ಸುಜುಕಿ ರೋಶಿ ಝೆನ್ ಗುರುಗಳು ತಮ್ಮ ವಿದ್ಯಾರ್ಥಿಗಳೊಂದಿಗೆ ಹಲವಾರು ಬಾರಿ ಸಂವಾದ ನಡೆಸುತ್ತಿದ್ದರು. ಹೀಗೆ ಒಂದು ಸಂವಾದದಲ್ಲಿ , ” ಸುಜುಕಿ ಝೋಶಿ , ನಾನು ನಿಮ್ಮ ಉಪನ್ಯಾಸಗಳನ್ನು ವರ್ಷಗಳ ಕಾಲ ಕೇಳುತ್ತಿದ್ದೇನೆ” ಎಂದು ಒಬ್ಬ ವಿದ್ಯಾರ್ಥಿ ಒಂದು ಉಪನ್ಯಾಸದ ನಂತರದ ಪ್ರಶ್ನೋತ್ತರದ ಸಮಯದಲ್ಲಿ ಕೇಳಿದ್ದಾನೆ ಜೊತೆಗೆ “ಆದರೆ ನನಗೆ ಝೆನ್ ವಿಷಯ ಅರ್ಥವಾಗುತ್ತಿಲ್ಲ ನೀವು ಅದನ್ನು ಸಂಕ್ಷಿಪ್ತವಾಗಿ ಹೇಳುತ್ತೀರಾ? ಒಂದೇ ಒಂದು ಪದ ಅಥವಾ ನುಡಿಗಟ್ಟಲ್ಲಿ ಬೌದ್ಧಧರ್ಮವನ್ನು ವಿವರಿಸಲು ಸಾಧ್ಯವೇ ನಿಮ್ಮ ಬಳಿ? ” ಎಂದು ಕೇಳುತ್ತಾನೆ. ಪ್ರತಿಯೊಬ್ಬರೂ ವಿದ್ಯಾರ್ಥಿಯ ಪ್ರಶ್ನೆಯನ್ನು ಕೇಳಿ ನಕ್ಕರು. ಸುಜುಕಿ ಗುರುಗಳು ಕೂಡ ನಕ್ಕು “ಎಲ್ಲವು ಬದಲಾಗುತ್ತದೆ,” ಎಂದು ಹೇಳಿದರು. ನಂತರ ಅವರು ಮತ್ತೊಂದು ಪ್ರಶ್ನೆಯ ಕಡೆ ಹೊರಳಿದರು.
ವಿವರಣೆ: ಬೌದ್ಧಧರ್ಮದ ಅಗ್ರಗಣ್ಯ ಬೋಧನೆಗಳ ಪೈಕಿ ಒಂದು ಜೀವನದಲ್ಲಿ ಎಲ್ಲವೂ ಅಶಾಶ್ವತವಾಗಿದೆ. ಸುಜುಕಿ ರೋಶಿ ” ಎಲ್ಲವು ಬದಲಾಗುತ್ತದೆ ” ಎಂದು ಹೇಳುವ ಮೂಲಕ ಅದನ್ನೇ ಉಲ್ಲೇಖಿಸುತ್ತಿದ್ದಾರೆ. ಇದು ತೀರಾ ಆಳವಾದ ಬೋಧನೆಯಾಗಿದೆ, ಆದರೆ ನಾವು ಅರ್ಥೈಸಿಕೊಳ್ಳಬಹುದಾದ ರೀತಿಯಲ್ಲಿ ಹೇಳುವುದಾದರೆ , ನಾವು ನಶ್ವರ, ನಮ್ಮ ಪ್ರೀತಿಪಾತ್ರರು ಕೂಡ ನಶ್ವರ, ನಿಮ್ಮ ಮನೆ , ಚರ, ಸ್ಥಿರ, ಅಸ್ತಿಗಳೆಲ್ಲ ಅಶಾಶ್ವತವಾಗಿದೆ, ನಮ್ಮ ಗ್ರಹವೂ ಅಶಾಶ್ವತವಾಗಿದೆ. ಇದು ಹಿಂದೂ ಧರ್ಮದ ‘ಬದಲಾವಣೆ ಜಗದ ನಿಯಮ ‘ ವಿಚಾರದ ಅರ್ಥವನ್ನೇ ತಿಳಿಸುತ್ತದೆ.