ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಗ್ಗ – ಸ್ವಾರ್ಥ vs ಸಂಬಂಧ Relationship vs Selfish

ಡಿವಿಜಿ ರವರು ಈ ಮಂಕುತಿಮ್ಮನ ಕಗ್ಗದಲ್ಲಿ ಸ್ವಾರ್ಥ ಮತ್ತು ಸಂಬಂಧಗಳ ಬಗ್ಗೆ ತಂದೆ ಹಾಗು ಮಕ್ಕಳ ಸಂಬಂಧ ಹೇಗೆಲ್ಲ ಬದಲಾಗುತ್ತದೆ , ಸ್ವಾರ್ಥ ಹಾಗು ಸಂಬಂಧಗಳ ನಡುವೆ ಯಾವುದು ಗೆಲ್ಲುತ್ತದೆ , ಕಾಲ ಎಷ್ಟು ಬದಲಾಗಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

ಸ್ವಾರ್ಥ vs ಸಂಬಂಧ Relationship vs Selfish
ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ ।
ಹೊಂದಿರವರವರಹಂತೆಯು ಮೊಳೆಯುವನಕ ।।
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ।
ಬಂಧ ಮುರಿವುದು ಬಳಿಕ ಮಂಕುತಿಮ್ಮ ।।

  ಕಗ್ಗ - ಜ್ಞಾನೋದಯ - Enlightened

Have not you seen rift between parents and children?
They live in harmony until selfish takes over.
What of father and what of son, when ego reigns?
Then, the relationship is broken. –Mankuthimma

ಎಷ್ಟೊಂದು ಪ್ರೀತಿ ಭಾಂದವ್ಯ ಇರುವಂಥ ತಂದೆ ಮಕ್ಕಳ ಸಂಬಂಧಗಳು ಕೂಡ ಹಾಳಾಗಿರುವುದನು ನೋಡಿಲ್ಲವೇ ? , ಎಲ್ಲ ರೀತಿಯಲ್ಲೂ ಹೊಂದಿಕೊಂಡು ಇರುವಂಥ ಸಂಬಂಧ ಆದರೆ ತಾನು / ನಾನು ಎಂಬ ಸ್ವಾರ್ಥ ಮೊಳಕೆ ಒಡೆಯುವತನಕ ಮಾತ್ರ , ತಾನು / ನಾನು ಎಂಬ ಅಹಂ ಬರುತ್ತಿದ್ದ ಹಾಗೆ , ತಂದೆ ದೊಡ್ಡವರು , ಮಕ್ಕಳು ಸಣ್ಣವರು ಎಂಬುದೆಲ್ಲ ಬರುವುದಿಲ್ಲ , ನಾನು ಎಂಬ ಅಹಂ ದೊಡ್ಡದಾಗುತ್ತ ಹೋಗುತ್ತದೆ , ಬೇರೆಯೆಲ್ಲ ಸಂಬಂಧಗಳು ಸಣ್ಣದಾಗಿ ಕಾಣಿಸುತ್ತವೆ , ಇದೆ ಕಾರಣದಿಂದ ಸಂಬಂಧಗಳೆಲ್ಲ ಮುರಿದು ಬೀಳುತ್ತವೆ ಎಂದು ಈ ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Translate »