ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸ್ವಾಮಿ ವಿವೇಕಾನಂದರ ಕಥೆ : ವಿಗ್ರಹ ಪೂಜೆ

Swami Vivekananda’s Story on Idol Worship with Raja Mangal Singh.

ಸ್ವಾಮಿ ವಿವೇಕಾನಂದರು ಸಂಪೂರ್ಣ ಭಾರತದ ಪ್ರವಾಸ ಮಾಡುವ ಸಂದರ್ಭದಲ್ಲಿ, ಸ್ವಾಮಿ ವಿವೇಕಾನಂದರು ರಾಜಸ್ಥಾನದಲ್ಲಿರುವ ಅಲ್ವಾರ್ ರಾಜ್ಯಕ್ಕೆ ಬಂದರು. ಅವರನ್ನು ರಾಜ ಮಂಗಲ್ ಸಿಂಗ್ ಅವರು ಸ್ವಾಗತ ಮಾಡಿದರು. ರಾಜ ಮಂಗಲ್ ಸಿಂಗ್ ಸ್ವಾಮಿ ವಿವೇಕಾನಂದರ ಜೊತೆ ದೇವರು, ಧರ್ಮ , ನಂಬಿಕೆಗಳ ಬಗ್ಗೆ ಮಾತಾಡುವಾಗ ವಿಗ್ರಹಗಳನ್ನು ಪೂಜಿಸುವುದು ಸರಿಯಾದ ಅಭ್ಯಾಸ ಎನ್ನಿಸುವುದಿಲ್ಲ ಹಾಗು ಅವಗಳನ್ನೂ ನಾನು ನಂಬುವುದಿಲ್ಲ ಎಂದು ರಾಜನು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ. ಮೂಲತಹಃ ರಾಜನು ದೇವರು ನಿರಾಕಾರ ಎಂದು ನಂಬುವವನಾಗಿದ್ದು ವಿಗ್ರಹ ಪೂಜೆಯನ್ನು ನಂಬುತ್ತಿರಲಿಲ್ಲ.

  ಧೃತರಾಷ್ಟ್ರನ 101 ಮಕ್ಕಳ ಹೆಸರು ತಿಳಿಯಿರಿ

ಸ್ವಾಮೀಜಿಗೆ ವಿಗ್ರಹ ಪೂಜೆ ತಪ್ಪಲ್ಲ ಎಂದು ತಿಳಿಸಬೇಕಾಗಿತ್ತು ಹಾಗಾಗಿ ಕೂಡಲೇ
ದಿವಾನ್ (ಮಂತ್ರಿ) ಕರೆದು ರಾಜನ ಮುಂದೆಯೇ ಹೇಳಿದರು . “ದಯವಿಟ್ಟು ಅಲ್ಲಿ ನೇತಾಡುತ್ತಿರುವ ರಾಜನ ತಂದೆಯ ಚಿತ್ರದ ಮೇಲೆ ಉಗುಳಿವಿರಾ ?, .” ಎಂದು ಹೇಳಿ ರಾಜ ಮಂಗಲ್ ಸಿಂಗ್ ಅವರ ತಂದೆಯ ಛಾಯಾಚಿತ್ರದ ಬಗ್ಗೆ ಕೈ ತೋರಿಸಿ ಸ್ವಾಮಿಜಿ ಮನವಿ ಮಾಡಿದರು. ದಿವಾನರಿಗೆ ಹೆದರಿಕೆ ಆಯಿತು ಮತ್ತು ಸ್ವಾಮೀಜಿ ಹೇಳಿದಂತೆ ಮಾಡಲಿಲ್ಲ.

ಆಗ ಸ್ವಾಮೀಜಿಯವರು ರಾಜರ ಕಡೆ ತಿರುಗಿ ನೋಡಿ , “ಆ ಚಿತ್ರವು ನಿಮ್ಮ ತಂದೆಯದಾಗಿದ್ದರೂ ಆದರೂ ಅದು ಕೇವಲ ಚಿತ್ರ ಹಾಗು ನಿಜವಾದ ತಂದೆಯಲ್ಲ , ಕೇವಲ ಒಂದು ವಸ್ತು. ಮಂತ್ರಿಗಳು ಅದರ ಮೇಲೆ ಉಗುಳುವುದಕ್ಕೆ ಹಿಂಜರಿದರು ಏಕೆಂದರೆ ಆ ಚಿತ್ರ ನಿಮ್ಮ ತಂದೆಯನ್ನು ನೆನಪಿಸುವಂತೆಯೇ ಅದರ ಜೊತೆ ಅವರ ಮೇಲಿನ ಗೌರವವನ್ನು ನೆನಪಿಸುತ್ತದೆ. ಅದೇ ರೀತಿ ಚಿತ್ರಗಳು / ವಿಗ್ರಹಗಳು ನಮಗೆ ದೇವರನ್ನು ನೆನಪಿಸುತ್ತವೆ ಹಾಗು ದೇವರ ಆದರ್ಶ ಮತ್ತು ಗುಣಗಳನ್ನು ನಾವು ಅವುಗಳ ಮೂಲಕ ಆರಾಧಿಸುತ್ತೇವೆ ಎಂದು ನೆನಪಿಸುತ್ತದೆ. ”
ರಾಜ ಮಂಗಲ್ ಸಿಂಗ್ ಕಣ್ಣೆದುರೇ ನಡೆದ ಘಟನೆಯಿಂದ ವಿಗ್ರಹ ಪೂಜೆಯಲ್ಲಿ ತಪ್ಪಿಲ್ಲ ಎಂದು ಒಪ್ಪಿಕೊಂಡರು ಹಾಗು ಆ ಪೂಜಾ ಮಾರ್ಗದಲ್ಲೂ ಭಕ್ತಿ ಅರ್ಥಪೂರ್ಣವಾಗಿದೆ ಎಂದು ತಿಳಿದರು .

Leave a Reply

Your email address will not be published. Required fields are marked *

Translate »