ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶನಿಮಹಾತ್ಮೆ ಶನಿ ಶಿಂಗನಪುರ

ಶನಿಮಹಾತ್ಮೆ ಶನಿ ಶಿಂಗನಪುರ

ಶನೈಶ್ಚರ ಜಯಂತಿ ಅಂದರೆ ಶನಿ ದೇವರು ಅವತರಿಸಿದ ದಿನ ,ಪ್ರತಿಯೊಬ್ಬರು ಇಂದು ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು ಮತ್ತು ಅವನ ಆಶಿರ್ವಾದ ಪಡೆಯಬೇಕು , ಶನಿ ಕೇವಲ ಕಾಟವನ್ನು ಮಾತ್ರ ಕೊಡುವುದಿಲ್ಲ ದೀರ್ಘಾಯುಷ್ಯ , ಧರ್ಮದ ಮಾರ್ಗ ತೋರಿಸುತ್ತಾನೆ.

ಐಶ್ವರ್ಯ ವನ್ನು ಸಹ ಕೊಡುತ್ತಾನೆ , ನಮ್ಮ ಒಳ್ಳೆಯ ನಡತೆಗೆ ಬೇಗ #ಫಲವನ್ನು ಕೊಡುವವನು

ಸಹ ಶನಿಯೇ
ಈತನು ಒಬ್ಬ ಮಹಾನ್ ಉಪಾಧ್ಯಾಯ.

ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ.

ಇವನು ನೆಲೆಸಿದ ಕ್ಷೇತ್ರ ಶನಿ ಶಿಂಗನಾಪೂರ
ಶನಿ ಮಹಾರಾಜನಿಗೆ ಇದೊಂದು ಮುಖ್ಯವಾದ ದೇವಸ್ಥಾನ.

ಇದು ಭಾರತದ #ಮಹಾರಾಷ್ಟ್ರದಲ್ಲಿದೆ. ಶಿಂಗನಪುರವು ಶಿರಡಿ ಮತ್ತು ಔರಂಗಾಬಾದ್ ಗಳ ನಡುವೆ ಇದೆ. ಇದು ಉದ್ಭವ ಮೂರ್ತಿ (“ಸ್ವಯಂಭು ” )ಭೂಮಿಯೋಳಗಿನಿಂದ ಕಪ್ಪಾದ ,ಆದರೆ ಸುಂದರವಾದ ಒಂದು ಕಲ್ಲಿನ ಉದ್ಭವವಾಗಿದೆ. ಇದರ ಕಾಲಾವಧಿ ಯಾವಾಗೆಂದು ಯಾರಿಗೂ ತಿಳಿದಿಲ್ಲವಾದರೂ, ಸ್ವಯಂಭು ಶನೀಶ್ವರನು ನೆನಪೇ ಇಲ್ಲದಷ್ಟು ಕಾಲದಿಂದ ,ಅಂದರೆ ಅಂದಿನ ಕುರುಬರು ಕಂಡುಹಿಡಿದ ದಿನದಿಂದ ಅಸ್ಥಿತ್ವದಲ್ಲಿದೆ. ಕಲಿಯುಗದ ಪ್ರಾರಂಭದಿಂದಲೂ ಇದು ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ.

  ತಿರುವನಂತಪುರಂನ ಶ್ರೀಕಂಠೇಶ್ವರಂ ದೇವಸ್ಥಾನ

ಕಥೆಯು ಹೀಗಿದೆ ಇಲ್ಲಿಯೇ ಜನರ ಹೇಳುವ ಪ್ರಕಾರ ಹಲವು ಸಾವಿರ ವರ್ಷಗಳಿಂದ, ತಲೆಮಾರುಗಳಿಂದ ಬಂದ ಬಗೆಯೆಂದರೆ: ಕುರಿಕಾಯುವವರು ಚೂಪಾದ ಕಬ್ಬಿಣದ ಕೋಲಿನಿಂದ ಕಲ್ಲನ್ನು ಮುಟ್ಟಿದಾಗ ,ಕಲ್ಲು ರಕ್ತವನ್ನು ಸುರಿಸಲು ಆರಂಭಸಿತು . ಇದರಿಂದ ಕುರಿ ಕಾಯುವವರು ಆಶ್ಚರ್ಯ ಚಕಿತರಾಗಿ, ಇಡೀ ಹಳ್ಳಿಯ ಜನ ಅಲ್ಲಿ ಸೇರಿ ಪವಾಡವನ್ನು ಕಂಡರಂತೆ. ಅಂದು ರಾತ್ರಿಯೂ ದೇವ ಶನಿ ದೇವರು ಹಲವು ಭಕ್ತರ ಕನಸಿನಲ್ಲಿ ಬಂದನಂತೆ. ಕುರಿ ಕಾಯುವವನಿಗೆ ಕನಸಿನಲ್ಲಿ ಬಂದು, ತಾನು “ಶನೀಶ್ವರ “ಎಂದು ಹೇಳಿಕೊಂಡ.

ಹಾಗೆಯೇ ಸುಂದರವಾಗಿ ಒಂದೇ ರೀತಿಯಾಗಿ ಕಾಣುವ ಕರಿ-ಕಲ್ಲು ತನ್ನದೇ ಸ್ವಯಂಭು (ಸ್ವಯಂ-ಉದ್ಭವ) ಮೂರ್ತಿ,.ಕುರುಬರು ಪ್ರಾರ್ಥಿಸುತ್ತಾ, ನಿಮ್ಮ ದೇವಸ್ಥಾನ ಕಟ್ಟಿಸಬಹುದಾ ಎಂದು ಕೇಳಿದಕ್ಕೆ ,ಶನಿ ಮಹಾತ್ಮನು ಉತ್ತರಿಸುತ್ತಾ,ತನಗೆ ಯಾವುದೇ ಚಾವಣಿಯು ಬೇಡವೆಂದೂ ,ಇಡೀ ಆಗಸವೇ ತನೆಗೆ ಚಾವಣಿ ಎಂದು, ತಾನು ಹೀಗೆ ಆಗಸದ ಕೆಳಗೇ ಇರುವುದಾಗಿ ಹೇಳಿದ.

ಕುರುಬರಿಗೆ ತನಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕೆಂದು, ಪ್ರತಿ ಶನಿವಾರ ತಪ್ಪದೇ’ತೈಲಾಭಿಷೇಕ’ ಮಾಡಬೇಕೆಂದು ಹೇಳಿದ , ಹಾಗೆಯೇ ಇಡೀ ಗ್ರಾಮದಲ್ಲಿ ,ಡಕಾಯಿತರು,ಕಳ್ಳರು,ಲೂಟಿಕಾರರು ಇಲ್ಲದಂತೆ ನೋಡಿಕೊಳ್ಳುವುದಾಗಿ ಭಾಷೆ ಇತ್ತನಂತೆ. ಹೀಗಾಗಿ ಶನೀಶ್ವರನನ್ನು ಇಂದಿಗೂ ಸಹ ತೆರೆದ ಸ್ಥಳದಲ್ಲಿ ಚಾವಣಿಯಿಲ್ಲದೆ ಇರುವುದನ್ನು ಕಾಣಬಹುದಾಗಿದೆ.

  ಮಹಾಭಾರತದಲ್ಲಿ ಪಾಂಡವರ ಸಾವಿನ ಐದು ಚಿನ್ನದ ಬಾಣಗಳ ಕಥೆ

ಇಂದಿಗೂ ಈ ಗ್ರಾಮದಲ್ಲಿನ ಯಾವುದೇ ಮನೆ ,ಅಂಗಡಿ,ದೇವಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಲ್ಲಿನ ಅಂಚೆ-ಕಚೇರಿಗೂ ಸಹ ಬಾಗಿಲು ಇಲ್ಲದೆ ಇರುವುದನ್ನು ನೋಡ ಬಹುದಾಗಿದೆ. ಬೀಗ ಹಾಕುವ ಬಗ್ಗೆ ಇಲ್ಲಿ ಯಾರೂ ಮಾತನಾಡುವುದಿಲ್ಲ.

ಶನೀಶ್ವರನ ಹೆದರಿಕೆಯಿಂದಾಗಿ , ಇಲ್ಲಿನ ಮನೆ, ಗುಡಿಸಲುಗಳು, ಅಂಗಡಿಗಳು ಮುಂತಾದವುಗಳಿಗೆ ಶನೀಶ್ವರನ ದೇವಾಲಯದಿಂದ ಒಂದು ಕಿಲೋಮೀಟರ್ ಸುತ್ತಳತೆಯೊಳಗೆ ಬಾಗಿಲುಗಳಾಗಲಿ, ಬೀಗಗಳಾಗಲಿ, ಇರುವುದಿಲ್ಲ. ಈ ಶನಿ ಶಿಂಗನಪುರದಲ್ಲಿ ಈವರೆವಿಗೂ ಕಳ್ಳತನವಾಗಲೀ, ದರೋಡೆಗಳಾಗಲಿ, ಆಗಿರುವುದಿಲ್ಲ.

ಕಳ್ಳತನ ಮಾಡಲು ಪ್ರಯತ್ನಿಸಿದ ಕೆಲವರಿಗೆ ರಕ್ತವಾಂತಿಯಾಗಿದ್ದು, ಕಳ್ಳತನ ಮಾಡಿದ ಕೆಲವೇ ನಿಮಿಷಗಳಲ್ಲಿ , ಸುತ್ತಳತೆಯನ್ನು ಬಿಡುವುದರೊಳಗೆ ಸಾವನ್ನು ಅಪ್ಪಿರುತ್ತಾರೆ.

ಇನ್ನು ಹಲವರಿಗೆ ಬೇರೆ ರೀತಿಯ ಶಿಕ್ಷೆಗಳಾದಂತಹ ದೀರ್ಘ ಖಾಯಿಲೆ, ಮಾನಸಿಕ ಅಸ್ಥಿರತೆ ಮುಂತಾದವುಗಳು ಘಟಿಸಿವೆ.

ಈ ಶನಿ ಶಿಂಗನಪುರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬಂದು ಶನೇಶ್ವರನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಶನಿದೇವರ ಜಪ ಮಾಡುವ ಶ್ಲೋಕ

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ | ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ
ಶನೈಶ್ಚರ ಜಯಂತಿ

ವೈಶಾಖ ಅಮಾವಾಸ್ಯೆ ಶನಿ ಹುಟ್ಟಿದ ದಿನ. ಸೂರ್ಯನ ಪುತ್ರನಾಗಿ ಛಾಯಾದೇವಿಯಲ್ಲಿ ಜನಿಸಿದ ಶನಿಗೆ ಯಮಧರ್ಮ ಹಿರಿಯ ಸಹೋದರ.
ಶನಿಯ ಸಹೋದರಿ ತಪತಿ.

  60 ವರ್ಷ ಮೇಲ್ಪಟ್ಟ ಅಪ್ಪಂದಿರಿಗೆ, 55 ವರ್ಷಗಳು ದಾಟಿದ ಅಮ್ಮಂದಿರಿಗಾಗಿ

ಸೂರ್ಯನ ಮಕ್ಕಳು ಶನಿ ಮತ್ತು ಯಮ ಇಬ್ಬರೂ ನ್ಯಾಯ ದೇವತೆಗಳೇ! ಜೀವನದ ಆಗು ಹೋಗುಗಳನ್ನು ಗಮನಿಸಿ, ಶನಿಯು ಸೂಕ್ತ ರೀತಿಯ ಶಿಕ್ಷೆ ಅಥವಾ ವರವನ್ನು ಬದುಕಿರುವಾಗ ನೀಡುತ್ತಾನೆ, ಆದರೆ ಯಮನು , ಒಬ್ಬ ವ್ಯಕ್ತಿಯು ಸತ್ತ ನಂತರ ಅವರ ಪುಣ್ಯ ಪಾಪಗಳ ಫಲಿತಾಂಶವನ್ನೂ ಶಿಕ್ಷೆಯನ್ನೂ ನೀಡುತ್ತಾನೆ.

ದಶರಥನು ಶನೈಶ್ಚರ ತೃಪ್ತಿಗಾಗಿ ಸ್ತೋತ್ರ ಮಾಡಿ ಪ್ರಾರ್ಥಿಸಿದ್ದಾನೆ.

ಶನಿಯು ನರಸಿಂಹ ಸ್ತೋತ್ರ ರಚಿಸಿದ್ದಾನೆ.

ಶನಿಯನ್ನು ಕಾಟ ಕೊಡುವ ಗ್ರಹ ಎಂದು ನಿಂದಿಸುತ್ತಾರೆ. ಆದರೆ ಪ್ರಾತಃ ಸ್ಮರಣೀಯ ದೇವೇಂದ್ರತೀರ್ಥರು ಶನಿ ತನ್ನ ಕರ್ತವ್ಯ ನಿರ್ವಾಹಕ. ಅವರವರ ಗ್ರಹಗತಿಗಳ ಅನುಸಾರ ಶಿಕ್ಷೆ ಕೊಡುತ್ತಾನೆ. ಶನಿಯು ಉಚ್ಛ ಸ್ಥಾನದಲ್ಲಿರಲು ಉನ್ನತಿಯೂ ಆಗುತ್ತದೆ ಎನ್ನುತ್ತಿದ್ದರು.

ನವಗ್ರಹಗಳಲ್ಲಿ ಒಂದಾದ ಶನೈಶ್ಚರನು ಸಕಲ ಸನ್ಮಂಗಳ ಮಾಡಲಿ.

ಶನೈಶ್ಚರ ಅಂತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹಾಯ ನಮಃ .🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »