*ಶ್ರೀಚಕ್ರ*
*ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ ,. ಅದಕ್ಕೆ ಶ್ರೀ ಶಂಕರಾಚಾರ್ಯರು ಆನಂದ ಲಹರಿಯಲ್ಲಿ ಈ ರೀತಿಯಾಗಿ ದೇವಿಯನ್ನು ವರ್ಣಿಸಿದ್ದಾರೆ..*
ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರ ವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ . ಕಾಳಿ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರ ಗಳಿಂದ ಸಂಪನ್ನಗೊಳಿಸಿದರು , ಆ ಕಾಳಿ ಸ್ವರೂಪದಲ್ಲಿದ್ದ ಮಧುರೆ ಮೀನಾಕ್ಷೀ ದೇವಿಯನ್ನು ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಸಿದ್ದರು. ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷೀಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕನಲ್ಲ ಅಂತ ತಿಳಿದು, ತನ್ನನ್ನ ಬಂಧನದಿಂದ ಮುಕ್ತಗೊಳಿಸು ಅಂತ ಕೇಳಿಕೊಳ್ಳುತ್ತಾಳೆ. ಆಗ ಶಂಕರಾಚಾರ್ಯರು ನೀನು ಕಾಳಿ ಸ್ವರೂಪ ಬಿಟ್ಟು ಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಿಗಳಿಸುವೆ ಅಂತ ಸವಾಲು ಹಾಕಿದಾಗ ಆ ಮುಗ್ದ ಬಾಲಕನ ಮಂತ್ರ ಶಕ್ತಿಗೆ ತಲೆ ಬಾಗಿ ಮಾತೃ ಸ್ವರೂಪವನ್ನು ಪಡೆಯುತ್ತಾಳೆ… ಇವತ್ತಿಗೂ ನೋಡಿ ಮಧುರೆ ಮೀನಾಕ್ಷೀ ಮಧುರವಾಗಿ ನಗುವ ಮುಖದಲ್ಲಿ ಮಾತೃಸ್ವರೂಪದಲ್ಲೇ ಇದ್ದಾಳೆ…. ಈ ರೀತಿಯಾಗಿ ಎಲ್ಲಿ ಎಲ್ಲಿ ಶಕ್ತಿ ಕ್ಷೇತ್ರಗಳಿವೆಯೋ ಅಲ್ಲಲ್ಲಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ …
ಶ್ರೀ ಚಕ್ರ ಅಂದರೆ ಅದೊಂದು ಮಂಡಲ ಮಂಡಲದ ಮದ್ಯೆ ಶ್ರೀ . ಶ್ರೀ ಅಂದರೆ ಸಾಕ್ಷಾತ್ ಪರಮೇಶ್ವರಿಯ ವಾಸ. ಅಂದರೆ ನವ ತ್ರಿಕೋಣ ಒಂಬತ್ತು ತ್ರಿಕೋಣದ ಮದ್ಯೆ ಬಿಂದು . ನವಶಕ್ತಿ ಸ್ವರೂಪಳಾದ ದೇವಿ ಅದರ ಮದ್ಧ್ಯದಲ್ಲಿ ವಾಸ ಅದಕ್ಕೆ ದೇವಿಯನ್ನು ಶ್ರೀ ಚಕ್ರಾಂತರ ವಾಸಿನಿ ಅಂತ ವರ್ಣಿಸುತ್ತಾರೆ.…
ಈ ಯಂತ್ರದ. ಮೇಲ್ಮುಖ ಅಗ್ನಿ ತತ್ವವನ್ನು ಹೊಂದಿದ್ದರೆ , ಅದರ ಸೂತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದೆ..ಮದ್ಯದ ಬಿಂದು ಜಲತತ್ವ , ಮತ್ತು ಅದರ ತಳ ಭೂತತ್ವವನ್ನು ಹೊಂದಿದೆ…
ಸ್ಪಟಿಕದ ಶ್ರೀಚಕ್ರ ಯಂತ್ರ ಶ್ರೇಷ್ಠ , ನಂತರ ಬೆಳ್ಳಿ , ತಾಮ್ರ…
ಶುಕ್ರವಾರ ,ರವಿವಾರ ಮತ್ತು ಹುಣ್ಣಿಮೆ ದಿನ ಶ್ರೀ ಚಕ್ರ ಪೂಜೆ ಅತ್ಯಂತ ಫಲದಾಯಕ
ಯಾರ ಮನೆಯಲ್ಲಿ ನಿತ್ಯ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ಪರಮೇಶ್ವರಿಯ ವಾಸವಿರುತ್ತಾಳೆ…..ಅವರಿಗೆ ದಾರಿದ್ರ್ಯ ಬರುವದಿಲ್ಲ..
ಅಲ್ಲಿ ಶಾಂತಿ ನೆಲೆಸಿರುತ್ತದೆ . ಯಾಕೆಂದರೆ ದೇವಿಯನ್ನ ಶಾಂತಿ ಸ್ವರೂದಲ್ಲಿ ತಂದದ್ದೇ ಶ್ರೀ ಚಕ್ರದಲ್ಲಿ ….
ಯಾರ ಮನೆಯಲ್ಲಿ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಂಪತ್ತಿಗೆ ಕೊರತೆ ಇರುವದಿಲ್ಲ …
ಪ್ರತಿ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಇಷ್ಟಾರ್ಥವೆಲ್ಲ ಸಿದ್ಧಿಸುತ್ತದೆ.
ಶ್ರೀ ಚಕ್ರದ ಆರಾಧನೆ ನಡೆಯುವಲ್ಲಿ ಯಾವದೇ ತರಹದ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ನಡೆಯುವದಿಲ್ಲ . ….
ಆರೋಗ್ಯ ದೃಷ್ಟಿಯಿಂದಲೂ ಶ್ರೀಚಕ್ರ ಪೂಜೆ ಬಹಳ ಒಳ್ಳೆಯದು…
ಶ್ರೀ ಚಕ್ರವನ್ನು ಖರಿದಿಸುವಾಗ ನೋಡಿ ಮೂಲೆಗಳು ಸ್ಪಷ್ಟತೆಯಿಂದ ಕೂಡಿರಬೇಕು….
ಗೆರೆಗಳು ಅಂಕಡೊಂಕಾಗಿರಬಾದು..
ಶ್ರೀಚಕ್ರದ ಸುತ್ತಲೂ ಎಂಟು ದಳದ ಕಮಲ ಇರಬೇಕು ನಂತರ ಹೊರಗಡೆ ಹದಿನಾರು ದಳದ ಕಮಲವಿರಬೇಕು..
ಹೊಸದಾಗಿ ತಂದ ಶ್ರೀ ಚಕ್ರವನ್ನು ಯಾವುದಾದರೂ ದೇವಿ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಮಾಡಿಸಿ ನಂತರ ಮನೆಯಲ್ಲಿ ಇಟ್ಟು ಪೂಜಿಸಬೇಕು…