ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗೆಲುವು ಯಾರದು ? ಸೋಲು ಯಾರದು ? Win – Lose Zen Story

ಈ ಜೆನ್ ಕಥೆಯಲ್ಲಿ ಆತುರಗಾರನಿಗೆ ಬುದ್ದಿ ಮಟ್ಟ ಎಂಬ ಕನ್ನಡ ನಾಣ್ಣುಡಿಯಂತೆ ನಾವು ಅವಸರ ಪಟ್ಟು ಹೇಗೆ ಏನೆಲ್ಲ ಕಳೆದುಕೊಳ್ಳುತ್ತೇವೆ ಅಥವಾ ಸೋಲಿನತ್ತ ಮುಖ ಮಾಡುತ್ತೇವೆ ಎಂದು ತಿಳಿಸಲು ಈ ಜೆನ್ ಕಥೆಯನ್ನು ಜೆನ್ ಗುರುಗಳು ತನ್ನ ವಿದ್ಯಾರ್ಥಿಗಳಿಗೆ ಉದಾಹರಣೆ ಸಮೇತ ಹೇಳುವುದನ್ನು ಇದರಲ್ಲಿ ನೋಡಬಹುದು.

ಗೆಲುವು ಯಾರದು ? ಸೋಲು ಯಾರದು ? Win – Lose Zen Story

ಝೆನ್ ವಿದ್ಯೆ ಜಪಾನ್ ದೇಶವನ್ನು ಪ್ರವೇಶಿಸುವ ಮೊದಲು, ಅಲ್ಲಿನ ಟೆಂಡೈ ಶಾಲೆಯ ವಿದ್ಯಾರ್ಥಿಗಳು ಧ್ಯಾನವನ್ನು ಅಧ್ಯಯನ ಮಾಡುತ್ತಿದ್ದರು.   ನಿಕಟ ಸ್ನೇಹಿತರಾಗಿದ್ದ ನಾಲ್ವರು ವಿದ್ಯಾರ್ಥಿಗಳು , ಏಳು ದಿನಗಳ ಮೌನವ್ರತವನ್ನು ಆಚರಿಸಲು ನಿರ್ಧರಿಸಿದರು.

  ಶಿವನ ತಂದೆ ತಾಯಿ ಯಾರು ? - ಶಿವ ಮಹಿಮೆ

ಮೊದಲ ದಿನ ಎಲ್ಲರೂ ಮೌನವಾಗಿದ್ದರು. ಅವರ ಧ್ಯಾನದ ಅಧ್ಯಯನ ಒಳ್ಳೆಯ ರೀತಿಯಲ್ಲಿ ಪ್ರಾರಂಭವಾಯಿತು, ಆದರೆ ರಾತ್ರಿ ಯಾದಾಗ ಮತ್ತು ಎಣ್ಣೆ ದೀಪಗಳು ಮಂದಗತಿಯಲ್ಲಿ ಉರಿಯುತ್ತಿರುವಾಗ , ನಾಲ್ವರು ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ ದೀಪ ಆರಿಹೋಗುವುದ್ದನ್ನು ನೋಡಿ ಸುಮ್ಮನಿರಲಾಗಲಿಲ್ಲ , ತಕ್ಷಣ ಆತ ಕೂಗಿದ : “ಆ ದೀಪಕ್ಕೆ ಎಣ್ಣೆ ಹಾಕಿ ಸರಿಪಡಿಸಿ.”

ಎರಡನೆಯ ವಿದ್ಯಾರ್ಥಿಗೆ ಮೊದಲ ವಿದ್ಯಾರ್ಥಿಯ ಮಾತು ಕೇಳಿ ಆಶ್ಚರ್ಯವಾಯಿತು, ಆತ ಕೂಡಲೇ ಎಚ್ಚರಿಸಿದ . “ನಾವು ಮೌನವ್ರತದಲ್ಲಿದ್ದೇವೆ , ಒಂದು ಮಾತು ಆಡುವಂತಿಲ್ಲ ,” ಎಂದು ಹೇಳಿದನು. “ನೀವು ಇಬ್ಬರು ಮೂರ್ಖರು. ನೀವು ಯಾಕೆ ಮಾತನಾಡಿದ್ದೀರಿ ? “ಎಂದು ಮೂರನೆಯವನು ಕೇಳಿದನು.
ಇದನ್ನು ನೋಡುತ್ತಿದ್ದ ನಾಲ್ಕನೇ ವಿದ್ಯಾರ್ಥಿ “ನಾನೇ ಮಾತನಾಡದ ಏಕೈಕ ವ್ಯಕ್ತಿ” ಎಂದು ಸಂತೋಷದಿಂದ ಕೂಗಿಕೊಂಡ.

Leave a Reply

Your email address will not be published. Required fields are marked *

Translate »