🙏ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ🙏
ಮಾರ್ಚ್ 15 ರಂದು ರಾಮಕೃಷ್ಣ ಪರಮಹಂಸರ ಜಯಂತಿ
ಶ್ರೀ ರಾಮಕೃಷ್ಣ ಪರಮಹಂಸರ ಅವರ ಹುಟ್ಟಿದ್ದು ದಿ!! 18 – 2 – 1832 ರಂದು ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯ ಕಾಮಾರಪುಕುರ ಎಂಬ ಚಿಕ್ಕ ಗ್ರಾಮ ಅದು ಕೋಲ್ಕತಾ ದಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿರುವ ಗ್ರಾಮದಲ್ಲಿ ಜನನ ವಾಯಿತು. ಇವರು ತಂದೆ ಹೆಸರು ಖುದಿರಾಮ ಚಟ್ಟೋಪಾಧ್ಯಾಯ ತಾಯಿಯ ಹೆಸರು ಚಂದ್ರಮಣಿದೇವಿ ಇವರ ದಂಪತಿಗಳ ನಾಲ್ಕನೇ ಮಗನೇ ಗದಾಧರ. ಎಂದು ನಾಮಕರಣ ಮಾಡಿದರು ತಂದೆ ತಾಯಿ ಪ್ರೀತಿಯಿಂದ ಗದಾಯ ಎಂದು ಕರೆಯುತ್ತಿದ್ದರು ಕಾಲ ಕ್ರಮೇಣ ಗದಾಧರ ಎಂಬ ಹೆಸರು ಅಳಿದು ರಾಮಕೃಷ್ಣ ಎಂಬ ಹೆಸರು ಹೊರ ಬಂದಿತು. ಆಗ ರಾಮಕೃಷ್ಣ ಅವರ ಏಳನೇ ವಯಸ್ಸಿನಲ್ಲಿ ಇವರ ತಂದೆ ತೀರಿಕೊಂಡರು ಆಗ ರಾಮಕೃಷ್ಣ ಶಾಲೆ ಎಂದರೆ ಬಹಳ ಕಷ್ಟದಿಂದ ಓದುತ್ತಿದ್ದ ದೇವರು ಎಂದರೆ ಬಹಳ ಪ್ರೀತಿ ಭಜನೆ ದೇವರ ಧ್ಯಾನ ಮಾಡುತ್ತಾ ರಾಣಿ ರಾಸಮಣಿ ಎನ್ನುವವರು 🔱 ದಕ್ಷಿಣೇಶ್ವರದಲ್ಲಿ ಭವತಾರಿಣಿದೇವಿಯ ಮಂದಿರವನ್ನು ಕಟ್ಟಿಸಿದರು ಆ ಮಂದಿರದಲ್ಲಿ ರಾಮಕೃಷ್ಣ ಪರಮಹಂಸರ ಅರ್ಚಕರಾದರು ಅವರ ಪೂಜೆ ವಿಶಿಷ್ಟವಾಗಿತ್ತು ಅವರು ಕಲ್ಲಿನ ವಿಗ್ರಹ ಹೆತ್ತ ತಾಯಿಯಂತೆ ಕಾಣುತ್ತಿದ್ದರು ರಾಮಕೃಷ್ಣನು ದೇವರನ್ನು ನೋಡಲೇ ಬೇಕು ಎಂದು ದಿನಾಲು ಪೂಜೆ ಹೆಚ್ಚಾಯಿತು ದಿನಾಲು ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಯಿತು ಈ ಸುದ್ದಿ ತಿಳಿದ ತಾಯಿ ಚಂದ್ದಮಣಿ ದಕ್ಷಿಣೇಶ್ವರಕ್ಕೆ ಬಂದು ಈ ರಾಮಕೃಷ್ಣ ಭಕ್ತಿಯನ್ನು ಕಂಡು ತನ್ನ ಮಗ ರಾಮಕೃಷ್ಣ ಅವರನ್ನು ಸ್ವ ಗ್ರಾಮಕ್ಕೆ ಕರೆದುಕೊಂಡು ಬಂದಳು ಆಗ ಮಗನಿಗೆ ಮದುವೆ ಕೂಡ ಮಾಡಿದಳು ಆತನಿಗೆ 23 ವರ್ಷ ವಯಸ್ಸು ಈತನ ಹೆಂಡತಿಯ ಹೆಸರು ಶಾರದಾ ಮಣಿದೇವಿ ಆ ತಾಯಿಗೆ ಕೆವಲ ಐದು ವರ್ಷ ಚಿಕ್ಕ ಹುಡುಗಿಯ ಜೋತೆ ಮದುವೆಯಾಯಿತು
ಆಗ ರಾಮಕೃಷ್ಣ ಮದುವೆ ಆದ ಮೇಲೆ ದಕ್ಷಿಣೇಶ್ವರ ಗ್ರಾಮಕ್ಕೆ ಬಂದಮೇಲೆ ಅವರಿಗೆ ದೇವರದೇ ಧ್ಯಾನವಾಯಿತು, ಆಗ ಭೈರವಿ ಬ್ರಾಹ್ಮಣಿ ಎಂಬಾಕೆಯು ತೋತಾಪುರಿ ಎಂಬ ಸನ್ನಾಸಿಯು ರಾಮಕೃಷ್ಣನಿಗೆ ಗುರುಗಳಾಗಿ ಬಂದರು ಮಾರ್ಗದರ್ಶನ ನೀಡಿದರು ಆಗ ಕಾಳಿಕಾ ದೇವಿಯ ಪ್ರತ್ಯೇಕ ದರ್ಶನ ಪಡೆದು ಪುನಿತರಾದರು
ರಾಮಕೃಷ್ಣ ಪರಮಹಂಸರು ನಮ್ಮ ಸ್ವಾಮಿ ವಿವೇಕಾನಂದರಿಗೆ ಕೂಡ ಮಾರ್ಗದರ್ಶನ ನೀಡಿದರು ಆಗ ವಿವೇಕಾನಂದರು ಸನ್ಯಾಸಿ ದಿಕ್ಷೆ ಪಡೆದು ಕನ್ಯಾಕುಮಾರಿಯ ಸಮುದ್ರದಲ್ಲಿ ತಪಸ್ಸು ಮಾಡಿ ವಿದೇಶದಲ್ಲಿ ರಾಮಕೃಷ್ಣ ಪರಮಹಂಸರ ಶಕ್ತಿ ಇಡೀ ಜಗತ್ತಿಗೆ ತಿಳಿಯುವ ಹಾಗೆ ಮಾಡಿದರು
ನಮ್ಮ ಭಾರತದ ಪ್ರಸಿದ್ಧ ಧಾರ್ಮಿಕ ನೇತೃತ್ವ ಒಬ್ಬರು ಶ್ರೀ ಕಾಳಿಯ ದೇವಿಯ ಆರಾಧಕರಾದ 19 ಶತಮಾನದ ಹಿಂದೂ ಧರ್ಮದ ಬಗ್ಗೆ ಪುನರುಜ್ಜೀವನ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು ಇವರ ಜೀವನ ಚರಿತ್ರೆಯ ಕಥೆ ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ ನಾಡಿನ ಸಮಸ್ತ ಜನತೆಗೆ
ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಹಾರ್ದಿಕ ಶುಭಾಷಯಗಳು