ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಮಂಕು ತಿಮ್ಮನ ಕಗ್ಗ – ಮರಳಿ ಯತ್ನವ ಮಾಡು

ಮಂಕು ತಿಮ್ಮನ ಕಗ್ಗ – ಮರಳಿ ಯತ್ನವ ಮಾಡು – try again & again

ಡಿವಿಜಿಯವರು ಈ ಮಂಕು ತಿಮ್ಮನ ಕಗ್ಗದಲ್ಲಿ ಸಿಸಿಫಸ್ ಎಂಬ ರಾಜನ ವ್ಯಕ್ತಿತ್ವದ ನಿರ್ದರ್ಶನವಿಟ್ಟುಕೊಂಡು ಬರೆದಿದ್ದಾರೆ. ಸಿಸಿಫಸ್, ಗ್ರೀಕ್ ಪುರಾಣದಲ್ಲಿ ಬರುವ , ಕೊರಿಂಥ ರಾಜ್ಯದ ಒಬ್ಬ ಕ್ರೂರ ಗ್ರೀಕ್ ರಾಜನಾಗಿದ್ದು, ಕಡಿದಾದ ಬೆಟ್ಟದ ಮೇಲೆ ದೊಡ್ಡ ಬಂಡೆಯನ್ನು ತಳ್ಳುವ ಶಿಕ್ಷೆಗೆ ಒಳಗಾಗ್ಗಿದನು. ಅಂದಿನಿಂದಲೂ, ದಣಿವರಿಯದ ದೊಡ್ಡ ಬಂಡೆಯನ್ನು ಪರ್ವತದ ಮೇಲಕ್ಕೆ ತಳ್ಳುವ ಶಿಕ್ಷೆಗೆ ಒಳಗಾಗ್ಗಿದ್ದಕೆ ಹೆಸರುವಾಸಿಯಾಗಿದ್ದಾನೆ.

ಗಿರಿಯ ಮೇಲಕೆ ದೊಡ್ಡ ಬಂಡೆಯನು ಸಿಸಿಫಸನು ।
ಉರುಳಿಸಿರಲೊಂದೆರಡು ಮಾರು ಘಾಸಿಯಲಿ ।।
ಸರಿದು ಕೆಳಕದದೆಂತೊ ಜಾರುವುದು ಮರಮರಳಿ ।
ಪುರುಷಪ್ರಗತಿಯಂತು ಮಂಕುತಿಮ್ಮ ।।

  ಶ್ರೀ ನಾರಾಯಣ ಹೃದಯ ಸ್ತೋತ್ರಂ!

Sisyphus pushes a boulder to the top of hill,
With a lot of effort and injuring himself in doing so.
But somehow it slips and falls down every time.
Likewise is our life progress. — Mankuthimma

ಮಂಕು ತಿಮ್ಮನ ಕಗ್ಗ mankuthimmana kagga try again

ಸಿಸಿಫಸ್ ದಣಿವರಿಯದೆ ಸತತ ಪ್ರಯತ್ನಕ್ಕೆ ಒಗ್ಗಿಕೊಂಡಿರುತ್ತಾನೆ , ಪ್ರತಿ ಬಾರಿ ಬಂಡೆ ಪರ್ವತದ ಮೇಲಿಂದ ಕೈ ತಪ್ಪಿ ಉರುಳಿದಾಗ ಅವನು ಪುನಹ ಬಂಡೆಯನ್ನು ಮೇಲಕ್ಕೆ ತಳ್ಳಿಹಾಕಿದನು. ಅವನು ಭೂಮಿಯ ಗುರುತ್ವಕ್ಕೆ ಶರಣಾಗಲು ನಿರಾಕರಿಸಿದನು.

  ಪುತ್ರದಾ ಏಕಾದಶಿ , ಪೂಜೆ ವಿಧಾನ, ಮಹತ್ವ

ಬಂಡೆಯನ್ನು ಪರ್ವತದ ತುದಿಗೆ ತಳ್ಳುವುದು ಸಿಸಿಫಸ್ನ ಉದ್ದೇಶವಾಗಿತ್ತು, ಮತ್ತು ಅವನು ಎಷ್ಟು ದುಷ್ಟನಾಗಿದ್ದರು, ಅವನ ಛಲ ಮತ್ತು ಸತತ ಪರಿಶ್ರಮದ ಉದ್ದೇಶದಿಂದ ಮಾಡಿದ ಕೆಲಸಕ್ಕಾಗಿ ಇನ್ನೂ ಅವನನ್ನು ನೆನಪಿಸಿಕೊಳ್ಳುತ್ತಾರೇ.

ಡಿವಿಜಿಯವರು ನಾವೆಲ್ಲರೂ ಆಧುನಿಕ ಸಿಸಿಫಸ್ ಆಗಿರುತ್ತೇವೆ ಎಂದು ಹೋಲಿಸುತ್ತಾ , ಪ್ರತಿ ದಿನವು ನಾವು ದಣಿವರಿವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ನಾವು ಒಂದು ಉದ್ದೇಶವನ್ನು (ದೊಡ್ಡ ಬಂಡೆಯ ತರಹ) ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕು. ಮತ್ತು ಒಮ್ಮೆ ನಾವು ನಮ್ಮ ಅಸ್ತಿತ್ವದ ಉದ್ದೇಶವೆಂದು ಒಪ್ಪಿಕೊಂಡರೆ, ಅದನ್ನು ಸಾಧಿಸಲು ನಾವು ತೆಗೆದುಕೊಳ್ಳುವ ನಿರ್ಧಾರ , ಸಮಯ, ಶ್ರಮ ಎಲ್ಲವನ್ನೂ ಮನಸ್ಪೂರ್ವಕವಾಗಿ ನಾವು ನೀಡಬೇಕು. ಸಿಸಿಫಸ್ ಸಾಂದರ್ಭಿಕ ನಿರಾಶೆಗಳಿಗೆ ಎಂದಿಗೂ ಬಗ್ಗಲಿಲ್ಲ ಅಥವಾ ವೈಫಲ್ಯದಿಂದ ತಪ್ಪಿಸಿಕೊಳ್ಳಬಾರದೆಂಬುದನ್ನು ನಾವು ಕಲಿಯುತ್ತೇವೆ, ಬದಲಿಗೆ ನಾವು ನಮ್ಮ ಸಾಧನೆಗಳನ್ನು ಸ್ವೀಕರಿಸುವ ರೀತಿಯಲ್ಲಿ ವೈಫಲ್ಯಗಳನ್ನು ಸ್ವೀಕರಿಸಬೇಕು.ಮತ್ತು ಮುಖ್ಯವಾಗಿ, ನಮ್ಮ ಅನ್ವೇಷಣೆಯಲ್ಲಿ ನಾವು ಎಷ್ಟು ಕಳೆದುಕಕೊಂಡರು, ನಮ್ಮ ಸಾಮರ್ಥ್ಯವನ್ನು ನಾವು ಪೂರೈಸುವವರೆಗೂ ನಾವು ಎಂದಿಗೂ ಕೆಳಗಿಳಿಯಬಾರದು ಇದುವೇ ಜೀವನ ಎಂದು ಡಿವಿಜಿ ವಿವರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Translate »