ಒಂದು ಸಣ್ಣ ಕಥೆ.
ಒಬ್ಬ ಸನ್ಯಾಸಿ ಕಾಡಿನಲ್ಲಿ ಹೋಗುತ್ತಾ ,ವಿಶ್ರಾಂತಿಗಾಗಿ ಒಂದು ಮರದ ಕೆಳಗೆ ಕುಳಿತ.ಅಲ್ಲಿ ಒಂದು ಇಲಿ ಮಣ್ಣಿನಲ್ಲಿ ತುತೂ ಮಾಡಿಕೊಂಡಿತು.ಆ ಇಲಿ ತುತೂನಿಂದ ಹೊರಗೆ ಇಣುಕಿ ನೋಡುವುದು ಹೊರಗೆ ಬರದೇ ಭಯದಿಂದ ತಿರುಗಿ ಒಳಗೆ ಹೋಗುತ್ತಿರುತ್ತದೆ.ಪದೇ ಪದೇ ಹೀಗೆ ಮಾಡುತ್ತಿರುವುದನ್ನು ಕಂಡ ಸನ್ಯಾಸಿಯು, ಇಲಿಯನ್ನು ಏಕೆ ಇಣುಕಿ ನೋಡುತ್ತಾ ಹೊರಗೆ ಬರಲು ಭಯಪಡುತ್ತಿರುವೆ ಎಂದು ಕೇಳಿದ.
ಆಗ ಇಲಿ ,ಇಲ್ಲಿ ಬೆಕ್ಕು ಯಾವಾಗಲೂ ಓಡಾಡುತ್ತಿರುತ್ತದೆ,ಹೊರಗೆ ಬಂದರೆ ನನ್ನನ್ನು ತಿಂದು ಬಿಡುತ್ತದೆ ಎಂಬ ಭಯದಿಂದ ಹೊರಗೆ ಬರಲು ಹಿಂಜರಿಯುತ್ತಿರುವೆ ಎಂದಿತು.ಆಗ ಸನ್ಯಾಸಿ , ಎಲ್ಲರೂ ಒಂದೆಲ್ಲಾ ಒಂದು ದಿನ ಸಾಯಲೇಬೇಕು.ಹೀಗೆ ಎಷ್ಟು ದಿನ ಭಯಪಡುತ್ತಾ ಆಹಾರ ಹುಡುಕದೇ ಬದುಕುತ್ತಿಯಾ? ಧೈರ್ಯದಿಂದ ಹೊರಬಂದು ಸ್ವತಂತ್ರ್ಯದಿಂದ ತಿರುಗಾಡುತ್ತಾ ಖುಷಿಯಾಗಿರು ಎಂದನು.ಆಗ ಇಲಿ ಸನ್ಯಾಸಿಯ ಮಾತಿಗೆ ಕಿವಿಗೊಡದೇ ,ನೀನು ನನಗೆ ಸಹಾಯ ಮಾಡಬೇಕೆಂದೆನಿಸಿದರೆ ನನ್ನನ್ನು ನಿನ್ನ ಮಂತ್ರ ಶಕ್ತಿಯಿಂದ ಬೆಕ್ಕಾಗಿ ಪರಿವರ್ತಿಸು ಎಂದಿತು.ಆಗ ಸನ್ಯಾಸಿಯು ಸರಿ ಎಂದು ತನ್ನ ಮಂತ್ರ ಶಕ್ತಿಯಿಂದ ಬೆಕ್ಕಾಗಿ ಪರಿವರ್ತಿಸಿದ. ಇಲಿ ಬೆಕ್ಕಾಗಿ ಖುಷಿಯಿಂದ ಓಡಿ ಹೋಗಿತು.ಎರಡು ದಿನಗಳ ನಂತರ ಬೆಕ್ಕು ಸನ್ಯಾಸಿಯ ಬಳಿ ಬಂದು ನನ್ನನ್ನು ನಾಯಿಗಳು ತಿನ್ನಲು ಅಟ್ಟಿಸಿಕೊಂಡು ಬರುತ್ತವೆ ಅವುಗಳಿಂದ ನನ್ನನ್ನು ರಕ್ಷಿಸಿಕೊಳ್ಳಲು ಆಗದು,ದಯವಿಟ್ಟು ನನ್ನನ್ನು ನಾಯಿಯಾಗಿ ಮಾಡು ಎಂದಿತು.ಆಗ ಸನ್ಯಾಸಿಯು ಸರಿ ಎಂದು ನಾಯಿಯಾಗಿ ಮಾಡಿತು.ಆಗ ಬೆಕ್ಕು ನಾಯಿಯಾಗಿ ಖುಷಿಯಾಗಿ ಓಡತೊಡಗಿತು.ಎರಡು ದಿನಗಳ ನಂತರ ,ನಾಯಿ ಸನ್ಯಾಸಿಯ ಬಳಿ ಬಂದು ಸಿಂಹ ನನ್ನನ್ನು ತಿನ್ನಲು ಓಡಾಡಿಸಿತು ನನಗೆ ತುಂಬಾ ಭಯವಾಗಿತು.ನನ್ನನ್ನು ಸಿಂಹನಾಗಿ ಮಾಡು ಎಂದಿತು.ಆಗ ಸನ್ಯಾಸಿಯು ಸರಿ ಎಂದು ಸಿಂಹನಾಗಿ ಮಾಡಿತು.ಆಗ ನಾಯಿ ಸಿಂಹನಾಗಿ ಘರ್ಜಿಸುತ್ತಾ ಮುಂದೆ ಹೋಯಿತು.ಎರಡು ದಿನದ ನಂತರ ಸಿಂಹ ಸನ್ಯಾಸಿಯ ಬಳಿ ಬಂದು ನನ್ನನ್ನು ಬೇಟೆಯಾಡಲು ಮನುಷ್ಯರು ಬಾಣಗಳಿಂದ ಹೊಡೆದರು ,ನನಗೆ ಭಯವಾಗುತ್ತಿದೆ.ನನ್ನನ್ನು ಮನುಷ್ಯನನ್ನಾಗಿ ಮಾಡು ಎಂದಿತು.ಆಗ ಸನ್ಯಾಸಿಯು ನಗುತ್ತಾ ,ನಾನು ನಿನ್ನನ್ನು ಕಾಡಿನ ರಾಜ ಸಿಂಹನಾಗಿ ಮಾಡಿದರೂ ನೀನು ಧೈರ್ಯದಿಂದಿಲ್ಲಖುಷಿಪಡುತ್ತಿಲ್ಲ.ನಾನು ನಿನ್ನ ದೇಹ ಆಕಾರವನ್ನು ಬದಲಿಸಬಲ್ಲೆ ಆದರೆ ನಿನ್ನ ಹೃದಯದಲ್ಲಿರುವ ಭಯವನ್ನಲ್ಲ.ನೀನು ಹೀಗೆ ನಿನ್ನ ಹೃದಯದಲ್ಲಿ ಭಯವನ್ನು ಇಟ್ಟುಕೊಂಡರೆ ನಾನು ನಿನ್ನನ್ನು ಏನೇ ಆಗಿ ಪರಿವರ್ತಿಸಿದರೂ ಅದು ವ್ಯರ್ತ.ನೀನು ಎಲ್ಲಿಯವರೆಗೆ ನಿನ್ನ ಹೃದಯದಲ್ಲಿ ಭಯವನ್ನು ಬಿಡುತ್ತಿಯೋ ಆವಾಗ ನೀನು ಮುಂದೆ ಧೈರ್ಯದಿಂದಹೋಗುವೆ,ಖುಷಿಯಾಗಿರುವೆ ಎಂದನು.ಆಗ ಸಿಂಹ ಇದನ್ನು ಕೇಳಿ ಮತ್ತೆ ಇಲಿಯಾಗುವಂತೆ ಕೇಳಿ ಭಯಬಿಟ್ಟು ಸ್ವತಂತ್ರ್ಯವಾಗಿ ತಿರುಗುತ್ತಾ ಆಹಾರ ಹುಡುಕುತ್ತಾ ಖುಷಿಯಾಗಿ ಬಾಳಿತು.
(ಸಾರಾಂಶ:ನಾವು ಏನೇ ಕೆಲಸ ಮಾಡಲು ಭಯಪಡುತ್ತಾ ಹಿಂಜರಿಯುತ್ತಿದ್ದರೆ ನಾವು ಅಂದುಕೊಂಡಿದ್ದು ಆಗುವುದಿಲ್ಲ , ಮುಂದುವರಿಯುದಿಲ್ಲ.)
🥰🌹🥰