿದ ಮಗು ಮೊಟ್ಟೆಯಿಂದ ಹೊರಹೊಮ್ಮಿತು, ಅದರ ಮೇಲಿನ ದೇಹವು ಮನುಷ್ಯರಂತೆಯೇ ಇತ್ತು ಆದರೆ ಕೆಳಗಿನ ದೇಹವು ಇನ್ನು ಪ್ರೌಢಾವಸ್ತೆಯನ್ನು ತಲುಪಿರಲಿಲ್ಲ. ಆ ಮಗುವಿನ ಹೆಸರೇ ಅರುಣ.
ಅರುಣ ತನ್ನ ತಾಯಿ ವಿನತಾಳನ್ನು ಕುರಿತು ಹೀಗೆಂದು ಹೇಳುತ್ತಾನೆ. ‘ತನ್ನ ತಂದೆ ಹೇಳಿದ ನಂತರವೂ ನೀವು ತಾಳ್ಮೆ ಕಳೆದುಕೊಂಡು ನನ್ನ ದೇಹವನ್ನು ಹಿಗ್ಗಿಸಲು ನನಗೆ ಬಿಡಲಿಲ್ಲ. ಆದುದರಿಂದ ನೀನು ನಿನ್ನ ಜೀವನವನ್ನು ಸೇವಕಿಯಾಗಿಯೇ ಕಳೆಯಬೇಕಾಗುವುದೆಂದು ನಾನು ನಿನ್ನನ್ನು ಶಪಿಸುತ್ತೇನೆ’ ಎಂದು ಶಾಪವನ್ನು ನೀಡುತ್ತಾನೆ.
ವಿನತಾಳ ಎರಡನೇ ಮಗುವಿನ ಜನನ:
ಭಯದಿಂದ ವಿನತಾ ಎರಡನೇ ಮೊಟ್ಟೆಯನ್ನು ಒಡೆಯಲಿಲ್ಲ. ಮತ್ತು ಮಗನ ಶಾಪದಿಂದ ಅವಳು ತನ್ನ ಪಂತವನ್ನು ಕಳೆದುಕೊಂಡು ತನ್ನ ತಂಗಿಯ ಸೇವಕಿಯಾಗಿ ಬದುಕಲು ಪ್ರಾರಂಭಿಸಿದಳು. ಬಹಳ ಸಮಯದ ನಂತರ, ಎರಡನೇ ಮೊಟ್ಟೆ ಒಡೆದು ಅದರಿಂದ ದೈತ್ಯಾಕಾರದ ಹದ್ದೊಂದು ಹೊರಹೊಮ್ಮಿತು. ಅದರ ಮುಖವು ಪಕ್ಷಿಯಂತಿತ್ತು ಮತ್ತು ದೇಹದ ಉಳಿದ ಭಾಗವು ಮನುಷ್ಯನಂತೆ ಇತ್ತು. ಅದು ತನ್ನ ಪಕ್ಕೆಲುಬುಗಳಲ್ಲಿ ಬೃಹತ್ ರೆಕ್ಕೆಯನ್ನು ಪಡೆದುಕೊಂಡಿತ್ತು. ಗರುಡನಿಗೆ ತನ್ನ ತಾಯಿ ಆಕೆಯ ತಂಗಿಯ ದಾಸಿ ಎಂದು ತಿಳಿದಾಗ, ಅವನು ತನ್ನ ತಾಯಿಯನ್ನು ಮುಕ್ತಿಗೊಳಿಸುವಂತೆ ತನ್ನ ಚಿಕ್ಕಮ್ಮ ಕದ್ರು ಮತ್ತು ಹಾವಿನ ರೂಪದಲ್ಲಿದ್ದ ಆಕೆಯ ಪುತ್ರರನ್ನು ಕೇಳಿಕೊಳ್ಳುತ್ತಾನೆ.
ತಾಯಿಗಾಗಿ ಜೀವವನ್ನೇ ಪಣಕ್ಕಿಟ್ಟ ಗರುಡ:
ಸರ್ಪ ದಾಸ್ಯದಿಂದ ನಿನ್ನ ತಾಯಿಯಿಂದ ಮುಕ್ತಿಗೊಳಿಸಬೇಕಾದರೆ ನೀವು ಅಮೃತ ಮಂಥನದಿಂದ ತೆಗೆದ ಅಮೃತವನ್ನು ನಮಗೆ ತಂದು ಕೊಡಬೇಕೆಂದು ಕದ್ರುವಿನ ಮಕ್ಕಳಾದ ಸರ್ಪಗಳು ಹೇಳುತ್ತವೆ. ಅಮೃತವನ್ನು ತೆಗೆದುಕೊಳ್ಳಲು, ಗರುಡನು ತಕ್ಷಣವೇ ಸ್ವರ್ಗಲೋಕಕ್ಕೆ ಹೊರಟನು. ಅಮೃತದ ರಕ್ಷಣೆಗಾಗಿ ದೇವತೆಗಳು ಮೂರು ಹಂತಗಳ ಕಠಿಣ ರಕ್ಷಣಾ ಕವಚವನ್ನು ನಿರ್ಮಿಸಿದ್ದರು. ಮೊದಲ ಹಂತದಲ್ಲಿ ಬೆಂಕಿಯ ದೊಡ್ಡ ಪರದೆಗಳನ್ನು ಹಾಕಲಾಯಿತು. ಎರಡನೆಯದು ಮಾರಣಾಂತಿಕ ಆಯುಧಗಳ ನಡುವಿನ ಘರ್ಷಣೆಯ ಗೋಡೆ ಮತ್ತು ಅಂತಿಮವಾಗಿ ಎರಡು ವಿಷಕಾರಿ ಹಾವುಗಳನ್ನು ಕಾವಲುಗಾರರನ್ನಾಗಿ ಇಡಲಾಗಿತ್ತು. ಅಲ್ಲಿಗೂ ತಲುಪುವ ಮುನ್ನ ದೇವತೆಗಳೊಂದಿಗೆ ಪೈಪೋಟಿ ನಡೆಸಬೇಕಿತ್ತು. ಗರುಡನು ಕಿಕ್ಕಿರಿದು ದೇವತೆಗಳನ್ನು ಚದುರಿಸಿದನು. ಆಗ ಗರುಡನು ಅನೇಕ ನದಿಗಳ ನೀರನ್ನು ತನ್ನ ಬಾಯಿಯಲ್ಲಿ ತೆಗೆದುಕೊಂಡು ಮೊದಲ ಹಂತದ ಬೆಂಕಿಯನ್ನು ನಂದಿಸಿದನು, ಮುಂದಿನ ಮಾರ್ಗದಲ್ಲಿ ಗರುಡನು ತನ್ನ ರೂಪವನ್ನು ತಗ್ಗಿಸಿದನು ಮತ್ತು ಯಾವ ಆಯುಧವೂ ತನಗೆ ಹಾನಿಯಾಗದಂತೆ ಮೂರನೇ ಹಂತವನ್ನು ತಲುಪಿದನು. ತನ್ನ ಎರಡೂ ಕಾಲುಗಳಲ್ಲಿ ಹಾವುಗಳನ್ನು ಹಿಡಿದುಕೊಂಡು ತನ್ನ ಬಾಯಿಯಲ್ಲಿ ಅಮೃತದ ಕಲಶವನ್ನು ಎತ್ತುಕೊಂಡು ಭೂಮಿಯತ್ತ ನಡೆದನು.
ವಿಷ್ಣುವಿನ ವರ ಪಡೆದ ಗರುಡ:
ನಂತರ ವಿಷ್ಣುವು ದಾರಿಯಲ್ಲಿ ಗರುಡನಿಗೆ ಅಡ್ಡಲಾಗಿ ಬರುತ್ತಾನೆ ಆದರೆ ಬಾಯಿಯಲ್ಲಿ ಅಮೃತದ ಕಲಶವಿದ್ದರೂ ತನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಆಲೋಚನೆಯನ್ನು ಹೊಂದಿರದ ಗರುಡನನ್ನು ಕಂಡು ವಿಷ್ಣು ಸಂತೋಷಪಟ್ಟನು. ಮತ್ತು ನಿನಗೆ ಯಾವ ವರ ಬೇಕೆಂದು ಕೇಳು ಎನ್ನುತ್ತಾನೆ. ಆಗ ಗರುಡನು ನನ್ನನ್ನು ನಿಮ್ಮ ವಾಹನವನ್ನಾಗಿ ಸ್ವೀಕರಿಸಬೇಕೆನ್ನುವ ವರವನ್ನು ಕೇಳುತ್ತಾನೆ. ಆಗ ವಿಷ್ಣು ಅದಕ್ಕೆ ಒಪ್ಪಿ ಗರುಡನನ್ನು ತನ್ನ ವಾಹನವನ್ನಾಗಿಸಿಕೊಳ್ಳುತ್ತಾನೆ. ನಂತರ ಇಂದ್ರ ದೇವನು ಕೂಡ ನಿನಗೆ ಹಾವುಗಳನ್ನು ಆಹಾರವಾಗಿ ತಿನ್ನುವ ಅಪಾರ ಶಕ್ತಿ ದೊರೆಯಲಿ ಎಂದು ಆಶೀರ್ವಾದವನ್ನು ಮಾಡುತ್ತಾನೆ. ಇದಾದ ಬಳಿಕ ಗರುಡನು ತನ್ನ ತಾಯಿಯನ್ನು ದಾಸಿ ಸ್ಥಾನದಿಂದ ಮುಕ್ತಗೊಳಿಸಿ ಈ ಅಮೃತದ ಕಲಶವನ್ನು ಸುರಕ್ಷಿತವಾಗಿ ಹಿಂತಿರುಗಿಸುವುದಾಗಿ ಭರವಸೆ ನೀಡಿದನು.
ಕೊನೆಗೆ ಗರುಡನು ಅಮೃತವನ್ನು ಹಾವುಗಳಿಗೆ ಕೊಟ್ಟು ನೆಲದ ಮೇಲೆ ಇಟ್ಟು ಇದೇ ಅಮೃತ ಕಲಶವೆಂದು ಹೇಳಿದನು. ಇಲ್ಲಿ ತಂದು ಕೊಡುವ ಭರವಸೆಯನ್ನು ಈಡೇರಿಸಿ ಈಗ ನಿಮ್ಮ ಕೈಗಿಟ್ಟಿದ್ದೇನೆ ಆದರೆ ನೀವೆಲ್ಲರೂ ಕುಡಿದು ಸ್ನಾನ ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾನೆ. ಎಲ್ಲಾ ಹಾವುಗಳು ಸ್ನಾನ ಮಾಡಲು ಹೋದಾಗ, ಇದ್ದಕ್ಕಿದ್ದಂತೆ ಭಗವಾನ್ ಇಂದ್ರನು ಅಲ್ಲಿಗೆ ಆಗಮಿಸಿ ಅಮೃತದ ಕಲಶವನ್ನು ಹಿಂತೆಗೆದುಕೊಳ್ಳುತ್ತಾನೆ. ಆದರೆ ನೆಲದ ಮೇಲೆ ಒಂದೆರೆಡು ಅಮೃತದ ಹನಿಗಳು ಬಿದ್ದಿರುವುದನ್ನು ಹಾವುಗಳು ಕಂಡು ಅದರಲ್ಲಿ ಸ್ನಾನ ಮಾಡಲು ಮುಂದಾದವು ಆದರೆ ಆ ಹನಿಗಳು ಹಾವುಗಳಿಗೆ ತಾಗುವುದಿಲ್ಲ. ಈ ರೀತಿಯಾಗಿ ಗರುಡನ ಆಸೆಯು ಈಡೇರಿತು. ಹಾವುಗಳಿಗೆ ಅಮೃತವೂ ಸಿಗಲಿಲ್ಲ.
ತನ್ನ ತಾಯಿಯನ್ನು ರಕ್ಷಿಸಿಕೊಳ್ಳಲು ಅಮೃತವನ್ನು ತರಲು ಹೋದ ಗರುಡ ಭಗವಾನ್ ವಿಷ್ಣು ಮತ್ತು ಇಂದ್ರನ ವರವನ್ನು ಪಡೆದುಕೊಂಡಿತು. ಮತ್ತೊಂದೆಡೆ ತನ್ನ ತಾಯಿಯನ್ನು ಕೂಡ ದಾಸಿ ಎನ್ನುವ ಬಂಧನದಿಂದ ಮುಕ್ತಗೊಳಿಸಿತು.🙏
!! ಶ್ರೀಕೃಷ್ಣಾರ್ಪಣಮಸ್ತು !!