ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಾಲಾಯ ತಸ್ಮೈ ನಮಃ – ನಿವೃತ್ತಿಯ ಕಥೆ

ಬರ್ನ್ ಆದ ಬಲ್ಬುಗಳು.

ಗೆಳೆಯರೇ,
ಒಬ್ಬ ದೊಡ್ಡ executive ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ನಿವೃತ್ತನಾದ. ಇದು ಸಹಜ, ಎಲ್ಲರೂ ಒಂದಲ್ಲ ಒಂದು ದಿನ ನಿವೃತ್ತಿ ಹೊಂದಲೇ ಬೇಕು.
ನಿವೃತ್ತಿಯ ಮುನ್ನ ಈ ಅಧಿಕಾರಿ ಅರಮನೆಯಂತಹ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದ. ಈಗ apartment ಒಂದರಲ್ಲಿನ ತನ್ನದೇ ಸ್ವಂತ flat ಗೆ ಬಂದು ನೆಲೆಸಿದ. ಅದೊಂದು cluster of apartments. ಎಲ್ಲ ಸೌಕರ್ಯಗಳೂ ಇದ್ದುವೆಂದು ಹೇಳುವ ಅಗತ್ಯವಿಲ್ಲ.
ಈ ನಿವೃತ್ತ ಅಧಿಕಾರಿ ತನ್ನನ್ನು ತಾನೇ ತುಂಬಾ ದೊಡ್ಡ ವ್ಯಕ್ತಿಯೆಂದು ಭಾವಿಸಿದ್ದ. ಅಲ್ಲಿನ ಯಾವ ವ್ಯಕ್ತಿಯೊಂದಿಗೂ ಮಾತನಾಡುತ್ತಿರಲಿಲ್ಲ, ಯಾರ ಸ್ನೇಹವನ್ನೂ ಮಾಡಿಕೊಳ್ಳಲು ಇಚ್ಛಿಸುತ್ತಿರಲಿಲ್ಲ.
ಒಂದು ಅಂತರ ಕಾಯ್ದುಕೊಂಡೇ ಬಂದ.
ಸಾಯಂಕಾಲದ ಸಮಯದಲ್ಲಿ community parkನಲ್ಲಿ ನಡೆದಾಡುವಾಗಲೂ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಉಳಿದವರ ಕಡೆ ಒಂದು ರೀತಿ ತಿರಸ್ಕಾರ ನೋಟ ಬೀರುತ್ತಿದ್ದ. ತನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದ.
ಹೀಗೆ ಕಾಲ ಕಳೆಯುತ್ತಿತ್ತು. ಒಂದು ದಿನ ಸಂಜೆ ಈ ವ್ಯಕ್ತಿ ಬೆಂಚೊಂದರಲ್ಲಿ ಕುಳಿತಿದ್ದಾಗ ಈತನಿಗಿಂತಲೂ ವಯಸ್ಸಾದ ವೃದ್ಧರೊಬ್ಬರು ಈತನ ಪಕ್ಕದಲ್ಲಿ ಬಂದು ಕುಳಿತರು. ಆ ವೃದ್ಧರೇ ಈ ವ್ಯಕ್ತಿಯೊಂದಿಗೆ ಮಾತನಾಡಲು ಆರಂಭಿಸಿದರು. ಅಧಿಕಾರಿ ಮೊದಮೊದಲು ಬಿಗುಮಾನದಿಂದಲೇ ಮಾತನಾಡತೊಡಗಿ, ನಂತರ ಸ್ವಲ್ಪ ಸ್ವಲ್ಪವಾಗಿ ತೆರೆದುಕೊಳ್ಳಲಾರಂಭಿಸಿದ. ಮಾತುಗಳನ್ನು ಮುಂದುವರೆದವು, ಕ್ರಮೇಣ ಅವರಿಬ್ಬರೂ ನಿತ್ಯವೂ ಭೇಟಿಯಾಗಲಾರಂಭಿಸಿದರು. ಇವರ ಮಾತುಕತೆಯ ವಿಷಯ ಬೇರೇನೂ ಇರಲಿಲ್ಲ. ಅಧಿಕಾರಿಯ ಸ್ವ ಪ್ರಶಂಸೆಯ ಮಾತುಗಳೇ ಆಗಿರುತ್ತಿದ್ದವು. ಆತನಿಗೆ ತನ್ನ ಕಳೆದ ದಿನಗಳ ಬಗ್ಗೆ ಹೇಳಿಕೊಳ್ಳುವುದು ಬಲು ಆಪ್ಯಾಯಮಾನವಾಗಿರುತ್ತಿತ್ತು.
ಆತ ಆ ವೃದ್ಧರೊಂದಿಗೆ ಹೇಳಿಕೊಳ್ಳುತ್ತಿದ್ದ – ” ನಿವೃತ್ತಿಯ ಮುನ್ನ ನಾನು ಎಷ್ಟು ಉನ್ನತ ಹುದ್ದೆಯಲ್ಲಿದ್ದೆ ಗೊತ್ತೇ ? ನೀವು ಊಹಿಸಲೂ ಸಾಧ್ಯವಿಲ್ಲ. ಈಗ ವಿಧಿಯಿಲ್ಲದೆ ಇಲ್ಲಿ ಬಂದು ನೆಲಸಬೇಕಾಗಿದೆ “. ಇತ್ಯಾದಿ ಇತ್ಯಾದಿ.
ಆ ವೃದ್ಧರು ಶಾಂತವಾಗಿ ಈತನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು.
ಹೀಗೇ ಇನ್ನಷ್ಟು ದಿನ ಕಳೆಯಿತು. ಈ ನಿವೃತ್ತ ಅಧಿಕಾರಿ ಇತರರ ಬಗ್ಗೆ ಕುತೂಹಲದಿಂದ ವೃದ್ಧರೊಂದಿಗೆ ವಿಚಾರಿಸತೊಡಗಿದ. ಇಷ್ಟು ದಿನಗಳು ಶಾಂತವಾಗಿ ಕೇಳಿಸಿಕೊಳ್ಳುತ್ತಲೇ ಇದ್ದ ವೃದ್ಧರು ಬಾಯಿ ತೆರೆದರು.
” ನಿವೃತ್ತಿಯ ನಂತರ ನಾವೆಲ್ಲರೂ fuse ಹೋದ ಬಲ್ಬಿನಂತೆ. ಈ ಬಲ್ಬುಗಳು ಮುಂಚೆ ಯಾವ wattageನವಾಗಿದ್ದವು ಎಂದು ಯೋಚಿಸುವುದು ಅರ್ಥಹೀನ. Fuse ಹೋದ ನಂತರ ಹಿಂದೆ ಈ ಬಲ್ಬುಗಳು ಎಷ್ಟು wattageನದಾಗಿದ್ದವು ? ಎಷ್ಟು ಬೆಳಕು ಕೊಡುತ್ತಿದ್ದವು ? ಇದಕ್ಕೆ ಬೆಲೆಯಿದಯೇ “?
ವೃದ್ಧರು ಮುಂದುವರೆಸಿದರು –
” ನಾನು ಈ community ವಸತಿಯಲ್ಲಿ ಕಳೆದ ಐದು ವರ್ಷಗಳಿಂದ ವಾಸಿಸುತ್ತಿದ್ದೇನೆ. ನಾನು ಇದುವರೆಗೆ ಈ ಹಿಂದೆ ಎರಡು ಅವಧಿಗಳಿಗೆ ಲೋಕಸಭಾ ಸದಸ್ಯನಾಗಿದ್ದೆ ಎಂದು ಯಾರಲ್ಲಿಯೂ ಹೇಳಿಕೊಳ್ಳಲು ಹೋಗಲಿಲ್ಲ.
ಅಲ್ಲಿ, ಆ ಬೆಂಚಿನ ಮೇಲೆ ಕುಳಿತಿದ್ದಾರಲ್ಲಾ, ಅವರ ಹೆಸರು ವರ್ಮಾಜಿ ಎಂದು. ಅವರು ಇಂಡಿಯನ್ ರೈಲ್ವೇಸ್ ನ ನಿವೃತ್ತ ಜನರಲ್ ಮ್ಯಾನೇಜರ್.
ಅಲ್ಲಿ, ದೂರದಲ್ಲಿ ನಡೆದು ಬರುತ್ತಿದ್ದಾರಲ್ಲಾ, ಸರ್ದಾರ್ ಜಿ ಅವರು ಆರ್ಮಿಯಲ್ಲಿ ಮೇಜರ್ ಜನರಲ್ ಆಗಿದ್ದವರು.
ಅಲ್ಲಿ ಈ ಕಡೆ ಅತಿ ಶುಭ್ರವಾದ ಬಿಳಿ ಬಟ್ಟೆ ಧರಿಸಿ ಕುಳಿತಿರುವರಲ್ಲಾ, ಮೆಹ್ತಾಜಿ ಅವರು ಇಸ್ರೊದಲ್ಲಿ Chief ಆಗಿದ್ದರು. ಅವರು ಈ ವಿಷಯವನ್ನು ಇದುವರೆಗೆ ಯಾರೊಂದಿಗೂ ಹೇಳಿಕೊಂಡಿಲ್ಲ. ನನಗೆ ಹೇಗೋ ತಿಳಿಯಿತು.
‌‌ ಈಗ ಇವರೆಲ್ಲರೂ fuse ಹೋದ ಬಲ್ಬುಗಳು. Zero watt ನಿಂದ 100 watt ವರೆಗೆ ಏನಾಗಿದ್ದರೋ, ಅದು ಈಗ ಪ್ರಸ್ತುತವೇ ಅಲ್ಲ. ಅಥವಾ ಅವರೇನು cfl, led, halogen, incandescent, fluorescent decorative ಬಲ್ಬುಗಳಾಗಿದ್ದವೋ, ಅದೂ ವಿಷಯವಲ್ಲ.
ಅಯ್ಯಾ ಗೆಳೆಯ, ಇದು ನಿನಗೂ ಅನ್ವಯವಾಗುತ್ತದೆ. ಈ ವಿಷಯ ನಿನಗೆ ಯಾವಾಗ ಅರ್ಥವಾಗುತ್ತದೆಯೋ, ಆಗ ನಿನ್ನ ಮನಸ್ಸು ಪ್ರಶಾಂತವಾಗುತ್ತದೆ ಈ ಸಮುಚ್ಚಯದಲ್ಲಿದ್ದುಕೊಂಡೂ ನೀನು ಪ್ರಚ್ಛನ್ನನಾಗುತ್ತೀಯೆ.
ನಂತರ ಮುಂದುವರೆಸಿದರು –
” ಸೂರ್ಯೋದಯ ಮತ್ತು ಸೂರ್ಯಾಸ್ತ , ಎರಡೂ ಸುಂದರ ದೃಶ್ಯಗಳೇ. ಆದರೆ ನಾವು ಉದಯರವಿಗೆ ನೀಡುವಷ್ಟು ಮಹತ್ವವನ್ನು ಮುಳುಗುವ ಸೂರ್ಯನಿಗೆ ನೀಡುವುದಿಲ್ಲ. ಈ ಸತ್ಯವನ್ನು ನೀನು ಅರಿತುಕೊಳ್ಳಬೇಕು.
ನಮಗೆ ಯಾವ ಹುದ್ದೆ, ಬಿರುದು ಬಾವಲಿಗಳು ಇರುತ್ತವೆಯೋ ಅವು ಯಾವುವೂ ಶಾಶ್ವತವಲ್ಲ. ಇವುಗಳಿಗೆ ಹೆಚ್ಚಿನ ಮಹತ್ವ ಕೊಟ್ಟರೆ, ನಾವು ಜೀವನದ ಸುಖ ಶಾಂತಿಗಳನ್ನು‌ ಕಳೆದುಕೊಳ್ಳಬೇಕಾಗುತ್ತದೆ, ಜೀವನ ದುರ್ಭರವಾಗುತ್ತದೆ. ಇವು ಯಾವುವೂ ನಮ್ಮ ಜೊತೆಗೆ ಬರುವುದಿಲ್ಲ.
ಒಂದು ವಿಷಯ ಜ್ಞಾಪಕದಲ್ಲಿಟ್ಟುಕೋ.
ಚದುರಂಗದಾಟ ಮುಗಿದ ನಂತರ, ಎಲ್ಲ ಕಾಯಿಗಳು (pawns) ರಾಜ, ಮಂತ್ರಿ ಸಹಿತ ಎಲ್ಲವೂ ಒಂದೇ ಡಬ್ಬಿಯನ್ನು ಸೇರುತ್ತವೆ.
🙏🙏🙏🙏🙏
ಕೃಷ್ಣಾರ್ಪಣಮಸ್ತು
ಸದ್ವಿಚಾರ ಸಂಗ್ರಹ

Leave a Reply

Your email address will not be published. Required fields are marked *

Translate »